ವಿನೂತನ ಹೆಸರಿನೊಂದಿಗೆ ಮಾರುಕಟ್ಟೆಗೆ ಮರಳಿ ಬರಲಿದೆ ಹೊಸ ಸ್ಯಾಂಟ್ರೊ

ವಿನೂತನ ಹೆಸರಿನೊಂದಿಗೆ ಮಾರುಕಟ್ಟೆಗೆ ಮರಳಿ ಬರಲಿದೆ ಹೊಸ ಸ್ಯಾಂಟ್ರೊ

By Praveen Sannamani

ಇದೇ ವರ್ಷ ದೀಪಾವಳಿ ಹೊತ್ತಿಗೆ ಬಿಡುಗಡೆಗೊಳ್ಳಲಿರುವ ಹ್ಯುಂಡೈ ಇಂಡಿಯಾ ನಿರ್ಮಾಣದ ನೆಕ್ಸ್ಟ್ ಜನರೇಷನ್ ಸ್ಯಾಂಟ್ರೊ ಕಾರು ಆವೃತ್ತಿಯನ್ನು ಸ್ಪಾಟ್ ಟೆಸ್ಟಿಂಗ್‌ ನಡೆಸಲಾಗುತ್ತಿದ್ದು, ಹೊಸ ಕಾರಿನ ತಾಂತ್ರಿಕ ಅಂಶಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..

ವಿನೂತನ ಹೆಸರಿನೊಂದಿಗೆ ಮಾರುಕಟ್ಟೆಗೆ ಮರಳಿ ಬರಲಿದೆ ಹೊಸ ಸ್ಯಾಂಟ್ರೊ

ನೆಕ್ಸ್ಟ್ ಜನರೇಷನ್ ಸ್ಯಾಂಟ್ರೊ ಕಾರು ಆವೃತ್ತಿಯನ್ನು ಎಹೆಚ್2 ಎಂಬ ಕೋಡ್ ವಲ್ಡ್ ಹೆಸರಿನಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿರುವ ಹ್ಯುಂಡೈ ಸಂಸ್ಥೆಯು, ಚೆನ್ನೈ ಹೊರವಲಯದಲ್ಲಿ ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ ಬಗೆಗೆ ಹಲವು ಸುತ್ತಿನ ಸ್ಪಾಟ್ ಟೆಸ್ಟಿಂಗ್ ಕೈಗೊಂಡಿದೆ. ಈ ನಡುವೆ ಹೊಸ ಸ್ಯಾಂಟ್ರೊ ಕಾರುಗಳಿಗೆ ವಿನೂತನವಾದ ಹೆಸರಿನೊಂದಿಗೆ ಮಾರುಕಟ್ಟೆಗೆ ಮರಳಿ ಬರಲಿದ್ದು, ಹೊಸ ಕಾರಿನ ಹೆಸರು ಅಕ್ಟೋಬರ್ 4ರಂದು ಹ್ಯುಂಡೈ ಸಂಸ್ಥೆಯು ಬಹಿರಂಗಗೊಳಿಸುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ವಿನೂತನ ಹೆಸರಿನೊಂದಿಗೆ ಮಾರುಕಟ್ಟೆಗೆ ಮರಳಿ ಬರಲಿದೆ ಹೊಸ ಸ್ಯಾಂಟ್ರೊ

ಇನ್ನು ಸ್ಟಾಟ್ ಟೆಸ್ಟಿಂಗ್ ವೇಳೆ ನೆಕ್ಸ್ಟ್ ಜನರೇಷನ್ ಹ್ಯುಂಡೈ ಸ್ಯಾಂಟ್ರೊ ಉತ್ತಮ ಪ್ರದರ್ಶನ ತೊರುತ್ತಿದ್ದು, ಅಧಿಕ ಮೈಲೇಜ್ ಮತ್ತು ಅತ್ಯುತ್ತಮ ಬ್ರೇಕಿಂಗ್ ಸೌಲಭ್ಯಗಳು ಗ್ರಾಹಕರ ನಂಬಿಕೆಗೆ ವಿಶ್ವಾಸರ್ಹವಾಗಿವೆ ಎಂಬ ಮಾಹಿತಿ ದೊರೆತಿದೆ.

ವಿನೂತನ ಹೆಸರಿನೊಂದಿಗೆ ಮಾರುಕಟ್ಟೆಗೆ ಮರಳಿ ಬರಲಿದೆ ಹೊಸ ಸ್ಯಾಂಟ್ರೊ

ಆದ್ರೆ ಸ್ಪಾಟ್ ಟೆಸ್ಟಿಂಗ್‌ನಲ್ಲಿ ಕಾಣಿಸಿಕೊಂಡ ನೆಕ್ಸ್ಟ್ ಜನರೇಷನ್ ಹ್ಯುಂಡೈ ಸ್ಯಾಂಟ್ರೊ ಮೇಲೆ ಭಾರೀ ಪ್ರಮಾಣದ ಮುಸುಕು ಹಾಕಿದ್ದರ ಪರಿಣಾಮ ವಿನ್ಯಾಸಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಸಾಧ್ಯವಾಗಿಲ್ಲ.

ವಿನೂತನ ಹೆಸರಿನೊಂದಿಗೆ ಮಾರುಕಟ್ಟೆಗೆ ಮರಳಿ ಬರಲಿದೆ ಹೊಸ ಸ್ಯಾಂಟ್ರೊ

ಆದರೂ ಮಧ್ಯಮ ವರ್ಗಗಳ ಸ್ನೇಹಿಯಾಗಿರುವ ಉತ್ತಮ ಹ್ಯಾಚ್‌ಬ್ಯಾಕ್ ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಶಕ್ತವಾಗಿರುವ ನೆಕ್ಸ್ಟ್ ಜನರೇಷನ್ ಹ್ಯುಂಡೈ ಸ್ಯಾಂಟ್ರೊ, 800 ಸಿಸಿ ಪೆಟ್ರೋಲ್ ಎಂಜಿನ್ ಇಲ್ಲವಾದ್ರೆ 1.0-ಲೀಟರ್ ಎಂಜಿನ್ ಪಡೆದುಕೊಳ್ಳಲಿದೆ. ಆದರೇ ಹೊಸ ಕಾರುಗಳಲ್ಲಿ ಡಿಸೇಲ್ ಆವೃತ್ತಿಯನ್ನು ಪರಿಚಯಿಸದಿರಲು ಹ್ಯುಂಡೈ ನಿರ್ಧರಿಸಿದೆ.

ವಿನೂತನ ಹೆಸರಿನೊಂದಿಗೆ ಮಾರುಕಟ್ಟೆಗೆ ಮರಳಿ ಬರಲಿದೆ ಹೊಸ ಸ್ಯಾಂಟ್ರೊ

ಇದರ ಜೊತೆಗೆ ಎಎಂಟಿ(ಆಟೋ ಮ್ಯಾಟಿಕ್ ಗೇರ್‌ಬಾಕ್ಸ್) ಕೂಡಾ ಹೊಂದುವ ಸಾಧ್ಯತೆಗಳಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಐ10 ಮಾದರಿಯಲ್ಲೇ ಒಳ ವಿನ್ಯಾಸದ ಸೌಲಭ್ಯಗಳನ್ನು ಪಡೆಯಲಿವೆ ಎನ್ನಲಾಗುತ್ತಿದೆ.

ವಿನೂತನ ಹೆಸರಿನೊಂದಿಗೆ ಮಾರುಕಟ್ಟೆಗೆ ಮರಳಿ ಬರಲಿದೆ ಹೊಸ ಸ್ಯಾಂಟ್ರೊ

ಜೊತೆಗೆ ಪ್ರಯಾಣಿಕ ಸುರಕ್ಷತೆಗಾಗಿ ಎಬಿಎಸ್ ಮತ್ತು ಡ್ಯುಯಲ್ ಏರ್‌ಬ್ಯಾಗ್ ಸೌಲಭ್ಯಗಳನ್ನು ಸಹ ಆಯ್ಕೆ ರೂಪದಲ್ಲಿ ನೀಡಲಿದ್ದು, ಪಾರ್ಕಿಂಗ್ ಸೆನ್ಸಾರ್, ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಮತ್ತು ವಿಶೇಷ ವಿನ್ಯಾಸದ ಟಾಲಿ ಬಾಯ್ ಡಿಸೈನ್ ಹೊಂದಿರಲಿವೆ.

ವಿನೂತನ ಹೆಸರಿನೊಂದಿಗೆ ಮಾರುಕಟ್ಟೆಗೆ ಮರಳಿ ಬರಲಿದೆ ಹೊಸ ಸ್ಯಾಂಟ್ರೊ

ಕಾರಿನ ಬೆಲೆ ಮತ್ತು ಬಿಡುಗಡೆಯ ಅವಧಿ (ಅಂದಾಜು)

ಸ್ಯಾಂಟ್ರೊ ಹೊಸ ಕಾರುಗಳನ್ನ ದೀಪಾವಳಿ ಹೊತ್ತಿಗೆ ಬಿಡುಗೊಳಿಸುವ ಬಗ್ಗೆ ಮಾಹಿತಿಗಳಿದ್ದು, ಹೊಸ ಕಾರಿನ ಬೆಲೆಯನ್ನು ಎಕ್ಸ್‌ಶೋರಂ ಪ್ರಕಾರ ರೂ. 3.90 ಲಕ್ಷದಿಂದ 4.20 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Source: ACI

ವಿನೂತನ ಹೆಸರಿನೊಂದಿಗೆ ಮಾರುಕಟ್ಟೆಗೆ ಮರಳಿ ಬರಲಿದೆ ಹೊಸ ಸ್ಯಾಂಟ್ರೊ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹೊಸತನಗಳೊಂದಿಗೆ ಮಾರುಕಟ್ಟೆ ಪ್ರವೇಶ ಪಡೆಯುತ್ತಿರುವ ನೆಕ್ಸ್ಟ್ ಜನರೇಷನ್ ಹ್ಯುಂಡೈ ಸ್ಯಾಂಟ್ರೊ ಆವೃತ್ತಿಯು ಸಣ್ಣ ಕಾರುಗಳ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದ್ದು, ಮಾರುತಿ ಸುಜುಕಿ ಸೆಲೆರಿಯೊ, ಟಾಟಾ ಟಿಯಾಗೋ ಮತ್ತು ರೆನಾಲ್ಟ್ ಕ್ವಿಡ್‌ಗೆ ತೀವ್ರ ಸ್ಪರ್ಧಿಯಾಗಲಿದೆ.

Most Read Articles

Kannada
Read more on hyundai new car
English summary
Hyundai to reveal name of new AH2 hatchback on Oct 4.
Story first published: Friday, July 27, 2018, 17:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X