ಬಿಡುಗಡೆಗೊಳ್ಳಲಿರುವ ಹೊಸ ಹ್ಯುಂಡೈ ಕ್ರೆಟಾ ಫೇಸ್‍ಲಿಫ್ಟ್ ಕಾರು ಇದೇ...
ಜನಪ್ರಿಯ ಹ್ಯುಂಡೈ ಸಂಸ್ಥೆಯು ತಮ್ಮ 2018ರ ಹೊಸ ಕ್ರೆಟಾ ಫೇಸ್‍ಲಿಫ್ಟ್ ಕಾರನ್ನು ಕೆಲದಿನಗಳಲ್ಲಿ ಬಿಡುಗಡೆಗೊಳಿಸಲಿದ್ದು, ಹಳೆಯ ಮಾದರಿಗಿಂತ ಹೊಸ ಅಪ್ಡೇಟ್‍ಗಳನ್ನು ಪಡೆದುಕೊಂಡಿದೆ.
ಜನಪ್ರಿಯ ಹ್ಯುಂಡೈ ಸಂಸ್ಥೆಯು ತಮ್ಮ 2018ರ ಹೊಸ ಕ್ರೆಟಾ ಫೇಸ್‍ಲಿಫ್ಟ್ ಕಾರನ್ನು ಕೆಲದಿನಗಳಲ್ಲಿ ಬಿಡುಗಡೆಗೊಳಿಸಲಿದ್ದು, ಹಳೆಯ ಮಾದರಿಗಿಂತ ಹೊಸ ಅಪ್ಡೇಟ್‍ಗಳನ್ನು ಪಡೆದುಕೊಂಡಿದೆ. ಇದೀಗ ಸಮಾಜಿಕ ಜಾಲತಾಣಗಳಲ್ಲಿ ಹ್ಯುಂಡೈ ಕ್ರೆಟಾ ಫೇಸ್‍ಲಿಫ್ಟ್ ಕಾರಿನ ಚಿತ್ರಗಳು ಹರಿದಾಡುತ್ತಿದ್ದು, ಹೊಸ ಕಾರಿನ ಚಿತ್ರಗಳು ಮತ್ತು ಕಾರಿನ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಹ್ಯುಂಡೈ ಕ್ರೆಟಾ ಫೇಸ್‍ಲಿಫ್ಟ್ ಕಾರು ಡೀಲರ್‍ನ ಸ್ಟಾಕ್‍ಯಾರ್ಡ್‍ನಲ್ಲಿ ಸಂಪೂರ್ಣವಾಗಿ ಯಾವುದೆ ಮುಸುಗಿಲ್ಲದೆ ಕಾಣಿಸಿಕೊಂಡಿದ್ದು, ತಮ್ಮ ಹಳೆಯ ಮಾದರಿಗಿಂತ ಮುಂಭಾಗದಲ್ಲಿ ಅಪ್ಡೇಟ್ ಅನ್ನು ಪಡೆದುಕೊಂಡಿದೆ. ಕಾರಿನ ಮುಂಭಾಗದಲ್ಲಿ ಸಂಸ್ಥೆಯ ಸಿಗ್ನೇಚರ್ ಅನ್ನು ಪಡೆದ ಕೇಸ್‍ಕೇಡಿಂಗ್ ಗ್ರಿಲ್, ಅಪ್ಡೇಟೆಡ್ ಹೆಡ್‍ಲ್ಯಾಂಪ್ಸ್, ಫಾಗ್ ಲ್ಯಾಂಪ್ ಮತ್ತು ಸಿಲ್ವರ್ ಸ್ಕಿಡ್‍ಪ್ಲೇಟ್‍ನೊಂದಿಗೆ ಬಂಪರ್ ಅನ್ನು ಪಡೆದಿದೆ.

ಇನ್ನು ಹ್ಯುಂಡೈ ಕ್ರೆಟಾ ಫೇಸ್‍ಲಿಫ್ಟ್ ಕಾರಿನ ಹಿಂಭಾಗದಲ್ಲಿ ಪ್ರಸ್ಥುತ ತಲೆಮಾರಿನ ವಿನ್ಯಾಸವನ್ನೆ ಹೋಲಲಿದ್ದು, ಬಂಪರ್ ಮತ್ತು ಸ್ಕಿಡ್ ಪ್ಲೇಟ್‍ಗಳ ಮೇಲೆ ಅಪ್ಡೇಟೇಡ್ ರಿಫ್ಲೆಕ್ಟರ್ ಅನ್ನು ಅಳವಡಿಸಲಾಗಿದೆ. ಇನ್ನು ಹೊಸದಾಗಿ ರೂಫ್ ರೈಲ್ಸ್ ಅನ್ನು ಕೂಡ ಅಳವಡಿಸಲಾಗಿದ್ದು, ಪ್ರಸ್ಥುತ ತಲೆಮಾರಿಗಿಂತ ಹೊಸ ರೂಪದಲ್ಲಿ ಬರಲಿದೆ.

ಹ್ಯುಂಡೈ ಕ್ರೆಟಾ ಫೇಸ್‍ಲಿಫ್ಟ್ ಕಾರಿನ ಒಳಭಾಗದಲ್ಲಿ ಲೆದರ್ ಸೀಟ್, ಏರ್ ಕಂಡೀಶನಿಂಗ್ ವೆಂಟ್ಸ್ ಮತ್ತು ಡ್ಯಾಷ್‍ಬೋರ್ಡ್ ಅನ್ನು ಸಾಫ್ಟ್ ಪೇಯಿಂಟ್‍ನೊಂದಿಗೆ ಸಜ್ಜುಗೊಳಿಸಲಾಗಿದೆ. ಇನ್ನು ಕಾರಿನ ಟಾಪ್ ಸ್ಪೆಕ್ ಡ್ಯುಯಲ್ ಟೋನ್ ಮಾಡಲ್‍ಗಳು ಹೊಸದಾಗಿ ಒಳಭಾಗದಲ್ಲಿ ಆರೆಂಜ್ ಬಣ್ಣವನ್ನು ಹೋರಲಿದೆ.

ಇನ್ನುಳಿದಂತೆ ಕಾರಿನ ಒಳಭಾಗದಲ್ಲಿ 8 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂನೊಂದಿಗೆ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಆಯ್ಕೆಯನ್ನು ನೀಡಲಾಗಿದ್ದು, ಇವು ಎಸ್‌ಯುವಿ ಪ್ರಿಯರಿಗೆ ಹೊಸ ಚಾಲನಾ ಅನುಭೂತಿ ನೀಡಲಿವೆ.

ಕ್ರೆಟಾ ಫೇಸ್‍ಲಿಫ್ಟ್ ಕಾರುಗಳು ಸ್ಮಾರ್ಟ್ ಕೀ ಬ್ಯಾಂಡ್, 6 ವಿದಗಳಲ್ಲಿ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್ಸ್, ಎಲೆಕ್ಟ್ರಾನಿಕ್ ಸನ್‍ರೂಫ್, ವೈರ್‍ಲೆಸ್ ಚಾರ್ಜಿಂಗ್ ಮತ್ತು ಕ್ರೂಸ್ ಕಂಟ್ರೋಲ್‍ನಂತಹ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದ್ದು, ಎಲೆಕ್ಟ್ರಿಕ್ ಸನ್ ರೂಫ್ ವೈಶಿಷ್ಟ್ಯತೆಯು ಕ್ರೆಟಾ ಫೇಸ್‍ಲಿಫ್ಟ್ ಕಾರಿನ ಎಸ್ಎಕ್ಸ್ ಆಟೊಮ್ಯಾಟಿಕ್ ಟ್ರಿಮ್ ವೇರಿಯಂಟ್‍ನಲ್ಲಿ ದೊರೆಯುತ್ತವೆ.

ಇನ್ನು ಹ್ಯುಂಡೈ ಕ್ರೆಟಾ ಫೇಸ್‍ಲಿಫ್ಟ್ ಕಾರುಗಳು ಪ್ಯಾಶನ್ ಆರೆಂಜ್ ಮತ್ತು ಮೆರಿನಾ ಬ್ಲೂ ಎಂಬ ಎರಡು ಹೊಸ ಬಣ್ಣಗಳಲ್ಲಿ ಬರಲಿದ್ದು, ಪ್ಯಾಶನ್ ಆರೆಂಜ್ ಬಣ್ಣವು ಡ್ಯುಯಲ್ ಟೋನ್ ಆಯ್ಕೆಯೊಂದಿಗೆ ಬ್ಲಾಕ್ ರೂಫ್‍ನೊಂದಿಗೆ ಬರಲಿದೆ. ಇದಲ್ಲದೆ ಎರಡನೆಯದಾಗಿ ಪೋಲಾರ್ ವೈಟ್ ಬಣ್ಣದೊಂದಿಗೆ ಪ್ಯಾಂಥಮ್ ಬ್ಲಾಕ್ ರೂಫ್ ಎಂಬ ಮತ್ತೊಂದು ಡ್ಯುಯಲ್ ಟೋನ್ ಆಯ್ಕೆಯೊಂದಿಗೆ ಬರಲಿದೆ.

ಮಾಹಿತಿಗಳ ಪ್ರಕಾರ ಹ್ಯುಂಡೈ ಕ್ರೆಟಾ ಫೇಸ್‍ಲಿಫ್ಟ್ ಕಾರುಗಳು ಇ, ಇ+, ಎಸ್, ಎಸ್ಎಕ್ಸ್, ಎಸ್ಎಕ್ಸ್ ಡ್ಯುಯಲ್ ಟೋನ್ ಮತ್ತು ಎಸ್ಎಕ್ಸ್ (ಓ) ಎಂಬ ಆರು ವೇರಿಯಂಟ್‍ಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿವೆ ಎನ್ನಲಾಗಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಹ್ಯುಂಡೈ ಕ್ರೆಟಾ ಫೇಸ್‍ಲಿಫ್ಟ್ ಕಾರುಗಳಲ್ಲಿ ಡ್ಯುಯಲ್ ಏರ್‍ಬ್ಯಾಗ್ಸ್ ಮತ್ತು ಎಬಿಎಸ್ ಅನ್ನು ಕಾರಿನ ಎಲ್ಲಾ ವೇರಿಯಂಟ್‍ಗಳಲ್ಲಿ ನೀಡಲಾಗುತಿದ್ದು, ಕಾರಿನ ಟಾಪ್ ಸ್ಪೆಕ್ ಮಾಡಲ್‍ಗಳು ಆರ್ ಏರ್‍ಬ್ಯಾಗ್ಸ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಅಸ್ಸಿಸ್ಟ್, ರಿಯರ್ ಪಾರ್ಕಿಂಗ್ ಸೆನ್ಸಾರ್ಸ್ ಮತ್ತು ಕ್ಯಾಮೆರಾ ಹಾಗೆಯೆ ಐಎಸ್ಒಫಿಕ್ಸ್ ವೈಲ್ಡ್ ಸೀಟ್ ಮೌಂಟ್ ಅನ್ನು ಅಳವಡಿಸಲಾಗಿದೆ.

ಎಂಜಿನ್ ವೈಶಿಷ್ಟ್ಯತೆ
ಹ್ಯುಂಡೈ ಕ್ರೆಟಾ ಫೇಸ್‍ಲಿಫ್ಟ್ ಕಾರುಗಳು 1.4 ಲೀಟರ್ ಡೀಸೆಲ್, 1.6 ಲೀಟರ್ ಡೀಸೆಲ್ ಮತ್ತು 1.6 ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಗಳಲ್ಲಿ ಬರಲಿದ್ದು, 1.6 ಲೀಟರ್ ಎಂಜಿನ್‍ಗಳು 6 ಸ್ಪೀಡ್ ಮ್ಯಾನುವಲ್ ಅಥವ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ನೊಂದಿಗೆ ಮತ್ತು 1.4 ಲೀಟರ್ ಎಂಜಿನ್‍ಗಳನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹ್ಯುಂಡೈ ಸಂಸ್ಥೆಯು ತಮ್ಮ ಕ್ರೆಟಾ ಫೇಸ್‍ಲಿಫ್ಟ್ ಕಾರನ್ನು ಇನ್ನು ಕೆಲವೆ ದಿನಗಳಲ್ಲಿ ಭಾರತೀ ಮಾರುಕಟ್ಟೆಗೆ ಪರಿಚಯಿಸಲಿದ್ದು, ಹೊಸ ಕಾರುಗಳು ಪ್ರಸ್ಥುತ ಮಾರಾಟಗೊಳ್ಳುತ್ತಿರುವ ಕಾರಿಗಿಂತ ಬೆಲೆ ಅಧಿಕ ಪಡೆದಿರಲಿದೆ ಎನ್ನಲಾಗಿದೆ.


Click it and Unblock the Notifications