ದೇಶದ ಮೊದಲ ಲಂಬೋರ್ಗಿನಿ ಅವೆಂಟಡೊರ್ ಎಸ್‌ವಿಜೆ ಖರೀದಿಸಿದ ಬೆಂಗಳೂರು ಉದ್ಯಮಿ..!

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯಲ್ಲಿ ಇಡೀ ವಿಶ್ವವನ್ನೇ ತನ್ನತ್ತ ಸೆಳೆಯುತ್ತಿರುವ ನಮ್ಮ ಬೆಂಗಳೂರಿನಲ್ಲಿ ಸದ್ಯ ಆಟೋ ಉದ್ಯಮದಲ್ಲಿ ಹೊಸ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿದ್ದು, ಸೂಪರ್ ಕಾರುಗಳ ಅತಿದೊಡ್ಡ ಮಾರುಕಟ್ಟೆಯಾಗಿ ಪರಿಣಮಿಸಿದೆ. ಇದಕ್ಕೆ ಸ್ಪಷ್ಟ ನಿದರ್ಶನ ಅಂದ್ರೆ ದೇಶದ ಇತರೆ ನಗರಗಳಿಂತ ಹೆಚ್ಚಿನ ಮಟ್ಟದಲ್ಲಿ ಸೂಪರ್ ಕಾರುಗಳು ಬೆಂಗಳೂರಿನಲ್ಲೇ ಮಾರಾಟವಾಗುತ್ತಿರುವುದು.

ದೇಶದ ಮೊದಲ ಲಂಬೋರ್ಗಿನಿ ಅವೆಂಟಡೊರ್ ಎಸ್‌ವಿಜೆ ಖರೀದಿಸಿದ ಬೆಂಗಳೂರು ಉದ್ಯಮಿ..!

ಹೌದು, ಲಂಬೋರ್ಗಿನಿ ಸರಣಿ ಕಾರುಗಳು ಸದ್ಯ ಬೆಂಗಳೂರಿನಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದು, ಇದೀಗ ಮತ್ತೊಂದು ಹೊಸ ನಮೂನೆಯ ಅವೆಂಟಡೊರ್ ಎಸ್‌ವಿಜೆ ಕಾರು ಆವೃತ್ತಿಯು ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಇದನ್ನು ಖರೀದಿ ಮಾಡಿದವರು ಬೆಂಗಳೂರಿನ ಉದ್ಯಮಿ ಎನ್ನವುದು ಮತ್ತೊಂದು ಆಕರ್ಷಣೆ.

ದೇಶದ ಮೊದಲ ಲಂಬೋರ್ಗಿನಿ ಅವೆಂಟಡೊರ್ ಎಸ್‌ವಿಜೆ ಖರೀದಿಸಿದ ಬೆಂಗಳೂರು ಉದ್ಯಮಿ..!

ಲಂರ್ಬೋಗಿನಿ ಸಂಸ್ಥೆಯು ಇದುವರೆಗೆ ಪರಿಚಯಿಸುವ ಹಲವು ಸೂಪರ್ ಕಾರು ಮಾದರಿಗಳಲ್ಲಿ ಅವೆಂಟಡೊರ್ ಎಸ್‌ವಿಜೆ ಕಾರು ಆವೃತ್ತಿ ಹಲವು ವಿಶೇಷತೆಗಳಿಂದ ಕೂಡಿದ್ದು, ಜಗತ್ತಿನಾದ್ಯಂತ ಮಾರಾಟಕ್ಕೆ ಲಭ್ಯವಿರುವ 63 ಅವೆಂಟಡೊರ್ ಎಸ್‌ವಿಜೆ ಕಾರುಗಳಲ್ಲಿ ಇದು ಕೂಡಾ ಒಂದು.

ದೇಶದ ಮೊದಲ ಲಂಬೋರ್ಗಿನಿ ಅವೆಂಟಡೊರ್ ಎಸ್‌ವಿಜೆ ಖರೀದಿಸಿದ ಬೆಂಗಳೂರು ಉದ್ಯಮಿ..!

ಹಾಗೆಯೇ ಈ ಕಾರು ಬೆಂಗಳೂರಿನಲ್ಲಿ ಅಷ್ಟೇ ಅಲ್ಲದೇ ಭಾರತದಲ್ಲಿ ಖರೀದಿಸಲಾದ ಮೊದಲ ಕಾರು ಎಂಬ ಹೆಗ್ಗಳಿಕೆ ಪಾತ್ರವಾಗಿದ್ದು, ಜಾಗತಿಕ ಮಾರುಕಟ್ಟೆಯಲ್ಲೂ ಮಾರಾಟವಾದ 3ನೇ ಕಾರು ಕೂಡಾ ಇದೆ ಎನ್ನುವುದು ಮತ್ತೊಂದು ವಿಶೇಷ.

ದೇಶದ ಮೊದಲ ಲಂಬೋರ್ಗಿನಿ ಅವೆಂಟಡೊರ್ ಎಸ್‌ವಿಜೆ ಖರೀದಿಸಿದ ಬೆಂಗಳೂರು ಉದ್ಯಮಿ..!

ಅಂದ್ರೆ ಅವೆಂಟಡೊರ್ ಎಸ್‌ವಿಜೆ ಕಾರು ಲಿಮಿಟೆಡ್ ಎಡಿಷನ್ ಕಾರು ಮಾದರಿಯಾಗಿದ್ದು, ಇದರಲ್ಲಿ ಒದಗಿಸಲಾಗಿರುವ ದುಬಾರಿ ಬೆಲೆಯ ಮೆಟಾಲಿಕ್ ಬ್ಲೂ ಬಣ್ಣದ ಆಯ್ಕೆಯೇ ಈ ಕಾರಿನ ಮೊದಲ ಹೈಲೈಟ್ಸ್ ಎನ್ನಬಹುದು.

ದೇಶದ ಮೊದಲ ಲಂಬೋರ್ಗಿನಿ ಅವೆಂಟಡೊರ್ ಎಸ್‌ವಿಜೆ ಖರೀದಿಸಿದ ಬೆಂಗಳೂರು ಉದ್ಯಮಿ..!

ಅಂದಹಾಗೆ ಈ ಕಾರುನ್ನು ಖರೀದಿ ಮಾಡಿದವರು ಉದ್ಯಮಿ ಭೂಪೇಶ್ ರೆಡ್ಡಿ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿರುವ ಭೂಪೇಶ್ ರೆಡ್ಡಿ ಕೇವಲ ಅವೆಂಟಡೊರ್ ಎಸ್‌ವಿಜೆ ಕಾರನ್ನೇ ಅಷ್ಟೇ ಅಲ್ಲದೇ ಹತ್ತಕ್ಕೂ ಹೆಚ್ಚು ಸೂಪರ್ ಕಾರುಗಳ ಮೊದಲ ಮಾಲೀಕರಾಗಿದ್ದಾರೆ.

ದೇಶದ ಮೊದಲ ಲಂಬೋರ್ಗಿನಿ ಅವೆಂಟಡೊರ್ ಎಸ್‌ವಿಜೆ ಖರೀದಿಸಿದ ಬೆಂಗಳೂರು ಉದ್ಯಮಿ..!

ಕಳೆದ ಅಗಸ್ಟ್‌ನಲ್ಲೂ ಪೋರ್ಷೆ 911 ಜಿಟಿ2 ಆರ್‌ಎಸ್ ಕಾರಿನ ಮೊದಲ ಮಾಲೀಕರಾಗಿದ್ದ ಭೂಪೇಶ್ ರೆಡ್ಡಿ ಸೂಪರ್ ಕಾರ್ ಗ್ಯಾರೇಜ್ ಕೂಡಾ ಹೊಂದಿದ್ದಾರೆ. ಬೆಂಗಳೂರಿನಲ್ಲಿ ಕೆಲವೇ ಕೆಲವು ಸೂಪರ್ ಕಾರು ಗ್ಯಾರೇಜ್ ಪಟ್ಟಿಯಲ್ಲಿ ಭೂಪೇಶ್ ರೆಡ್ಡಿ ಒಡೆತನದ ಬ್ರೆನ್ ಗ್ಯಾರೇಜ್ ಕೂಡಾ ಒಂದು.

ದೇಶದ ಮೊದಲ ಲಂಬೋರ್ಗಿನಿ ಅವೆಂಟಡೊರ್ ಎಸ್‌ವಿಜೆ ಖರೀದಿಸಿದ ಬೆಂಗಳೂರು ಉದ್ಯಮಿ..!

ಸದ್ಯ ಬ್ರೆನ್ ಗ್ಯಾರೇಜ್‌‌ಗೆ ಎಂಟ್ರಿ ನೀಡಿರುವ ಲಂಬೋರ್ಗಿನಿ ಸ್ಪೆಷಲ್ ಎಡಿಷನ್ ಅವೆಂಟಡೊರ್ ಎಸ್‌ವಿಜೆ ಕಾರು ಯುರೋಪ್ ಮಾರುಕಟ್ಟೆಗಳಲ್ಲಿ ಮಾತ್ರವೇ ಖರೀದಿಗೆ ಲಭ್ಯವಿದ್ದು, 2019ರ ಆರಂಭದಲ್ಲಷ್ಟೇ ಭಾರತ ಸೇರಿದಂತೆ ಏಷ್ಯಾದ ಪ್ರಮುಖ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳ್ಳುವ ನೀರಿಕ್ಷೆಯಿದೆ.

ದೇಶದ ಮೊದಲ ಲಂಬೋರ್ಗಿನಿ ಅವೆಂಟಡೊರ್ ಎಸ್‌ವಿಜೆ ಖರೀದಿಸಿದ ಬೆಂಗಳೂರು ಉದ್ಯಮಿ..!

ಹೀಗಾಗಿ ಯುರೋಪ್ ಮಾರುಕಟ್ಟೆಯಿಂದಲೇ ಅವೆಂಟಡೊರ್ ಎಸ್‌ವಿಜೆ ಕಾರನ್ನು ಖರೀದಿ ಮಾಡಲಾಗಿದ್ದು, ಕಾರಿನ ಬೆಲೆಗಳ ಬಗ್ಗೆ ಯಾವುದೇ ನಿಖರ ಮಾಹಿತಿಗಳಿಲ್ಲ. ಆದ್ರೆ ಅವೆಂಟಡೊರ್ ವರ್ಷನ್‌ಗಳಲ್ಲಿ ಟಾಪ್ ಎಂಡ್ ಮಾದರಿಯಾಗಿರುವ ಈ ಕಾರು ಭಾರತದಲ್ಲಿ ಸುಮಾರು 5 ಕೋಟಿಗೂ ಅಧಿಕ ಆನ್-ರೋಡ್ ಬೆಲೆಯನ್ನು ಪಡೆದುಕೊಂಡಿರಲಿದೆ.

ದೇಶದ ಮೊದಲ ಲಂಬೋರ್ಗಿನಿ ಅವೆಂಟಡೊರ್ ಎಸ್‌ವಿಜೆ ಖರೀದಿಸಿದ ಬೆಂಗಳೂರು ಉದ್ಯಮಿ..!

ಅದರಲ್ಲೂ ಇದು ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳಲಾಗಿರುವ ಕಾರು ಮಾದರಿಯಾಗಿರುವುದರಿಂದ ಕಾರಿನ ಬೆಲೆಯಲ್ಲಿ ಮತ್ತಷ್ಟು ಹೆಚ್ಚಳವಾಗಿದ್ದು, ಯುರೋ 6(ಲೆವಲ್ 3) ಎಂಜಿನ್ ವೈಶಿಷ್ಟ್ಯತೆಯನ್ನು ಹೊಂದಿರುವ ಅವೆಂಟಡೊರ್ ಎಸ್‌ವಿಜೆ ಕಾರುಗಳು ಪರ್ಫಾಮೆನ್ಸ್ ವಿಚಾರಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

MOST READ: ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?

ದೇಶದ ಮೊದಲ ಲಂಬೋರ್ಗಿನಿ ಅವೆಂಟಡೊರ್ ಎಸ್‌ವಿಜೆ ಖರೀದಿಸಿದ ಬೆಂಗಳೂರು ಉದ್ಯಮಿ..!

6.5-ಲೀಟರ್(6498 ಸಿಸಿ) ವಿ12 ನ್ಯಾಚುರಲಿ ಆಸ್ಪೈರೆಟೆಡ್ ಪೆಟ್ರೋಲ್ ಎಂಜಿನ್ ಹೊಂದಿರುವ ಅವೆಂಟಡೊರ್ ಎಸ್‌ವಿಜೆ ಕಾರು, 7-ಸ್ಪೀಡ್ ಐಎಸ್ಆರ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 770-ಬಿಎಚ್‌ಪಿ ಮತ್ತು 720-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿವೆ.

ದೇಶದ ಮೊದಲ ಲಂಬೋರ್ಗಿನಿ ಅವೆಂಟಡೊರ್ ಎಸ್‌ವಿಜೆ ಖರೀದಿಸಿದ ಬೆಂಗಳೂರು ಉದ್ಯಮಿ..!

ಈ ಮೂಲಕ ಗಂಟೆಗೆ 351 ಕಿ.ಮಿ ಟಾಪ್ ಸ್ಪೀಡ್ ಹೊಂದಿರುವ ಅವೆಂಟಡೊರ್ ಎಸ್‌ವಿಜೆ ಕಾರು, ಕೇವಲ 2.8 ಸೇಕೆಂಡುಗಳಲ್ಲಿ ಸೊನ್ನೆಯಿಂದ 100ಕಿ.ಮಿ ಹಾಗೂ 8 ಸೇಕೆಂಡುಗಳಲ್ಲಿ 200 ಕಿ.ಮಿ ವೇಗ ಪಡೆಯುವ ಸಾಮರ್ಥ್ಯ ಈ ಕಾರಿಗಿದೆ.

MOST READ: ವಾಹನ ಸವಾರರೇ ಎಚ್ಚರ- ಪೆಟ್ರೋಲ್ ಬಂಕ್‌ಗಳಲ್ಲಿ ಹೇಗೆ ನಡೆಯುತ್ತೆ ನೋಡಿ ಹಗಲು ದರೋಡೆ..!

ದೇಶದ ಮೊದಲ ಲಂಬೋರ್ಗಿನಿ ಅವೆಂಟಡೊರ್ ಎಸ್‌ವಿಜೆ ಖರೀದಿಸಿದ ಬೆಂಗಳೂರು ಉದ್ಯಮಿ..!

ಟೂ ಸೀಟರ್ ಕೂಪೆ ವಿನ್ಯಾಸ ಹೊಂದಿರುವ ಅವೆಂಟಡೊರ್ ಎಸ್‌ವಿಜೆ ಕಾರಿನಲ್ಲಿ ಬೆಲೆ ತಕ್ಕಂತೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, 7 ಏರ್‌ಬ್ಯಾಗ್‌ಗಳು, ಡೈನಾಮಿಕ್ ಸ್ಟೀರಿಂಗ್ ವೀಲ್ಹ್‌, ಕಾರ್ಬನ್ ಪೈಬರ್ ಎಂಜಿನ್ ಬ್ಯಾನೆಟ್, ಅಲ್ಯುಮಿನಿಯಂ ಫ್ರಂಟ್ ಬ್ಯಾನೆಟ್ ಜೋಡಣೆ ಹೊಂದಿರುವ ಈ ಕಾರು ಪ್ರತಿ ಲೀಟರ್ ಪೆಟ್ರೋಲ್‌ಗೆ ಸರಾಸರಿ 4 ಕಿ.ಮಿ ಮೈಲೇಜ್ ನೀಡುತ್ತೆ ಅಂದ್ರೆ ನಂಬಲೇಬೇಕು.

More from DriveSpark

Article Published On: Wednesday, December 19, 2018, 18:50 [IST]
English summary
India's First Lamborghini Aventador SVJ Lands In Bangalore. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+