ದೇಶದ ಮೊದಲ ಟೆಸ್ಲಾ ಐಷಾರಾಮಿ ಮಾಡೆಲ್ ಎಕ್ಸ್ 100ಡಿ ಕಾರು ಒಡೆಯನಾದ ಮುಂಬೈ ಉದ್ಯಮಿ..!

By Praveen Sannamani

ಯುಎಸ್ಎ ಮಾರುಕಟ್ಟೆಗಳಲ್ಲಿ ಟೆಸ್ಲಾ ಕಾರುಗಳ ಹೊಸ ಯುಗ ಆರಂಭವಾಗಿದ್ದು, ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಟೆಸ್ಲಾ ಸಂಸ್ಥೆಯು ಹೊಸ ಆಯಾಮ ನೀಡಿದೆ. ಸದ್ಯ ಅಮೆರಿಕ ಮಾರುಕಟ್ಟೆಗಳಲ್ಲಿ ಮಾತ್ರವೇ ಖರೀದಿ ಲಭ್ಯವಿರುವ ಟೆಸ್ಲಾ ಕಾರುಗಳು ಐಷಾರಾಮಿ ಮತ್ತು ಅಧಿಕ ಮೈಲೇಜ್ ವಿಚಾರವಾಗಿ ಗ್ರಾಹಕರ ಆಕರ್ಷಣೆ ಕಾರಣವಾಗಿದ್ದು, ಮುಂಬೈ ಮೂಲದ ಉದ್ಯಮಿಯೊಬ್ಬರು ಅಧಿಕ ಬೆಲೆ ತೆತ್ತು ಭಾರತಕ್ಕೆ ಟೆಸ್ಲಾ ಮಾಡೆಲ್ ಎಕ್ಸ್ 100ಡಿ ಕಾರ್‌ ಅನ್ನು ಆಮದು ಮಾಡಿಕೊಂಡಿದ್ದಾರೆ.

ದೇಶದ ಮೊದಲ ಟೆಸ್ಲಾ ಐಷಾರಾಮಿ ಮಾಡೆಲ್ ಎಕ್ಸ್ 100ಡಿ ಕಾರು ಒಡೆಯನಾದ ಮುಂಬೈ ಉದ್ಯಮಿ..!

ಮುಂಬೈ ಮೂಲದ ಉದ್ಯಮಿ ಪ್ರಶಾಂತ್ ರೂಯಿಯಾ ಎಂಬುವವರೇ ಟೆಸ್ಲಾ ಸಂಸ್ಥೆಯ ಮಾಡೆಲ್ ಎಕ್ಸ್ 100ಡಿ ಕ್ರಾಸ್ ಓವರ್ ಎಸ್‌ಯುವಿ ಕಾರುನ್ನ ಖರೀದಿ ಮಾಡಿದ್ದು, ಇದಷ್ಟೇ ಅಲ್ಲದೇ ಕಳೆದ ಡಿಸೆಂಬರ್‌ನಲ್ಲೂ ಇದೇ ಉದ್ಯಮಿ ಟೆಸ್ಲಾ ಸಂಸ್ಥೆಯ ಮಾಡೆಲ್ ಎಕ್ಸ್ ಖರೀದಿ ಮಾಡಿದ್ದು ಕೂಡಾ ಭಾರೀ ಸುದ್ದಿಯಾಗಿತ್ತು.

ದೇಶದ ಮೊದಲ ಟೆಸ್ಲಾ ಐಷಾರಾಮಿ ಮಾಡೆಲ್ ಎಕ್ಸ್ 100ಡಿ ಕಾರು ಒಡೆಯನಾದ ಮುಂಬೈ ಉದ್ಯಮಿ..!

ಅಮೆರಿಕದಲ್ಲಿ ಟೆಸ್ಲಾ ಕಾರುಗಳು 96 ಸಾವಿರ ಅಮೆರಿಕನ್ ಡಾಲರ್‌ಗಳಿಂದ 1.25 ಲಕ್ಷ ಅಮೆರಿಕಲ್ ಡಾಲರ್ ತನಕ ಖರೀದಿಗೆ ಲಭ್ಯವಿದ್ದು, ಉದ್ಯಮಿ ಪ್ರಶಾಂತ್ ರೂಯಿಯಾ ಅವರು ಹೊಸದಾಗಿ ಖರೀದಿಸಿರುವ ಮಾಡೆಲ್ ಎಕ್ಸ್ 100ಡಿ ಕಾರುಗಳು ಭಾರತೀಯ ಬೆಲೆಗಳಲ್ಲಿ ರೂ.70 ಲಕ್ಷ ಬೆಲೆ ಹೊಂದಿವೆ.

ದೇಶದ ಮೊದಲ ಟೆಸ್ಲಾ ಐಷಾರಾಮಿ ಮಾಡೆಲ್ ಎಕ್ಸ್ 100ಡಿ ಕಾರು ಒಡೆಯನಾದ ಮುಂಬೈ ಉದ್ಯಮಿ..!

ಆದ್ರೆ ಆಮದು ಕಾರುಗಳಿಗೆ ಸ್ಥಳೀಯ ನೋಂದಣಿ ಪಡೆಯುವ ಪ್ರಕ್ರಿಯೆ ಸಾಕಷ್ಟು ದುಬಾರಿಯಾಗಿದ್ದು, ಇದಕ್ಕಾಗಿ ಮುಂಬೈ ಉದ್ಯಮಿ ಭಾರೀ ಪ್ರಮಾಣದ ಹಣ ಪಾವತಿಸಿದ್ದಾರೆ. ಸದ್ಯ ಮಹಾರಾಷ್ಟ್ರ ನೋಂದಣಿ ಪಡೆದುಕೊಂಡಿರುವ ಈ ಕಾರು ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲೇ ವಿಶೇಷ ಎನ್ನಿಸಲಿದೆ.

ದೇಶದ ಮೊದಲ ಟೆಸ್ಲಾ ಐಷಾರಾಮಿ ಮಾಡೆಲ್ ಎಕ್ಸ್ 100ಡಿ ಕಾರು ಒಡೆಯನಾದ ಮುಂಬೈ ಉದ್ಯಮಿ..!

ಪ್ರತಿ ಚಾರ್ಜ್‌ಗೆ 475 ಕಿ.ಮೀ ಮೈಲೇಜ್..

ಹೌದು, ಟೆಸ್ಲಾ ಮಾಡೆಲ್ ಎಕ್ಸ್ 100ಡಿ ಎಲೆಕ್ಟ್ರಿಕ್ ಕಾರುಗಳು ವಿಶ್ವದರ್ಜೆ ಲೀಥಿಯಂ ಅಯಾನ್ ಬ್ಯಾಟರಿ ಪಡೆದುಕೊಂಡಿದ್ದು, ಒಂದು ಬಾರಿ ಚಾರ್ಜ್ ಮಾಡಿದ್ದಲ್ಲಿ ಬರೋಬ್ಬರಿ 475 ಕಿ.ಮಿ ಮೈಲೇಜ್ ನೀಡುವಷ್ಟು ಬ್ಯಾಟರಿ ಸಾಮರ್ಥ್ಯವನ್ನ ಪಡೆದುಕೊಂಡಿವೆ.

ದೇಶದ ಮೊದಲ ಟೆಸ್ಲಾ ಐಷಾರಾಮಿ ಮಾಡೆಲ್ ಎಕ್ಸ್ 100ಡಿ ಕಾರು ಒಡೆಯನಾದ ಮುಂಬೈ ಉದ್ಯಮಿ..!

ಈ ಮೂಲಕ ಕೇವಲ 5 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮಿ ವೇಗವಷ್ಟು ವೇಗ ಹೊಂದಿದ್ದು, ಪ್ರತಿ ಗಂಟೆಗೆ 250ಕಿ.ಮಿ ಟಾಪ್ ಸ್ಪೀಡ್ ಪಡೆಯಬಲ್ಲವು. ಇದರಿಂದ ಟೆಸ್ಲಾ ಕಾರುಗಳು ಸೂಪರ್ ಕಾರುಗಳಿಗೆ ಸರಿಸಮನಾಗಿ ಅಭಿವೃದ್ಧಿ ಹೊಂದಿವೆ ಎನ್ನಬಹುದು.

ದೇಶದ ಮೊದಲ ಟೆಸ್ಲಾ ಐಷಾರಾಮಿ ಮಾಡೆಲ್ ಎಕ್ಸ್ 100ಡಿ ಕಾರು ಒಡೆಯನಾದ ಮುಂಬೈ ಉದ್ಯಮಿ..!

ಮಾಡೆಲ್ ಎಕ್ಸ್ 100ಡಿ ಕಾರುಗಳು ಮುಖ್ಯವಾಗಿ ಎರಡು ಎಲೆಕ್ಟ್ರಿಕ್ ಮೋಟಾರ್ ಸಹಾಯದೊಂದಿದೆ ಚಾಲನಾ ಸೌಲಭ್ಯ ಹೊಂದಿದ್ದು, ಭಾರತದಲ್ಲಿ ಸದ್ಯ ಮಾರಾಟವಾಗುತ್ತಿರುವ ಮಧ್ಯಮ ಕ್ರಮಾಂಕದ ಐಷಾರಾಮಿ ಎಸ್‌ಯುವಿಗಳಿಂತಲೂ ಉತ್ತಮ ಎನ್ನಿಸಲಿದೆ.

ದೇಶದ ಮೊದಲ ಟೆಸ್ಲಾ ಐಷಾರಾಮಿ ಮಾಡೆಲ್ ಎಕ್ಸ್ 100ಡಿ ಕಾರು ಒಡೆಯನಾದ ಮುಂಬೈ ಉದ್ಯಮಿ..!

ಇನ್ನು ಕಾರಿನ ವಿನ್ಯಾಸಗಳ ಕುರಿತು ಹೇಳುವುದಾದರೇ ಹಲವು ವಿಶ್ವದರ್ಜೆ ಗುಣಲಕ್ಷಣಗಳನ್ನ ಹೊಂದಿರುವ ಟೆಸ್ಲಾ ಮಾಡೆಲ್ ಎಕ್ಸ್ 100ಡಿ ಕಾರುಗಳಲ್ಲಿ ಪ್ಲೈಯಿಂಗ್ ಡೋರ್‌ ಸಿಸ್ಟಂ ಪ್ರಮುಖ ಆಕರ್ಷಣೆ ಅಂದ್ರೆ ತಪ್ಪಾಗುದಿಲ್ಲ.

ದೇಶದ ಮೊದಲ ಟೆಸ್ಲಾ ಐಷಾರಾಮಿ ಮಾಡೆಲ್ ಎಕ್ಸ್ 100ಡಿ ಕಾರು ಒಡೆಯನಾದ ಮುಂಬೈ ಉದ್ಯಮಿ..!

ಜೊತೆಗೆ ವಿನೂತನ ಲೊಗೊ ಮೂಲಕವೇ ಕಾರು ಪ್ರಿಯರನ್ನು ಸೆಳೆಯುವ ಟೆಸ್ಲಾ ಕಾರುಗಳು ಸ್ಪೋರ್ಟಿ ಲುಕ್ ಪಡೆದಿದ್ದು, ಎರಡು ಎಲೆಕ್ಟ್ರಿಕ್ ಮೋಟಾರ್ ಬಳಕೆ ಮಾಡಿರುವ ಹಿನ್ನೆಲೆಯಲ್ಲಿ ಕಾರಿನ ತೂಕವು 2.5 ಟನ್ ಹೊಂದಿದೆ ಅಂದ್ರೆ ನೀವು ನಂಬಲೇಬೇಕು.

Source: autokraftcustoms

More from DriveSpark

Article Published On: Thursday, August 16, 2018, 19:30 [IST]
English summary
India’s First Tesla Model X 100D Lands In Mumbai.
Read more on tesla electric car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+