ಜೀಪ್ ಕಂಪಾಸ್ ಮಾರಾಟವನ್ನು ಹಿಂದಿಕ್ಕಿದ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್

ಜೀಪ್ ಕಂಪಾಸ್ ಮಾರಾಟವನ್ನು ಹಿಂದಿಕ್ಕಿದ ಎಕ್ಸ್‌ಯುವಿ500 ಫೇಸ್‌ಲಿಫ್ಟ್

By Praveen Sannamani

ಜೀಪ್ ಕಂಪಾಸ್ ಸಂಸ್ಥೆಯು ಕಳೆದ ವರ್ಷವಷ್ಟೇ ದೇಶಿಯವಾಗಿ ನಿರ್ಮಾಣ ಮಾಡಲಾದ ಕಂಪಾಸ್ ಎಸ್‌ಯುವಿಗಳನ್ನು ಪರಿಚಯಿಸಿದ್ದು, ಭಾರತದ ಜನಪ್ರಿಯ ಮಧ್ಯಮ ಕ್ರಮಾಂಕದ ಪ್ರಮುಖ ಎಸ್‌ಯುವಿಗಳಿಗೆ ಪೈಪೋಟಿ ನೀಡುತ್ತಿದೆ. ಹೀಗಿರುವ ಹೊಸ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಿರುವ ಎಕ್ಸ್‌ಯುವಿ500 ಫೇಸ್‌ಲಿಫ್ಟ್ ಕಾರುಗಳು ಜುಲೈ ಅವಧಿಯಲ್ಲಿನ ಕಂಪಾಸ್ ಕಾರುಗಳ ಮಾರಾಟವನ್ನ ಹಿಂದಿಕ್ಕುವ ಮೂಲಕ ಎಸ್‌ಯುವಿ ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ.

ಜೀಪ್ ಕಂಪಾಸ್ ಮಾರಾಟವನ್ನು ಹಿಂದಿಕ್ಕಿದ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್

ಸದ್ಯ ಮಾರುಕಟ್ಟೆಯಲ್ಲಿ ಜೀಪ್ ಕಂಪಾಸ್ ಆರಂಭಿಕ ಕಾರು ಮಾದರಿಗಳಿಗೆ ಹಾಗೂ ಮಹೀಂದ್ರಾ ಎಕ್ಸ್‌ಯುವಿ ಫೇಸ್‌ಲಿಫ್ಟ್ ಕಾರುಗಳಿಗೆ ತೀವ್ರ ಪೈಪೋಟಿ ಇದ್ದು, ಜೀಪ್ ಕಂಪಾಸ್ ಆರಂಭಿಕ ಕಾರುಗಳ ಖರೀದಿ ಯೋಜನೆಯಲ್ಲಿರುವ ಗ್ರಾಹಕರು ಇದೀಗ ಎಕ್ಸ್‌ಯುವಿ500 ಫೇಸ್‌ಲಿಫ್ಟ್ ಖರೀದಿಯತ್ತ ಮುಖಮಾಡಿರುವುದು ಜುಲೈ ಅವಧಿಯಲ್ಲಿ ಕಾರು ಮಾರಾಟದ ಸಂಖ್ಯೆಯನ್ನು ಗಮನಿಸಿದಾಗ ಅದರ ಜನಪ್ರಿಯತೆ ಅರ್ಥವಾಗುತ್ತೆ.

ಜೀಪ್ ಕಂಪಾಸ್ ಮಾರಾಟವನ್ನು ಹಿಂದಿಕ್ಕಿದ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್

ಜುಲೈ ಅವಧಿಯಲ್ಲಿ ಜೀಪ್ ಸಂಸ್ಥೆಯು 1,201 ಕಾರುಗಳನ್ನು ಮಾರಾಟ ಮಾಡಿದ್ದರೇ ಅದೇ ಅವಧಿಯಲ್ಲಿ ಮಹೀಂದ್ರಾ ಸಂಸ್ಥೆಯು 2,766 ಎಕ್ಸ್‌ಯುವಿ500 ಫೇಸ್‌ಲಿಫ್ಟ್ ಕಾರುಗಳನ್ನ ಮಾರಾಟ ಮಾಡುವ ಪ್ರಿಮಿಯಂ ಎಸ್‌ಯುವಿ ವಿಭಾಗದಲ್ಲಿ ಮುನ್ನಡೆ ಸಾಧಿಸಿದೆ.

ಜೀಪ್ ಕಂಪಾಸ್ ಮಾರಾಟವನ್ನು ಹಿಂದಿಕ್ಕಿದ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್

ಕಾರಿನ ಗುಣಮಟ್ಟ ಹಾಗೂ ಕಾರುಗಳ ವಿಚಾರಕ್ಕೆ ಬಂದಲ್ಲಿ ಜೀಪ್ ಕಂಪಾಸ್ ಕಾರುಗಳು ಮಹೀಂದ್ರಾ ಎಕ್ಸ್‌ಯುವಿ500 ಕಾರುಗಳಿಂತಲೂ ತುಸು ದುಬಾರಿ ಎನ್ನಿಸಿದರೂ, ಕಂಪಾಸ್ ಕಾರುಗಳ ಮಧ್ಯಮ ಕ್ರಮಾಂಕದ ಕಾರುಗಳನ್ನ ಖರೀದಿಸುವವರು ಮಹೀಂದ್ರಾ ಎಕ್ಸ್‌ಯುವಿ500 ಟಾಪ್ ಎಂಡ್ ಕಾರನ್ನೇ ಆಯ್ಕೆ ಮಾಡಬಹುದಾದ ಅವಕಾಶವಿದೆ.

ಜೀಪ್ ಕಂಪಾಸ್ ಮಾರಾಟವನ್ನು ಹಿಂದಿಕ್ಕಿದ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್

ಇನ್ನು ಕಳೆದ ಏಪ್ರಿಲ್‌ನಲ್ಲಿ ಹೊಸ ವಿನ್ಯಾಸಗಳೊಂದಿಗೆ ಬಿಡುಗಡೆಗೊಂಡಿರುವ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರುಗಳು ದೆಹಲಿ ಎಕ್ಸ್‌ಶೋರಂ ಪ್ರಕಾರ 12.32 ಲಕ್ಷದಿಂದ ಪ್ರಾರಂಭಿಕವಾಗಿ ಹಾಗೂ ಟಾಪ್ ಎಂಡ್ ಮಾದರಿಯು ರೂ. 17.88 ಲಕ್ಷ ಬೆಲೆಯನ್ನು ಪಡೆದಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಒಟ್ಟು ಆರು ವೇರಿಯಂಟ್‍‍ಗಳಲ್ಲಿ ಖರೀದಿಗೆ ಲಭ್ಯವಿದೆ.

ಜೀಪ್ ಕಂಪಾಸ್ ಮಾರಾಟವನ್ನು ಹಿಂದಿಕ್ಕಿದ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್

ಕಾರಿನ ವಿನ್ಯಾಸ

ಹೊಸ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರುಗಳು ಹೊಸ ವಿನ್ಯಾಸದ ಹೆಡ್‍‍ಲ್ಯಾಂಪ್ ಮತ್ತು ಟೈಲ್‍‍ಲ್ಯಾಂಪ್ ಅನ್ನು ಪಡೆದಿದ್ದು, ಎಲ್ಇಡಿ ಡಿಎಲ್ಆರ್ ಗಳನ್ನು ಅಳವಡಿಸಲಾಗಿದೆ. ಮುಂಭಾಗದ ಗ್ರೀಲ್ ಹಾಗು ಬಂಪರ್‍‍ಗಳು ಈ ಹಿಂದಿಗಿಂತಲೂ ಅಗಲವಾಗಿಯು ಮತ್ತೆ ಆಕರ್ಷಕ ಡಿಸೈನ್ ಪಡೆದಿವೆ.

ಜೀಪ್ ಕಂಪಾಸ್ ಮಾರಾಟವನ್ನು ಹಿಂದಿಕ್ಕಿದ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್

ಎಂಜಿನ್ ಸಾಮರ್ಥ್ಯ

ಹೊಸ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರುಗಳು ಆರನೇ ತಲೆಮಾರಿನ 2.2-ಲೀಟರ್ ಎಮ್‍‍ಹ್ವಾಕ್ ಡೀಸೆಲ್ ಎಂಜಿನ್ ಸಹಾಯದಿಂದ 155-ಬಿಹೆಚ್‍ಪಿ ಹಾಗು 360-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು 6 ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‍‍ನೊಂದಿಗೆ ಜೋಡಿಸಲಾಗಿದೆ. ಜೊತೆಗೆ ಪೆಟ್ರೋಲ್ ಮಾದರಿಗಳು ಕೂಡಾ 140-ಬಿಹೆಚ್‍‍ಯನ್ನು ಉತ್ಪಾದಿಸುತ್ತವೆ.

ಜೀಪ್ ಕಂಪಾಸ್ ಮಾರಾಟವನ್ನು ಹಿಂದಿಕ್ಕಿದ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್

ಇದರಲ್ಲಿ ವಿಶೇಷ ಅಂದ್ರೆ ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರುಗಳು ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಸ್ಮಾರ್ಟ್‍ ವಾಚ್ ಕನೆಕ್ಟಿವಿಟಿಯನ್ನು ಪಡೆದಿರುವ ಎಸ್‍ಯುವಿ ಕಾರಾಗಿದ್ದು, ಇದರಿಂದ ಕಾರಿನಲ್ಲಿನ ಆಡಿಯೋ, ಎಸಿ, ಬಾಗಿಲುಗಳು, ಎಮರ್ಜನ್ಸಿ ಅಸ್ಸಿಸ್ಟ್ಸ್, ಲೊಕೇಶನ್ ಸರ್ವೀಸ್‍‍ಗಳಂತಹ ವೈಶಿಷ್ಟ್ಯತೆಗಳನ್ನು ನಿಯಂತ್ರಿಸಬಹುದಾಗಿದೆ.

ಜೀಪ್ ಕಂಪಾಸ್ ಮಾರಾಟವನ್ನು ಹಿಂದಿಕ್ಕಿದ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್

ಇದಲ್ಲದೇ ಆ್ಯಂಡ್ರಾಯ್ಡ್ ಆಟೋ ಹಾಗು ಇಕೊ ಸೆನ್ಸ್ ಆಯ್ಕೆಗಳುಳ್ಳ ಏಳು ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಪಡೆದಿದ್ದು, ಮಹಿಂದ್ರಾ ಸಂಸ್ಥೆಯು ಅರ್ಕ್‍‍ಮಾರ್ಕ್‍‍ನ ಆಡಿಯೊ, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಅನ್ನು ಕೂಡಾ ಪಡೆದುಕೊಂಡಿದೆ.

ಜೀಪ್ ಕಂಪಾಸ್ ಮಾರಾಟವನ್ನು ಹಿಂದಿಕ್ಕಿದ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್

ಹಾಗಿಯೇ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರುಗಳಲ್ಲಿ ಪ್ರಯಾಣಿಕರ ಸುರಕ್ಷೆತೆಗಾಗಿ ಆರು ಏರ್‍‌ಬ್ಯಾಗ್‍‍ಗಳು, ಎಬಿಎಸ್‍‍ನೊಂದಿಗೆ ಇಬಿಡಿ, ಡಿಸ್ಕ್ ಬ್ರೇಕ್, ಹಿಲ್ ಹೋಲ್ಡ್ ಅಸ್ಸಿಸ್ಟ್, ಹಿಲ್ ಡೆಸ್ಸೆಂಟ್ ಮತ್ತು ಬೇರೆ ಯಾವ ಕಾರುಗಳಲ್ಲಿ ಕಾಣಲಾಗದಂತಹ ಕ್ಲಾಸ್ ಎಮರ್ಜೆನ್ಸಿ ಕಾಲ್ ಸಿಸ್ಟಂ ವೈಶಿಷ್ಟ್ಯತೆಗಳನ್ನು ಸಹ ಇದರಲ್ಲಿ ಅಳವಡಿಸಿರುವುದು ಪ್ರಿಮಿಯಂ ಎಸ್‌ಯುವಿ ಪ್ರಿಯರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎನ್ನಬಹುದು.

Most Read Articles

Kannada
Read more on auto news mahindra jeep suv
English summary
Mahindra XUV500 July Sales Report.
Story first published: Tuesday, August 7, 2018, 19:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X