TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಭಾರತದಲ್ಲಿ ಇವು ಅಟ್ಟರ್ ಫ್ಲಾಪ್ ಕಾರುಗಳು
ಭಾರತೀಯ ವಾಹನ ಉದ್ಯಮವು ಕಾಲಕ್ಕೆ ತಕ್ಕಂತೆ ಹಲವಾರು ಬದಲಾವಣೆಗಳಿಗೆ ಕಂಡುಕೊಳ್ಳುತ್ತಲೇ ಹೊಸತನಕ್ಕೆ ಸಾಕ್ಷಿ ಆಗುತ್ತಿರುತ್ತದೆ. ಈ ನಡುವೆ ಮಾರುಕಟ್ಟೆಗೆ ಪರಿಚಯಿಸಲಾಗುವ ವಾಹನಗಳು ಕೇವಲ ಸಲ ಭಾರೀ ಜನಪ್ರಿಯತೆ ಗಳಿಸಿದ್ರೆ ಕೆಲ ಬಾರಿ ಭಾರೀ ಹಿನ್ನಡೆ ಅನುಭವಿಸಿವೆ.
ದೇಶಿಯ ಮಾರುಕಟ್ಟೆಯಲ್ಲಿ ಪ್ರತಿವರ್ಷ ಹತ್ತಾರು ಹೊಸ ಹೊಸ ಕಾರುಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತವೆ. ಆದ್ರೆ ಅದರಲ್ಲಿ ಎಲ್ಲವೂ ಗ್ರಾಹಕನ್ನು ಸೆಳೆಯುವಲ್ಲಿ ಯಶಸ್ವಿಯಾಗುವುದಿಲ್ಲ. ಇದೇ ಕಾರಣಕ್ಕೆ ಇತ್ತೀಚೆಗೆ ಬಿಡುಗಡೆಯಾಗಿ ಮಾರುಕಟ್ಟೆಯಲ್ಲಿ ಹಿನ್ನಡೆ ಅನುಭವಿಸಿರುವ ಕೆಲವು ಕಾರುಗಳ ಬಗ್ಗೆ ಚರ್ಚಿಸುತ್ತಿದೆ.


ಇನ್ನೊಂದು ಮುಖ್ಯ ವಿಚಾರ ಅಂದ್ರೆ ಗ್ರಾಹಕನ್ನು ಸೆಳೆಯುವಲ್ಲಿ ವಿಫಲವಾದ ಕಾರುಗಳಲ್ಲಿ ಕೇವಲ ಸಣ್ಣ ಮಟ್ಟದ ಕಾರು ಉತ್ಪಾದನಾ ಸಂಸ್ಥೆಗಳು ಮಾತ್ರ ಸೇರಿಲ್ಲ. ಬದಲಾಗಿ ಹಲವು ಅಂತರ್‌ರಾಷ್ಟ್ರೀಯ ಮಟ್ಟದಲ್ಲೂ ಮಿಂಚುತ್ತಿರುವ ಕೆಲವು ಕಾರು ಸಂಸ್ಥೆಗಳ ಕಾರುಗಳು ಕೂಡಾ ನೆಲಕಚ್ಚಿವೆ.
ಫಿಯೆಟ್ ಪುಂಟೋ ಅಬಾರ್ತಾ
ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಅತಿ ಹೆಚ್ಚು ಜನಪ್ರಿಯತೆ ಸಾಧಿಸಿದ ಕೆಲವೇ ದಿನಗಳಲ್ಲೇ ಮಾರುಕಟ್ಟೆಯಲ್ಲಿ ಗಣನೀಯ ಮಟ್ಟದಲ್ಲಿ ಮಾರಾಟ ಹಿನ್ನಡೆ ಅನುಭವಿಸಿತು. ಸ್ಪೋರ್ಟ್ ಲುಕ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಕೊಟ್ಟಿತ್ತಾದರೂ ಮೈಲೇಜ್ ವಿಚಾರಕ್ಕೆ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಯ್ತು.
ಆದರೂ ಪುಂಟೋ ಅಬಾರ್ತ್ ಮಾರಾಟಕ್ಕೆ ಬ್ರೇಕ್ ಹಾಕದ ಫಿಯೆಟ್ ಸಂಸ್ಥೆಯು ಆಯ್ದ ಗ್ರಾಹಕರಿಗಾಗಿ ಪೂರೈಕೆ ಮಾಡುತ್ತಿದೆ. ಈ ಕಾರಿನ ಬಗ್ಗೆ ಒಂದು ಖುಷಿ ವಿಚಾರ ಅಂದ್ರೆ ಕಡಿಮೆ ಬೆಲೆಯಲ್ಲಿ ಬಂದ ಮೊದಲ ಸ್ಪೋರ್ಟಿ ಲುಕ್ ಕಾರು ಇದಾಗಿದೆ ಎನ್ನಬಹುದು.
ಷೆವರ್ಲೆ ಟ್ರೈಬಲೈಜರ್
ಐಷಾರಾಮಿ ಎಸ್‌ಯುವಿಗಳಲ್ಲಿ ಒಂದಾಗಿದ್ದ ಷೆವರ್ಲೆ ಟ್ರೈಬಲೈಜರ್ ಕಾರು ಇತರೆ ಸಾಮನ್ಯ ಎಸ್‌ಯುವಿಗಳಿಂತ ಅಧಿಕ ಬೆಲೆ ಹೊಂದಿದ್ದು, ಇಂಧನ ಕಾರ್ಯಕ್ಷಮತೆಯನ್ನು ಅತಿ ಹೆಚ್ಚು ಪರದಾಟಬೇಕಾದ ಸ್ಥಿತಿ ಇದೆ. ಹೀಗಾಗಿ ಗ್ರಾಹಕರ ಆಯ್ಕೆಯಿಂದ ಟ್ರೈಬಲೈಜರ್ ಹಿಂದೆ ಸರಿಯಿತು.
Trending On DriveSpark Kannada:
ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!
ಇನ್ಮುಂದೆ ಈ ಕೆಳಕಂಡ ಕಾರುಗಳನ್ನು ಖರೀದಿಸಲು ಆಗೋದಿಲ್ಲ...
ಎಂದಿಗೂ ಮರೆಯಲಾಗದ ಟೈಟಾನಿಕ್ ದುರಂತದ ನಗ್ನ ಸತ್ಯಗಳು
ಇದೇ ಕಾರಣಕ್ಕೆ ಟ್ರೈಬಲೈಜರ್ ಮಾರಾಟವನ್ನು ಹಿಂಪಡೆದ ಷೆವರ್ಲೆ ಸಂಸ್ಥೆಯು ಕ್ಯಾಪ್ಟಿವಿಯಾ ಎಸ್‌ಯುವಿಯನ್ನು ಹೊರತಂದಿದ್ದು, 2 ಡಬ್ಲ್ಯುಡಿ ಡ್ರೈವ್ ಮೂಡ್ ವ್ಯವಸ್ಥೆಯನ್ನು ಹೊಂದಿದೆ.
ಹೋಂಡಾ ಮೊಬಿಲಿಯೋ
ಹೋಂಡಾ ಮೊಬಿಲಿಯೋ ಹೋಂಡಾ ನಿರ್ಮಾಣದ ಎಂಪಿವಿ ಕಾರು ಎಂದೇ ಖ್ಯಾತಿಯಾಗಿದ್ದ ಮೊಬಿಲಿಯೋ ಇನ್ನು ಖರೀದಿ ಲಭ್ಯವಾಗುದಿಲ್ಲ. ಇದಕ್ಕೆ ಕಾರಣ ಹಲವು.
ಸದ್ಯ ಹೋಂಡಾ ಸಂಸ್ಥೆಯು ವಿವಿಧ ಕಾರು ಮಾದರಿಗಳನ್ನು ಪರಿಚಯಿಸುತ್ತಿದ್ದು, ಬೇಡಿಕೆಯನ್ನು ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗುತ್ತಿರುವ ಮೊಬಿಲಿಯೋ ನಿರ್ಮಾಣಕ್ಕೆ ಗುಡ್ ಬೈ ಹೇಳುತ್ತಿದೆ.
ಮಹೀಂದ್ರಾ ಕ್ವಾಂಟೊ
ದೇಶಿಯ ಮಾರುಕಟ್ಟೆಯ ಪ್ರಯಾಣಿಕ ಕಾರು ವಿಭಾಗದಲ್ಲಿ ಅತಿಹೆಚ್ಚು ಜನಪ್ರಿಯತೆ ಹೊಂದಿರುವ ಮಹೀಂದ್ರಾ ಸಂಸ್ಥೆಯು ಕೆಲವು ಕಾರುಗಳ ಉತ್ಪಾದನೆ ಮತ್ತು ಮಾರಾಟ ಭಾರೀ ಹಿನ್ನಡೆ ಕಂಡಿದೆ.
ಅದರಲ್ಲೂ ಕ್ವಾಂಟೊ ಮಾರಾಟದಲ್ಲಂತೂ ಅತಿಹೆಚ್ಚು ನಷ್ಟ ಅನುಭವಿಸಿರುವ ಮಹೀಂದ್ರಾ, ನೋಡಲು ಅಷ್ಟೇನು ಲುಕ್ ಇಲ್ಲದ ಮತ್ತು ಕಡಿಮೆ ಇಂಧನ ಕಾರ್ಯಕ್ಷಮತೆ ಹೊಂದಿರುವ ಕ್ವಾಂಟೊ ಮಾರಾಟಕ್ಕೆ ಗುಡ್ ಬೈ ಹೇಳಿಯಾಗಿದೆ.
ಮಹೀಂದ್ರಾ ನೊವಾ ಸ್ಪೋರ್ಟ್
ಕ್ವಾಂಟೊ ಮಾರಾಟಕ್ಕೆ ಗುಡ್ ಬೈ ಹೇಳಿ ಗ್ರಾಹಕರ ಬೇಡಿಕೆಯತ್ತ ಗಮನಹರಿಸಿದ್ದ ಮಹೀಂದ್ರಾ ಸಂಸ್ಥೆಯು ನೊವಾ ಸ್ಪೋರ್ಟ್ ಪರಿಚಯಿಸಿತ್ತು. ಆದ್ರೆ ಮಾರುಕಟ್ಟೆಯಲ್ಲಿನ ಸರ್ವಕಾಲಿಕ ಬದಲಾವಣೆಗಳು ನೋವಾ ಸ್ಪೋರ್ಟ್ ಮಾರಾಟಕ್ಕೆ ತೀವ್ರ ಹೊಡೆತ ನೀಡಿದ್ದವು.
ರೆನಾಲ್ಟ್ ಲೊಡ್ಜಿ
7 ಸೀಟರ್ ಎಸ್‌ಯುವಿಗಳಲ್ಲಿ ಅತಿಹೆಚ್ಚು ಮಾರಾಟ ದಾಖಲಿಸಬೇಕಾಗಿದ್ದ ರೆನಾಲ್ಟ್ ಲೊಡ್ಜಿ ಒಂದೇ ಒಂದು ಕಾರಣಕ್ಕೆ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿದ್ದು ಮಾತ್ರ ದುರಂತ.
Trending On DriveSpark Kannada:
ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇಲ್ಲಿದೆ ಸೂಪರ್ ಸುಪ್ರೀಂ ಐಡಿಯಾ !!
ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ
ರಸ್ತೆ ನಿಯಮ ಉಲ್ಲಂಘಿಸುವರಿಗೆ ಕಾದಿದೆ ಮಾರಿಹಬ್ಬ- ಯಾವ ನಿಯಮ ಉಲ್ಲಂಘನೆಗೆ ಎಷ್ಟು ದಂಡ ಗೊತ್ತಾ?
ರೆನಾಲ್ಟ್ ಲೊಡ್ಜಿ ಕಾರು ಅತ್ಯುತ್ತಮ ಇಂಧನ ಕಾರ್ಯಕ್ಷಮತೆ ಮತ್ತು ಪ್ರಯಾಣಿಕರಿಗೆ ಅನೂಕರವಾದ ಸೌಲಭ್ಯಗಳಿದ್ದು ಔಟ್ ಲುಕ್‌ನಲ್ಲಿ ಮುಗ್ಗರಿಸಿತ್ತು. ಇದೇ ಕಾರಣಕ್ಕೆ ಉತ್ತಮ ಕಾರು ಮಾದರಿಯಾದರೂ ಗ್ರಾಹಕರಿಂದ ತಿರಸ್ಕಾರವಾಯ್ತು.
ಟಾಟಾ ಬೊಲ್ಟ್
ಬೊಲ್ಟ್ ಕಾರು ಇಂಡಿಕಾ ವಿಸ್ಟಾ ಕಾರಿನ ಬೇರೆ ಆಯಾಮದ ಕಾರು ಎನ್ನಬಹುದು. ವಿಸ್ಟಾ ಕಾರಿಗಿಂತ ಈ ಕಾರಿನ ಒಳಾಂಗಣವು ಉತ್ತಮ ಗುಣಮಟ್ಟದಾಗಿತ್ತು. ಬೋಲ್ಟ್ ಸಹ ಎಬಿಎಸ್ ಮತ್ತು ಏರ್‌ಬ್ಯಾಗ್ ಸೌಲಭ್ಯ ಪಡೆದುಕೊಂಡಿದೆ.
ಆದ್ರೆ ಮಾರುಕಟ್ಟೆಯಲ್ಲಿ ಈ ಕಾರುಗೆ ಹೆಚ್ಚು ಮನ್ನಣೆ ಸಿಗಲಿಲ್ಲ. ವೈಯಕ್ತಿಕವಾಗಿ ಹ್ಯಾಚ್‌ಬ್ಯಾಕ್ ಕೊಳ್ಳುವವರು ಈ ಕಾರನ್ನು ಮರೆತುಬಿಟ್ಟಿದ್ದಾರೆ ಎನ್ನಬಹುದು.
Trending DriveSpark YouTube Videos
Subscribe To DriveSpark Kannada YouTube Channel - Click Here