TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್‌ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಅಲ್ಟುರಾಸ್ ಜಿ4 ನಂತರ ಮತ್ತೊಂದು ಹೊಸ ಕಾರು ಬಿಡುಗಡೆಗೆ ಸಜ್ಜಾದ ಮಹೀಂದ್ರಾ
ಕಳೆದ ವಾರವಷ್ಟೇ ಅಲ್ಟುರಾಸ್ ಜಿ4 ಐಷಾರಾಮಿ ಕಾರು ಬಿಡುಗಡೆ ಮಾಡಿರುವ ಮಹೀಂದ್ರಾ ಸಂಸ್ಥೆಯು ಮುಂಬರುವ ಕೆಲವೇ ದಿನಗಳಲ್ಲಿ ಮತ್ತೊಂದು ಬಹುನೀರಿಕ್ಷಿತ ಎಸ್201 ಹೆಸರಿನ ಕಂಪ್ಯಾಕ್ಟ್ ಎಸ್‌ಯುವಿ ಕಾರನ್ನು ಬಿಡುಗಡೆ ಮಾಡಲಿದ್ದು, ಈ ಹಿನ್ನೆಲೆಯಲ್ಲಿ ಹೊಸ ಕಾರಿನ ಕುರಿತಾದ ತಾಂತ್ರಿಕ ಅಂಶಗಳ ಕುರಿತಾಗಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.
ಮಹೀಂದ್ರಾ ಸಂಸ್ಥೆಯು ಕಾರು ಮಾರಾಟದಲ್ಲಿ ಭಾರೀ ಬದಲಾವಣೆಗೆ ಕಾರಣವಾಗಿದ್ದು, ಗ್ರಾಹಕರ ಬೇಡಿಕೆಗೆ ತಕ್ಕಂತೆ ವಿವಿಧ ನಮೂನೆಯ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿರುವುದು ಗ್ರಾಹಕರ ಆಕರ್ಷಣೆ ಕಾರಣವಾಗಿದೆ. ಸ್ಯಾಂಗ್‌ಯಾಂಗ್ ಜೊತೆಗೂಡಿ ಅಭಿವೃದ್ಧಿ ಪಡಿಸಲಾಗಿರುವ ಹೊಸ ಎಸ್‌ಯುವಿ ಕಾರು ಇದೀಗ ಬಿಡುಗಡೆಗೂ ಮುನ್ನವೇ ಸಾಕಷ್ಟು ಸದ್ದು ಮಾಡುತ್ತಿದ್ದು, ಬಿಡುಗಡೆಗಾಗಿ ವಿವಿಧ ಹಂತದ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.
ಹೌದು, ಮಹೀಂದ್ರಾ ಸಂಸ್ಥೆಯು ದಕ್ಷಿಣ ಕೊರಿಯಾದ ಮಧ್ಯಮ ಗಾತ್ರದ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಯಾದ ಸ್ಯಾಂಗ್‌ಯಾಂಗ್ ಜೊತೆಗೂಡಿ ಹೊಸ ನಮೂನೆಯ ಕಾರು ಉತ್ಪನ್ನಗಳನ್ನು ಅಭಿವೃದ್ಧಿ ಪಡೆಸುತ್ತಿದ್ದು, ಸ್ಯಾಂಗ್‌ಯಾಂಗ್ ಟಿವೊಲಿ ಮಾದರಿಯಲ್ಲಿ ಉತ್ಪಾದನೆ ಮಾಡಲಾಗಿರುವ ಹೊಸ ಸಬ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆಯ ಸುಳಿವು ನೀಡಿದೆ.
ಬಿಡುಗಡೆಗಾಗಿ ಮಹೀಂದ್ರಾ ಸಂಸ್ಥೆಯು ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ಹಲವು ಸುತ್ತಿನ ಪರೀಕ್ಷಾ ಕಾರ್ಯಗಳನ್ನು ಪೂರ್ಣಗೊಳಿಸುತ್ತಿದ್ದು, ಇದೀಗ ಅಂತಿಮವಾಗಿ ಬಿಡುಗಡೆಯ ಉದ್ದೇಶದಿಂದ ತಮಿಳುನಾಡಿನ ಪ್ರವಾಸಿ ಕೇಂದ್ರವಾದ ಊಟಿಯಲ್ಲಿ ಹೊಸ ಕಾರಗಳನ್ನು ಸ್ಪಾಟ್ ಟೆಸ್ಟಿಂಗ್ ನಡೆಸಲಾಯ್ತು.
ಇಷ್ಟು ದಿನಗಳ ಕಾಲ ಸಿಂಗಲ್ ವೆರಿಯೆಂಟ್ ಮೂಲಕ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದ್ದ ಮಹೀಂದ್ರಾ ಸಂಸ್ಥೆಯು ಈ ಬಾರಿ ಬಿಡುಗಡೆಯಾಗಲಿರುವ ಎಲ್ಲಾ ವೆರಿಯೆಂಟ್‌ಗಳನ್ನು ಪರೀಕ್ಷೆ ನಡೆಸುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಕಾರು ಮಾರುಕಟ್ಟೆಗೆ ಬರುವುದು ಖಚಿತವಾಗಿದೆ.
ವಿಟಾರಾ ಬ್ರೆಝಾ ಡಿಸೈನ್ ಆಧರಿಸಿರುವ ಮಹೀಂದ್ರ ಹೊಸ ಕಾರನ್ನ ಎಸ್201 ಕೋಡ್ ಆಧಾರದ ಮೇಲೆ ಎಂಜಿನ್ ಕಾರ್ಯಕ್ಷಮತೆಯನ್ನು ಪರೀಕ್ಷೆ ಮಾಡಲಾಗುತ್ತಿದ್ದು, ಹೊಸ ಕಾರಿನ ಅಧಿಕೃತ ಹೆಸರು ಇದುವರೆಗೂ ತಿಳಿದುಬಂದಿಲ್ಲ.
ಹೀಗಾಗಿ ಮುಂದಿನ ತಿಂಗಳು ಹೊಸ ಕಾರಿನ ಅಧಿಕೃತ ಹೆಸರು ಬಹಿರಂಗಪಡಿಸುವ ಸಾಧ್ಯತೆಗಳಿದ್ದು, ಹೊಸ ಕಾರುಗಳು ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್, ಫ್ಲಕ್ಸ್ ಅಲ್ಯುಮಿನಿಯಂ ಪ್ಯಾನೆಲ್, ಸುಧಾರಿತ ಆಡಿಯೋ ಸಿಸ್ಟಂ, ಬ್ಯೂಟೂಥ್ ಕನೆಕ್ಟಿವಿಟಿ, ಸ್ಟಿರಿಂಗ್ ಮೇಲೆ ಎಸ್201 ಕೋಡ್ ನೇಮ್ ಪ್ಲೇಟ್ ಬಳಕೆ ಮಾಡಲಾಗಿದೆ.
ಕಾರು ಪ್ರಯಾಣಕ್ಕೆ ಅನುಕೂಲಕರವಾಗುವ ಇನ್‌ಸ್ಟ್ರುಮೆಂಟಲ್ ಕ್ಲಸ್ಟರ್, ಮಲ್ಟಿ ಫಂಕ್ಷನಲ್ ಸೇಂಟರ್ ಡಿಸ್‌ಫ್ಲೇ, ಸ್ಯಾಂಗ್‌ಯಾಂಗ್ ಟಿವೊಲಿ ಮಾದರಿಯಲ್ಲೇ ಬಹುತೇಕ ಇಂಟಿರಿಯರ್ ಡಿಸೈನ್‌ಗಳನ್ನು ಹೊಸ ಮಹೀಂದ್ರಾ ಕಂಪ್ಯಾಕ್ಟ್ ಎಸ್‌ಯುವಿಯಲ್ಲೂ ಬಳಕೆ ಮಾಡಿರುವುದನ್ನು ಸೆರೆ ಸಿಕ್ಕ ಚಿತ್ರಗಳಲ್ಲಿ ನೋಡಬಹುದಾಗಿದೆ.
7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಬಳಕೆ ಮಾಡಲಾಗಿದ್ದು, ಸ್ಮಾರ್ಟ್ ಫೋನ್ ಕನೆಕ್ಟ್ ಮಾಡಿಕೊಳ್ಳುವ ಮೂಲಕ ಆಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ನಿಯಂತ್ರಣ ಮಾಡಬಹುದಾಗಿದೆ. ಜೊತೆಗೆ ನ್ಯಾವಿಗೇಷನ್ ಮತ್ತು ರಿವರ್ಸ್ ಕ್ಯಾಮೆರಾ ಡಿಸ್‌ಫ್ಲೇ ಸಹ ಇದರಲ್ಲಿದೆ.
MOST READ: ನಕಲಿ ನಂಬರ್ ಪ್ಲೇಟ್ ಮಾಫಿಯಾ- ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸುವಾಗ ಹುಷಾರ್..!
ಇನ್ನು ಹೆಚ್ಚುವರಿಯಾಗಿ ಕಾರಿನ ಒಳಭಾಗದ ಮಧ್ಯದಲ್ಲಿ ವಿಸ್ತರಿತ ಕನ್ಸೋಲ್ ಬಳಕೆ ಮಾಡಲಾಗಿದ್ದು, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, ಡ್ಯುಯಲ್ ಯುಎಸ್‌ಬಿ ಫೋರ್ಟ್ಸ್, ಆಕ್ಸ್ ಇನ್‌ಫುಟ್ ಜಾಕ್ಸ್, ವರ್ಟಿಕಲ್ ಎಸಿ ವೆಂಟ್, ಮಧ್ಯದಲ್ಲಿ ಟಚ್ ಸ್ಕ್ರಿನ್ ಸಿಸ್ಟಂ ಸೇರಿಸಲಾಗಿದೆ.
ಹಾಗೆಯೇ ಕಾರಿನ ಹೊರ ವಿನ್ಯಾಸಗಳ ಬಗೆಗೆ ಹೇಳುವುದಾದರೇ, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಡಿಆರ್‌ಎಲ್ಎಸ್, ಎಲ್ಇಡಿ ಟೈಲ್ ಗೇಟ್, ORVMs,ಟರ್ನ್ ಇಂಡಿಕೇಟರ್ಸ್, ರೂಫ್ ರೈಲ್ಸ್, ರಿಯರ್ ಸ್ಪಾಯ್ಲರ್, ರಿಯರ್ ವೈಪರ್, 17-ಇಂಚಿನ ಅಲಾಯ್ ವೀಲ್ಹ್‌ಗಳನ್ನು ಹೊಂದಿರಲಿದೆ.
MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಗರಿಷ್ಠ ಮಟ್ಟದ ರೇಟಿಂಗ್ ಗಿಟ್ಟಿಸಿಕೊಂಡ ಮಹೀಂದ್ರಾ ಅಲ್ಟುರಾಸ್ ಜಿ4
ಒಟ್ಟಿನಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಮಹೀಂದ್ರಾ ಹೊಸ ಸಬ್ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳು ಎಕ್ಸ್‌ಯುವಿ500ಗಿಂತ ಕೆಳ ಹಂತದ ಕಾರು ಆವೃತ್ತಿಯಾಗಿ ಅಭಿವೃದ್ಧಿ ಹೊಂದಲಿದ್ದು, ಬಿಡುಗಡೆಯ ನಂತರ ಮಾರುತಿ ಸುಜುಕಿ ವಿಟಾರಾ ಬ್ರೇಝಾ, ಟಾಟಾ ನೆಕ್ಸಾನ್, ಫೋರ್ಡ್ ಇಕೋ ಸ್ಪೋರ್ಟ್ಸ್ ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ಗುಣಲಕ್ಷಣ ಪಡೆದಿದೆ. ಆದ್ರೆ ಹೊಸ ಕಾರಿನ ಬಿಡುಗಡೆ ಮಾಹಿತಿ ನಿಖರವಾಗಿ ಲಭ್ಯವಾಗಲಿದ್ದರೂ ಮುಂಬರುವ ದೀಪಾವಳಿ ವೇಳೆ ಹೊಸ ಕಾರು ಮಾರುಕಟ್ಟೆಗೆ ಲಗ್ಗೆಯಿಡುವ ಸಾಧ್ಯತೆಗಳಿವೆ.