ಬಿಡುಗಡೆಗೊಂಡ ಮಹೀಂದ್ರಾ ಟ್ರಿಯೊ ಎಲೆಕ್ಟ್ರಿಕ್ ಆಟೋಗಳು
ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಬೇಡಿಕೆ ಹೆಚ್ಚುತ್ತಿದ್ದು, ವಾಹನ ತಯಾರಕ ಸಂಸ್ಥೆಗಳು ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವ ಕಾರ್ಯದಲ್ಲಿದ್ದಾರೆ. ಈ ನಿಟ್ಟಿನಲ್ಲಿ ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಹೀಂದ್ರಾ ಈ ಹಿಂದೆಯೆ ಮಾರುಕಟ್ಟೆಯಲ್ಲಿ ಹಲವಾರು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಿದ್ದು, ಇದೀಗ ಎಲೆಕ್ಟ್ರಿಕ್ ಆಟೋ ಬಿಡುಗಡೆಗೊಳಿಸಿದೆ.

ಮಹೀಂದ್ರಾ ಸಂಸ್ಥೆಯು ಟ್ರಿಯೊ ಮತ್ತು ಟ್ರಿಯೊ ಯಾರಿ ಎಂಬ ಎರಡು ಎಲೆಕ್ಟ್ರಿಕ್ ಆಟೊರಿಕ್ಷಾಗಳನ್ನು ಬಿಡುಗಡೆಗಿಳಿಸಿದ್ದು, ಟ್ರಿಯೋ ವಾಹನದಲ್ಲಿ ಮೂವರು ಮತ್ತು ಟ್ರಿಯೊ ಯಾರಿ ವಾಹನದಲ್ಲಿ ಐದು ಮಂದಿ ಕೂತು ಪ್ರಯಾಣಿಸಬಹುದಾಗಿದೆ. ಮಹೀಂದ್ರಾ ಎಲೆಕ್ಟ್ರಿಕ್ ಆಟೋಗಳು ಎಕ್ಸ್ ಶೋರಂ ಬೆಂಗಳೂರಿನ ಪ್ರಕಾರ ರೂ. 2.22 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ಟ್ರಿಯೋ ಆಟೋರಿಕ್ಷಾಗಳ ಮತ್ತೊಂದು ವಿಷೇಶವೆಂದರೆ ಈ ಎಲೆಕ್ಟ್ರಿಕ್ ವಾಹನಗಳನ್ನು ನಮ್ಮ ಬೆಂಗಳೂರಿನಲ್ಲಿನ ಕಂಪೆನಿ ಪ್ಲಾಂಟ್‍ನಲ್ಲಿ ಉತ್ಪಾದನೆ ಮಾಡಲಾಗಿದ್ದು, ಬಿಡುಗಡೆಗು ಮುನ್ನವೇ ಸ್ಪಾಟ್ ಟೆಸ್ಟಿಂಗ್ ವೇಳೆ ಬೆಂಗಳೂರಿನ ನಗರದ ರಸ್ತೆಗಳಲ್ಲಿ ಕಾಣಿಸಿಕೊಂಡು ಗ್ರಾಹಕರಲ್ಲಿ ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿತ್ತು.

ನಗರ ಪ್ರದೇಶಗಳಲ್ಲಿ ತಿರುಗಾಡಲು ಹಲವರು ಇನ್ನು ಆಟೋ ರಿಕ್ಷಾಗಳನ್ನು ಬಳಸುತ್ತಿದ್ದಾರೆ, ಆದ್ದರಿಂದ ಆಟೋರಿಕ್ಷಾಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ ನಗರದಲ್ಲಿ ವಾಹನಗಳಿಂದ ಉಂಟಾಗುತ್ತಿರುವ ವಾಯುಮಾಲಿನ್ಯವನ್ನು ತಡೆಗಟ್ಟಲು ಮೊದಲಿಗೆ ಹೆಚ್ಚು ಸಂಖ್ಯೆಯಲ್ಲಿರುವ ಇಂಧನ ಆಧಾರಿತ ಆಟೋಗಳು ಎಲೆಕ್ಟ್ರಿಕ್ ಮಯವಾದಲ್ಲಿ ಶೀಘ್ರವೇ ವಾಯು ಮಾಲಿನ್ಯವನ್ನು ಕಡಿಮೆ ಮಾಡಬಹುದು.

ಮಹೀಂದ್ರಾ ಟ್ರಿಯೊ ಎಲೆಕ್ಟ್ರಿಕ್ ಆಟೋ ಒಂದು ಬಾರಿ ಪೂರ್ತಿ ಚಾರ್ಜ್ ಆಗಲು 3 ಗಂಟೆ 50 ನಿಮಿಷಗಳ ಸಮಯವನ್ನು ತೆಗೆದುಕೊಂಡರೆ ಇನ್ನು ಟ್ರಿಯೋ ಯಾರಿ ಎಲೆಕ್ಟ್ರಿಕ್ ಆಟೋ 2 ಗಂಟೆ 30 ನಿಮಿಷದಲ್ಲಿ ಪೂರ್ಣ ಚಾರ್ಜ್ ಆಗುತ್ತದೆ.

ಮಹೀಂದ್ರಾ ಟ್ರಿಯೊ ವಾಹನದಲ್ಲಿ ಅಳವಡಿಸಲಾದ 7.47 ಕಿಲೋವ್ಯಾಟ್ಸ್ ಲೀಥಿಯಂ ಐಯಾನ್ ಬ್ಯಾಟರಿ 5.4 ಕಿಲೋವ್ಯಾಟ್ಸ್ ಪೀಕ್ ಪವರ್ ಮತ್ತು 30ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಸುಮಾರು ಒಂದು ಬಾರಿಯ ಚಾರ್ಜ್‍ಗೆ 130 ಕಿಲೋಮೀಟರ್ ದೂರ ಚಲಿಸಬಹುದಾಗಿದೆ.

ಇನ್ನು ಮಹೀಂದ್ರಾ ಟ್ರಿಯೊ ಯಾರಿ ವಾಹನದಲ್ಲಿ ಅಳವಡಿಸಲಾದ 3.69 ಕಿಲೋವ್ಯಾಟ್ಸ್ ಲೀಥಿಯಂ ಐಯಾನ್ ಬ್ಯಾಟರಿ 2ಕಿಲೋವ್ಯಾಟ್ಸ್ ಪೀಕ್ ಪವರ್ ಮತ್ತು 17.5 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಒಂದು ಬಾರಿಯ ಚಾರ್ಜ್‍ಗೆ ಸುಮಾರು 80 ಕಿಲೋಮೀಟರ್ ಪ್ರಯಾಣಿಸಬಹುದಾದ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಮಹೀಂದ್ರಾ ಟ್ರಿಯೊ ಆಟೋ ಗಂಟೆಗೆ 45 ಕಿಲೋಮೀಟರ್ ಚಲಿಸಬಲ್ಲ ಟಾಪ್ ಸ್ಪೀಡ್ ಹೊಂದಿದ್ದರೆ ಇನ್ನು ಮಹೀಂದ್ರಾ ಟ್ರಿಯೊ ಯಾರಿ ಗಂಟೆಗೆ 24.5 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಐಪಿ 67 ರೇಟೆಡ್ ಬ್ಯಾಟರಿ ಬಾಕ್ಸ್ ಉತ್ತಮ ಬ್ಯಾಟರಿ ಸುರಕ್ಷತೆಯನ್ನು ಒದಗಿಸುತ್ತದೆ, ಹಿಂಭಾಗದ ಇನ್‍ಬ್ಯುಲ್ಟ್ ಕ್ರ್ಯಾಶ್ ಗಾರ್ಡ್ ಅಪಘಾತದ ಸಂದರ್ಭದಲ್ಲಿ ಪ್ರಯಾಣಿಕರನ್ನು ರಕ್ಷಿಸುತ್ತದೆ. ಈ ವೈಶಿಷ್ಟ್ಯಗಳು ಮಾಲೀಕರನ್ನು ಮತ್ತು ಚಾಲಕರನ್ನು 20-25% ರಷ್ಟು ಲಾಭ ಗಳಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ಅವಕಾಶ ನೀಡುತ್ತದೆ. ಟ್ರಿಯೊ ಪ್ರತಿ ಕಿ.ಮಿಗೆ 0.50 ರೂ. ವೆಚ್ಚವನ್ನು ನಿರ್ವಹಿಸುತ್ತಿದೆ ಎಂದು ಮಹೀಂದ್ರಾ ಹೇಳಿಕೊಂಡಿದೆ.

ಇದರಲ್ಲಿ ಅಳವಡಿಸಲಾಗಿರುವ ಲೀಥಿಯಂ ಐಯಾನ್ ಬ್ಯಾಟರಿಗಳಿಗೆ 5 ವರ್ಷಗಳ ಕಾಲ ಜೀರೋ ಮೈಂಟೈನೆನ್ಸ್ ಹೊಂದಿರಲಿದೆ ಮತ್ತು ಟ್ರಿಯೊ ಆಟೋ ಬ್ರೇಕ್ ಹಾಕಿದ ಸಮಯದಲ್ಲಿ ಇದರಲ್ಲಿನ ಕೈನೆಟಿಕ್ ಎನರ್ಜಿ ರೀಜನರೇಟಿವ್ ಬೆಕಿಂಗ್ ಸಿಸ್ಟಂನ ಮುಖಾಂತರ ಬ್ಯಾಟರಿಯನ್ನು ಚಾರ್ಜ್ ಮಾಡುತ್ತದೆ.

ಮಹೀಂದ್ರಾ ಟ್ರಿಯೊ ಆಟೊರಿಕ್ಷಾಗಳು ಸಾಧಾರಣ ಆಟೋರಿಕ್ಷಾಗಳಿಗಿಂತಾ ಪ್ರಯಾಣಿಕಗೆ ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡಲಿದ್ದು, 2050ಎಂಎಂ ವ್ಹೀಲ್‍ಬೇಸ್, 2746ಎಂಎಂ ಉದ್ದ, 1350ಎಂಎಂ ಅಗಲ ಮತ್ತು 1750ಎಂಎಂ ಎತ್ತರವನ್ನು ಪಡೆದುಕೊಂಡಿದೆ.

ಸಧ್ಯಕ್ಕೆ ಬೆಂಗಳೂರಿನಲ್ಲಿರುವ ಪ್ಲಾಂಟ್‍ನಲ್ಲಿ ತಿಂಗಳಿಗೆ ಸುಮಾರು 1000 ಟ್ರಿಯೊ ಎಲೆಕ್ಟ್ರಿಕ್ ಆಟೋಗಳ ಉತ್ಪಾದನೆಮಾಡಲಾಗಿದ್ದು, ನಂತರದ ದಿನಗಳಲ್ಲಿ ದೇಶದಲ್ಲಿನ ಇನಿತರೆ ನಗರಗಳಲ್ಲಿ ಶುರುವಾಗಲಿದೆ. ಮಾರುಕಟ್ಟೆಯಲ್ಲಿ ಈ ಮಹೀಂಡ್ರಾ ಟ್ರಿಯೊ ಆಟೋಗಳು ಬಜಾಜ್ ಇ-ರಿಕ್ಷಾಗಳಿಗೆ ಪೈಪೋಟಿಯನ್ನು ನೀಡಲಿದೆ.
ರಾಯಲ್ ಎನ್‍ಫೀಲ್ಡ್ ಬೈಕ್‍ಗಳಿಗೆ ಟಕ್ಕರ್ ನೀಡಲು ಬಿಡುಗಡೆಗೊಂಡ ಜಾವಾ ಮೋಟಾರ್‍ಸೈಕಲ್ಸ್ ಸಂಸ್ಥೆಯ ಹೊಸ ಬೈಕ್‍ಗಳ ಚಿತ್ರಗಳು ಇಲ್ಲಿದೆ ನೋಡಿ..


Click it and Unblock the Notifications








