ಜೀಪ್ ಕಂಪಾಸ್ 4x4 ಎಸ್‌ಯುವಿ ಖರೀದಿಸುವ ಗ್ರಾಹಕರಿಗೆ ಇದು ಸುವರ್ಣಾವಕಾಶ

ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಜನಪ್ರಿಯ ಎಸ್‌ಯುವಿ ಮಾದರಿಯಾಗಿ ಸದ್ದು ಮಾಡುತ್ತಿರುವ ಜೀಪ್ ಕಂಪಾಸ್ ಖರೀದಿ ಮೇಲೆ ಇದೀಗ ಹೊಸದೊಂದು ಆಫರ್ ನೀಡಲಾಗುತ್ತಿದೆ.

By Praveen Sannamani

ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಜನಪ್ರಿಯ ಎಸ್‌ಯುವಿ ಮಾದರಿಯಾಗಿ ಸದ್ದು ಮಾಡುತ್ತಿರುವ ಜೀಪ್ ಕಂಪಾಸ್ ಖರೀದಿ ಮೇಲೆ ಇದೀಗ ಹೊಸದೊಂದು ಆಫರ್ ನೀಡಲಾಗುತ್ತಿದ್ದು, ಜೀಪ್ ಕಂಪಾಸ್ 4x4 ಟಾಪ್ ಎಂಡ್ ಕಾರು ಖರೀದಿಸುವ ಗ್ರಾಹಕರಿಗೆ ಇಂದೊಂದು ಸುವರ್ಣಾವಕಾಶ ಎನ್ನಬಹುದು.

ಜೀಪ್ ಕಂಪಾಸ್ 4x4 ಎಸ್‌ಯುವಿ ಖರೀದಿಸುವ ಗ್ರಾಹಕರಿಗೆ ಇದು ಸುವರ್ಣಾವಕಾಶ

ದೇಶಿಯ ಮಾರುಕಟ್ಟೆಯಲ್ಲಿ ಜೀಪ್ ಕಂಪಾಸ್ ಕಾರುಗಳ ಉತ್ಪಾದನೆ ಮತ್ತು ಮಾರಾಟದ ಹೊಣೆ ಹೊತ್ತಿರುವ ಫಿಯೆಟ್ ಕೈಸ್ಲರ್ ಆಟೋಮೊಬೈಲ್ ಸಂಸ್ಥೆಯು ಗ್ರಾಹಕರಿಗೆ ವಿನೂತನ ಆಫರ್ ಒಂದನ್ನು ಘೋಷಣೆ ಮಾಡಿದ್ದು, 4x4 ಡ್ರೈವ್ ಟೆಕ್ನಾಲಜಿ ಹೊಂದಿರುವ ಟಾಪ್ ಎಂಡ್ ಕಾರುಗಳ ಖರೀದಿ ಮೇಲೆ ರೂ.1.50 ಲಕ್ಷ ಡಿಸ್ಕೌಂಟ್ ನೀಡುತ್ತಿದೆ.

ಜೀಪ್ ಕಂಪಾಸ್ 4x4 ಎಸ್‌ಯುವಿ ಖರೀದಿಸುವ ಗ್ರಾಹಕರಿಗೆ ಇದು ಸುವರ್ಣಾವಕಾಶ

ಸದ್ಯ ಮಾರುಕಟ್ಟೆಯಲ್ಲಿ ಜೀಪ್ ಕಂಪಾಸ್ ಕಾರುಗಳು ಆರಂಭಿಕವಾಗಿ ರೂ. 19.21 ಲಕ್ಷ ಬೆಲೆ ಹೊಂದಿದ್ದು, ಟಾಪ್ ಎಂಡ್ ಜೀಪ್ ಕಂಪಾಸ್‌ಗಳು ಕಾರುಗಳು ರೂ.21.18 ಲಕ್ಷ ಬೆಲೆ ಪಡೆದಿವೆ. ಇವುಗಳಲ್ಲಿ ಟಾಪ್ ಎಂಡ್ ಕಾರುಗಳಲ್ಲಿ ಮಾತ್ರ 4x4 ಡ್ರೈವ್ ಟೆಕ್ನಾಲಜಿ ಒದಗಿಸಲಾಗುತ್ತಿದೆ.

ಜೀಪ್ ಕಂಪಾಸ್ 4x4 ಎಸ್‌ಯುವಿ ಖರೀದಿಸುವ ಗ್ರಾಹಕರಿಗೆ ಇದು ಸುವರ್ಣಾವಕಾಶ

ಇನ್ನುಳಿದ ಆರಂಭಿಕ ಜೀಪ್ ಕಂಪಾಸ್ ಕಾರುಗಳಲ್ಲಿ 4x2 ಡ್ರೈವ್ ಟೆಕ್ನಾಲಜಿ ಸೌಲಭ್ಯ ನೀಡಲಾಗುತ್ತಿದ್ದು, ಒಂದು ವೇಳೆ ರೂ.19.21 ಲಕ್ಷ ಪಾವತಿಸಿ ಆರಂಭಿಕ ಆವೃತ್ತಿ ಖರೀದಿಸುವ ಗ್ರಾಹಕರು ಹೆಚ್ಚುವರಿಯಾಗಿ ರೂ.50 ಸಾವಿರ ಪಾವತಿಸಿದ್ದಲ್ಲಿ ಟಾಪ್ ಎಂಡ್ ಮಾದರಿಯಾದ 4x4 ಆವೃತ್ತಿಯನ್ನೇ ಖರೀದಿಸಬಹುದಾಗಿದೆ.

ಜೀಪ್ ಕಂಪಾಸ್ 4x4 ಎಸ್‌ಯುವಿ ಖರೀದಿಸುವ ಗ್ರಾಹಕರಿಗೆ ಇದು ಸುವರ್ಣಾವಕಾಶ

ಅಂದರೇ, ಜೀಪ್ ಕಂಪಾಸ್ 4x4 ಟಾಪ್ ಎಂಡ್ ಕಾರು ಖರೀದಿಸುವ ಗ್ರಾಹಕರು ರೂ.21.18 ಲಕ್ಷದ ಬದಲಾಗಿ ರೂ. 19.71 ಲಕ್ಷ ಪಾವತಿಸಿದ್ದಲ್ಲಿ ಟಾಪ್ ಮಾದರಿಯನ್ನೆ ಖರೀದಿ ಮಾಡಬಹುದಾಗಿದ್ದು, ಈ ಹೊಸ ಆಫರ್ ಈಗಾಗಲೇ ಚಾಲ್ತಿಯಲ್ಲಿದ್ದು ಇದನ್ನು ಈ ತಿಂಗಳು ಕೊನೆಯ ತನಕ ಮತ್ತೆ ವಿಸ್ತರಣೆ ಮಾಡಲಾಗಿದೆ.

ಜೀಪ್ ಕಂಪಾಸ್ 4x4 ಎಸ್‌ಯುವಿ ಖರೀದಿಸುವ ಗ್ರಾಹಕರಿಗೆ ಇದು ಸುವರ್ಣಾವಕಾಶ

ಇನ್ನು ಎಸ್‌ಯುವಿ ಕಾರುಗಳಲ್ಲಿ ಇತ್ತೀಚೆಗೆ 4x4 ಡ್ರೈವ್ ಟೆಕ್ನಾಲಜಿಗೆ ಹೆಚ್ಚಿನ ಬೇಡಿಕೆ ಬರುತ್ತಿದ್ದು, ಈ ಹಿನ್ನೆಲೆ ಗ್ರಾಹಕರನ್ನು ಉತ್ತೇಜಿಸುವ ಉದ್ದೇಶದಿಂದ ಫಿಯೆಟ್ ಕೈಸ್ಲರ್ ಆಟೋಮೊಬೈಲ್ ಸಂಸ್ಥೆಯು ಇಂತದೊಂದು ವಿನೂತನ ಆಫರ್ ನೀಡುತ್ತಿದೆ.

ಜೀಪ್ ಕಂಪಾಸ್ 4x4 ಎಸ್‌ಯುವಿ ಖರೀದಿಸುವ ಗ್ರಾಹಕರಿಗೆ ಇದು ಸುವರ್ಣಾವಕಾಶ

ಇದಲ್ಲದೇ ದಿನಬಳಕೆಗೆ ಮತ್ತು ಆಪ್‌ ರೋಡಿಂಗ್‌ಗೂ ಸಹಾಯವಾಗುವಂತೆ ಜೀಪ್ ಕಂಪಾಸ್ ವಿನ್ಯಾಸಗಳನ್ನು ಅಭಿವೃದ್ಧಿಗೊಳಿಸಲಾಗಿದ್ದು, ಅತ್ಯುತ್ತಮ ಕಾರ್ಯನಿರ್ವಹಣಾ ಸಾಮರ್ಥ್ಯ ಇತರೆ ಎಸ್‌ಯುವಿ ಮಾದರಿಗಳಿಂತ ಉತ್ತಮವಾಗಿದೆ.

ಜೀಪ್ ಕಂಪಾಸ್ 4x4 ಎಸ್‌ಯುವಿ ಖರೀದಿಸುವ ಗ್ರಾಹಕರಿಗೆ ಇದು ಸುವರ್ಣಾವಕಾಶ

ಎಂಜಿನ್ ಸಾಮರ್ಥ್ಯ

ಆರಂಭಿಕ ಆವೃತ್ತಿಗಳಲ್ಲಿ ಮಾತ್ರ 1.4-ಲೀಟರ್ ಪೆಟ್ರೋಲ್ ಎಂಜಿನ್ ಲಭ್ಯವಿದ್ದು, 4x4 ಡ್ರೈವ್ ಟೆಕ್ನಾಲಜಿ ಹೊಂದಿರುವ ಟಾಪ್ ಎಂಡ್ ಕಾರುಗಳಲ್ಲಿ 2-ಲೀಟರ್ ಟರ್ಬೋ ಚಾಜ್ಡ್ ಡೀಸೆಲ್ ಎಂಜಿನ್ ಪಡೆದುಕೊಂಡಿವೆ. ಈ ಮೂಲಕ 171ಬಿಎಚ್‌ಪಿ ಮತ್ತು 350 ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದೆ.

ಜೀಪ್ ಕಂಪಾಸ್ 4x4 ಎಸ್‌ಯುವಿ ಖರೀದಿಸುವ ಗ್ರಾಹಕರಿಗೆ ಇದು ಸುವರ್ಣಾವಕಾಶ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಮೇಡ್ ಇನ್ ಇಂಡಿಯಾ ಯೋಜನೆ ಅಡಿ ಅಭಿವೃದ್ಧಿಗೊಂಡಿರುವ ಜೀಪ್ ಕಂಪಾಸ್ ಕಾರುಗಳು ಮಹಾರಾಷ್ಟ್ರದ ರಂಗೂನ್ ಕಾರು ಉತ್ಪಾದನಾ ಘಟಕದಲ್ಲಿ ಸಿದ್ದಗೊಳ್ಳುತ್ತಿದ್ದು, ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಅತಿ ಹೆಚ್ಚು ಮಾರಾಟವಾದ ಎಸ್‌ಯುವಿ ಮಾದರಿಯಾಗಿದೆ. ಇದೇ ಕಾರಣಕ್ಕೆ 4x4 ಟಾಪ್ ಎಂಡ್ ಕಾರುಗಳ ಮಾರಾಟದಲ್ಲೂ ಮುಂಚೂಣಿ ಸಾಧಿಸುವ ತವಕದಲ್ಲಿರುವ ಜೀಪ್ ಸಂಸ್ಥೆಯು ಕಂಪಾಸ್ ಹೊಸ ಕಾರು ಖರೀದಿಸುವ ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದೆ ಎನ್ನಬಹುದು.

Most Read Articles

Kannada
Read more on jeep suv
English summary
Jeep Compass Upgrade Scheme. Read in Kannada.
Story first published: Saturday, June 9, 2018, 19:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X