ಡೀಲರ್ಸ್ ಯಾರ್ಡ್ ತಲುಪಿದ ಹ್ಯುಂಡೈ ಹೊಚ್ಚ ಹೊಸ ಐ20 ಫೇಸ್‌ಲಿಫ್ಟ್

Written By:
Recommended Video - Watch Now!
Auto Rickshaw Explodes In Broad Daylight

ಪ್ರಿಮಿಯಂ ಹ್ಯಾಚ್‌ಬ್ಯಾಕ್ ಕಾರು ಆವೃತ್ತಿಗಳಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಹ್ಯುಂಡೈ ಐ20 ಆವೃತ್ತಿಯು ಸದ್ಯದಲ್ಲೇ ಫೇಸ್‌ಲಿಫ್ಟ್ ಮಾದರಿಯೊಂದಿಗೆ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆ ಹೊಸ ಕಾರು ಅಧಿಕೃತ ಡೀಲರ್ಸ್ ಯಾರ್ಡ್ ತಲುಪುತ್ತಿದ್ದು, ಫೆಬ್ರುವರಿ 7ರಿಂದ ಆರಂಭವಾಗಲಿರುವ 2018ರ ಆಟೋ ಎಕ್ಸ್ ಪೋದಲ್ಲಿ ಹೊಸ ಕಾರನ್ನು ಅನಾವರಣ ಮಾಡಲಿದೆ.

ಡೀಲರ್ಸ್ ಯಾರ್ಡ್ ತಲುಪಿದ ಹ್ಯುಂಡೈ ಹೊಚ್ಚ ಹೊಸ ಐ20 ಫೇಸ್‌ಲಿಫ್ಟ್

ದೇಶದ 2ನೇ ಅತಿ ಕಾರು ಉತ್ಪಾದನಾ ಮತ್ತು ಮಾರಾಟ ಸಂಸ್ಥೆಯಾದ ಹ್ಯುಂಡೈ ಇಂಡಿಯಾ ಸದ್ಯದಲ್ಲೇ ತನ್ನ ಜನಪ್ರಿಯ ಐ20 ಫೇಸ್‌ಲಿಫ್ಟ್ ಆವೃತ್ತಿಯನ್ನು ಪರಿಚಯಿಸುತ್ತಿದ್ದು, ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಮಾಡಿದ ನಂತರವಷ್ಟೇ ಹೊಸ ಕಾರಿನ ಮಾರಾಟ ಪ್ರಕ್ರಿಯೆ ಆರಂಭವಾಗಲಿದೆ.

ಡೀಲರ್ಸ್ ಯಾರ್ಡ್ ತಲುಪಿದ ಹ್ಯುಂಡೈ ಹೊಚ್ಚ ಹೊಸ ಐ20 ಫೇಸ್‌ಲಿಫ್ಟ್

ಇದಕ್ಕಾಗಿಯೇ ಹೊಸ ಕಾರಿನ ಬಿಡುಗಡೆ ತವಕದಲ್ಲಿರುವ ಹ್ಯುಂಡೈ ಸಂಸ್ಥೆಯು ಐ20 ಫೇಸ್‌ಲಿಫ್ಟ್ ಆವೃತ್ತಿಯನ್ನು ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದ್ದು, ಈ ಹಿಂದೆ ಪುಣೆ ಬಳಿ ಕಾಣಿಸಿಕೊಂಡಿದ್ದ ಹೊಸ ಕಾರು ಪ್ರಸ್ತುತ ಮಾದರಿಗಿಂತ ಹೆಚ್ಚಿನ ಬದಲಾವಣೆ ಹೊಂದಿರುವುದು ಖಚಿತವಾಗಿದೆ.

ಡೀಲರ್ಸ್ ಯಾರ್ಡ್ ತಲುಪಿದ ಹ್ಯುಂಡೈ ಹೊಚ್ಚ ಹೊಸ ಐ20 ಫೇಸ್‌ಲಿಫ್ಟ್

ಸ್ಪಾಟ್ ಟೆಸ್ಟಿಂಗ್‌ನಲ್ಲಿ ಸೆರೆಸಿಕ್ಕ ಚಿತ್ರಗಳ ಪ್ರಕಾರ ಸಿಲ್ವರ್ ಪೇಂಟ್ ಜೊತೆ ಡಾರ್ಕ್ ಟೆನ್-ಸ್ಪೋಕ್ ಅಲಾಯ್ ಚಕ್ರಗಳು, ಎಲ್‌ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್, ಬಂಪರ್ ಮೇಲ್ಭಾಗದ ಟೈಲ್ ಲ್ಯಾಂಪ್ ಮತ್ತು ಅತ್ಯುತ್ತಮ ಗ್ರಾಫಿಕ್ ಡಿಸೈನ್ ಹೊಂದಿರುವುದು ಖಚಿತವಾಗಿದೆ.

ಡೀಲರ್ಸ್ ಯಾರ್ಡ್ ತಲುಪಿದ ಹ್ಯುಂಡೈ ಹೊಚ್ಚ ಹೊಸ ಐ20 ಫೇಸ್‌ಲಿಫ್ಟ್

ಇನ್ನು ಸುಧಾರಿತ ಕಾರು ಮಾದರಿಗಳ ವೈಶಿಷ್ಟ್ಯತೆಗಳಾದ ಆ್ಯಪಲ್ ಕಾರ್ ಪ್ಲೇ, ಅಂಡ್ರಾಯಿಡ್ ಆಟೋ ಕನೆಕ್ಟಿವಿಟಿ, ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಪಡೆದುಕೊಂಡಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲೂ ಖರೀದಿಗೆ ಲಭ್ಯವಿರಲಿದೆ.

ಡೀಲರ್ಸ್ ಯಾರ್ಡ್ ತಲುಪಿದ ಹ್ಯುಂಡೈ ಹೊಚ್ಚ ಹೊಸ ಐ20 ಫೇಸ್‌ಲಿಫ್ಟ್

ಎಂಜಿನ್ ಸಾಮರ್ಥ್ಯ

ಪೆಟ್ರೋಲ್ ಆವೃತ್ತಿಯಲ್ಲಿ 1.2-ಲೀಟರ್ ವೆರಿಯಂಟ್ ಮತ್ತು 1.4-ಲೀಟರ್ ಪೆಟ್ರೋಲ್ ವೆರಿಯಂಟ್ ಖರೀದಿಗೆ ಲಭ್ಯವಿರಲಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 4-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಇರುವ ಮಾದರಿಯನ್ನು ಆಯ್ಕೆ ಮಾಡಬಹುದು.

ಡೀಲರ್ಸ್ ಯಾರ್ಡ್ ತಲುಪಿದ ಹ್ಯುಂಡೈ ಹೊಚ್ಚ ಹೊಸ ಐ20 ಫೇಸ್‌ಲಿಫ್ಟ್

ಅಂತೆಯೇ ಡಿಸೇಲ್ ಆವೃತ್ತಿಯಲ್ಲಿ 1.4-ಲೀಟರ್ ವೆರಿಯಂಟ್ ಖರೀದಿಗೆ ಲಭ್ಯವಿರಲಿದ್ದು, 6-ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರಲಿದೆ. ಹೀಗಾಗಿ ಹೊಸ ಕಾರಿನ ಬೆಲೆಗಳು ಪ್ರಸ್ತುತ ಮಾದರಿಗಿಂತ ತುಸು ಹೆಚ್ಚಳವಾಗಲಿವೆ.

ಡೀಲರ್ಸ್ ಯಾರ್ಡ್ ತಲುಪಿದ ಹ್ಯುಂಡೈ ಹೊಚ್ಚ ಹೊಸ ಐ20 ಫೇಸ್‌ಲಿಫ್ಟ್

ಬೆಲೆ (ಅಂದಾಜು)

ಮೂಲಗಳ ಪ್ರಕಾರ ಹೊಸ ಕಾರಿನ ಬೆಲೆಯು ಆರಂಭಿಕ ಆವೃತ್ತಿಗೆ ರೂ. 5.50 ಲಕ್ಷ ಮತ್ತು ಉನ್ನತ ಆವೃತ್ತಿಗೆ 9.50 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Trending DriveSpark YouTube Videos

Subscribe To DriveSpark Kannada YouTube Channel - Click Here

English summary
2018 Hyundai i20 Facelift Images At Dealership Leaked; Launch At Auto Expo 2018.
Story first published: Sunday, February 4, 2018, 11:04 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark