ಬಿಎಸ್-6 ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಮಹೀಂದ್ರಾ ಟಿಯುವಿ 300 ಫೇಸ್‌ಲಿಫ್ಟ್
ಮಹೀಂದ್ರಾ ಸಂಸ್ಥೆಯು ತನ್ನ ಹೊಸ ಕಾರುಗಳ ಸರಣಿಯಲ್ಲಿ ಮಹತ್ವದ ಬದಲಾವಣೆ ತರುತ್ತಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಟಿಯುವಿ 300 ಫೇಸ್‌ಲಿಫ್ಟ್ ಕಾರುಗಳನ್ನು ಬಿಎಸ್-6 ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.

ಕೇಂದ್ರ ಸರ್ಕಾರವು ಈ ಹಿಂದೆ ಬಿಎಸ್-3 ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ನಿಷೇಧಗೊಳಿಸುವ ಮೂಲಕ ಬಿಎಸ್-4 ಮತ್ತು ಅದಕ್ಕೂ ಮೇಲ್ಪಟ್ಟ ವಾಹನಗಳಿಗೆ ಮಾತ್ರ ಉತ್ಪಾದನಾ ಅವಕಾಶ ನೀಡುತ್ತಿದೆ. ಇದೀಗ ಮತ್ತೊಂದು ಸುತ್ತಿನ ಬದಲಾಣೆಗೆ ಯೋಜನೆ ರೂಪಿಸಲಾಗಿದ್ದು, 2019ರ ಏಪ್ರಿಲ್ ನಂತರ ಬಿಎಸ್-4 ವಾಹನಗಳ ಉತ್ಪಾದನೆಯನ್ನು ಸಹ ನಿಷೇಧ ಮಾಡುವ ಮೂಲಕ ಬಿಎಸ್-6 ವಾಹನಗಳಿಗೆ ಅವಕಾಶ ನೀಡುವ ಯೋಜನೆ ಇದಾಗಿದೆ.

ಹೀಗಾಗಿ ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ಇದೀಗ ತನ್ನ ಬಹನೀರಿಕ್ಷಿತ ವಾಹನಗಳನ್ನು ಬಿಎಸ್-6 ವೈಶಿಷ್ಟ್ಯತೆಗಳೊಂದಿಗೆ ಉತ್ಪಾದನೆ ಮಾಡಲು ವಿವಿಧ ಯೋಜನೆ ರೂಪಿಸುತ್ತಿದ್ದು, ಮಹೀಂದ್ರಾ ಸಂಸ್ಥೆಯು ಸಹ ಟಿಯುವಿ300 ಫೇಸ್‌ಲಿಫ್ಟ್ ಕಾರುಗಳನ್ನು ಬಿಎಸ್-6 ವಿನ್ಯಾಸಗಳೊಂದಿಗೆ ಬಿಡುಗಡೆಗೊಳಿಸುವ ಸುಳಿವು ನೀಡಿದೆ.

ಇದಲ್ಲದೇ, ಮಹೀಂದ್ರಾ ಸಂಸ್ಥೆಯು ಸಾಮಾನ್ಯ ಮಾದರಿಯ ಟಿಯುವಿ300 ಕಾರುಗಳಲ್ಲಿ ಲಗ್ಷುರಿ ಎಡಿಷನ್ ಕಿಟ್ ಒದಗಿಸುವ ಬಗ್ಗೆ ಅಧಿಕೃತ ವೆಬ್‌ಸೈಟ್‌ನಲ್ಲೇ ಮಾಹಿತಿ ನೀಡಿದ್ದು, ಟಿ8 ವೆರಿಯೆಂಟ್‌ಗಳಲ್ಲಿ ಮಾತ್ರ ಈ ವಿಶೇಷ ಸೌಲಭ್ಯಗಳು ದೊರೆಯಲಿವೆ. ಇದರಿಂದಾಗಿ ಎಸ್‌ಯುವಿ ಮಾದರಿಗಳಲ್ಲೇ ಅತ್ಯುತ್ತಮ ಆವೃತ್ತಿಯಾಗಲಿರುವ ಟಿಯುವಿ300 ಕಾರುಗಳು, ಮತ್ತಷ್ಟು ಗ್ರಾಹಕರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮಹೀಂದ್ರಾ ನೀಡಿರುವ ಮಾಹಿತಿ ಪ್ರಕಾರ ಟಿಯುವಿ300 ಮಾದರಿಯಲ್ಲೇ ಟಿ8 ಸರಣಿ ಕಾರುಗಳಲ್ಲಿ ಮಾತ್ರ ಲಗ್ಷುರಿ ಕಿಟ್ ಬಳಕೆ ಮಾಡಲಾಗಿದ್ದು, ಹೊಸ ಕಾರುಗಳಲ್ಲಿ ಫ್ಲಕ್ಸ್ ಲೆದರ್ ಸೀಟುಗಳು, ಲೆದರ್‌ನಿಂದ ಕವರ್ ಮಾಡಲಾದ ಸ್ಟ್ರೀರಿಂಗ್ ವೀಲ್ಹ್, 6.2-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ನೆವಿಗೆಷನ್ ಮತ್ತು ರಿವರ್ಸ್ ಕ್ಯಾಮೆರಾ ಸೌಲಭ್ಯವಿರಲಿದೆ.

ಟಿಯುವಿ300 ಟಿ8 ಕಾರುಗಳ ಓಆರ್‌ವಿಎಂ, ಲೋವರ್ ಫ್ರಂಟ್ ಗ್ರಿಲ್, ಡೋರ್ ಹ್ಯಾಂಡಲ್ ಮೇಲೆ ಕೋರ್ಮ್ ಗಾರ್ನಿಶ್ ಬಳಕೆ ಮಾಡಲಾಗಿದ್ದು, ಇದು ಕಾರಿನ ಖದರ್ ಒದಲಿಸಲಿದೆ. ಜೊತೆಗೆ ಕಡಿಮೆ ಬೆಲೆಗಳಲ್ಲಿ ಲಗ್ಷುರಿ ಫಿಚರ್ಸ್ ಕಾರುಗಳನ್ನು ಆಯ್ಕೆ ಮಾಡುವ ಗ್ರಾಹಕರಿಗೆ ಇದೊಂದು ಉತ್ತಮ ಆಯ್ಕೆ ಎನ್ನಬಹುದು.

ಇನ್ನು ಕಾರಿನಲ್ಲಿರುವ ಮಾಹಿತಿ ಅಂಶಗಳನ್ನು ಹೆಚ್ಚಿಸಲು ಜಿಪಿಎಸ್ ಬಳಕೆ ಮಾಡಿರುವ ಮಹೀಂದ್ರಾ ಸಂಸ್ಥೆಯು ಬ್ಯಾನೆಟ್ ಸ್ಟ್ರೀಪ್, ಟೈಲ್ ಲೈಟ್ ಕ್ಲಸ್ಟರ್, ಉತ್ಕೃಷ್ಟ ಗುಣಮಟ್ಟದ ಫ್ಲೋರ್ ಮ್ಯಾಟ್ ಒದಗಿಸಿರುವುದು ಕಾರಿನ ವೈಶಿಷ್ಟ್ಯತೆಯನ್ನೇ ಬದಲಿಸಿದೆ.
MOST READ: ನಟ ದರ್ಶನ್ ಕಾರು ಅಪಘಾತ- ಪೊಲೀಸರಿಂದ ಸುಮೊಟೊ ಕೇಸ್..!

ಎಂಜಿನ್ ವೈಶಿಷ್ಟ್ಯತೆ
ಸದ್ಯ ಟಿಯುವಿ 300 ಕಾರುಗಳು 1.5-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಮಾಡಬಹುದಾಗಿದ್ದು, 100-ಬಿಎಚ್‌ಪಿ, 240-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು. ಇದೇ ಎಂಜಿನ್ ಫೇಸ್‌ಲಿಫ್ಟ್ ವರ್ಷನ್ ಇರಬಹುದು ಎನ್ನಲಾಗಿದೆ.

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಮೊಟ್ಟಮೊದಲ ಬಾರಿಗೆ ಡೀಸೆಲ್ ಕಾರು ಆವೃತ್ತಿಗಳಲ್ಲಿ ಎಟಿಎಂ ಸೌಲಭ್ಯ ಒದಗಿಸುವ ಆಟೋ ಉದ್ಯಮದಲ್ಲಿ ಹೊಸ ಸಂಚಲಕ್ಕೆ ಕಾರಣವಾಗಿದ್ದೆ ಮಹೀಂದ್ರಾ ಸಂಸ್ಥೆ. ಇದೀಗ ಟಾಟಾ ಮೋಟಾರ್ಸ್ ಕೂಡಾ ತನ್ನ ನೆಕ್ಸಾನ್ ಎಸ್‌ಯುವಿಗಳಲ್ಲೂ ಡೀಸೆಲ್ ಎಎಂಟಿಯನ್ನು ಪರಿಚಯಿಸಿರುವುದನ್ನು ನಾವು ಗಮನಿಸಬಹುದು.

ಒಟ್ಟಿನಲ್ಲಿ ಎಸ್‌ಯುವಿ ಪ್ರಿಯರನ್ನು ತನ್ನತ್ತ ಸೆಳೆಯಲು ಟಿಯುವಿ300 ವೈಶಿಷ್ಟ್ಯತೆಯಲ್ಲಿ ಬದಲಾವಣೆ ತರುತ್ತಿರುವ ಮಹೀಂದ್ರಾ ಸಂಸ್ಥೆಯು ಮುಂಬರುವ ದಿನಗಳಲ್ಲಿ ಬೃಹತ್ ಪ್ರಮಾಣದ ಕಾರು ಮಾರಾಟ ದಾಖಲಿಸಲಿದ್ದು, ಆಸಕ್ತ ಗ್ರಾಹಕರು ಟಿಯುವಿ300 ಲಗ್ಷುರಿ ಎಡಿಷನ್ ಕಿಟ್ ಕುರಿತಾಗಿ ಮತ್ತಷ್ಟು ಮಾಹಿತಿ ಪಡೆಯಲು ನಿಮ್ಮ ಹತ್ತಿರದ ಡೀಲರ್ಸ್‌ಗಳನ್ನು ಸಂಪರ್ಕಿಸಬಹುದಾಗಿದೆ.
MOST READ: ಮನಾಲಿಯಲ್ಲಿ ಭೀಕರ ಪ್ರವಾಹ - ನದಿಯಲ್ಲಿ ಕೊಚ್ಚಿ ಹೋದ ವೊಲ್ವೊ ಬಸ್ !

ಆದ್ರೆ ಹೊಸ ಫೀಚರ್ಸ್ ಬಳಕೆ ಹಿನ್ನೆಲೆ ಕಾರಿನ ಬೆಲೆಯಲ್ಲಿ ಬದಲಾವಣೆ ಮಾಡುವ ಕುರಿತು ಮಾಹಿತಿ ಇಲ್ಲವಾದ್ರೂ ಲಗ್ಷುರಿ ವೈಶಿಷ್ಟ್ಯತೆ ಬಳಕೆಯಿಂದಾಗಿ ಕೊಂಚ ಮಟ್ಟಿಗೆ ಬೆಲೆ ಏರಿಕೆ ಕಂಡುಬರಬಹುದು.
More from DriveSpark
ಮಹೀಂದ್ರಾ ಸಂಸ್ಥೆಯು ಹೊಸದಾಗಿ ಬಿಡುಗಡೆ ಮಾಡಿರುವ ಮರಾಜೊ ಎಂಪಿವಿ ಕಾರುಗಳು ಫೋಟೋ ಗ್ಯಾಲರಿ..


Click it and Unblock the Notifications








