ಕೇಂದ್ರದ ಹೊಸ ಯೋಜನೆಯಿಂದ ಅಗ್ಗವಾಗಲಿವೆ ಎಲೆಕ್ಟ್ರಿಕ್ ಕಾರುಗಳ ಬೆಲೆ

ಕೇಂದ್ರ ಸರ್ಕಾರವು ಮಹತ್ವದ ಯೋಜನೆಯೊಂದಕ್ಕೆ ಒಪ್ಪಿಗೆ ನೀಡಿದ್ದು, ಇದರಿಂದ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗಳಿಗೆ ಮಾರಾಟವಾಗುತ್ತಿರುವ ಎಲೆಕ್ಟ್ರಿಕ್ ಕಾರುಗಳ ಬೆಲೆಯು ಇನ್ಮುಂದೆ ಕೈಗೆಟುಕುವ ಬೆಲೆಗಳಲ್ಲಿ ಲಭ್ಯವಾಗಲಿವೆ.

By Praveen Sannamani

ಎಲೆಕ್ಟ್ರಿಕ್ ಕಾರುಗಳು ಮುಖ್ಯ ತಾಂತ್ರಿಕ ಅಂಶವಾದ ಲೀಥಿಯಂ ಅಯಾನ್ ಬ್ಯಾಟರಿ ಉತ್ಪನ್ನಗಳಿಗಾಗಿ ಇಷ್ಟು ದಿನ ವಿದೇಶಿ ಮಾರುಕಟ್ಟೆಯನ್ನು ಅವಲಂಭಿಸಿದ್ದ ಭಾರತವು ಇನ್ಮುಂದೆ ಸ್ವದೇಶಿ ನಿರ್ಮಿತ ಲೀಥಿಯಂ ಅಯಾನ್ ಬ್ಯಾಟರಿಗಳ ಉತ್ಪಾದನೆ ಆರಂಭಿಸುವ ಮಹತ್ವದ ಯೋಜನೆಗೆ ಚಾಲನೆ ನೀಡುತ್ತಿದ್ದು, ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ವಾಹನಗಳ ಅಭಿವೃದ್ಧಿಗೆ ವರವಾಗಿ ಪರಿಣಮಿಸಲಿದೆ.

ಕೇಂದ್ರದ ಹೊಸ ಯೋಜನೆಯಿಂದ ಅಗ್ಗವಾಗಲಿವೆ ಎಲೆಕ್ಟ್ರಿಕ್ ಕಾರುಗಳ ಬೆಲೆ

ಎಲೆಕ್ಟ್ರಿಕ್ ವಾಹನಳಲ್ಲಿ ಬಳಸಲಾಗುವ ಲೀಥಿಯಂ ಅಯಾನ್ ಬ್ಯಾಟರಿಗಳನ್ನು ದೊಡ್ಡ ಮಟ್ಟದಲ್ಲಿ ಉತ್ಪಾದನೆ ಮಾಡಲು ಸಹಕರಿಸುವಂತೆ ಇಸ್ರೋ ಸಂಸ್ಥೆಗೆ ಕೇಂದ್ರ ಸರ್ಕಾರವು ಈ ಹಿಂದೆ ಮಹತ್ವದ ಸೂಚಿನೆ ನೀಡಿತ್ತು.

ಕೇಂದ್ರದ ಹೊಸ ಯೋಜನೆಯಿಂದ ಅಗ್ಗವಾಗಲಿವೆ ಎಲೆಕ್ಟ್ರಿಕ್ ಕಾರುಗಳ ಬೆಲೆ

ಹೀಗಾಗಿ ಇಸ್ರೋ ಸಂಸ್ಥೆಯು ಲೀಥಿಯಂ ಅಯಾನ್ ತಂತ್ರಜ್ಞಾನವನ್ನು ಅಭಿವೃದ್ಧಿ ಮಾಡಿದ್ದು, ಆರ್‌ಎಎಸ್ಐ ಸೋಲಾರ್ ಪ್ರೈ.ಲಿಮಿಟೆಡ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಸ್ಥಳೀಯವಾಗಿಯೇ ಸುಧಾರಿತ ತಂತ್ರಜ್ಞಾನ ಪ್ರೇರಿತ ಬ್ಯಾಟರಿಗಳನ್ನು ಸಿದ್ದಪಡಿಸಲಿದೆ.

ಕೇಂದ್ರದ ಹೊಸ ಯೋಜನೆಯಿಂದ ಅಗ್ಗವಾಗಲಿವೆ ಎಲೆಕ್ಟ್ರಿಕ್ ಕಾರುಗಳ ಬೆಲೆ

ಪ್ರಸ್ತುತ ಭಾರತವು ಲೀಥಿಯಂ ಅಯಾನ್ ಬ್ಯಾಟರಿಗಳ ಆಮದಿಗಾಗಿ ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾ ರಾಷ್ಟ್ರಗಳನ್ನು ಅವಲಂಭಿಸಿದ್ದು, 2017ರ ಅವಧಿಯಲ್ಲಿಯೇ ಬರೋಬ್ಬರಿ 150 ಮಿಲಿಯನ್ ಡಾಲರ್ ಮೊತ್ತದ ಲೀಥಿಯಂ ಅಯಾನ್ ಬ್ಯಾಟರಿಗಳನ್ನು ಆಮದು ಮಾಡಿಕೊಂಡಿತ್ತು.

ಕೇಂದ್ರದ ಹೊಸ ಯೋಜನೆಯಿಂದ ಅಗ್ಗವಾಗಲಿವೆ ಎಲೆಕ್ಟ್ರಿಕ್ ಕಾರುಗಳ ಬೆಲೆ

ಇದು ಎಲೆಕ್ಟ್ರಿಕ್ ಕಾರುಗಳ ಬೆಲೆಯ ಹೆಚ್ಚಳಕ್ಕೆ ಮೂಲ ಕಾರಣವಾಗಿದ್ದು, ಪೆಟ್ರೋಲ್ ಮತ್ತು ಡಿಸೇಲ್ ಕಾರುಗಳಿಂತಲೂ ಹೆಚ್ಚಿನ ಬೆಲೆ ಹೊಂದಿರುವ ಹಿನ್ನೆಲೆಯಲ್ಲಿ ಇವಿ ಕಾರುಗಳ ಮಾರಾಟ ಪ್ರಕ್ರಿಯೆಯಲ್ಲಿ ಅಷ್ಟಾಗಿ ಮುನ್ನಡೆ ಕಂಡುಬಂದಿರಲಿಲ್ಲ.

ಕೇಂದ್ರದ ಹೊಸ ಯೋಜನೆಯಿಂದ ಅಗ್ಗವಾಗಲಿವೆ ಎಲೆಕ್ಟ್ರಿಕ್ ಕಾರುಗಳ ಬೆಲೆ

ಇದರಿಂದ ಕೇಂದ್ರದ ಮೊರೆಹೊಗಿದ್ದ ಪ್ರಮುಖ ಆಟೋ ಉತ್ಪಾದಕ ಸಂಸ್ಥೆಗಳು ಸ್ಥಳೀಯವಾಗಿಯೇ ಲೀಥಿಯಂ ಅಯಾನ್ ಬ್ಯಾಟರಿಗಳ ಉತ್ಪಾದನೆ ಮಾಡುವತ್ತ ಗಮನಹರಿಸುವಂತೆ ಮನವಿ ಮಾಡಿದ್ದವು. ಇದರ ಫಲವಾಗಿ ದೇಶಿಯವಾಗಿ ಲೀಥಿಯಂ ಅಯಾನ್ ಬ್ಯಾಟರಿಗಳನ್ನು ಉತ್ಪಾದನೆ ಮಾಡುವ ಪ್ರಮುಖ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ.

ಕೇಂದ್ರದ ಹೊಸ ಯೋಜನೆಯಿಂದ ಅಗ್ಗವಾಗಲಿವೆ ಎಲೆಕ್ಟ್ರಿಕ್ ಕಾರುಗಳ ಬೆಲೆ

ಈ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ಡಾ.ಹರ್ಷವರ್ಧನ್ ಅವರು "ಪ್ರಧಾನಿ ಮೋದಿಯವರ ಮೇಕ್ ಇನ್ ಇಂಡಿಯಾ ಕನಸಿನಂತೆ ಭಾರತವನ್ನು ಉತ್ಪಾದಕ ಹಬ್‌ನ್ನಾಗಿ ಪರಿವರ್ತಿಸುವ ಆಶಯದೊಂದಿಗೆ ಈ ಮಹತ್ವದ ಯೋಜನೆಗೆ ಚಾಲನೆ ನೀಡಲಾಗುತ್ತಿದೆ' ಎಂದಿದ್ದಾರೆ.

ಕೇಂದ್ರದ ಹೊಸ ಯೋಜನೆಯಿಂದ ಅಗ್ಗವಾಗಲಿವೆ ಎಲೆಕ್ಟ್ರಿಕ್ ಕಾರುಗಳ ಬೆಲೆ

ಒಟ್ಟಿನಲ್ಲಿ ಕೇಂದ್ರ ಸರ್ಕಾರದ ಹೊಸ ಯೋಜನೆಯಿಂದಾಗಿ ಎಲೆಕ್ಟ್ರಿಕ್ ಕಾರುಗಳ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬರಲಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಮೇಲೆ ಅವಲಂಬಿತವಾಗಿರುವ ವಾಹನ ಸವಾರರು ಕೈಗೆಟುವ ಬೆಲೆಗಳಲ್ಲಿ ಇನ್ಮುಂದೆ ಇವಿ ಕಾರುಗಳನ್ನು ಖರೀದಿ ಮಾಡಲು ಇದೊಂದು ಉತ್ತಮ ಅವಕಾಶ ಎನ್ನಬಹುದು.

More from DriveSpark

Article Published On: Wednesday, June 13, 2018, 11:40 [IST]
English summary
India to soon start making lithium-ion batteries.
Read more on electric car evergreen
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+