ಕಾರಿಗೆ ಅಡ್ಡ ಬಂದ ಬಾಲಕಿ- ದುರಂತ ತಪ್ಪಿಸಲು ಹೋದ ನಿಸ್ಸಾನ್ ಜಿಟಿ ಆರ್ ಸೂಪರ್ ಕಾರು ಪೀಸ್ ಪೀಸ್

Written By:
Recommended Video - Watch Now!
Andhra Pradesh State Transport Bus Crashes Into Bike Showroom - DriveSpark

ರಾಜಧಾನಿ ಬೆಂಗಳೂರು ಟು ಹೈದ್ರಾಬಾದ್‌ಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಭೀಕರ ಅಪಘಾತ ಒಂದು ಸಂಭವಿಸಿದ್ದು, ಕಾರಿಗೆ ಅಡ್ಡ ಬಂದ ಬಾಲಕಿಯನ್ನು ರಕ್ಷಿಸಲು ಹೋದ ನಿಸ್ಸಾನ್ ಜಿಟಿ ಆರ್ ಕಾರು ಸಂಪೂರ್ಣ ಜಖಂಗೊಂಡಿರುವ ಘಟನೆ ನಡೆದಿದೆ.

ಕಾರಿಗೆ ಅಡ್ಡ ಬಂದ ಬಾಲಕಿ- ದುರಂತ ತಪ್ಪಿಸಲು ಹೋದ ನಿಸ್ಸಾನ್ ಜಿಟಿ ಆರ್ ಸೂಪರ್ ಕಾರು ಪೀಸ್ ಪೀಸ್

ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಬರುವ ಚಿಕ್ಕಬಳ್ಳಾಪುರ ಜಿಲ್ಲೆಯ ಗ್ರಾಮವೊಂದರ ಬಳಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಕಾರು ಚಾಲಕ ಮತ್ತು ಕಾರಿಗೆ ಅಡ್ಡ ಬಂದ ಬಾಲಕಿಗೆ ಯಾವುದೇ ರೀತಿಯ ಪ್ರಾಣಹಾನಿಯಾಗಿಲ್ಲ ಎಂಬುವುದೇ ಸಮಾಧಾನಕರ ಸಂಗತಿ.

ಕಾರಿಗೆ ಅಡ್ಡ ಬಂದ ಬಾಲಕಿ- ದುರಂತ ತಪ್ಪಿಸಲು ಹೋದ ನಿಸ್ಸಾನ್ ಜಿಟಿ ಆರ್ ಸೂಪರ್ ಕಾರು ಪೀಸ್ ಪೀಸ್

ಇನ್ನು ನಿಯಂತ್ರಣ ತಪ್ಪಿದ ನಿಸ್ಸಾನ್ ಜಿಟಿ ಆರ್ ಸೂಪರ್ ಕಾರು ಅಪಘಾತದಲ್ಲಿ ಸಂಪೂರ್ಣ ಜಖಂಗೊಂಡಿದ್ದು, ರಸ್ತೆ ಬದಿಯ ಡಿವೈಡರ್‌ಗೆ ಡಿಕ್ಕಿ ಹೊಡೆದು ಎರಡು ಬಾರಿ ಪಲ್ಟಿ ಹೊಡೆದಿದೆ.

ಕಾರಿಗೆ ಅಡ್ಡ ಬಂದ ಬಾಲಕಿ- ದುರಂತ ತಪ್ಪಿಸಲು ಹೋದ ನಿಸ್ಸಾನ್ ಜಿಟಿ ಆರ್ ಸೂಪರ್ ಕಾರು ಪೀಸ್ ಪೀಸ್

ಸ್ಥಳೀಯರ ಪ್ರಕಾರ ನಿಸ್ಸಾನ್ ಜಿಟಿ ಆರ್ ಕಾರಿನಲ್ಲಿ ಚಾಲಕ ಮಾತ್ರ ಇದ್ದ ಎಂಬ ಮಾಹಿತಿ ಇದ್ದು, ತೀವ್ರವಾಗಿ ಗಾಯಗೊಂಡಿದ್ದ ಕಾರು ಚಾಲಕನನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಕಾರಿಗೆ ಅಡ್ಡ ಬಂದ ಬಾಲಕಿ- ದುರಂತ ತಪ್ಪಿಸಲು ಹೋದ ನಿಸ್ಸಾನ್ ಜಿಟಿ ಆರ್ ಸೂಪರ್ ಕಾರು ಪೀಸ್ ಪೀಸ್

ಘಟನೆ ನಂತರ ನಿಸ್ಸಾನ್ ಜಿಟಿ ಆರ್ ಕಾರನ್ನು ಕ್ರೇನ್ ಮೂಲಕ ಬೆಂಗಳೂರಿಗೆ ರವಾನಿಸಾಗಿದ್ದು, ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ಅಪಘಾತದ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.

ಕಾರಿಗೆ ಅಡ್ಡ ಬಂದ ಬಾಲಕಿ- ದುರಂತ ತಪ್ಪಿಸಲು ಹೋದ ನಿಸ್ಸಾನ್ ಜಿಟಿ ಆರ್ ಸೂಪರ್ ಕಾರು ಪೀಸ್ ಪೀಸ್

ಬೆಂಗಳೂರಿನಿಂದ ಹೈದ್ರಾಬಾದ್‌ನತ್ತ ಪ್ರಯಾಣಿಸುತ್ತಿದ್ದಾಗ ಈ ಅವಘಡ ಸಂಭವಿಸಿರುವ ಬಗ್ಗೆ ಮಾಹಿತಿ ಇದ್ದು, ಕಾರು ಮಾಲೀಕ ಬೆಂಗಳೂರು ಮೂಲದವರು ಎನ್ನಲಾಗಿದ್ದರು ಅವರ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

Trending On DriveSpark Kannada:

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್- ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

ರೀ ಸೇಲ್ ಮೌಲ್ಯವಿಲ್ಲದ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ...

ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ

ಕಾರಿಗೆ ಅಡ್ಡ ಬಂದ ಬಾಲಕಿ- ದುರಂತ ತಪ್ಪಿಸಲು ಹೋದ ನಿಸ್ಸಾನ್ ಜಿಟಿ ಆರ್ ಸೂಪರ್ ಕಾರು ಪೀಸ್ ಪೀಸ್

ಜಿಟಿ ಆರ್ ಕಾರಿನ ಬೆಲೆ ಎಷ್ಟು?

ಸದ್ಯ ಸೂಪರ್ ಕಾರುಗಳಲ್ಲಿ ಅತಿ ಹೆಚ್ಚು ಬೇಡಿಕೆ ದಾಖಲಿಸುತ್ತಿರುವ ನಿಸ್ಸಾನ್ ಜಿಟಿ ಆರ್ ಕಾರಿನ ಬೆಲೆಯು(ಆನ್ ರೋಡ್) ಬೆಂಗಳೂರಿನಲ್ಲಿ 2.61 ಕೋಟಿ ಹೊಂದಿದ್ದು, ಕೇವಲ 3 ಸೇಕೆಂಡುಗಳಲ್ಲಿ 100 ಕಿಮಿ ವೇಗದಲ್ಲಿ ಸಂಚರಿಸಬಲ್ಲ ಸಾಮರ್ಥ್ಯ ಹೊಂದಿದೆ.

ಕಾರಿಗೆ ಅಡ್ಡ ಬಂದ ಬಾಲಕಿ- ದುರಂತ ತಪ್ಪಿಸಲು ಹೋದ ನಿಸ್ಸಾನ್ ಜಿಟಿ ಆರ್ ಸೂಪರ್ ಕಾರು ಪೀಸ್ ಪೀಸ್

ಇದಕ್ಕೆ ಕಾರಣ, ನಿಸ್ಸಾನ್ ಜಿಟಿ ಆರ್ ಕಾರುಗಳು 3.8-ಲೀಟರ್ ಟ್ವಿನ್ ಟರ್ಬೋ ಚಾರ್ಜ್ಡ್ ವಿ6 ಎಂಜಿನ್ ಹೊಂದಿದ್ದು, 562-ಬಿಎಚ್‌ಪಿ ಮತ್ತು 637-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಕಾರಿಗೆ ಅಡ್ಡ ಬಂದ ಬಾಲಕಿ- ದುರಂತ ತಪ್ಪಿಸಲು ಹೋದ ನಿಸ್ಸಾನ್ ಜಿಟಿ ಆರ್ ಸೂಪರ್ ಕಾರು ಪೀಸ್ ಪೀಸ್

ಇದರ ಜೊತೆಗೆ 6-ಸ್ಪೀಡ್ ಡ್ಯುಯಲ್-ಕ್ಲಚ್ ಟ್ರಾನ್‌ಮಿಷನ್ ಹೊಂದಿರುವ ಜಿಟಿ ಆರ್ ಕಾರುಗಳು ಪ್ರತಿ ಗಂಟೆಗೆ 315 ಕಿಮಿ ಕ್ರಮಿಸಬಲ್ಲವು. ಆದ್ರೆ ಅತಿ ವೇಗ ಸಂಚಾರ ಕೆಲವು ಬಾರಿ ಭೀಕರ ದುರಂತಗಳಿಗೆ ಕಾರಣವಾಗುತ್ತವೆ ಎಂಬುವುದಕ್ಕೆ ಈ ಘಟನೆಯೇ ಸಾಕ್ಷಿ.

ಕಾರಿಗೆ ಅಡ್ಡ ಬಂದ ಬಾಲಕಿ- ದುರಂತ ತಪ್ಪಿಸಲು ಹೋದ ನಿಸ್ಸಾನ್ ಜಿಟಿ ಆರ್ ಸೂಪರ್ ಕಾರು ಪೀಸ್ ಪೀಸ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿರ್ದಿಷ್ಟ ಮಟ್ಟದ ವೇಗದ ಮೀತಿ ಸೂಚಿರುವ ಪ್ರದೇಶಗಳಲ್ಲಿ ವೇಗದ ವಾಹನ ಸವಾರಿ ಸರಿಯಾಗಿಯೇ ಇದ್ದರು ಕೆಲ ಸಮಯ ಎಚ್ಚರಿಕೆ ವಹಿಸುವುದು ಒಳಿತು. ಇದಕ್ಕೆ ಕಾರಣ ಹೆದ್ದಾರಿಯಲ್ಲಿ ಸಣ್ಣಪುಟ್ಟ ಗ್ರಾಮಗಳ ಬಳಿ ಸುರಕ್ಷಾ ಅಡೆತಡೆಗಳು ಇಲ್ಲದ್ದಿಲ್ಲಿ ಇಂತಹ ಘಟನೆಗಳ ಬಗ್ಗೆ ವಾಹನ ಸವಾರರು ಮುಂಜಾಗ್ರತೆ ವಹಿಸುವುದು ಎಲ್ಲರಿಗೂ ಒಳ್ಳೆಯದು.

Trending On DriveSpark Kannada:

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

ಎಂದಿಗೂ ಮರೆಯಲಾಗದ ಟೈಟಾನಿಕ್ ದುರಂತದ ನಗ್ನ ಸತ್ಯಗಳು

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

Trending DriveSpark YouTube Videos

Subscribe To DriveSpark Kannada YouTube Channel - Click Here

English summary
Nissan GT-R Bangalore-Hyderabad Highway Crash.
Story first published: Tuesday, January 23, 2018, 11:21 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark