ಮೇಡ್ ಇನ್ ಇಂಡಿಯಾ ಖ್ಯಾತಿಯ ಜೀಪ್ ಕಂಪಾಸ್ ಮಾರಾಟದಲ್ಲಿ ಹೊಸ ದಾಖಲೆ..

ಜೀಪ್ ತನ್ನ ಹೊಚ್ಚ ಹೊಸ ಕಂಪಾಸ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ್ದು, ಅತ್ಯುತ್ತಮ ಬೆಲೆಗಳು ಮತ್ತು ಎಂಜಿನ್ ಆಯ್ಕೆಯಿಂದಾಗಿ ಕೆಲವೇ ದಿನಗಳಲ್ಲಿ ಗ್ರಾಹಕರ ಮನ ಗೆಲ್ಲುವಲ್ಲಿ ಸಫಲವಾಗಿದೆ.

By Praveen Sannamani

ಅಮೆರಿಕದ ಜನಪ್ರಿಯ ಎಸ್‌ಯುವಿ ಕಾರು ತಯಾರಕ ಸಂಸ್ಥೆಯಾದ ಜೀಪ್ ತನ್ನ ಹೊಚ್ಚ ಹೊಸ ಕಂಪಾಸ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ್ದು, ಅತ್ಯುತ್ತಮ ಬೆಲೆಗಳು ಮತ್ತು ಎಂಜಿನ್ ಆಯ್ಕೆಯಿಂದಾಗಿ ಕೆಲವೇ ದಿನಗಳಲ್ಲಿ ಗ್ರಾಹಕರ ಮನ ಗೆಲ್ಲುವಲ್ಲಿ ಸಫಲವಾಗಿದೆ.

ಮೇಡ್ ಇನ್ ಇಂಡಿಯಾ ಖ್ಯಾತಿಯ ಜೀಪ್ ಕಂಪಾಸ್ ಮಾರಾಟದಲ್ಲಿ ಹೊಸ ದಾಖಲೆ..

2017ರ ಜುಲೈ 31ರಂದು ಬಿಡುಗಡೆಯಾಗಿದ್ದ ಜೀಪ್ ಕಂಪಾಸ್ ಕಾರುಗಳು ಇದುವರೆಗೆ ಬರೋಬ್ಬರಿ 20 ಸಾವಿರ ಕಾರುಗಳು ಮಾರಾಟವಾಗಿದ್ದು, ಹೊಸ ಕಾರು ಖರೀದಿಯ ಬೇಡಿಕೆಯು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹೀಗಾಗಿ ಎಸ್‌ಯುವಿ ಕಾರುಗಳ ಮಾರಾಟದ ಮೇಲೆ ಹೊಸ ಆಫರ್ ನೀಡಿರುವ ಜೀಪ್ ಸಂಸ್ಥೆಯು ಟಾಪ್ ಎಂಡ್ ಕಂಪಾಸ್ ಖರೀದಿಸುವ ಗ್ರಾಹಕರಿಗಾಗಿ 1.50ಲಕ್ಷ ರಿಯಾಯ್ತಿ ಸಹ ಘೋಷಣೆ ಮಾಡಿದೆ.

ಮೇಡ್ ಇನ್ ಇಂಡಿಯಾ ಖ್ಯಾತಿಯ ಜೀಪ್ ಕಂಪಾಸ್ ಮಾರಾಟದಲ್ಲಿ ಹೊಸ ದಾಖಲೆ..

ಒಟ್ಟಿನಲ್ಲಿ ಜೀಪ್ ಸಂಸ್ಥೆಯ ಬಹುನೀರಿಕ್ಷಿತ ಕಂಪಾಸ್ ಎಸ್‌ಯುವಿ ಮಾದರಿಯೂ ಗ್ರಾಹಕರು ನೀರಿಕ್ಷಿಸಿದ್ದಕ್ಕಿಂತಲೂ ಹೆಚ್ಚಿನ ಸೌಲಭ್ಯ ಹೊಂದುವ ಮೂಲಕ ಜನಪ್ರಿಯತೆಗೆ ಕಾರಣವಾಗುತ್ತಿದ್ದು, ಬೆಂಗಳೂರು ಎಕ್ಸ್‌ಶೋರಂ ಪ್ರಕಾರ ಆರಂಭಿಕ ಕಾರು ಮಾದರಿಯ ಬೆಲೆಯು ರೂ.15.16 ಲಕ್ಷಕ್ಕೆ ಮತ್ತು ಉನ್ನತ ಶ್ರೇಣಿಯ ಕಾರಿನ ಬೆಲೆ ರೂ.21.94 ಲಕ್ಷಕ್ಕೆ ಲಭ್ಯವಿದೆ.

ಮೇಡ್ ಇನ್ ಇಂಡಿಯಾ ಖ್ಯಾತಿಯ ಜೀಪ್ ಕಂಪಾಸ್ ಮಾರಾಟದಲ್ಲಿ ಹೊಸ ದಾಖಲೆ..

ಸ್ಪೋರ್ಟ್, ಲ್ಯಾಂಗಿಟ್ಯುಡ್ ಮತ್ತು ಲಿಮಿಟೆಡ್ ಎಂಬ ಮೂರು ಪ್ರಮುಖ ಆವೃತ್ತಿಗಳಲ್ಲಿ ಜೀಪ್ ಕಂಪಾಸ್ ಖರೀದಿಗೆ ಲಭ್ಯವಿದ್ದು, ಡೀಸೆಲ್ ಆವೃತ್ತಿಯಲ್ಲಿ ಮಾತ್ರ 4x4 ಡ್ರೈವ್ ಟೆಕ್ನಾಲಜಿ ಮಾದರಿಯನ್ನು ಪರಿಚಯಿಸಲಾಗಿದೆ. ಜೊತೆಗೆ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ ಜೊತೆ ಎಲ್‌ಇಡಿ ಡಿಆರ್‌ಎಲ್‌ಗಳ ಅಳವಡಿಕೆ ಹೊಂದಿದೆ.

ಮೇಡ್ ಇನ್ ಇಂಡಿಯಾ ಖ್ಯಾತಿಯ ಜೀಪ್ ಕಂಪಾಸ್ ಮಾರಾಟದಲ್ಲಿ ಹೊಸ ದಾಖಲೆ..

ಎಂಜಿನ್ ವೈಶಿಷ್ಟ್ಯತೆ

ಡೀಸೆಲ್ ಮತ್ತು ಪೆಟ್ರೋಲ್ ಎರಡು ಆವೃತ್ತಿಯಲ್ಲಿ ಲಭ್ಯವಿರುವ ಜೀಪ್ ಕಂಪಾಸ್, ಡೀಸೇಲ್ ಆವೃತ್ತಿಯಲ್ಲಿ 2.0-ಲೀಟರ್ ಟರ್ಬೋ ಮತ್ತು ಪೆಟ್ರೋಲ್ ಆವೃತ್ತಿಯಲ್ಲಿ 1.4-ಲೀಟರ್ ಟರ್ಬೋ ಎಂಜಿನ್ ಪಡೆದುಕೊಂಡಿದೆ. ಹೀಗಾಗಿ ಡಿಸೇಲ್ ಕಾರು ಆವೃತ್ತಿಯು 171-ಬಿಎಚ್‌ಪಿ, 350ಎನ್ಎಂ ಟಾರ್ಕ್ ಉತ್ಪಾದಿಸಿದರೆ ಅದೇ ರೀತಿಯಾಗಿ ಪೆಟ್ರೋಲ್ ಆವೃತ್ತಿಗಳು 160-ಬಿಎಚ್‌ಪಿ, 250-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದೆ.

ಮೇಡ್ ಇನ್ ಇಂಡಿಯಾ ಖ್ಯಾತಿಯ ಜೀಪ್ ಕಂಪಾಸ್ ಮಾರಾಟದಲ್ಲಿ ಹೊಸ ದಾಖಲೆ..

ಡೀಸೆಲ್ ಆವೃತ್ತಿಗಳಲ್ಲಿ 6-ಸ್ಪೀಡ್ ಗೇರ್‌ಬಾಕ್ಸ್ ಮತ್ತು ಪೆಟ್ರೋಲ್ ಆವೃತ್ತಿಗಳಲ್ಲಿ 7-ಸ್ಪೀಡ್ ಗೇರ್‌ಬಾಕ್ಸ್ ವ್ಯವಸ್ಥೆಯನ್ನು ಕಲ್ವಿಸಿರುವ ಜೀಪ್ ಕಾಂಪಾಸ್, ಆಟೋ , ಸ್ನೋ, ಸ್ಯಾಂಡ್ ಮತ್ತು ಮಡ್ ಮೂಡ್‌ಗಳಲ್ಲಿ ಚಾಲನೆಗೆ ಅವಕಾಶ ನೀಡಿದೆ.

ಮೇಡ್ ಇನ್ ಇಂಡಿಯಾ ಖ್ಯಾತಿಯ ಜೀಪ್ ಕಂಪಾಸ್ ಮಾರಾಟದಲ್ಲಿ ಹೊಸ ದಾಖಲೆ..

ಕಾರಿನ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು

ಹಿಂದೆಂದಿಗಿಂತಲೂ ಉತ್ತಮ ವಿನ್ಯಾಸಗಳನ್ನು ಹೊಚ್ಚ ಹೊಸ ಜೀಪ್ ಕಂಪಾಸ್ ಪಡೆದುಕೊಂಡಿದ್ದು, ಎಲ್ಇಡಿ ಟೈಲ್ ಲ್ಯಾಂಪ್‌ಗಳ ಮೇಲೆ ದೊಡ್ಡದಾದ ಜೀಪ್ ಬ್ಯಾಡ್ಜ್‌ಗಳನ್ನು ಪಡೆದುಕೊಂಡಿರುವುದು ಮತ್ತಷ್ಟು ಆಕರ್ಷಣೆಗೆ ಕಾರಣವಾಗಿದೆ.

ಮೇಡ್ ಇನ್ ಇಂಡಿಯಾ ಖ್ಯಾತಿಯ ಜೀಪ್ ಕಂಪಾಸ್ ಮಾರಾಟದಲ್ಲಿ ಹೊಸ ದಾಖಲೆ..

ಇನ್ನು 16 ಇಂಚಿನ ಮಿಶ್ರಲೋಹದ ಚಕ್ರಗಳು ಕೂಡಾ ಜೀಪ್ ಕಂಪಾಸ್ ಬಲಿಷ್ಠತೆ ಪುಷ್ಠಿ ನೀಡುವಂತಿದ್ದು, ಒಳಭಾಗದಲ್ಲಿನ ಡ್ಯುಯಲ್ ಟೋನ್ ಥೀಮ್ ಎಸ್‌ಯುವಿ ಕಾರು ಪ್ರಿಯರನ್ನು ಸೆಳೆಯದೇ ಇರಲಾರದು.

ಮೇಡ್ ಇನ್ ಇಂಡಿಯಾ ಖ್ಯಾತಿಯ ಜೀಪ್ ಕಂಪಾಸ್ ಮಾರಾಟದಲ್ಲಿ ಹೊಸ ದಾಖಲೆ..

ಕಪ್ಪು ಬಣ್ಣದ ಡ್ಯಾಶ್‌ಬೋರ್ಡ್, ಆಫ್ ವೈಟ್ ಬಣ್ಣದೊಂದಿಗೆ ಕೂಡಿದ ಸೀಟುಗಳು ಮತ್ತು ಮೇಲ್ಛಾವಣೆ, ಅತ್ಯುತ್ತಮ ಆಸನ ವ್ಯವಸ್ಥೆ, ಹಿಂಭಾಗದ ಸೀಟಿನ ಮಧ್ಯದ ಆರ್ಮ್ ರೆಸ್ಟ್, 5-ಇಂಚಿನ ಟಚ್ ಸ್ಕ್ರಿನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಕಾರ್ ಪ್ಲೇ, ಆಂಡ್ರಾಯಿಡ್ ಆಟೋ, ಯುಎಸ್‌ಬಿ ಸೇರಿದಂತೆ ಪ್ರಸ್ತುತ ಸೌಲಭ್ಯಗಳನ್ನು ಹೊಂದಿದೆ.

ಮೇಡ್ ಇನ್ ಇಂಡಿಯಾ ಖ್ಯಾತಿಯ ಜೀಪ್ ಕಂಪಾಸ್ ಮಾರಾಟದಲ್ಲಿ ಹೊಸ ದಾಖಲೆ..

ಇದರೊಂದಿಗೆ ಜೀಪ್ ಕಂಪಾಸ್ ಮಾದರಿಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, 6 ಏರ್‌ಬ್ಯಾಗ್, ಡ್ಯುಯಲ್ ಸ್ಟೇಜ್ ಆಕ್ಟಿವೇಷನ್, ಟಿಸಿಎಸ್, ಇಬಿಡಿ, ಇಎಸ್‌ಪಿ ಮತ್ತು ಎಬಿಎಸ್ ತಂತ್ರಜ್ಞಾನಗಳ ಜೋಡಣೆ ಮಾಡಲಾಗಿದೆ. ಇದಲ್ಲದೇ ಕೀ ಲೇಸ್ ಡ್ರೈವಿಂಗ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲರ್ ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಒದಗಿಸಲಾಗಿದೆ.

ಮೇಡ್ ಇನ್ ಇಂಡಿಯಾ ಖ್ಯಾತಿಯ ಜೀಪ್ ಕಂಪಾಸ್ ಮಾರಾಟದಲ್ಲಿ ಹೊಸ ದಾಖಲೆ..

ಇತರೆ ಸೌಲಭ್ಯಗಳು

ಗ್ರಾಹಕರನ್ನು ಸೆಳೆಯಲು ಹೊಸ ಯೋಜನೆ ರೂಪಿಸಿರುವ ಜೀಪ್ ಕಂಪಾಸ್, ಮೂರು ವರ್ಷಗಳ ಕಾಲ ಹೊಸ ಕಾರುಗಳ ಮೇಲೆ ರೋಡ್ ಸೈಡ್ ಅಸಿಸ್ಟೇನ್ಸ್ ಸೌಲಭ್ಯ ನೀಡಲಾಗುತ್ತಿದೆ.

Most Read Articles

Kannada
Read more on jeep ಜೀಪ್
English summary
Jeep Compass Sales Figures For India — Sells 20,000 Units Since Its Launch.
Story first published: Saturday, April 7, 2018, 11:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X