ಐಷಾರಾಮಿ ಸೌಲಭ್ಯವುಳ್ಳ ಕ್ರೆಟಾ ಡೈಮಂಡ್ ಎಡಿಷನ್ ಅನಾವರಣಗೊಳಿಸಿದ ಹ್ಯುಂಡೈ

ದಕ್ಷಿಣ ಕೊರಿಯಾದ ಹ್ಯುಂಡೈ ಮೋಟಾರ್ಸ್ ಸಂಸ್ಥೆಯು ತನ್ನ ಜನಪ್ರಿಯ ಕ್ರೆಟಾ ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ಡೈಮಂಡ್ ಎಡಿಷನ್ ಮಾದರಿಯನ್ನು ಅನಾವರಣಗೊಳಿಸಿದ್ದು, ಬಣ್ಣದ ವಿನ್ಯಾಸ ಮತ್ತು ಕಾರಿನ ನೀಡಲಾಗಿರುವ ವಿಶೇಷ ಫೀಚರ್ಸ್‌ಗಳು ಎಸ್‌ಯುವಿ ಪ್ರಿಯರ ಆಕರ್ಷಣೆಗೆ ಕಾರಣವಾಗಿವೆ.

ಐಷಾರಾಮಿ ಸೌಲಭ್ಯವುಳ್ಳ ಕ್ರೆಟಾ ಡೈಮಂಡ್ ಎಡಿಷನ್ ಅನಾವರಣಗೊಳಿಸಿದ ಹ್ಯುಂಡೈ

ಹ್ಯುಂಡೈ ಸಂಸ್ಥೆಯು ಭಾರತ ಸೇರಿದಂತೆ ಜಗತ್ತಿನ ಪ್ರಮುಖ ರಾಷ್ಟ್ರಗಳಲ್ಲಿ ವಿವಿಧ ಮಾದರಿಯ ಕಾರು ಆವೃತ್ತಿಗಳನ್ನು ಮಾರಾಟ ಮಾಡುತ್ತಿದ್ದು, ಇವುಗಳಲ್ಲಿ ಕ್ರೆಟಾ ಮಾದರಿಯು ಭಾರೀ ಜನಪ್ರಿಯತೆಯೊಂದಿಗೆ ಮುನ್ನುಗ್ಗುತ್ತಿದೆ. ಹೀಗಾಗಿ ಕ್ರೆಟಾ ಕಾರಿನ ಹೆಚ್ಚಿನ ಒತ್ತು ನೀಡುತ್ತಿರುವ ಹ್ಯುಂಡೈ ಸಂಸ್ಥೆಯು ಐಷಾರಾಮಿ ಸೌಲಭ್ಯವುಳ್ಳ ಡೈಮಂಡ್ ಎಡಿಷನ್ ಸಿದ್ದಗೊಳಿಸಿದೆ.

ಐಷಾರಾಮಿ ಸೌಲಭ್ಯವುಳ್ಳ ಕ್ರೆಟಾ ಡೈಮಂಡ್ ಎಡಿಷನ್ ಅನಾವರಣಗೊಳಿಸಿದ ಹ್ಯುಂಡೈ

ಕ್ರೆಟಾ ಡೈಮಂಡ್ ಎಡಿಷನ್ ಮಾದರಿಯನ್ನು ಬ್ರೆಜಿಲ್‌ನಲ್ಲಿ ನಡೆದಿರುವ ಸಾವೊ ಪಾಲೊ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದ್ದು, ಮುಂದಿನ ಒಂದು ವರ್ಷದ ಒಳಗಾಗಿ ಭಾರತ ಸೇರಿದಂತೆ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.

ಐಷಾರಾಮಿ ಸೌಲಭ್ಯವುಳ್ಳ ಕ್ರೆಟಾ ಡೈಮಂಡ್ ಎಡಿಷನ್ ಅನಾವರಣಗೊಳಿಸಿದ ಹ್ಯುಂಡೈ

ಹ್ಯುಂಡೈ ಸಂಸ್ಥೆಯು ಈ ಹಿಂದೆಯೇ ಅನಾವರಣಗೊಳಿಸಿರುವ ಕ್ರೆಟಾ ಪ್ರೆಸ್ಟಿಜ್ ವೆರಿಯೆಂಟ್ ಮಾದರಿಯಲ್ಲೇ ಡೈಮಂಡ್ ಎಡಿಷನ್ ಕೂಡಾ ಸಿದ್ದವಾಗಿದ್ದು, ಸಾಮಾನ್ಯ ಕ್ರೆಟಾದಂತೆ ಕಂಡರೂ ಸಹ ಕಾರಿನ ಒಳಭಾಗದಲ್ಲಿ ವಿನ್ಯಾಸದಲ್ಲಿ ಭಾರೀ ಬದಲಾವಣೆ ಪಡೆದುಕೊಂಡಿವೆ.

ಐಷಾರಾಮಿ ಸೌಲಭ್ಯವುಳ್ಳ ಕ್ರೆಟಾ ಡೈಮಂಡ್ ಎಡಿಷನ್ ಅನಾವರಣಗೊಳಿಸಿದ ಹ್ಯುಂಡೈ

ಡೈಮಂಡ್ ಎಡಿಷನ್‌ನಲ್ಲಿ ಕಾರಿನ 'ಡೀಪ್ ಡೈವ್ ಬ್ಲ್ಯೂ' ಬಣ್ಣವೇ ಪ್ರಮುಖ ಆಕರ್ಷಣೆಯಾಗಿದ್ದು, ಕಾರಿನ ಒಳಭಾಗದಲ್ಲಿ ಬಿಳಿ ಮತ್ತು ಕಂದು ಬಣ್ಣದ ಡ್ಯುಯಲ್ ಟೋನ್ ಇಂಟಿರಿಯರ್, ಪನೊರಮಿಕ್ ಸನ್‌ರೂಫ್, ಸ್ಪೆಷಲ್ ಮೈಕ್ರೊಫೈಬರ್ ಸೀಟುಗಳು ಕಾರಿನ ಐಷಾರಾಮಿತನಕ್ಕೆ ಮೆರಗು ತಂದಿವೆ.

ಐಷಾರಾಮಿ ಸೌಲಭ್ಯವುಳ್ಳ ಕ್ರೆಟಾ ಡೈಮಂಡ್ ಎಡಿಷನ್ ಅನಾವರಣಗೊಳಿಸಿದ ಹ್ಯುಂಡೈ

ಹಾಗೆಯೇ ಕಾರಿನ ಸ್ಟಿರಿಂಗ್ ವೀಲ್ಹ್, ಡ್ಯಾಶ್‌ಬೋರ್ಡ್ ಕೆಳಭಾಗ ಮತ್ತು ಗೇರ್‌ನಾಬ್ ಮೇಲೆ ಬಿಳಿ ಬಣ್ಣದ ಕೊಟಿಂಗ್ ನೀಡಿರುವುದು ಸಹ ಕಾರಿಗೆ ಹೊಸ ಲುಕ್ ನೀಡಿದ್ದು, 7-ಇಂಚಿನ ಇನ್ಪೋಟೈನ್‌ಮೆಂಟ್, ಅಂಡ್ರಾಯಿಡ್ ಆಟೋ, ಆ್ಯಪಲ್ ಕಾರ್‌ಪ್ಲೇ, ಜೆಬಿಎಲ್ ಆಡಿಯೋ ಸಿಸ್ಟಂ ಇದರಲ್ಲಿದೆ.

ಐಷಾರಾಮಿ ಸೌಲಭ್ಯವುಳ್ಳ ಕ್ರೆಟಾ ಡೈಮಂಡ್ ಎಡಿಷನ್ ಅನಾವರಣಗೊಳಿಸಿದ ಹ್ಯುಂಡೈ

ಇನ್ನು ಕಾರಿನ ಹೊರಭಾಗದಲ್ಲೂ ಸಹ ಹೆಸರಿಗೆ ತಕ್ಕಂತೆ ಕೆಲವು ಬದಲಾವಣೆ ತರಲಾಗಿದ್ದು, ಸ್ಪೋರ್ಟಿ ಲುಕ್ ಹೊಂದಿರುವ 19-ಇಂಚಿನ ಅಲಾಯ್ ಚಕ್ರಗಳು, ಹಿಂಬದಿಯ ಸವಾರರ ಮಾಹಿತಿಗಾಗಿ 10-ಇಂಚಿನ ಎಂಟರ್‌ಟೈನ್‌ಮೆಂಟ್ ಸ್ಕ್ರೀನ್, ಎಸಿ ವೆಂಟ್ಸ್ ಹೊಂದಿರುವುದು ಸವಾರಿಗೆ ಸಾಕಷ್ಟು ಅನುಕೂಲವಾಗಲಿದೆ.

ಐಷಾರಾಮಿ ಸೌಲಭ್ಯವುಳ್ಳ ಕ್ರೆಟಾ ಡೈಮಂಡ್ ಎಡಿಷನ್ ಅನಾವರಣಗೊಳಿಸಿದ ಹ್ಯುಂಡೈ

ಎಂಜಿನ್ ಸಾಮರ್ಥ್ಯ

ಸಾಮಾನ್ಯ ಕ್ರೆಟಾ ಕಾರಿಗಿಂತಲೂ ಹೆಚ್ಚಿನ ಮಟ್ಟದ ಎಂಜಿನ್ ಸೌಲಭ್ಯ ಹೊಂದಿರುವ ಡೈಮಂಡ್ ಎಡಿಷನ್ ಕಾರು 2.0-ಲೀಟರ್(2 ಸಾವಿರ ಸಿಸಿ) ಪೆಟ್ರೋಲ್ ಎಂಜಿನ್‌ನೊಂದಿಗೆ 156-ಬಿಎಚ್‌ಪಿ ಉತ್ಪಾದನೆ ಮಾಡಬಲ್ಲದು.

MOST READ: ಇದೇ ತಿಂಗಳು 15ರಂದು ಅನಾವರಣಗೊಳ್ಳಲಿರುವ ಹೊಸ ಜಾವಾ ಬೈಕ್ ಹೀಗಿರಲಿವೆ ನೋಡಿ..!

ಐಷಾರಾಮಿ ಸೌಲಭ್ಯವುಳ್ಳ ಕ್ರೆಟಾ ಡೈಮಂಡ್ ಎಡಿಷನ್ ಅನಾವರಣಗೊಳಿಸಿದ ಹ್ಯುಂಡೈ

ಹೀಗಾಗಿ ಹೊಸ ಕ್ರೆಟಾ ಡೈಮಂಡ್ ಎಡಿಷನ್ ಕಾರು ಐಷಾರಾಮಿ ಕಾರು ಪ್ರಿಯರನ್ನು ಸಹ ತನ್ನತ್ತ ಸೆಳೆಯುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಹೊಸ ಕಾರು ಭಾರತದಲ್ಲಿ ಯಾವಾಗ ಬಿಡುಗಡೆಯಾಗುತ್ತೆ ಎನ್ನುವ ಕುರಿತಂತೆ ಹ್ಯುಂಡೈ ಸಂಸ್ಥೆಯು ಸದ್ಯದಲ್ಲೇ ಮಾಹಿತಿ ಹೊರಹಾಕಲಿದೆ.

Source: Motor1

Most Read Articles

Kannada
English summary
Hyundai Creta Diamond Edition Revealed — Gets New Features.
Story first published: Saturday, November 10, 2018, 18:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X