ಲೀಥಿಯಂ ಅಯಾನ್ ಬ್ಯಾಟರಿ ಉತ್ಪಾದನೆಗಾಗಿ ಕೇಂದ್ರದಿಂದ ಬೃಹತ್ ಯೋಜನೆ..

By Praveen Sannamani

ಎಲೆಕ್ಟ್ರಿಕ್ ಬ್ಯಾಟರಿ ಉತ್ಪಾದನೆಗಾಗಿ ಕೇಂದ್ರ ಸರ್ಕಾರವು ಬೃಹತ್ ಯೋಜನೆಯನ್ನು ರೂಪಿಸಿದ್ದು, ಹೊಸ ಯೋಜನೆಯಿಂದಾಗಿ ಎಲೆಕ್ಟ್ರಿಕ್ ಕಾರುಗಳ ಬೆಲೆಗಳಲ್ಲೂ ಭಾರೀ ಬದಲಾವಣೆಯಾಗುವುದಲ್ಲದೇ ಅಗ್ಗದ ಬೆಲೆಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಖರೀದಿಗೆ ಲಭ್ಯವಾಗುವ ನೀರಿಕ್ಷೆಗಳಿವೆ.

ಲೀಥಿಯಂ ಅಯಾನ್ ಬ್ಯಾಟರಿ ಉತ್ಪಾದನೆಗಾಗಿ ಕೇಂದ್ರದಿಂದ ಬೃಹತ್ ಯೋಜನೆ..

ಇಷ್ಟು ದಿನಗಳ ಕಾಲ ಎಲೆಕ್ಟ್ರಿಕ್ ಕಾರುಗಳ ನಿರ್ಮಾಣಕ್ಕಾಗಿ ಬೇಕಿದ್ದ ಮುಖ್ಯ ತಾಂತ್ರಿಕ ಅಂಶವಾದ ಲೀಥಿಯಂ ಅಯಾನ್ ಬ್ಯಾಟರಿ ಉತ್ಪನ್ನಗಳಿಗಾಗಿ ವಿದೇಶಿ ಮಾರುಕಟ್ಟೆಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆಗಳಿದ್ದವು. ಆದ್ರೆ ಇನ್ಮುಂದೆ ಉತ್ತಮ ಗುಣಮಟ್ಟದ ಲೀಥಿಯಂ ಅಯಾನ್ ಬ್ಯಾಟರಿ‌ಗಳು ಭಾರತದಲ್ಲೇ ಸಿದ್ದವಾಗಲಿದ್ದು, ಇದರಿಂದ ಕಾರುಗಳ ಬೆಲೆಯಲ್ಲಿ ಗಣನೀಯ ಇಳಿಕೆಯಾಗಲಿದೆ.

ಲೀಥಿಯಂ ಅಯಾನ್ ಬ್ಯಾಟರಿ ಉತ್ಪಾದನೆಗಾಗಿ ಕೇಂದ್ರದಿಂದ ಬೃಹತ್ ಯೋಜನೆ..

ಈ ಸಂಬಂಧ ಕೇಂದ್ರದ ಎಲೆಕ್ಟ್ರೋ ಕೆಮಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಸಂಸ್ಥೆಯೊಂದಿಗೆ ಕೈ ಜೋಡಿಸಿರುವ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ಮತ್ತು ರಾಶಿ ಸೋಲಾರ್ ಪವರ್ ಸಂಸ್ಥೆಗಳು ಲೀಥಿಯಂ ಅಯಾನ್ ಬ್ಯಾಟರಿ ಅಭಿವೃದ್ಧಿಗಾಗಿ ಪರಸ್ಪರ ಸಹಿ ಹಾಕಿದ್ದು, ಸ್ಥಳೀಯವಾಗಿ ಸದ್ಯದಲ್ಲೇ ಲೀಥಿಯಂ ಅಯಾನ್ ಬ್ಯಾಟರಿಗಳನ್ನು ಉತ್ವಾದನೆಯನ್ನ ಆರಂಭ ಮಾಡಲಿದ್ದಾರೆ.

ಲೀಥಿಯಂ ಅಯಾನ್ ಬ್ಯಾಟರಿ ಉತ್ಪಾದನೆಗಾಗಿ ಕೇಂದ್ರದಿಂದ ಬೃಹತ್ ಯೋಜನೆ..

ಹೊಸ ಯೋಜನೆ ಕುರಿತು ಮಾತನಾಡಿರುವ ತಂತ್ರಜ್ಞಾನ ಮತ್ತು ವಿಜ್ಞಾನ ಖಾತೆಯ ಕೇಂದ್ರ ಸಚಿವ ಹರ್ಷವರ್ದನ್ ಅವರು, ಇವಿ ವಾಹನಗಳ ಉತ್ಪಾದನೆಗಾಗಿ ದೇಶದಲ್ಲಿ ಹೆಚ್ಚುತ್ತಿರುವ ಲೀಥಿಯಂ ಅಯಾನ್ ಬ್ಯಾಟರಿ ಬೇಡಿಕೆಯನ್ನ ನಿಭಾಯಿಸಲು ಕೇಂದ್ರ ಸರ್ಕಾರವು ಬದ್ಧವಾಗಿದ್ದು, ರಾಶಿ ಸೋಲಾರ್ ಪವರ್ ಸಂಸ್ಥೆಯು ಸಿದ್ದಪಡಿಸಿರುವ ಬೃಹತ್ ಯೋಜನೆಯು ಭಾರತೀಯ ಆಟೋ ಉದ್ಯಮದಲ್ಲಿ ಹೊಸ ಬದಲಾವಣೆಗೆ ಕಾರಣವಾಗಲಿದೆ ಎಂದಿದ್ದಾರೆ.

ಲೀಥಿಯಂ ಅಯಾನ್ ಬ್ಯಾಟರಿ ಉತ್ಪಾದನೆಗಾಗಿ ಕೇಂದ್ರದಿಂದ ಬೃಹತ್ ಯೋಜನೆ..

ಹೀಗಾಗಿ ಲೀಥಿಯಂ ಅಯಾನ್ ಬ್ಯಾಟರಿಗಳನ್ನ ಸಿದ್ದಪಡಿಸಲಿರುವ ಬೆಂಗಳೂರು ಮೂಲದ ರಾಶಿ ಸೋಲಾರ್ ಪವರ್ ಸಂಸ್ಥೆಗೆ ಕೇಂದ್ರದ ಎಲೆಕ್ಟ್ರೋ ಕೆಮಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಸಂಸ್ಥೆ ಮತ್ತು ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ಸಂಸ್ಥೆಯು ಬ್ಯಾಟರಿ ತಂತ್ರಜ್ಞಾನ ಸುಧಾರಣೆಗಾಗಿ ಸಹಾಯ ಮಾಡಲಿವೆ.

ಲೀಥಿಯಂ ಅಯಾನ್ ಬ್ಯಾಟರಿ ಉತ್ಪಾದನೆಗಾಗಿ ಕೇಂದ್ರದಿಂದ ಬೃಹತ್ ಯೋಜನೆ..

ಮೂಲಗಳ ಪ್ರಕಾರ, ರಾಶಿ ಸೋಲಾರ್ ಪವರ್ ಸಂಸ್ಥೆಯು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ತನ್ನ ಮೊದಲ ಬ್ಯಾಟರಿ ಉತ್ಪಾದನಾ ಘಟಕವನ್ನು ಸ್ಥಾಪನೆ ಮಾಡುತ್ತಿರುವ ಬಗ್ಗೆ ಮಾಹಿತಿಗಳಿದ್ದು, ಲೀಡ್ ಬ್ಯಾಟರಿಗಳಿಂತಲೂ ಅಗ್ಗವಾಗಲಿರುವ ಸ್ಥಳೀಯ ಲೀಥಿಯಂ ಅಯಾನ್ ಬ್ಯಾಟರಿಗಳು ಪ್ರತಿ ಕೆವಿ(ಕಿಲೋ ವ್ಯಾಟ್) ಗೆ ರೂ.1,500 ವೆಚ್ಚ ತಗ್ಗಬಹುದು ಎಂದು ಅಂದಾಜಿಸಲಾಗಿದೆ.

ಲೀಥಿಯಂ ಅಯಾನ್ ಬ್ಯಾಟರಿ ಉತ್ಪಾದನೆಗಾಗಿ ಕೇಂದ್ರದಿಂದ ಬೃಹತ್ ಯೋಜನೆ..

ಇದರಿಂದಾಗಿ ಇಷ್ಟುಗಳ ಕಾಲ ಲೀಥಿಯಂ ಅಯಾನ್ ಬ್ಯಾಟರಿಗಳ ಆಮದು ಮಾಡಿಕೊಳ್ಳಲು ಚೀನಾ, ಜಪಾನ್, ಮಂಗೋಲಿಯಾ ದೇಶಗಗಳನ್ನೇ ಅವಲಂಭಿಸಿದ್ದ ಭಾರತಕ್ಕೆ ಹೊಸ ಯೋಜನೆಯಿಂದ ಭಾರೀ ಪ್ರಮಾಣದ ಆದಾಯ ಹರಿದು ಬರುವುದಲ್ಲದೇ ಸ್ಥಳೀಯವಾಗಿ ನಿರ್ಮಾಣವಾಗುವುದರಿಂದ ಎಲೆಕ್ಟ್ರಿಕ್ ಕಾರುಗಳನ್ನ ಖರೀದಿಸುವ ಗ್ರಾಹಕರಿಗೂ ಇದರಿಂದ ಲಾಭವಾಗಲಿದೆ.

ಲೀಥಿಯಂ ಅಯಾನ್ ಬ್ಯಾಟರಿ ಉತ್ಪಾದನೆಗಾಗಿ ಕೇಂದ್ರದಿಂದ ಬೃಹತ್ ಯೋಜನೆ..

ಬದಲಾದ ತೆರಿಗೆ ನೀತಿ

2030ರ ಹೊತ್ತಿಗೆ ವಿಶ್ವಾದ್ಯಂತ ಶೇ.99ರಷ್ಟು ಎಲೆಕ್ಟ್ರಿಕ್ ಕಾರುಗಳನ್ನು ರಸ್ತೆಗಿಳಿಸುವ ಉದ್ದೇಶದಿಂದ ವಿಶ್ವದ ಪ್ರಮುಖ ರಾಷ್ಟ್ರಗಳು ಎಲೆಕ್ಟ್ರಿಕ್ ಕಾರುಗಳ ಮಾರಾಟಕ್ಕೆ ಪೂರಕವಾದ ಮಾರುಕಟ್ಟೆ ಒದಗಿಸುತ್ತಿದ್ದು, ಇದೀಗ ಕೇಂದ್ರ ಸರ್ಕಾರವು ಸಹ ಎಲೆಕ್ಟ್ರಿಕ್ ಕಾರುಗಳ ಬೆಲೆ ತಗ್ಗಿಸುವ ಉದ್ದೇಶ ಮಹತ್ವದ ನಿರ್ಣಯವೊಂದನ್ನ ಕೈಗೊಂಡಿದೆ.

ಲೀಥಿಯಂ ಅಯಾನ್ ಬ್ಯಾಟರಿ ಉತ್ಪಾದನೆಗಾಗಿ ಕೇಂದ್ರದಿಂದ ಬೃಹತ್ ಯೋಜನೆ..

ಕೇಂದ್ರ ಸರ್ಕಾರವು ಪ್ರಮುಖ 80 ದಿನಬಳಕೆ ವಸ್ತುಗಳ ಮೇಲಿನ ಜಿಎಸ್‌ಟಿ ಪ್ರಮಾಣವನ್ನು ಇಳಿಕೆ ಮಾಡಿದ್ದು, ಇದರಲ್ಲಿ ಎಲೆಕ್ಟ್ರಿಕ್ ಕಾರುಗಳ ಮುಖ್ಯ ಮುಖ್ಯ ತಾಂತ್ರಿಕ ಅಂಶವಾದ ಎಲೆಕ್ಟ್ರಿಕ್ ಬ್ಯಾಟರಿಗಳ ಮೇಲಿನ ಜಿಎಸ್‌ಟಿ ತೆರಿಗೆ ಪ್ರಮಾಣವನ್ನು ತಗ್ಗಿಸಿರುವುದು ಇವಿ ಕಾರುಗಳ ಮೇಲಿನ ಬೆಲೆ ಇಳಿಕೆಗೆ ಸಹಕಾರಿಯಾಗುವುದರ ಜೊತೆಗೆ ಮಾರಾಟಕ್ಕೂ ಅನುಕೂಲವಾಗಲಿದೆ.

ಲೀಥಿಯಂ ಅಯಾನ್ ಬ್ಯಾಟರಿ ಉತ್ಪಾದನೆಗಾಗಿ ಕೇಂದ್ರದಿಂದ ಬೃಹತ್ ಯೋಜನೆ..

ಎಲೆಕ್ಟ್ರಿಕ್ ಬ್ಯಾಟರಿಗಳ ಮೇಲೆ ಇಷ್ಟು ದಿನ ಇದ್ದ ಶೇ.28ರಷ್ಟು ಜಿಎಸ್‌ಟಿ ತೆರಿಗೆಯು ಇನ್ಮುಂದೆ ಶೇ.18ಕ್ಕೆ ಇಳಿಕೆಯಾಗಲಿದ್ದು, ಪರಿಸರಕ್ಕೆ ಪೂರಕವಾಗಿರುವ ಎಲೆಕ್ಟ್ರಿಕ್ ಕಾರುಗಳ ಅಭಿವೃದ್ದಿ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಹಲವು ಜನಪರ ಯೋಜನೆಗಳನ್ನ ರೂಪಿಸಿತ್ತಿದೆ.

ಲೀಥಿಯಂ ಅಯಾನ್ ಬ್ಯಾಟರಿ ಉತ್ಪಾದನೆಗಾಗಿ ಕೇಂದ್ರದಿಂದ ಬೃಹತ್ ಯೋಜನೆ..

ಒಟ್ಟಿನಲ್ಲಿ ಸ್ಥಳೀಯವಾಗಿಯೇ ಲೀಥಿಯಂ ಅಯಾನ್ ಬ್ಯಾಟರಿಗಳ ಉತ್ಪಾದನೆ ಮತ್ತು ಜಿಎಸ್‌ಟಿ ತೆರಿಗೆಗಳಲ್ಲಿ ಆದ ಬದಲಾವಣೆಯು ಎಲೆಕ್ಟ್ರಿಕ್ ಕಾರು ಉತ್ಪಾದನೆ ಮತ್ತು ಮಾರಾಟ ಉತ್ತಮ ಅವಕಾಶ ಕಲ್ಪಿಸಿದಂತಾಗಿದ್ದು, ಇದು ಮುಂಬರುವ ದಿನಗಳಲ್ಲಿ ಭಾರತೀಯ ಆಟೋ ಉದ್ಯಮವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles

Kannada
Read more on electric cars auto news
English summary
India Will Soon Start Making Lithium-Ion Batteries — EVs Could Be Cheaper Soon.
Story first published: Thursday, July 26, 2018, 18:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more