ಕಾರು ಉತ್ಪಾದಕರನ್ನೇ ಬೆರಗುಗೊಳಿಸಿದ ವಿನೂನತ 'ಇ' ಕಾನ್ಸೆಪ್ಟ್
ಬಹುತೇಕ ವಾಹನ ಉತ್ಪಾದಕರು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯತ್ತ ಮುಖ ಮಾಡುತ್ತಿದ್ದು, ನರೆಂದ್ರ ಸಿಂಗ್ ಚೆಟ್ರಿ ಎನ್ನುವರು ಸಿದ್ದಪಡಿಸಿರುವ ಹೊಸ ಬಗೆಯ ಎಲೆಕ್ಟ್ರಿಕ್ ಕಾರಿನ ಪರಿಕಲ್ಪನೆಯೊಂದು ಭಾರೀ ಚರ್ಚೆಗೆ ಕಾರಣವಾಗಿದೆ.
ವಿಶ್ವಾದ್ಯಂತ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಮಾಲಿನ್ಯದಿಂದಾಗಿ ಬಹುತೇಕ ವಾಹನ ಉತ್ಪಾದಕರು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯತ್ತ ಮುಖ ಮಾಡುತ್ತಿದ್ದು, ಈ ನಡುವೆ ನರೆಂದ್ರ ಸಿಂಗ್ ಚೆಟ್ರಿ ಎನ್ನುವರು ಸಿದ್ದಪಡಿಸಿರುವ ಹೊಸ ಬಗೆಯ ಎಲೆಕ್ಟ್ರಿಕ್ ಕಾರಿನ ಪರಿಕಲ್ಪನೆಯೊಂದು ಭಾರೀ ಚರ್ಚೆಗೆ ಕಾರಣವಾಗಿದೆ.

ನರೆಂದ್ರ ಸಿಂಗ್ ಚೆಟ್ರಿ ಸಿದ್ದಪಡಿಸಿರುವ ಇನ್ಫಿನಿಟಿ ಇ-ಜಿಫ್ಫಿ ಅಟೋನೊಮಸ್ ಎಲೆಕ್ಟ್ರಿಕ್ ಕಾರು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಮಾಲಿನ್ಯವನ್ನು ಪರಿಣಾಮಕಾರಿಯಾಗಿ ತಗ್ಗಿಸುವುದಲ್ಲದೇ ಆಕರ್ಷಕ ವಿನ್ಯಾಸಗಳು ಕೂಡಾ ಕಾರು ಪ್ರಿಯರನ್ನು ಸೆಳೆಯಲಿದೆ ಎನ್ನಬಹುದು.

ಆಟೋಮೋಟಿವ್ ಡಿಸೈನರ್ ಆಗಿರುವ ನರೆಂದ್ರ ಸಿಂಗ್ ಚೆಟ್ರಿ ಅವರು ಈ ಕಾರಿನ ಪರಿಕಲ್ಪನೆಯನ್ನು ತಯಾರಿಸಿದ್ದು, 2 ಸೀಟರ್ ವಿನ್ಯಾಸವನ್ನು ರೂಪಿಸಿದ್ದಾರೆ. ಅಲ್ಲದೆ ಈ ಡಿಸೈನ್ ಅನ್ನು ಪೆನ್ಸಿಲ್ ರೆಂಡರಿಂಗ್ ರಿಂದ ಮೊದಲುಗೊಂಡು ನಂತರ ಡಿಜಿಟಲಾಗಿ ತ್ರಿ ಡೈಮೆಷನಲ್ ವಿನ್ಯಾಸಗಳ ಪ್ರತಿಯನ್ನು ರೂಪಿಸಲಾಗಿದೆ.

ಕಾರಿನ ವೈರ್ ಫ್ರೇಮ್ ಡಿಸೈನ್ ಇದರ ಕಾಂಪಾಕ್ಟ್ ವಾಸ್ತುಶಿಲ್ಪವನ್ನು ಹೆಚ್ಚಿಸಿದ್ದು, ವೈರ್ ಫ್ರೇಮ್ ವಿಶಿಷ್ಟವಾದ ಬೆಲ್ಟ್ ಲೈನ್ ಮುಂಭಾಗದ ಒವರ್ ಹ್ಯಾಂಗ್ ಮತ್ತು ಹಿಂಭಾಗದ ಸ್ಪಾಯ್ಲರ್ ವರೆಗು ಹೊಂದಿರಲಿದೆ.

ಇ-ಜಿಫ್ಫಿ ಕಾರು ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಕಾರಿನ ಪರಿಕಲ್ಪನೆಯನ್ನು ವೇಗವುಳ್ಳ ಮತ್ತು ವಿನೋದದಿಂದ ಗುರಿಪಡಿಸಲಾಗಿದೆ. ಇನ್ನು ಕಾರು 5 ಸ್ಪೋಕ್ ಅಲಾಯ್ ವೀಲ್ಹ್‌ಗಳಿಂದ ಕೂಡಿದ್ದು, ಒಳಭಾಗದಲ್ಲಿ ಹಸಿರು ಬಣ್ಣದಿಂದ ವಿವರಿಸಲಾಗಿದೆ. ಟೈಲ್ ಲ್ಯಾಂಪ್ ವಿನ್ಯಾಸವು ಆಕರ್ಷಕವಾಗಿದ್ದು, ಇದರ ವಿಶಿಷ್ಟತೆಯು ಹೆಚ್ಚು ಗಮನಸೆಳೆಯುತ್ತದೆ.

ಕಾರಿನ ಪರಿಕಲ್ಪನೆಯನ್ನು ನೈಸರ್ಗಿಕ ಪ್ರೇರಣೆ ಹೊಂದಿದೆ ಎಂದಿರುವ ನರೆಂದ್ರ ಚೆಟ್ರಿ, ಕಾರಿನ ದೇಹದ ಗೆರೆಗಳನ್ನು ವಿಂಡ್ ಎನೆರ್ಜಿ ಸ್ಯಾಂಡ್ ಡ್ಯೂನ್ಸ್ ಮತ್ತು ಸಮುದ್ರದ ಅಲೆಗಳ ಆಕರವನ್ನು ಹೋಲುತ್ತದೆ.

ಕಾರಿನಲ್ಲಿ ಇನ್ನೊಂದು ಗಮನಸೆಳೆಯುವ ಅಂಶವೆಂದರೆ ಅದು ಕಾರಿನ್ ರೂಫ್, ಕಾರುನ ರೂಫ್ ಪೂರ್ಣ ಸೋಲಾರ್ ಪ್ಯಾನೆಲ್ ಗಳನ್ನು ಒಳಗೊಂಡಿದ್ದು, ಪ್ರಯಾಣಿಕರು ಕಾರಿನಿಂದಲೆ ಬಾಹ್ಯ ಪ್ರಪಂಚದ ನೋಟವನ್ನು ಕಾಣಬಹುದಾಗಿದೆ.

ಒಟ್ಟಾರೆ ಇನ್ಫಿನಿಟಿ ಇ-ಜಿಫ್ಫಿ ಆಟೋನೊಮಸ್ ಎಲೆಕ್ಟ್ರಿಕ್ ಕಾರಿನ ಪರಿಕಲ್ಪನೆಯು ನೋಡಲು ಹಾಗು ಇದರಲ್ಲಿ ಬಳಸಲಾಗುವ ತಂತ್ರಜ್ಞಾನವು ಮುಂದಿನ ತಲೆಮಾರಿನ ಆಲೋಚನೆಗಳನ್ನು ಒಳಗೊಂಡಿದ್ದು, ಇನ್ನು ಸಂಸ್ಥೆ ಇದರ ಉತ್ಪಾದನೆಯನ್ನು ಯಾವಾಗ ಶುರುಮಾಡಲಿದೆ ಎಂಬುವುದನ್ನು ಕಾದು ನೋಡಬೇಕಿದೆ.


Click it and Unblock the Notifications