ನಟ ದರ್ಶನ್ ಕಾರು ಅಪಘಾತ- ಪೊಲೀಸರಿಂದ ಸುಮೊಟೊ ಕೇಸ್..!

ಚಾಲೆಂಜಿಗ್ ಸ್ಟಾರ್ ದರ್ಶನ್ ಅವರಿದ್ದ ಕಾರು ಅಪಘಾತಕ್ಕೀಡಾದ ಪರಿಣಾಮ ದರ್ಶನ್ ಸೇರಿದಂತೆ ಮೂವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದ್ದು, ಅಪಘಾತ ಪ್ರಕರಣವು ಇದೀಗ ಹೊಸ ತಿರುವು ಪಡೆದುಕೊಳ್ಳುತ್ತಿದೆ.

ನಟ ದರ್ಶನ್ ಕಾರು ಅಪಘಾತ- ಪೊಲೀಸರಿಂದ ಸುಮೊಟೊ ಕೇಸ್..!

ಬೆಳಗಿನ ಜಾವ 3 ಗಂಟೆಗೆ ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ನಟ ದರ್ಶನ್ ಅವರ ಕಾರು ಡಿವೈಡರ್ ಗುದ್ದಿದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ತಡರಾತ್ರಿಯಿಂದಲೇ ಶುರುವಾಗಿದ್ದ ಜಿಟಿ ಜಿಟಿ ಮಳೆ ಪರಿಣಾಮ ಕಾರು ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿರಬಹುದು ಎನ್ನಲಾಗಿತ್ತು.

ನಟ ದರ್ಶನ್ ಕಾರು ಅಪಘಾತ- ಪೊಲೀಸರಿಂದ ಸುಮೊಟೊ ಕೇಸ್..!

ಮೈಸೂರಿನ ಹೊರ ವಲಯದ ಹಿನಕಲ್ ಬಳಿಯ ರಿಂಗ್ ರಸ್ತೆಯಲ್ಲೇ ಈ ಅವಘಡ ಸಂಭವಿಸಿದ್ದು, ಕಾರಿನಲ್ಲಿದ್ದ ನಟ ದರ್ಶನ್, ದೇವರಾಜ್, ಪ್ರಜ್ವಲ್ ದೇವರಾಜ್ ಹಾಗೂ ದರ್ಶನ್ ಆಪ್ತ ಸ್ನೇಹಿತ ರಾಯ್ ಆಂಟೋನಿ ಸೇರಿ ಒಟ್ಟು ನಾಲ್ಕು ಜನ ಈ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು.

ನಟ ದರ್ಶನ್ ಕಾರು ಅಪಘಾತ- ಪೊಲೀಸರಿಂದ ಸುಮೊಟೊ ಕೇಸ್..!

ಬಹುನೀರಿಕ್ಷಿತ ಓಡೆಯ ಸಿನಿಮಾದ ಶೂಟಿಂಗ್ ಪ್ರಕ್ರಿಯೆ ನಿನ್ನೆ ಮೈಸೂರಿನಲ್ಲಿ ಮುಗಿದಿತ್ತು. ಇಂದಿನಿಂದ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಕಾರಣ ರಾತ್ರಿ ತಮ್ಮ ಆಪ್ತರೊಬ್ಬರ ಮನೆಯಲ್ಲಿ ಊಟ ಮಾಡಿ ಬೆಂಗಳೂರಿನತ್ತ ಬರುತ್ತಿದ್ದಾಗ ವೇಳೆ ಈ ಘಟನೆ ನೆಡೆದಿದೆ.

ನಟ ದರ್ಶನ್ ಕಾರು ಅಪಘಾತ- ಪೊಲೀಸರಿಂದ ಸುಮೊಟೊ ಕೇಸ್..!

ಈ ವೇಳೆ ವೇಗದಲ್ಲಿದ್ದ ಕಾರು ಸಡನ್ ಆಗಿ ಡಿವೈಡರ್‌ಗೆ ಗುದ್ದಿದ್ದು, ನಟ ದರ್ಶನ್ ಅವರ ಬಲಗೈ ನ ಮೂಳೆ ಫ್ರಾಕ್ಚರ್ ಆಗಿದೆ. ಸದ್ಯ ಮೈಸೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದರ್ಶನ್ ಅವರು ಚಿಕಿತ್ಸೆ ಪಡೆಯುತ್ತಿದ್ದು, ಶಸ್ತ್ರ ಚಿಕಿತ್ಸೆ ನಂತರ ಕೈಗೆ ಪ್ಲೇಟ್ ಹಾಕಲಾಗಿದೆ.

ನಟ ದರ್ಶನ್ ಕಾರು ಅಪಘಾತ- ಪೊಲೀಸರಿಂದ ಸುಮೊಟೊ ಕೇಸ್..!

ಎರಡು ವಾರಗಳ ಕಾಲ ವಿಶ್ರಾಂತಿಗೆ ಸೂಚನೆ

ಶಸ್ತ್ರ ಚಿಕಿತ್ಸೆ ನಂತರ ತಮ್ಮ ಆಪ್ತರ ಜೊತೆಗೆ ನಗುತ್ತಲೇ ಮಾತನಾಡಿದ ದರ್ಶನ್ ಅವರು ತನಗೆ ಏನೂ ಆಗಿಯೇ ಇಲ್ಲ ಎನ್ನುವಂತೆ ಪ್ರತಿಕ್ರಿಯೆಸುತ್ತಾ, ಒಂದು ಅಥವಾ ಎರಡು ವಾರದಲ್ಲಿ ಎಲ್ಲಾ ಸರಿ ಹೊಗುತ್ತೆ. ದೇವರ ದಯೆಯಿಂದ ಯಾರಿಗೂ ಅಂತದ್ದೇನೂ ಆಗಿಲ್ಲ ಎಂದಿದ್ದಾರೆ.

ನಟ ದರ್ಶನ್ ಕಾರು ಅಪಘಾತ- ಪೊಲೀಸರಿಂದ ಸುಮೊಟೊ ಕೇಸ್..!

ಈ ಬಗ್ಗೆ ಖಾಸಗಿ ವಾಹಿನಿಯೊಂದಕ್ಕೆ ಮಾತನಾಡಿರುವ ದರ್ಶನ್ ಅವರು ಆತಂಕದಲ್ಲಿರುವ ಅಭಿಮಾನಿಗಳಿಗೆ ಮನವಿಯೊಂದನ್ನು ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಆಸ್ಪತ್ರೆ ಬಳಿ ಬರಬೇಡಿ. ನಮ್ಮಿಂದ ಬೇರೆಯವರಿಗೆ ತೊಂದರೆಯಾಗಬಾರದು ಎಂದಿರುವ ದರ್ಶನ್ ಅವರು ನಾಳೆ ನಾನೇ ನಿಮ್ಮ ಮುಂದೆ ಬರುವೆ ಎಂದಿದ್ದಾರೆ.

MOST READ: ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?

ನಟ ದರ್ಶನ್ ಕಾರು ಅಪಘಾತ- ಪೊಲೀಸರಿಂದ ಸುಮೊಟೊ ಕೇಸ್..!

ಇನ್ನು ದರ್ಶನ್ ಜೊತೆಗಿದ್ದ ದೇವರಾಜ್ ಅವರ ಬೆರಳಿಗೂ ಪೆಟ್ಟು ಬಿದ್ದಿದ್ದು, ಪ್ರಜ್ವಲ್ ದೇವರಾಜ್ ಹಣೆಗೆ ಸಣ್ಣ ಗಾಯವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎನ್ನುವುದೇ ಸಮಾಧಾನಕರ ಸಂಗತಿ.

ನಟ ದರ್ಶನ್ ಕಾರು ಅಪಘಾತ- ಪೊಲೀಸರಿಂದ ಸುಮೊಟೊ ಕೇಸ್..!

ಕಾರು ಚಾಲನೆ ವೇಳೆ ನೀರ್ಲಕ್ಷ್ಯ.!?

ಘಟನೆ ವೇಳೆ ಕಾರು ಚಾಲನೆ ಮಾಡುತ್ತಿದ್ದ ದರ್ಶನ್ ಅವರ ಸ್ನೇಹಿತ ಜಿಟಿ ಜಿಟಿ ಮಳೆ ಮಧ್ಯೆಯು ವೇಗವಾಗಿ ಚಾಲನೆ ಮಾಡುತ್ತಿದ್ದ ಕಾರಣಕ್ಕೆ ಡಿವೈಡರ್‌ಗೆ ಗುದ್ದಿರಬಹುದು ಎನ್ನಲಾಗಿದ್ದು, ಘಟನೆಯ ಪೂರ್ಣ ವಿವರ ಇನ್ನಷ್ಟೇ ತಿಳಿಯಬೇಕಾಗಿದೆ.

ನಟ ದರ್ಶನ್ ಕಾರು ಅಪಘಾತ- ಪೊಲೀಸರಿಂದ ಸುಮೊಟೊ ಕೇಸ್..!

ಪ್ರಕರಣ ಮುಚ್ಚಿ ಹಾಕುವ ಯತ್ನ?

ಅಪಘಾತದ ನಂತರ ಜಖಂಗೊಂಡಿದ್ದ ಆಡಿ ಕಾರನ್ನು ದರ್ಶನ್ ಅವರು ಅಜ್ಞಾತ ಸ್ಥಳದಲ್ಲಿ ಇರಿಸಲು ಯತ್ನಿಸಿದ್ದು, ಕಾರಿನಲ್ಲಿ ನಂಬರ್ ಪ್ಲೇಟ್ ಕೂಡಾ ಇಲ್ಲದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ನಟ ದರ್ಶನ್ ಕಾರು ಅಪಘಾತ- ಪೊಲೀಸರಿಂದ ಸುಮೊಟೊ ಕೇಸ್..!

ಸುಮೊಟೊ ಕೇಸ್ ದಾಖಲು!

ದರ್ಶನ್ ಅವರ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗದ ಕಾರಣ ಮೈಸೂರಿನ ವಿ.ವಿ.ಪುರಂ ಪೊಲೀಸರು ಸುಮೊಟೊ ಕೇಸ್(ಸ್ವಯಂ ಪ್ರೇರಿತ) ದಾಖಲಿಸಿಕೊಂಡು ಘಟನೆ ಕುರಿತು ಮಾಹಿತಿ ಕಲೆಹಾಕುತ್ತಿದ್ದು, ಅಜ್ಞಾತ ಸ್ಥಳದಲ್ಲಿ ಇರಿಸಲಾಗಿದ್ದ ಕಾರುನ್ನು ಪೊಲೀಸ್ ವಶಕ್ಕೆ ತಗೆದುಕೊಳ್ಳಲಾಗಿದೆ.

ನಟ ದರ್ಶನ್ ಕಾರು ಅಪಘಾತ- ಪೊಲೀಸರಿಂದ ಸುಮೊಟೊ ಕೇಸ್..!

ಇನ್ನು ದರ್ಶನ್ ಚಾಲನೆ ಮಾಡುತ್ತಿದ್ದ ಆಡಿ ಕ್ಯೂ 7 ಕಾರಿನಲ್ಲಿ ಎಲ್ಲಾ ಮಾದರಿಯ ಗರಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳಿದ್ದು, ಅಪಘಾತದ ವೇಳೆ ದರ್ಶನ್ ಅವರು ಗಂಭೀರ ಗಾಯಗಳಿಂದ ಪಾರಾಗಲು ಇವು ಕೂಡಾ ಸಹಕಾರಿಯಾಗಿದ್ದವು ಎನ್ನುಬಹುದು.

MOST READ: ಬರ್ತ್ ಡೇ ಸ್ಪೆಷಲ್- ನಟ ದರ್ಶನ್‌ಗೆ ಸಿಕ್ತು ಭರ್ಜರಿ ಉಡುಗೊರೆ..!!

ನಟ ದರ್ಶನ್ ಕಾರು ಅಪಘಾತ- ಪೊಲೀಸರಿಂದ ಸುಮೊಟೊ ಕೇಸ್..!

ಒಟ್ಟಿನಲ್ಲಿ ಆಗಬಹುದಾದ ದುರಂತವೊಂದರಿಂದ ದರ್ಶನ್, ದೇವರಾಜ್ ಮತ್ತು ಪ್ರಜ್ವಲ್ ದೇವರಾಜ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ರಾತ್ರಿ ವೇಳೆ ಕಾರಿನಲ್ಲಿ ಪ್ರಯಾಣ ಮಾಡುವಾಗ ಮುನ್ನೆಚ್ಚೆರಿಕೆ ಕ್ರಮಗಳೊಂದಿಗೆ ಚಾಲನೆ ಮಾಡುವುದು ಒಳಿತು.

Most Read Articles

Kannada
Read more on accident off beat
English summary
Kannada actors darshan, devraj and prajwal meet with accident, sustain injuries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more