ಪ್ರತಿ ಚಾರ್ಜ್‌ಗೆ 469ಕಿಮಿ ಮೈಲೇಜ್ ನೀಡುವ ಹ್ಯುಂಡೈ ಎಲೆಕ್ಟ್ರಿಕ್ ಕೋನಾ

ಹ್ಯುಂಡೈ ಸಂಸ್ಥೆಯು 2018ರ ಜಿನೆವಾ ಮೋಟಾರ್ ಪ್ರದರ್ಶನದಲ್ಲಿ ತನ್ನ ಹೊಸ ಕೋನಾ ಎಲೆಕ್ಟ್ರಿಕ್ ಎಸ್‌ಯುವಿ ಕಾರನ್ನು ಅನಾವರಣಗೊಳಿಸಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳ ವಿಭಾಗದಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದೆ.

By Praveen Sannamani

ಹ್ಯುಂಡೈ ಸಂಸ್ಥೆಯು 2018ರ ಜಿನೆವಾ ಮೋಟಾರ್ ಪ್ರದರ್ಶನದಲ್ಲಿ ತನ್ನ ಹೊಸ ಕೋನಾ ಎಲೆಕ್ಟ್ರಿಕ್ ಎಸ್‌ಯುವಿ ಕಾರನ್ನು ಅನಾವರಣಗೊಳಿಸಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳ ವಿಭಾಗದಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದೆ.

ಪ್ರತಿ ಚಾರ್ಜ್‌ಗೆ 469ಕಿಮಿ ಮೈಲೇಜ್ ನೀಡುವ ಹ್ಯುಂಡೈ ಎಲೆಕ್ಚ್ರಿಕ್ ಕೋನಾ

ಹ್ಯುಂಡೈ ಅನಾವರಣಗೊಳಿಸಿರುವ ಕೋನಾ ಕಾರು ಎರಡು ವಿಭಿನ್ನ ಪವರ್ ಟ್ರೈನ್ ಗಳಿಂದ 469 ಕಿ.ಮೀ ನಿಂದ 500 ಕಿ.ಮೀ.ವರೆಗೆ ಮೈಲೇಜ್ ಸಾಮರ್ಥ್ಯ ಹೊಂದಿದ್ದು, ಎಲೆಕ್ಟ್ರಿಕ್ ಕಾರು ಆವೃತ್ತಿಗಳಲ್ಲೇ ಅತಿ ಹೆಚ್ಚು ಬೇಡಿಕೆ ಪಡೆಯುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದೆ.

Recommended Video

[Kannada] Maruti Swift 2018 - Full Specifications, Features, Price, Mileage, Colours - DriveSpark
ಪ್ರತಿ ಚಾರ್ಜ್‌ಗೆ 469ಕಿಮಿ ಮೈಲೇಜ್ ನೀಡುವ ಹ್ಯುಂಡೈ ಎಲೆಕ್ಚ್ರಿಕ್ ಕೋನಾ

ಸುಧಾರಿತ ತಂತ್ರಜ್ಞಾನದೊಂದಿಗೆ ಚಾಲನೆಗೊಳ್ಳುವ ಕಾರು ಹಾಗೂ ಅನುಕೂಲಕರ ಮತ್ತು ಸಂಪರ್ಕದ ವೈಶಿಷ್ಟ್ಯಗಳೊಂದಿಗೆ ವ್ಯಾಪಕ ಶ್ರೇಣಿ ಮತ್ತು ಸಕ್ರಿಯ ಸುರಕ್ಷತೆ, ಡ್ರೈವಿಂಗ್ ಅಸ್ಸಿಸ್ಟನ್ಸ್ ತಂತ್ರಜ್ಞಾನಗಳಿಂದ ಪ್ರಯೋಜನವನ್ನು ಪಡೆದಿರುತ್ತದೆ ಎಂದು ಹ್ಯುಂಡೈ ಸಂಸ್ಥೆಯು ಹೇಳಿಕೊಂಡಿದೆ.

ಪ್ರತಿ ಚಾರ್ಜ್‌ಗೆ 469ಕಿಮಿ ಮೈಲೇಜ್ ನೀಡುವ ಹ್ಯುಂಡೈ ಎಲೆಕ್ಚ್ರಿಕ್ ಕೋನಾ

ಮಾಹಿತಿಗಳ ಪ್ರಕಾರ ಹ್ಯುಂಡೈ ಸಂಸ್ಥೆಯು ಕಾರಿನ ಎಲೆಕ್ಟ್ರಿಕ್ ಪವರ್ ಟ್ರೈನ್ ನಿರ್ಮಿಸಲು ಎಲ್ ಜಿ ಕೆಮಿಕಲ್ಸ್ ಜೊತೆ ಕೈಜೋಡಿಸಿದ್ದು, ಇದೇ ಬ್ಯಾಟರಿಯನ್ನು ಚೆವಿ ಬೋಲ್ಟ್ ಹ್ಯಾಚ್ ಬ್ಯಾಕ್ ಕಾರಿನಲ್ಲು ಕೂಡ ಇರಿಸಲಾಗಿರಲಿದೆ ಎನ್ನಲಾಗಿದೆ. ಅಲ್ಲದೆ ಕೊನಾ ಇವಿ 40 ಕಿಲೋವ್ಯಾಟ್ಸ್ ಮತ್ತು 64ಕಿಲೋ ವ್ಯಾಟ್ಸ್ ಬ್ಯಾಟರಿ ಪ್ಯಾಕ್‌ನ್ನು ಹೊಂದಿರಲಿದೆ.

ಪ್ರತಿ ಚಾರ್ಜ್‌ಗೆ 469ಕಿಮಿ ಮೈಲೇಜ್ ನೀಡುವ ಹ್ಯುಂಡೈ ಎಲೆಕ್ಚ್ರಿಕ್ ಕೋನಾ

ಹುಂಡೈ ಸಂಸ್ಥೆಯು ತನ್ನ ಮೊದಲ ಇವಿ ಕಾರನ್ನು 2019ರಲ್ಲಿ ಪರಿಚಯಿಸಲಿದ್ದು, ಇದಲ್ಲದೆ ಲೋನಿಕ್ ಹೈಬ್ರಿಡ್ ಮತ್ತು ಎಲೆಕ್ಟಿಕ್ ಮಾದರಿಯನ್ನು 2018ರ ಆಟೋ ಎಕ್ಸ್ ಪೋನಲ್ಲಿ ಪ್ರದರ್ಶಿಸಲಾಗಿತ್ತು. ಹೀಗಾಗಿ ಹೈಬ್ರಿಡ್ ಕಾರನ್ನು ಭಾರತದಲ್ಲಿ ಪರಿಚಯಿಸುವ ಯಾವುದೇ ಸುಳಿವು ಇಲ್ಲಾವಾದರೂ ಎಲೆಕ್ಟ್ರಿಕ್ ಕಾರನ್ನು ಮಾತ್ರ ಭಾರತದಲ್ಲಿ ಪರಿಚಯಿಸುವುದು ಖಚಿತವಾಗಿದೆ.

ಪ್ರತಿ ಚಾರ್ಜ್‌ಗೆ 469ಕಿಮಿ ಮೈಲೇಜ್ ನೀಡುವ ಹ್ಯುಂಡೈ ಎಲೆಕ್ಚ್ರಿಕ್ ಕೋನಾ

ಇದೇ ತಿಂಗಳಲ್ಲಿ ಹ್ಯುಂಡೈ ಕೋನಾ ಕನ್ವೆಷನಲ್ ಪವರ್ ಟ್ರೈನ್ ಆವೃತಿಯನ್ನು ಅಮೆರಿಕಾದ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು ಎನ್ನಲಾಗಿದ್ದು, ಎಸ್‌ಯುವಿ ಕಾರು ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಯಲ್ಲಿ ಫ್ರಂಟ್ ವೀಲ್ಹ್ ಡ್ರೈವ್ ಹಾಗು ರಿರ್ ವೀಲ್ ಡ್ರೈವ್ ಆಯ್ಕೆ ಹೊಂದಿರಲಿದೆ.

ಪ್ರತಿ ಚಾರ್ಜ್‌ಗೆ 469ಕಿಮಿ ಮೈಲೇಜ್ ನೀಡುವ ಹ್ಯುಂಡೈ ಎಲೆಕ್ಚ್ರಿಕ್ ಕೋನಾ

ಇಂಜಿನ್ ಸಾಮರ್ಥ್ಯ

ಹ್ಯುಂಡೈ ಕೋನಾ ಎಸ್ ಯುವಿ 2 ಲೀಟರ್ ಪೆಟ್ರೋಲ್ ಎಂಜಿನ್ ಆವೃತ್ತಿಯು 147ಬಿಹೆಚ್ ಪಿ ಮತ್ತು 179ಎನ್ಎಂ ಟಾರ್ಕನ್ನು ಉತ್ಪಾದಿಸುವ ಶಕ್ತಿಯನ್ನು ಹೊಂದಿದ್ದು, ಇದನ್ನು 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸಿಗೆ ಜೋಡಿಸಲಾಗಿದೆ.

ಪ್ರತಿ ಚಾರ್ಜ್‌ಗೆ 469ಕಿಮಿ ಮೈಲೇಜ್ ನೀಡುವ ಹ್ಯುಂಡೈ ಎಲೆಕ್ಚ್ರಿಕ್ ಕೋನಾ

ಹಾಗೆಯೇ ಡೀಸೆಲ್ ಆವೃತ್ತಿಯು 1.6 ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ 175 ಬಿಹೆಚ್ ಪಿ ಮತ್ತು 265 ಎನ್ಎಂ ಟಾರ್ಕನ್ನು ಉತ್ಪಾದಿಸುವ ಶಕ್ತಿಯನ್ನು ಹೊಂದಿರಲಿದೆ ಹಾಗು ಇದನ್ನು 7 ಸ್ಪೀಡ್ ಡ್ಯಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್‌ಗೆ ಜೋಡಿಸಲಾಗಿದೆ.

ಪ್ರತಿ ಚಾರ್ಜ್‌ಗೆ 469ಕಿಮಿ ಮೈಲೇಜ್ ನೀಡುವ ಹ್ಯುಂಡೈ ಎಲೆಕ್ಚ್ರಿಕ್ ಕೋನಾ

ಹ್ಯುಂಡೈ ಕೋನಾ ಎಸ್ ಯುವಿ 1 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ನಲ್ಲಿಯು ಲಭ್ಯವಿರಲಿದ್ದು, 118ಬಿಹೆಚ್ ಪಿ ಮತ್ತು 172ಎನ್ಎಂ ಟಾರ್ಕನ್ನು ಉತ್ಪಾದಿಸುವ ಶಕ್ತಿಯನ್ನು ಹೊಂದಿರಲಿದೆ. ಹಾಗೆಯೆ ಎಂಜಿನನ್ನು 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸಿಗೆ ಜೋಡಿಸಲಾಗಿದೆ.

ಪ್ರತಿ ಚಾರ್ಜ್‌ಗೆ 469ಕಿಮಿ ಮೈಲೇಜ್ ನೀಡುವ ಹ್ಯುಂಡೈ ಎಲೆಕ್ಚ್ರಿಕ್ ಕೋನಾ

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚುತ್ತಿದ್ದು, ವಾಹನ ತಯಾರಕ ಸಂಸ್ಥೆಗಳು ಕೂಡ ಗ್ರಾಹಕರ ಮೆಚ್ಚುಗೆಯನ್ನು ಪಡೆಯಲು ಅಧಿಕ ಪ್ರಮಾಣದ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುತ್ತಿವೆ.

ಪ್ರತಿ ಚಾರ್ಜ್‌ಗೆ 469ಕಿಮಿ ಮೈಲೇಜ್ ನೀಡುವ ಹ್ಯುಂಡೈ ಎಲೆಕ್ಚ್ರಿಕ್ ಕೋನಾ

ಹಾಗೆಯೇ ಹ್ಯುಂಡೈ ಕೂಡ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ತಯಾರಿಸಿದ್ದು, ಗ್ರಾಹಕರ ಮೆಚ್ಚುಗೆಯನ್ನು ಎಷ್ಟರ ಮಟ್ಟಿಗೆ ಪಡೆಯಲಿದೆ ಎಂಬುವುದನ್ನು ಕಾರಿನ ಬಿಡುಗಡೆಯ ನಂತರ ನೋಡಬೇಕಿದೆ.

Most Read Articles

Kannada
Read more on hyundai electric cars
English summary
Hyundai Kona Electric SUV Revealed Ahead Of Geneva Debut; Specifications, Features & Images.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X