ಹೊಸ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್ ಕಾರಿನ ಈ ವೇರಿಯಂಟ್‍ಗೆ ಮಾತ್ರ ಭಾರಿ ಬೇಡಿಕೆಯಂತೆ..!!
ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಹೀಂದ್ರಾ ಏಪ್ರಿಲ್ ತಿಂಗಳಿನಲ್ಲಿ ತಮ್ಮ ಜನಪ್ರಿಯ ಎಕ್ಸ್‌ಯುವಿ500 ಕಾರಿನ ಫೇಸ್‍ಲಿಫ್ಟ್ ಮಾದರಿಯನ್ನು ಅನ್ನು ಬಿಡುಗಡೆಗೊಳಿಸಿತ್ತು.
ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಹೀಂದ್ರಾ ಏಪ್ರಿಲ್ ತಿಂಗಳಿನಲ್ಲಿ ತಮ್ಮ ಜನಪ್ರಿಯ ಎಕ್ಸ್‌ಯುವಿ500 ಕಾರಿನ ಫೇಸ್‍ಲಿಫ್ಟ್ ಮಾದರಿಯನ್ನು ಅನ್ನು ಬಿಡುಗಡೆಗೊಳಿಸಿತ್ತು. ಇದೀಗ ಮಾಹಿತಿಗಳ ಪ್ರಕಾರ ಲಭ್ಯವಿರುವ ಆರು ವೇರಿಯಂಟ್ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರುಗಳಲ್ಲಿ ಟಾಪ್ ಎಂಡ್ ವೇರಿಯಂಟ್ ಆದ W11 (O) ಎಂಬ ವೇರಿಯಂಟ್‍ಗೆ ಮಾತ್ರ ಬೇಡಿಕೆಯು ಹೆಚ್ಚಿದೆ ಎನ್ನಲಾಗಿದೆ.

ಹೊಸ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್ ಟಾಪ್ ಎಂಡ್ ವೇರಿಯಂಟ್ W11 (O) ಕಾರು 2.2 ಲೀಟರ್ ಎಮ್‍ಹವ್ಕ್ ಡೀಸೆಲ್ ಎಂಜಿನ್ ಸಹಾಯದಿಂದ 155ಬಿಹೆಚ್‍ಪಿ ಮತ್ತು 360ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಅಥವ ಆಟೊಮ್ಯಾಟಿಕ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್ ಟಾಪ್ ಎಂಡ್ ವೇರಿಯಂಟ್ W11 (O) ಕಾರು ಮುಂಬೈನ ಎಕ್ಸ್ ಶೋರಂ ಪ್ರಕಾರ ರೂ 16.68 ಲಕ್ಷಕ್ಕೆ ಮ್ಯಾನುವಲ್ ವರ್ಷನ್ ಮತ್ತು ಆಟೋಮ್ಯಾಟಿಕ್ ವರ್ಷನ್ ಕಾರುಗಳನ್ನು ರೂ 17.88 ಲಕ್ಷಕ್ಕೆ ಮಾರಾಟವಾಗುತ್ತಿದೆ.

ಡೀಲರ್‍ಗಳ ಪ್ರಕಾರ ಹೊಸ ಎಕ್ಸ್‌ಯುವಿ500 ಕಾರು ಹಳೆಯ ಮಾದರಿಯ ಎಕ್ಸ್‌ಯುವಿ500 ಕಾರಿಗಿಂತ ಹೆಚ್ಚು ಬೇಡಿಕೆಯನ್ನು ಪಡೆಯುತಿದ್ದು, ನಗರ ಪ್ರದೇಶಗಳಲ್ಲಿ ಮತ್ತು ಇನ್ನಿತರೆ ಪ್ರದೇಶದಲ್ಲಿನ ಡೀಲರ್‍ಗಳ ಬಳಿ ಅಧಿಕವಾಗಿ ಮಾರಾಟವಾಗುತ್ತಿದೆ ಎನ್ನಲಾಗಿದೆ.

ನಗರ ಪ್ರದೇಶದಲ್ಲಿನ ಡೀಲರ್‍ಗಳ ಬಳಿ ಹಿಂದಿನ ತಲೆಮಾರಿನ ಎಕ್ಸ್‌ಯುವಿ500 ಕಾರು 30 ಯೂನಿಟ್ ಬುಕ್ ಆಗುತ್ತಿತ್ತು. ಆದರೆ ಹೊಸ ಎಕ್ಸ್‌ಯುವಿ500 ಫೇಸ್ಲಿಫ್ಟ್ ಕಾರುಗಳು ಪ್ರತೀ ಡೀಲರ್‍ಗಳ ಹತ್ತಿರ ಸುಮಾರು 35 ಬುಕ್ಕಿಂಗ್‍ಗಳು ಬರುತ್ತಿದೆ. ಇನ್ನುಳಿದ ಡೀಲರ್‍ಗಳ ಬಳಿ 8 ರಿಂದ 15ಕ್ಕೆ ಬುಕ್ಕಿಂಗ್ ಸಂಖ್ಯೆಯು ಹೆಚ್ಚಿದೆ.

ಟಾಪ್ ಎಂಡ್ ಸ್ಪೆಕ್ ಮಹೀಂದ್ರಾ ಎಕ್ಸ್‌ಯುವಿ500 W11 (O) ಕಾರು ಎಲೆಕ್ಟ್ರಿಕ್ ಸನ್‍ರೂಫ್, ವಿದ್ಯುತ್ ಮೂಲಕ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್, ಸ್ಮಾರ್ಟ್‍ವಾಚ್ ಕನೆಕ್ಟಿವಿಟಿ ಮತ್ತು 18 ಇಂಚಿನ ಡೈಮಂಡ್ ಕಟ್ ಅಲಾಯ್ ಚಕ್ರಗಳನ್ನು ಪಡೆದುಕೊಂಡಿವೆ.

ಇದಲ್ಲದೆ ಈ ಕಾರು 7 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಆಂಡ್ರಾಯ್ಡ್ ಆಟೋ ಹೊಂದಿರುವ ಸ್ಮಾರ್ಟ್‍ಫೋನ್ ಕನೆಕ್ಟಿವಿಟಿ, ಬ್ರೇಕ್ ರೀಜೆನರೇಶನ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ಪ್ಯಾಸಿವ್ ಕೀಲೆಸ್ ಎಂಟ್ರಿ ಎಂಬ ವೈಶಿಷ್ಟ್ಯತೆಗಳನ್ನು ಕೂಡ ಅಳವಡಿಸಲಾಗಿದೆ.

ಹೊಸ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್ ಕಾರು ಕ್ರಿಮ್‍ಸನ್ ರೆಡ್, ಮಿಸ್ಟಿಕ್ ಕಾಪರ್, ಆಪ್ಯುಲೆಂಟ್ ಪರ್ಪಲ್, ವಾಲ್ಕೊನೊ ಬ್ಲಾಕ್, ಲೇಕ್ ಸೈಡ್ ಬ್ರೌನ್, ಪರ್ಲ್ ವೈಟ್ ಮತ್ತು ಮೂನ್‍ಡಸ್ಟ್ ಸಿಲ್ವರ್ ಎಂಬ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಡೈವ್‍ಸ್ಪಾರ್ಕ್ ಅಭಿಪ್ರಾಯ
ಮಹೀಂದ್ರಾ ಎಕ್ಸ್‌ಯುವಿ500 ಫೇಸ್ಲಿಫ್ಟ್ ಕಾರುಗಳು ಹಿಂದಿನ ತಲೆಮಾರಿಗಿಂತ ಹೆಚ್ಚಾಗಿ ಮಾರಾಟವಾಗುತ್ತಿದ್ದು, ಹೊಸ ತಲೆಮಾರಿನ ಕಾರುಗಳನ್ನು ಶೋರಂಗಳಲ್ಲಿ ಪ್ರದರ್ಶಿಸುವ ಮೂಲಕ ಬುಕ್ಕಿಂಗ್ ಸಂಖ್ಯೆಯು ಎರಡರಷ್ಟು ಹೆಚ್ಚಾಗಿದೆ ಎಂದು ಡೀಲರ್‍ಗಳು ಹೇಳಿಕೊಂಡಿದ್ದಾರೆ.


Click it and Unblock the Notifications