ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?

Written By:
Recommended Video - Watch Now!
Andhra Pradesh State Transport Bus Crashes Into Bike Showroom - DriveSpark

ಇತ್ತೀಚೆಗೆ ನಟ ದರ್ಶನ್‌ ಖರೀದಿ ಮಾಡಿದ್ದ 5.70 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಅವೆಂಟಡೊರ್ ಕಾರಿನ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಹಬ್ಬಿತ್ತು. ಆದ್ರೆ ದರ್ಶನ್‌ ಅವರ ಹೊಸ ಕಾರಿನ ಮೇಲೆ ಪುದುಚೆರಿಯ ರಿಜಿಸ್ಟ್ರೇಷನ್‌ ನಂಬರ್‌ ಇರುವುದು ಇದೀಗ ಭಾರೀ ಚರ್ಚೆಗೆ ಕಾರಣವಾಗುತ್ತಿದೆ.

ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ಖರೀದಿಸಿರುವ ದುಬಾರಿ ಬೆಲೆಯ ಲ್ಯಾಂಬೋರ್ಗಿನಿ ಅವೆಂಟಡೊರ್ ಹೈ-ಎಂಡ್ ಸ್ಫೋರ್ಟ್ಸ್ ಕಾರಿನ ಮೇಲೆ ಈಗ ಆರ್‌ಟಿಓ ಕಣ್ಣುಬಿದ್ದಿದೆ. ಈ ಕಾರು ಪುದುಚೇರಿ ರಿಜಿಸ್ಟ್ರೇಷನ್ ಸಂಖ್ಯೆ (PY01 CD 5008) ಹೊಂದಿರುವುದೇ ಇದಕ್ಕೆ ಕಾರಣ.

ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?

ಕರ್ನಾಟಕಕ್ಕೆ ಹೋಲಿಸಿದರೆ ಪುದುಚೇರಿಯಲ್ಲಿ ಲೈಫ್‌ಟೈಮ್ ಟ್ಯಾಕ್ಸ್ ತುಂಬಾ (ಕನಿಷ್ಠ ಪಕ್ಷ ಶೇ.20) ಕಡಿಮೆ ಇದ್ದು ಪುದುಚೇರಿಯಲ್ಲಿ ನೋಂದಣಿಯಾಗಿ ಕರ್ನಾಟಕದಲ್ಲಿ ಓಡಾಡುತ್ತಿರುವ ಕಾರುಗಳ ಮೇಲೆ ಸಾರಿಗೆ ಇಲಾಖೆ ಈಗ ದೃಷ್ಟಿ ಹರಿಸಿದೆ.

ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?

ಈ ಹಿಂದೆಯೂ ತಮಿಳಿನ ಖ್ಯಾತ ನಟಿ ಅಮಲಾ ಪೌಲ್‌ ಸೇರಿದಂತೆ ಒಂದಷ್ಟು ಮಂದಿ ಸೆಲೆಬ್ರಟಿಗಳು ಪುದುಚೆರಿಯಲ್ಲಿ ತಮ್ಮ ಕಾರನ್ನು ರಿಜಿಸ್ಟ್ರೇಷನ್‌ ಮಾಡಿಸಿ ಅದನ್ನು ಚೆನ್ನೈನಲ್ಲಿ ಓಡಿಸುತ್ತಿದ್ದರು. ಆಗ ಅದು ವಿವಾದವಾಗಿ 20 ಲಕ್ಷ ದಂಡ ಸಹ ಕಟ್ಟಿದ್ದರು.

ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?

ಒಂದು ಕಾರನ್ನು ಅಥವಾ ಬಸ್ಸನ್ನು ಬೇರೆ ರಾಜ್ಯದಿಂದ ರಿಜಿಸ್ಟ್ರೇಷನ್‌ ಮಾಡಿಸಿಕೊಂಡು ಬರುವುದು ತಪ್ಪಲ್ಲ. ಆದರೆ, ಇಲ್ಲಿಗೆ ಬಂದ ಮೇಲೆ ಇಲ್ಲಿನ ರೋಡ್‌ ಟ್ಯಾಕ್ಸ್‌ ಕಟ್ಟಿ ಅದನ್ನು ಇಲ್ಲಿಗೆ ಟ್ರಾನ್ಸ್‌ಫರ್‌ ಮಾಡಿಸಿಕೊಳ್ಳಬೇಕು. ಅದಕ್ಕೆ ಒಂದು ವರ್ಷಗಳ ಕಾಲ ಸಮಯಾವಕಾಶ ನೀಡಲಾಗುತ್ತದೆ.

ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?

ಇಷ್ಟೆಲ್ಲಾ ರೂಲ್ಸ್‌‌ಗಳು ಇದ್ದರೂ ಜನ ಸಾಕಷ್ಟು ವರ್ಷಗಳ ಕಾಲ ತಾವು ವಾಸ ಮಾಡುವ ರಾಜ್ಯಕ್ಕೆ ಟ್ರಾನ್ಸಫರ್‌ ಮಾಡಿಸಿಕೊಳ್ಳುವುದಿಲ್ಲ. ಹಾಗಾಗಿ ದರ್ಶನ್‌ ಕಾರಿನ ಮೇಲೆ ಸಾರಿಗೆ ಇಲಾಖೆ ಅಧಿಕಾರಿಗಳು ಒಂದು ಕಣ್ಣಿಟ್ಟಿದ್ದಾರೆ.

Trending On DriveSpark Kannada:

ಚಿಕ್ಕಬಳ್ಳಾಪುರ ಬಳಿ ನಡೆದ ಭೀಕರ ಅಪಘಾತದಲ್ಲಿ ಎರಡೂವರೆ ಕೋಟಿ ಮೌಲ್ಯದ ಜಿಟಿ ಆರ್ ಕಾರು ಸಂಪೂರ್ಣ ಜಖಂ...

ರೀ ಸೇಲ್ ಮೌಲ್ಯವಿಲ್ಲದ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ...

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?

ಅಷ್ಟಕ್ಕೂ ಪುದುಚೇರಿ ರಿಜಿಸ್ಟ್ರೇಷನ್ ಕಾರು ಖರೀದಿಸುವ ಮೂಲಕ ದರ್ಶನ್ ಅವರೇನು ಕಾನೂನು ಬಾಹಿರ ಕೆಲಸವೇನು ಮಾಡಿಲ್ಲ. ಕರ್ನಾಟಕದ ಹೊರಗೆ ರಿಜಿಸ್ಟ್ರೇಷನ್ ಮಾಡಿಕೊಂಡವರು ಒಂದು ವರ್ಷದ ತನಕ ನಮ್ಮ ರಾಜ್ಯದಲ್ಲಿ ಕಾರನ್ನು ಓಡಿಸಬಹುದು. ಅದಕ್ಕಿಂತಲೂ ಹೆಚ್ಚಿನ ಸಮಯ ಓಡಿಸಿದರೆ ಆಗ ಆರ್‌ಟಿಓ ಅಧಿಕಾರಿಗಳ ಕಿರಿಕಿರಿ ತಪ್ಪಿದ್ದಲ್ಲ.

ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?

ಲೈಫ್‍ಟೈಮ್ ಟ್ಯಾಕ್ಸ್ ಉಳಿಸಲು ಬೆಂಗಳೂರಿನಲ್ಲಿ ಶಾಶ್ವತ ವಿಳಾಸ ಇದ್ದರೂ ಪುದುಚೇರಿಯ ತಾತ್ಕಾಲಿಕ ವಿಳಾಸ ನೀಡಿ ದುಬಾರಿ ವಾಹನಗಳನ್ನು ಖರೀದಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆರ್‌ಟಿಓ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.

ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?

ಪುದುಚೇರಿಯಲ್ಲಿ ರಿಜಿಸ್ಟ್ರೇಷನ್ ಆಗಿದ್ದ ಸಾಕಷ್ಟು ವಾಹನಗಳನ್ನು ಈ ಹಿಂದೆ ಆರ್‌ಟಿಓ ತಪಾಸಣೆ ಮಾಡಿತ್ತು. ಬೇರೆ ರಾಜ್ಯದಲ್ಲಿ ರಿಜಿಸ್ಟ್ರೇಷನ್ ಮಾಡಿಕೊಂಡು ಒಂದು ತಿಂಗಳಿಗಿಂತಲೂ ಹೆಚ್ಚು ಕಾಲ ರಾಜ್ಯದಲ್ಲಿ ಓಡಿಸಿದ ವಾಹನಗಳಿಗೆ ತೆರಿಗೆ ಕಟ್ಟುವಂತೆ ಸೂಚಿಸಿತ್ತು.

ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?

ಲಂಬೋರ್ಗಿನಿ ಅವೆಂಟಡೊರ್ ಸ್ಪೆಷಲ್ ಏನು?

ಬರೋಬ್ಬರಿ 730 ಅಶ್ವಶಕ್ತಿ ಉತ್ಪಾದಿಸಬಲ್ಲ ಲಂಬೋರ್ಗಿನಿ ಅವೆಂಟಡೊರ್ ಕಾರು ಈ ಹಿಂದೆ 2017ರ ಫೆಬ್ರುವರಿಯಲ್ಲಿ ಭಾರತದಲ್ಲಿ ಭರ್ಜರಿ ಅನಾವರಣಗೊಂಡಿತ್ತು. ಇದು ಹಿಂದಿನ ಮಾದರಿಗಿಂತಲೂ ಹೆಚ್ಚುವರಿ 40-ಬಿಎಚ್‌ಪಿ ಉತ್ಪಾದಿಸುವ ಗುಣ ಹೊಂದಿದೆ.

ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?

ಎಂಜಿನ್ ಸಾಮರ್ಥ್ಯ

ನೂತನ ಲಂಬೋರ್ಗಿನಿ ಅವೆಂಟಡೊರ್ ಕಾರಿನಲ್ಲಿರುವ ಅತ್ಯಂತ ಶಕ್ತಿಶಾಲಿ 6.5-ಲೀಟರ್ ವಿ12 ಸೂಪರ್ ಕಾರು ಎಂಜಿನ್ 730 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

Trending On DriveSpark Kannada:

ವಿವಿಧ ಬಣ್ಣಗಳನ್ನು ಹೊಂದಿರುವ ನಂಬರ್ ಪ್ಲೇಟ್‌ಗಳು ಏನನ್ನು ಸೂಚಿಸುತ್ತವೆ ಗೊತ್ತಾ?

ಭಾರತದಲ್ಲಿ ಇವು ಅಟ್ಟರ್ ಫ್ಲಾಪ್ ಕಾರುಗಳು

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?

ವೇಗತೆಯ ಬಗ್ಗೆ ಮಾತನಾಡುವುದಾದ್ದಲ್ಲಿ ಕೇವಲ 2.9 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ಮತ್ತು ಗಂಟೆಗೆ ಗರಿಷ್ಠ 349 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಹೀಗಾಗಿ ಸ್ವತಂತ್ರ ಶಿಫ್ಟಿಂಗ್ ರಾಡ್ ಸೆವನ್ ಸ್ಪೀಡ್ ಗೇರ್ ಬಾಕ್ಸ್ ಮುಖಾಂತರ ಎಲ್ಲ ನಾಲ್ಕು ಚಕ್ರಗಳಿಗೆ ಶಕ್ತಿ ರವಾನೆಯಾಗಲಿದೆ.

ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?

ಕಾರ್ಬನ್ ಮೊನೊಕಾಕ್ ಸಂರಚನೆಯ ಲಂಬೋರ್ಗಿನಿ ಅವೆಂಟಡೊರ್ ಮಾದರಿಯು ಗರಿಷ್ಠ ವೇಗದಲ್ಲೂ ಅತ್ಯುತ್ತಮ ಸ್ಥಿರತೆಯನ್ನು ಪ್ರದಾನ ಮಾಡಲಿದ್ದು, ಕಾರಿನ ಒಟ್ಟಾರೆ ಭಾರ 1575 ಕೆ.ಜಿ ಆಗಿದೆ. ಇದು ಹಿಂದಿನ ಮಾದರಿಗೆ ಸಮಾನವಾಗಿದೆ.

Trending DriveSpark YouTube Videos

Subscribe To DriveSpark Kannada YouTube Channel - Click Here

English summary
STATE’S ‘WATCH REGISTER’ STARTS OFF WITH DARSHAN’S LAMBORGHINI.
Story first published: Tuesday, January 23, 2018, 15:49 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark