2019ಕ್ಕೆ ಹ್ಯುಂಡೈ ವಿನೂತನ ಕೋನಾ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗುವುದು ಪಕ್ಕಾ

By Praveen Sannamani

ಹ್ಯುಂಡೈ ಮೋಟಾರ್ಸ್ ಸಂಸ್ಥೆಯು ಕಳೆದ ತಿಂಗಳು ಜಿನೆವಾ ಮೋಟಾರ್ ಪ್ರದರ್ಶನದಲ್ಲಿ ತನ್ನ ಹೊಸ ಕೋನಾ ಎಲೆಕ್ಟ್ರಿಕ್ ಎಸ್‌ಯುವಿ ಕಾರನ್ನು ಅನಾವರಣಗೊಳಿಸಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳ ವಿಭಾಗದಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದೆ. ಜೊತೆಗೆ 2019ರ ಮೊದಲಾರ್ಧದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡುವ ಸುಳಿವು ನೀಡಿದ್ದು, ಹೊಸ ಕಾರಿನ ತಾಂತ್ರಿಕ ಅಂಶಗಳು ಇದೀಗ ಭಾರೀ ಚರ್ಚೆಗೆ ಕಾರಣವಾಗಿವೆ.

2019ಕ್ಕೆ ಹ್ಯುಂಡೈ ವಿನೂತನ ಕೋನಾ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗುವುದು ಪಕ್ಕಾ

ಹ್ಯುಂಡೈ ಅನಾವರಣಗೊಳಿಸಿರುವ ಕೋನಾ ಎಲೆಕ್ಟ್ರಿಕ್ ಕಾರುಗಳು ಎರಡು ವಿಭಿನ್ನ ಪವರ್ ಟ್ರೈನ್ ಗಳಿಂದ 299 ಕಿ.ಮೀ ಮತ್ತು 469 ಕಿ.ಮೀ.ವರೆಗೆ ಮೈಲೇಜ್ ಸಾಮರ್ಥ್ಯವನ್ನು ಹೊಂದಿದ್ದು, ಎಲೆಕ್ಟ್ರಿಕ್ ಕಾರು ಆವೃತ್ತಿಗಳಲ್ಲೇ ಅತಿ ಹೆಚ್ಚು ಬೇಡಿಕೆ ಪಡೆಯುವ ಎಲ್ಲಾ ಗುಣಲಕ್ಷಣಗಳನ್ನು ಕೋನಾ ಹೊಸ ಎಲೆಕ್ಟ್ರಿಕ್ ಕಾರಿನಲ್ಲಿವೆ.

2019ಕ್ಕೆ ಹ್ಯುಂಡೈ ವಿನೂತನ ಕೋನಾ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗುವುದು ಪಕ್ಕಾ

ಸುಧಾರಿತ ತಂತ್ರಜ್ಞಾನದೊಂದಿಗೆ ಚಾಲನೆಗೊಳ್ಳುವ ಈ ಕಾರು ಅನುಕೂಲಕರ ಮತ್ತು ಸಂಪರ್ಕದ ವೈಶಿಷ್ಟ್ಯಗಳೊಂದಿಗೆ ವ್ಯಾಪಕ ಶ್ರೇಣಿ ಮತ್ತು ಸಕ್ರಿಯ ಸುರಕ್ಷತೆ, ಡ್ರೈವಿಂಗ್ ಅಸ್ಸಿಸ್ಟನ್ಸ್ ತಂತ್ರಜ್ಞಾನಗಳಿಂದ ಪ್ರಯೋಜನವನ್ನು ಪಡೆದಿರುತ್ತದೆ ಎಂದು ಹ್ಯುಂಡೈ ಸಂಸ್ಥೆಯು ಹೇಳಿಕೊಂಡಿದೆ.

2019ಕ್ಕೆ ಹ್ಯುಂಡೈ ವಿನೂತನ ಕೋನಾ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗುವುದು ಪಕ್ಕಾ

ಮಾಹಿತಿಗಳ ಪ್ರಕಾರ ಹ್ಯುಂಡೈ ಸಂಸ್ಥೆಯು ಕಾರಿನ ಎಲೆಕ್ಟ್ರಿಕ್ ಪವರ್ ಟ್ರೈನ್ ನಿರ್ಮಿಸಲು ಎಲ್‌ಜಿ ಕೆಮಿಕಲ್ಸ್ ಜೊತೆ ಕೈಜೋಡಿಸಿದ್ದು, ಇದೇ ಬ್ಯಾಟರಿಯನ್ನು ಚೆವಿ ಬೋಲ್ಟ್ ಹ್ಯಾಚ್ ಬ್ಯಾಕ್ ಕಾರಿನಲ್ಲೂ ಕೂಡಾ ಇರಿಸಲಾಗಿರಲಿದೆ ಎನ್ನಲಾಗಿದೆ. ಅಲ್ಲದೆ ಕೊನಾ ಇವಿ 39.2 ಕಿಲೋವ್ಯಾಟ್ಸ್ ಮತ್ತು 64 ಕಿಲೋವ್ಯಾಟ್ಸ್ ಬ್ಯಾಟರಿ ಪ್ಯಾಕ್‌ನ್ನು ಹೊಂದಿರಲಿದೆ.

2019ಕ್ಕೆ ಹ್ಯುಂಡೈ ವಿನೂತನ ಕೋನಾ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗುವುದು ಪಕ್ಕಾ

ಹುಂಡೈ ಸಂಸ್ಥೆಯು ತನ್ನ ಮೊದಲ ಇವಿ ಕಾರನ್ನು 2019ರ ಮೊದಲಾರ್ಧದಲ್ಲೇ ಪರಿಚಯಿಸುವ ಇರಾದೆಯಲ್ಲಿದ್ದು, ಇದಲ್ಲದೆ ಲೋನಿಕ್ ಹೈಬ್ರಿಡ್ ಮತ್ತು ಎಲೆಕ್ಟಿಕ್ ಮಾದರಿಯನ್ನು 2018ರ ಆಟೋ ಎಕ್ಸ್ ಪೋನಲ್ಲಿ ಪ್ರದರ್ಶಿಸಲಾಗಿತ್ತು. ಹೀಗಾಗಿ ಹೈಬ್ರಿಡ್ ಕಾರನ್ನು ಭಾರತದಲ್ಲಿ ಪರಿಚಯಿಸುವ ಯಾವುದೇ ಸುಳಿವು ಇಲ್ಲಾವಾದರೂ ಎಲೆಕ್ಟ್ರಿಕ್ ಕಾರನ್ನು ಮಾತ್ರ ಭಾರತದಲ್ಲಿ ಪರಿಚಯಿಸುವುದು ಖಚಿತವಾಗಿದೆ.

2019ಕ್ಕೆ ಹ್ಯುಂಡೈ ವಿನೂತನ ಕೋನಾ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗುವುದು ಪಕ್ಕಾ

ಬ್ಯಾಟರಿ ವೈಶಿಷ್ಟ್ಯತೆ

ಕೊನಾ ಕಾರುಗಳಲ್ಲಿ ಎರಡು ಮಾದರಿಯ ಬ್ಯಾಟರಿ ಚಾಲಿತ ವಿಭಾಗಗಳಿದ್ದು, ಗ್ರಾಹಕರ ಆಯ್ಕೆ ಮೇಲೆ 39. 2 ಕೆವಿ ಮತ್ತು 64 ಕೆವಿ ಬ್ಯಾಟರಿಯನ್ನು ಆಯ್ಕೆ ಮಾಡಬಹುದು. 39.2 ಕೆವಿ ಪ್ರೇರಿತ ಕೊನಾ ಕಾರುಗಳಿಗಿಂತಲೂ 64 ಕೆ.ವಿ ಪ್ರೇರಿತ ಕಾರುಗಳು ಬೆಲೆಯಲ್ಲಿ ತುಸು ದುಬಾರಿ ಎನ್ನಿಸಲಿವೆ.

2019ಕ್ಕೆ ಹ್ಯುಂಡೈ ವಿನೂತನ ಕೋನಾ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗುವುದು ಪಕ್ಕಾ

39.2 ಕೆವಿ ಬ್ಯಾಟರಿ ಪ್ರೇರಿಕ ಕೊನಾ ಕಾರುಗಳು ಪೂರ್ಣಪ್ರಮಾಣದಲ್ಲಿ ಚಾರ್ಜಿಂಗ್‌ಗೊಳ್ಳಲು 6 ತಾಸು 10 ನಿಮಿಷ ಸಮಯ ತೆಗೆದುಕೊಳ್ಳವುದಲ್ಲದೇ 54 ನಿಮಿಷಗಳಲ್ಲಿ ಶೇ.80ರಷ್ಟು ಚಾರ್ಜಿಂಗ್‌ ಮಾಡಬಹುದು. ಹಾಗೆಯೇ 64 ಕೆವಿ ಬ್ಯಾಟರಿ ಪ್ರೇರಿತ ಕೊನಾ ಕಾರುಗಳು ಸಹ ಪೂರ್ಣಪ್ರಮಾಣದ ಚಾರ್ಜಿಂಗ್‌ಗಾಗಿ 9 ತಾಸು 40 ನಿಮಿಷ ಸಮಯ ತೆಗೆದುಕೊಂಡರೇ, ಕೆವಲ 54 ನಿಮಿಷಗಳಲ್ಲಿ ಶೇ.80ರಷ್ಟು ಚಾರ್ಜಿಂಗ್ ಮಾಡಬಹುದು.

2019ಕ್ಕೆ ಹ್ಯುಂಡೈ ವಿನೂತನ ಕೋನಾ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗುವುದು ಪಕ್ಕಾ

ಕೊನಾ ಕಾರುಗಳ ಬೆಲೆ(ಅಂದಾಜು)

ಅತ್ಯುತ್ತಮ ಬ್ಯಾಟರಿ ಬಳಕೆಯ ಜೊತೆ ಅಧಿಕ ಮೈಲೇಜ್ ರೇಂಜ್ ಹೊಂದಿರುವ ಕೊನಾ ಕಾರುಗಳ ಬೆಲೆಯು ರೂ.15 ಲಕ್ಷದಿಂದ ರೂ.22 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

2019ಕ್ಕೆ ಹ್ಯುಂಡೈ ವಿನೂತನ ಕೋನಾ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗುವುದು ಪಕ್ಕಾ

ಹೀಗಾಗಿ ಹ್ಯುಂಡೈ ಸಂಸ್ಥೆಯು ಬಿಡುಗಡೆ ಮಾಡುತ್ತಿರುವ ಕೊನಾ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯಗೊಳ್ಳುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಹೊಸ ಕಾರುಗಳನ್ನು ಸದ್ಯಕ್ಕೆ ಸಿಕೆಡಿ ಮೂಲಕ ಆಮದು ಮಾಡಿಕೊಂಡು ಚೆನ್ನೈ ಬಳಿ ಇರುವ ಹ್ಯುಂಡೈ ಉತ್ಪಾದನಾ ಘಟಕದಲ್ಲಿ ಬ್ಯಾಟರಿ ಜೋಡಣೆ ಮಾಡಲಾಗುತ್ತದೆ.

2019ಕ್ಕೆ ಹ್ಯುಂಡೈ ವಿನೂತನ ಕೋನಾ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗುವುದು ಪಕ್ಕಾ

ತದನಂತರ ಕಾರುಗಳ ಮಾರಾಟ ಪ್ರಮಾಣವನ್ನು ನೋಡಿಕೊಂಡು ಭಾರತದಲ್ಲೇ ಪೂರ್ಣಪ್ರಮಾಣದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದನೆ ಮಾಡಲಿರುವ ಹ್ಯುಂಡೈ, 2020ರ ವೇಳೆಗೆ ಬಿಡುಗಡೆಯಾಗಲಿರುವ ತನ್ನ ವಿವಿಧ 8 ಎಲೆಕ್ಟ್ರಿಕ್ ಕಾರುಗಳ ಬಗೆಗಿನ ಮಾಹಿತಿಯನ್ನು ಇಷ್ಟರಲ್ಲೇ ಹೊರಹಾಕಲಿದೆ.

2019ಕ್ಕೆ ಹ್ಯುಂಡೈ ವಿನೂತನ ಕೋನಾ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗುವುದು ಪಕ್ಕಾ

ಇನ್ನು ಹ್ಯುಂಡೈ ಸಂಸ್ಥೆಯು ಮುಂದಿನ ತಿಂಗಳು ಕೋನಾ ಕನ್ವೆಷನಲ್ ಪವರ್ ಟ್ರೈನ್ ಆವೃತಿಯನ್ನು ಅಮೆರಿಕಾದ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು ಎನ್ನಲಾಗಿದ್ದು, ಹೊಸ ಎಸ್‌ಯುವಿ ಕಾರುಗಳು ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಯಲ್ಲಿ ಫ್ರಂಟ್ ವೀಲ್ಹ್ ಡ್ರೈವ್ ಹಾಗು ರಿರ್ ವೀಲ್ ಡ್ರೈವ್ ಆಯ್ಕೆ ಹೊಂದಿರಲಿದೆ.

Article Published On: Monday, July 2, 2018, 12:01 [IST]
English summary
Hyundai Kona EV India Launch Details Revealed.
Read more on hyundai electric car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+