ಬಿಡುಗಡೆಗಾಗಿ ಮುಂಬೈ ತಲುಪಿದ ಹೊಚ್ಚ ಹೊಸ ಜೀಪ್ ರ‍್ಯಾಂಗ್ಲರ್ ಕಾರುಗಳು

ಅಮೆರಿಕ ಮೂಲದ ಜನಪ್ರಿಯ ಕಾರು ಉತ್ಪಾದನಾ ಜೀಪ್ ಸಂಸ್ಥೆಯು ಭಾರತದಲ್ಲಿ 2018ರ ರ‍್ಯಾಂಗ್ಲರ್ ಎಸ್‌ಯುವಿ ಆವೃತ್ತಿಗಳನ್ನು ಬಿಡುಗಡೆ ಮಾಡುತ್ತಿದ್ದು, ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡುವ ಸುಳಿವು ನೀಡಿದೆ.

By Praveen Sannamani

ನಿನ್ನೆಯಷ್ಟೇ ಮುಂಬೈಗೆ ಹೊಸ ಕಾರುಗಳನ್ನು ಆಮದು ಮಾಡಿಕೊಳ್ಳಲಾಗಿದ್ದು, ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಹೊಸ ರ‍್ಯಾಂಗ್ಲರ್ ಎಸ್‌ಯುವಿ ಕಾರುಗಳು ಎರಡು ಮಾದರಿಯಲ್ಲಿ ಖರೀದಿಗೆ ಲಭ್ಯವಾಗುವುದು ಖಚಿತವಾಗಿದೆ. 5 ಬಾಗಿಲುವುಳ್ಳ ಮತ್ತು 3 ಬಾಗಿಲುವುಳ್ಳ ಎರಡು ರ‍್ಯಾಂಗ್ಲರ್ ಎಸ್‌ಯುವಿ ಕಾರುಗಳು ಖರೀದಿಗೆ ಲಭ್ಯವಾಗಲಿವೆ.

ಬಿಡುಗಡೆಗಾಗಿ ಮುಂಬೈ ತಲುಪಿದ ಹೊಚ್ಚ ಹೊಸ ಜೀಪ್ ರ‍್ಯಾಂಗ್ಲರ್ ಕಾರುಗಳು

2017ರ ಲಾಸ್ ಏಂಜಲೀಸ್ ಆಟೋ ಮೇಳದಲ್ಲಿ ಹೊಸ ಮಾದರಿಯ ರ‍್ಯಾಂಗ್ಲರ್ ಎಸ್‌ಯುವಿಗಳನ್ನು ಪ್ರದರ್ಶನಗೊಳಿಸಿದ್ದ ಜೀಪ್ ಸಂಸ್ಥೆಯು ಇದೀಗ ಬಿಡುಗಡೆಗೊಳಿಸಲು ಸಿದ್ದವಾಗುತ್ತಿದ್ದು, ಕಳೆದ ಹಿಂದಷ್ಟೇ ಗೋವಾದ ಪ್ರಮುಖ ಕಡೆಗಳಲ್ಲೂ ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿತ್ತು.

ಬಿಡುಗಡೆಗಾಗಿ ಮುಂಬೈ ತಲುಪಿದ ಹೊಚ್ಚ ಹೊಸ ಜೀಪ್ ರ‍್ಯಾಂಗ್ಲರ್ ಕಾರುಗಳು

ಸ್ಪಾಟ್ ಟೆಸ್ಟಿಂಗ್‌ನಲ್ಲಿ ಕಾಣಿಸಿಕೊಂಡಿದ್ದ ರ‍್ಯಾಂಗ್ಲರ್ ಎಸ್‌ಯುವಿ ಕಾರುಗಳು ಈ ಹಿಂದಿನ ಮಾದರಿಗಿಂತಲೂ ಭಾರೀ ಬದಲಾವಣೆ ಹೊಂದಿದ್ದು, ಮರುವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್, ದೊಡ್ಡದಾದ ಎಲ್ಇಡಿ ಹೆಡ್ ಲ್ಯಾಂಪ್ ಮತ್ತು ಎಲ್ಇಡಿ ಹಗಲಿನ ರನ್ನಿಂಗ್ ಲೈಟ್‌ಗಳನ್ನು ಫೆಂಡರ್‌ಗಳಲ್ಲಿ ಹೊಂದಿರಲಿವೆ.

ಬಿಡುಗಡೆಗಾಗಿ ಮುಂಬೈ ತಲುಪಿದ ಹೊಚ್ಚ ಹೊಸ ಜೀಪ್ ರ‍್ಯಾಂಗ್ಲರ್ ಕಾರುಗಳು

ಜೊತೆಗೆ ಕಾರಿನ ಕಿಟಕಿಗಳು ಈ ಹಿಂದಿನ ಮಾದರಿಗಳಿಂತ ಸ್ವಲ್ಪ ಮಟ್ಟಿಗೆ ದೊಡ್ಡದಾಗಿದ್ದು, ವಿಸ್ತರಿತ ವಿಂಡ್ ಸ್ಕ್ರೀನ್, ಸ್ಲಿಕ್ ಎಲ್ಇಡಿ ಟೈಲ್ ಲೈಟ್ ಕ್ಲಸ್ಟರ್. ವೀಲ್ ಮತ್ತು ಪರಿಷ್ಕರಿಸಿದ ಬಂಪರ್ ಕೂಡಾ ಹೊಸ ಕಾರಿನ ವಿನ್ಯಾಸಕ್ಕೆ ಮೆರಗು ತಂದಿವೆ.

ಬಿಡುಗಡೆಗಾಗಿ ಮುಂಬೈ ತಲುಪಿದ ಹೊಚ್ಚ ಹೊಸ ಜೀಪ್ ರ‍್ಯಾಂಗ್ಲರ್ ಕಾರುಗಳು

ಇನ್ನು ಕಾರುಗಳ ಇಂಟಿರಿಯರ್ ವಿನ್ಯಾಸಗಳ ಬಗೆಗೆ ಹೇಳುವುದಾದರೇ, ಈ ಹಿಂದಿನ ಮಾದರಿಯಂತೆಯೇ ಬಹುತೇಕ ಫೀಚರ್ಸ್‌ಗಳು ಹೊಸ ಮಾದರಿಯಲ್ಲೂ ಮುಂದುವರಿಸಲಾಗಿದ್ದು, ಸುಧಾರಿತ ಡ್ಯಾಶ್‌ಬೋರ್ಡ್, ಚಾಲಕನ ಭಾಗದಲ್ಲಿ 7 ಇಂಚಿನ್ ಎಲ್‌ಸಿಡಿ ಮಾಹಿತಿ ಪರದೆ ಮತ್ತು 8.4 ಇಂಚಿನ್ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಪಡೆದಿದೆ.

ಬಿಡುಗಡೆಗಾಗಿ ಮುಂಬೈ ತಲುಪಿದ ಹೊಚ್ಚ ಹೊಸ ಜೀಪ್ ರ‍್ಯಾಂಗ್ಲರ್ ಕಾರುಗಳು

4ನೇ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ನಿರ್ಮಾಣವಾಗುತ್ತಿರುವ 2018ರ ಜೀಪ್ ರ‍್ಯಾಂಗ್ಲರ್‌ ಮಾದರಿಗಳು ಈ ಬಾರಿ ವೀಲ್‌ಬೇಸ್‌ನಲ್ಲೂ ಬದಲಾವಣೆ ಹೊಂದಿದ್ದು, ಇದರ ಪರಿಣಾಮವೇ ಲೆಗ್ ರೂಮಂ ವಿಸ್ತರಣೆ ಮಾಡುವ ಮೂಲಕ ಆಪ್ ರೋಡ್ ಪ್ರಿಯರಿಗೆ ಮತ್ತಷ್ಟು ಅನುಕೂಲ ಮಾಡಿಕೊಡಲಾಗಿದೆ.

ಬಿಡುಗಡೆಗಾಗಿ ಮುಂಬೈ ತಲುಪಿದ ಹೊಚ್ಚ ಹೊಸ ಜೀಪ್ ರ‍್ಯಾಂಗ್ಲರ್ ಕಾರುಗಳು

ಎಂಜಿನ್ ಸಾಮರ್ಥ್ಯ

ಹೊಸ ಜೀಪ್ ರ‍್ಯಾಂಗ್ಲರ್ ಆವೃತ್ತಿಗಳು ಒಟ್ಟು ನಾಲ್ಕು ಎಂಜಿನ್ ಆಯ್ಕೆ ಹೊಂದಿದ್ದು, ಇದರಲ್ಲಿ ಎರಡು ಪೆಟ್ರೋಲ್ ಮತ್ತು ಎರಡು ಡೀಸೆಲ್ ಎಂಜಿನ್‌ಗಳಿವೆ. ಹೀಗಾಗಿ ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಪೆಟ್ರೋಲ್‌ ಮಾದರಿಗಳಲ್ಲಿ 2.2-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಇಲ್ಲವೇ 3.6-ಲೀಟರ್ ವಿ6 ಪೆನ್‌ಸ್ಟಾರ್ ಎಂಜಿನ್ ಖರೀದಿಸಬಹುದು.

ಬಿಡುಗಡೆಗಾಗಿ ಮುಂಬೈ ತಲುಪಿದ ಹೊಚ್ಚ ಹೊಸ ಜೀಪ್ ರ‍್ಯಾಂಗ್ಲರ್ ಕಾರುಗಳು

ಹಾಗೆಯೇ, ಡೀಸೆಲ್ ಮಾದರಿಗಳಲ್ಲಿ 2.2-ಲೀಟರ್ ಫೌರ್ ಸಿಲಿಂಡರ್ ಎಂಜಿನ್ ಇಲ್ಲವೇ 3.0-ಲೀಟರ್ ವಿ6 ಟರ್ಬೋಚಾರ್ಜ್ಡ್ ಎಂಜಿನ್ ಖರೀದಿ ಮಾಡಬಹುದಾಗಿದ್ದು, ಇವುಗಳಲ್ಲಿ 2.2-ಲೀಟರ್ ಪೆಟ್ರೋಲ್ ಮಾದರಿಯು 270-ಬಿಎಚ್‌ಪಿ, 400-ಎನ್ಎಂ ಟಾರ್ಕ್, 3.6-ಲೀಟರ್ ವಿ6 ಪೆನ್‌ಸ್ಟಾರ್ ಎಂಜಿನ್ ಮಾದರಿಯ 285-ಬಿಎಚ್‌ಪಿ, 353-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಿಡುಗಡೆಗಾಗಿ ಮುಂಬೈ ತಲುಪಿದ ಹೊಚ್ಚ ಹೊಸ ಜೀಪ್ ರ‍್ಯಾಂಗ್ಲರ್ ಕಾರುಗಳು

ಡಿಸೇಲ್ ಎಂಜಿನ್‌ಗಳಲ್ಲಿ 2.2-ಲೀಟರ್ ಮಾದರಿಯು 197-ಬಿಎಚ್‌ಪಿ, 450-ಎನ್ಎಂ ಟಾರ್ಕ್ ಉತ್ಪಾದಿಸಿದಲ್ಲಿ 3.0-ಲೀಟರ್ ವಿ6 ಟರ್ಬೋಚಾರ್ಜ್ಡ್ ಮಾದರಿಯು 240-ಬಿಎಚ್‌ಪಿ, 570-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು. ಜೊತೆಗೆ ಎಲ್ಲಾ ಕಾರುಗಳಲ್ಲೂ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ವೈಶಿಷ್ಟ್ಯತೆ ಪಡೆದಿವೆ.

ಬಿಡುಗಡೆಗಾಗಿ ಮುಂಬೈ ತಲುಪಿದ ಹೊಚ್ಚ ಹೊಸ ಜೀಪ್ ರ‍್ಯಾಂಗ್ಲರ್ ಕಾರುಗಳು

ಒಟ್ಟಿನಲ್ಲಿ ಪವರ್‌ಫುಲ್ ಎಂಜಿನ್ ಆಯ್ಕೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಹೊಸ ಜೀಪ್ ರ‍್ಯಾಂಗ್ಲರ್ ಕಾರುಗಳು ಬಿಎಂಡಬ್ಲ್ಯು ಎಕ್ಸ್3, ಆಡಿ ಕ್ಯೂ5, ಮರ್ಸಿಡಿಸ್ ಬೆಂಝ್ ಜಿಎಲ್ಇ ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ನೀರಿಕ್ಷೆಯಲ್ಲಿವೆ. ಅಂದಹಾಗೆ ಹೊಸ ಕಾರುಗಳ ಬೆಲೆಯು ಎಕ್ಸ್‌ಶೋರಂ ಪ್ರಕಾರ ರೂ. 45 ಲಕ್ಷದಿಂದ ರೂ.60 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Spy Image Source: motorbash

Article Published On: Friday, June 8, 2018, 13:25 [IST]
English summary
2018 Jeep Wrangler Three And Five-Door SUV Spotted In Mumbai.
Read more on jeep suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+