ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬಂದ ಮಹೀಂದ್ರಾ ಅಲ್ಟುರಾಸ್ ಜಿ4 ಬಿಡುಗಡೆಗೆ ದಿನಗಣನೆ ಶುರು..!

ಮಹೀಂದ್ರಾ ಸಂಸ್ಥೆಯು ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಕಾರುಗಳಿಗೆ ಪೈಪೋಟಿ ನೀಡಬಲ್ಲ ವಿನೂತನ ಐಷಾರಾಮಿ ಎಸ್‌ಯುವಿ ಮಾದರಿಯಾದ ಅಲ್ಟುರಾಸ್ ಜಿ4 ಕಾರನ್ನು ಇದೇ ತಿಂಗಳು 26ರಂದು ಬಿಡುಗಡೆಗೊಳಿಸುತ್ತಿದ್ದು, ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬರುತ್ತಿರುವ ಹೊಸ ಕಾರು ಎಸ್‌ಯುವಿ ಪ್ರಿಯರಲ್ಲಿ ಭಾರೀ ಕುತೂಹಲ ಹುಟ್ಟುಹಾಕಿದೆ.

ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬಂದ ಮಹೀಂದ್ರಾ ಅಲ್ಟುರಾಸ್ ಜಿ4 ಬಿಡುಗಡೆಗೆ ದಿನಗಣನೆ ಶುರು..!

ದಕ್ಷಿಣ ಕೊರಿಯಾದ ಮೂಲದ ಸ್ಯಾಂಗ್‌ಯಾಂಗ್‌ ಆಟೋ ಉತ್ಪಾದನಾ ಸಂಸ್ಥೆಯ ಜೊತೆಗೂಡಿರುವ ಮಹೀಂದ್ರಾ ಸಂಸ್ಥೆಯು ಭಾರತದಲ್ಲಿ ಸುಧಾರಿತ ಮಾದರಿಯ ಎಸ್‌ಯುವಿ ಕಾರುಗಳ ನಿರ್ಮಾಣ ಯೋಜನೆಗೆ ಚಾಲನೆ ನೀಡಿದ್ದು, ಅಲ್ಟುರಾಸ್ ಜಿ4 ಕಾರು ಖರೀದಿಗಾಗಿ ಈಗಾಗಲೇ ರೂ.50 ಸಾವಿರ ಮುಂಗಡದೊಂದಿಗೆ ಅಧಿಕೃತ ಬುಕ್ಕಿಂಗ್ ಪ್ರಕ್ರಿಯೆಯನ್ನು ಕೂಡಾ ಆರಂಭಗೊಳಿಸಿದೆ.

ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬಂದ ಮಹೀಂದ್ರಾ ಅಲ್ಟುರಾಸ್ ಜಿ4 ಬಿಡುಗಡೆಗೆ ದಿನಗಣನೆ ಶುರು..!

ಮಹೀಂದ್ರಾ ಹೊಸ ಕಾರು ಎಕ್ಸ್‌ಯುವಿ 500 ಕಾರಿಗಿಂತಲೂ ಹೆಚ್ಚಿನ ಮಟ್ಟದ ಐಷಾರಾಮಿ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿಗೊಂಡಿದ್ದು, ಹೊಸ ಕಾರಿಗೆ ಅಲ್ಟುರಾಸ್ ಜಿ4 ಎಂದು ನಾಮಕರಣ ಮಾಡಿರುವುದು ಬಹುತೇಕ ಖಚಿತವಾಗಿದೆ.

ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬಂದ ಮಹೀಂದ್ರಾ ಅಲ್ಟುರಾಸ್ ಜಿ4 ಬಿಡುಗಡೆಗೆ ದಿನಗಣನೆ ಶುರು..!

ಮಹೀಂದ್ರಾ ಸಂಸ್ಥೆಯು ಅಲ್ಟುರಾಸ್ ಜಿ4 ಕಾರನ್ನು ಕ್ವಾಡ್ ಫ್ರೇಮ್ ತಂತ್ರಜ್ಞಾನದಡಿ ನಿರ್ಮಾಣ ಮಾಡಿದ್ದು, ಸ್ಯಾಂಗ್‌ಯಾಂಗ್‌ ಸಂಸ್ಥೆಯ ಜಿ4 ರೆಕ್ಸ್‌ಸ್ಟನ್ ಕಾರುಗಳ ರೀತಿಯಲ್ಲೇ ಕೆಲವು ಹೊರ ವಿನ್ಯಾಸಗಳಿರುವುದನ್ನು ಈ ಚಿತ್ರಗಳಲ್ಲಿ ನೀವು ನೋಡಬಹುದಾಗಿದೆ.

ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬಂದ ಮಹೀಂದ್ರಾ ಅಲ್ಟುರಾಸ್ ಜಿ4 ಬಿಡುಗಡೆಗೆ ದಿನಗಣನೆ ಶುರು..!

ಇದರಿಂದ ಕಾರಿನ ತೂಕವು ಸಾಕಷ್ಟು ಹಗುರವಾಗಿರುವುಲ್ಲದೇ ಎಂಜಿನ್ ಮತ್ತು ಇಂಧನ ಕಾರ್ಯಕ್ಷಮತೆ ಹೆಚ್ಚಲು ಸಹಕಾರಿಯಾಗಲಿದ್ದು, ಎಸ್‌ಯುವಿ ಪ್ರಿಯರಿಗೆ ಇದು ಉತ್ತಮ ಚಾಲನಾ ಅನುಭವ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.

ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬಂದ ಮಹೀಂದ್ರಾ ಅಲ್ಟುರಾಸ್ ಜಿ4 ಬಿಡುಗಡೆಗೆ ದಿನಗಣನೆ ಶುರು..!

ಜೊತೆಗ ಅಲ್ಟುರಾಸ್ ಜಿ4 ಹೊಸ ಕಾರು ಮಾದರಿಯು 7 ಸೀಟರ್ ಮಾದರಿಯಾಗಿದ್ದು, ಐಷಾರಾಮಿ ವೈಶಿಷ್ಟ್ಯತೆಗಳೊಂದಿಗೆ ಆಪ್ ರೋಡ್ ಸೌಲಭ್ಯಗಳೊಂದಿಗೆ ಆಕರ್ಷಕ ಗ್ರೀಲ್, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, 8 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಪ್ರಿಮಿಯಂ ಲೆದರ್ ಸೀಟುಗಳು, 360 ಡಿಗ್ರಿ ಕ್ಯಾಮೆರಾ ವ್ಯವಸ್ಥೆ ಹೊಂದಿದೆ.

ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬಂದ ಮಹೀಂದ್ರಾ ಅಲ್ಟುರಾಸ್ ಜಿ4 ಬಿಡುಗಡೆಗೆ ದಿನಗಣನೆ ಶುರು..!

ಇದಷ್ಟೇ ಅಲ್ಲದೇ ಎಲೆಕ್ಟ್ರಿಕ್ ಸನ್ ರೂಫ್, ಪವರ್ಡ್ ಟೈಲ್‌ಗೆಟ್ ಸೇರಿದಂತೆ ಅತ್ಯಾಧುನಿಕ ಸುರಕ್ಷಾ ಸೌಲಭ್ಯಗಳನ್ನು ಹೊಂದಿರಲಿದ್ದು, ಎಸ್‌ಯುವಿ ಕಾರು ಮಾದರಿಗಳಲ್ಲಿ ಹೊಸ ಟ್ರೆಂಡ್ ಸೃಷ್ಟಿಸುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ.

ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬಂದ ಮಹೀಂದ್ರಾ ಅಲ್ಟುರಾಸ್ ಜಿ4 ಬಿಡುಗಡೆಗೆ ದಿನಗಣನೆ ಶುರು..!

ಎಂಜಿನ್ ಸಾಮರ್ಥ್ಯ

ಬಿಡುಗಡೆಗೊಳ್ಳಲಿರುವ ಹೊಸ ಮಹೀಂದ್ರಾ ಅಲ್ಟುರಾಸ್ ಜಿ4 ಕಾರು ಯೂರೊ 2.2-ಲೀಟರ್(2,200ಸಿಸಿ) 4 ಸಿಲಿಂಡರ್, ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಪಡೆದುಕೊಳ್ಳಬಹುದು ಎನ್ನಲಾಗಿದ್ದು, 7 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ 183-ಬಿಹೆಚ್‍‍ಪಿ ಮತ್ತು 420-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿವೆ.

ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬಂದ ಮಹೀಂದ್ರಾ ಅಲ್ಟುರಾಸ್ ಜಿ4 ಬಿಡುಗಡೆಗೆ ದಿನಗಣನೆ ಶುರು..!

ಜೊತೆಗೆ ಪೆಟ್ರೋಲ್ ಆವೃತ್ತಿಗಳು ಸಹ ಲಭ್ಯವಿರಲಿವೆ ಎನ್ನಲಾಗಿದ್ದು, 2 ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್‌ನೊಂದಿಗೆ 222-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದಿಸಲಿವೆ ಎಂದು ಹೇಳಲಾಗಿದೆ.

ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬಂದ ಮಹೀಂದ್ರಾ ಅಲ್ಟುರಾಸ್ ಜಿ4 ಬಿಡುಗಡೆಗೆ ದಿನಗಣನೆ ಶುರು..!

ಇನ್ನು ಆಫ್ ರೋಡ್ ವೈಶಿಷ್ಟ್ಯತೆ ಹೊಂದಿರುವ ಅಲ್ಟುರಾಸ್ ಜಿ4 ಕಾರುಗಳಲ್ಲಿ ಹಿಂಬದಿ ಚಕ್ರಗಳಿಗೂ ಗೇರ್‌ಬಾಕ್ಸ್ ಶಕ್ತಿ ಪೂರೈಕೆಯ ಸೌಲಭ್ಯವಿದ್ದು, ಇದು ಕಠಿಣ ಪರಿಸ್ಥಿತಿಗಳಲ್ಲೂ ಸರಾಗವಾಗಿ ನುಗ್ಗಬಲ್ಲ ಬಲಿಷ್ಠ ಕಾರು ಮಾದರಿಯಾಗಲಿದೆ.

MOST READ: ಕಳೆದ ವರ್ಷ ಕಿಸೆಯಲ್ಲಿ 5 ಸಾವಿರ ಇಲ್ಲ ಎಂದಿದ್ದ ಈ ನಟ ಇವತ್ತು 4 ಕೋಟಿ ಮೌಲ್ಯದ ಕಾರಿನ ಒಡೆಯ

ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬಂದ ಮಹೀಂದ್ರಾ ಅಲ್ಟುರಾಸ್ ಜಿ4 ಬಿಡುಗಡೆಗೆ ದಿನಗಣನೆ ಶುರು..!

ಇದರೊಂದಿಗೆ ಪ್ರಯಾಣಿಕರ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, 9 ಏರ್‍‍ಬ್ಯಾಗ್, ಎಬಿಎಸ್, ಇಬಿಡಿ, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಅಡ್ವಾನ್ಸ್ಡ್ ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಮ್, ಲೇನ್ ಡಿಪಾರ್ಚುರ್ ವಾರ್ನಿಂಗ್, ಲೇನ್ ಚೇಂಜ್ ಅಸ್ಸಿಸ್ಟ್, ಟ್ರಾಫಿಕ್ ಸೇಫ್ಟಿ ಅಸ್ಸಿಸ್ಟ್ ಮತ್ತು ಹೈ ಬೀಮ್ ಅಸ್ಸಿಸ್ಟ್ ಅನ್ನು ಅಳವಡಿಸಲಾಗಿದೆ.

ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬಂದ ಮಹೀಂದ್ರಾ ಅಲ್ಟುರಾಸ್ ಜಿ4 ಬಿಡುಗಡೆಗೆ ದಿನಗಣನೆ ಶುರು..!

ಕಾರಿನ ಬೆಲೆ(ಅಂದಾಜು)

ಎಸ್‌ಯುವಿ ಕಾರುಗಳಲ್ಲೇ ವಿಶೇಷ ಎನ್ನಿಸಲಿರುವ ಮಹೀಂದ್ರಾ ಹೊಸ ಕಾರು 7 ಆಸನಗಳೊಂದಿಗೆ ಹೊತ್ತು ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವ ಐಷಾರಾಮಿ ಮಾದರಿಯಾಗಿದ್ದು, ಬೆಲೆಗಳು ಕೂಡಾ ತುಸು ದುಬಾರಿ ಎನ್ನಿಸಲಿವೆ. ಕೆಲವು ಮಾಹಿತಿ ಪ್ರಕಾರ ಹೊಸ ಕಾರಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ಪ್ರಕಾರ ರೂ.23 ಲಕ್ಷದಿಂದ ರಿಂದ ರೂ. 27 ಲಕ್ಷದ ತನಕ ಇರಬಹುದೆಂದು ಅಂದಾಜಿಸಲಾಗಿದೆ.

MOST READ: ರಸ್ತೆಗಿಳಿದ ಹೊಸ ಜಾವಾ ಬೈಕ್‌ಗಳು- ರಾಯಲ್ ಎನ್‌ಫೀಲ್ಡ್‌ಗೆ ತಳಮಳ ಶುರು..!

ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬಂದ ಮಹೀಂದ್ರಾ ಅಲ್ಟುರಾಸ್ ಜಿ4 ಬಿಡುಗಡೆಗೆ ದಿನಗಣನೆ ಶುರು..!

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಸದ್ಯ ಕಾರು ಉತ್ಪಾದನೆಯಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಿರುವ ಮಹೀಂದ್ರಾ ಸಂಸ್ಥೆಯು ಸ್ಯಾಂಗ್‌ಯಾಂಗ್‌ ಜೊತೆಗೂಡಿ ವಿವಿಧ ನಮೂನೆಯ ಹೊಸ ಕಾರುಗಳನ್ನು ಸಿದ್ದಗೊಳಿಸುತ್ತಿದ್ದು, ಮೊದಲ ಹಂತವಾಗಿ ಬಿಡುಗಡೆಯಾಗುತ್ತಿರುವ ಅಲ್ಟುರಾಸ್ ಜಿ4 ಕಾರು ಮಾರುಕಟ್ಟೆಯಲ್ಲಿ ಜನಪ್ರಿಯತೆ ಹೊಂದಿರುವ ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್, ಇಸುಝು ಎಂಯುಎಕ್ಸ್ ಕಾರುಗಳಿಗೆ ಟಕ್ಕರ್ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles

Kannada
English summary
Mahindra Alturas G4 — Images Prove It’s The Most Premium Mahindra Yet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X