ಸ್ಪಾಟ್ ಟೆಸ್ಟಿಂಗ್ ವೇಳೆ ಕಪ್ಪು ಬಣ್ಣದಲ್ಲಿ ಕಾಣಿಸಿಕೊಂಡ ಮಹಿಂದ್ರಾ ಎಕ್ಸ್‌ಯುವಿ700 ಕಾರು..
ಮೊನ್ನೆಯಷ್ಟೆ ಭಾರತದಲ್ಲಿ ಲಗ್ಗೆಯಿಟ್ಟ ಮಹಿಂದ್ರಾ ಎಕ್ಸ್‌ಯುವಿ 500 ಕಾರು ಮಾರುಕೆಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಇದೀಗ ಮಹಿಂದ್ರಾ ಸಂಸ್ಥೆಯು ತಮ್ಮ ಹೊಸ ಎಕ್ಸ್‌ಯುವಿ700 ಕಾರನ್ನು ಬಿಡುಗಡೆಗೊಳಿಸಲ್ಲು ಸಜ್ಜುಗೊಳಿಸುತ್ತಿದೆ.
ಮೊನ್ನೆಯಷ್ಟೆ ಭಾರತದಲ್ಲಿ ಲಗ್ಗೆಯಿಟ್ಟ ಮಹಿಂದ್ರಾ ಎಕ್ಸ್‌ಯುವಿ 500 ಕಾರು ಮಾರುಕೆಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಇದೀಗ ಮಹಿಂದ್ರಾ ಸಂಸ್ಥೆಯು ತಮ್ಮ ಹೊಸ ಎಕ್ಸ್‌ಯುವಿ700 ಕಾರನ್ನು ಬಿಡುಗಡೆಗೊಳಿಸಲ್ಲು ಸಜ್ಜುಗೊಳಿಸುತ್ತಿದ್ದು, ಈ ನಿಟ್ಟಿನಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.

ಈಗಾಗಲೆ ಹಲವಾರು ಬಾರಿ ಭಾರತೀಯ ರಸ್ಥೆಗಳಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣೊಸಿಕೊಂಡ ಎಕ್ಸ್‌ಯುವಿ700 ಕಾರು, ಇದೀಗ ಹೊಸದಾಗಿ ಕಪ್ಪು ಬಣ್ಣದಲ್ಲಿ ಕಾಣಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಈ ನಿಟ್ಟಿನಲ್ಲಿ ಬಿಡುಗಡೆಗೊಳ್ಳಲಿರುವ ಹೊಸ ಎಕ್ಸ್‌ಯುವಿ700 ಕಾರಿನ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಮಹೀಂದ್ರಾ ಸಂಸ್ಥೆಯು ಇದೇ ವರ್ಷದ ನಾಲ್ಕನೆಯ ತ್ರೈಮಾಸಿಕ ಅವದಿಯಲ್ಲಿ ಎಕ್ಸ್‌ಯುವಿ700 ಕಾರು ಮಾದರಿಯನ್ನು ಬಿಡುಗಡೆಗಡೆ ಮಾಡಲಿದ್ದು, ಸದ್ಯ ಭಾರತೀಯ ಮಾರುಕಟ್ಟೆಗಳಲ್ಲಿ ಮಧ್ಯಮ ಗಾತ್ರದ ಎಸ್‌ಯುವಿ ಆವೃತ್ತಿಗಳಿಗೆ ವಿಶೇಷ ಬೇಡಿಕೆಯಿದೆ. ಇದೇ ಉದ್ದೇಶದಿಂದ ಬೃಹತ್ ಯೋಜನೆ ರೂಪಿಸಿರುವ ಮಹೀಂದ್ರಾ ಸಂಸ್ಥೆಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಎಕ್ಸ್‌ಯುವಿ700 ಕಾರನ್ನು ಪರಿಚಯಿಸಲು ಮುಂದಾಗಿದೆ.

ದಕ್ಷಿಣ ಕೊರಿಯಾದ ಮೂಲದ ಸ್ಯಾಂಗ್‌ಯಾಂಗ್ ಜೊತೆ ಕೈಜೋಡಿಸಿರುವ ಮಹೀಂದ್ರಾ ಸಂಸ್ಥೆಯು ಸುಧಾರಿತ ಮಾದರಿಯ ಎಕ್ಸ್‌ಯುವಿ700 ಅಭಿವೃದ್ಧಿಗೊಳಿಸಿದ್ದು, ಕ್ವಾಡ್ ಫ್ರೇಮ್ ತಂತ್ರಜ್ಞಾನದಡಿ ಈ ಕಾರನ್ನು ನಿರ್ಮಾಣ ಮಾಡಲಾಗಿದೆ.

ಇದರಿಂದ ಕಾರಿನ ತೂಕವು ಸಾಕಷ್ಟು ಹಗುರವಾಗಿದರಲ್ಲದೇ ಎಂಜಿನ್ ಮತ್ತು ಇಂಧನ ಕಾರ್ಯಕ್ಷಮತೆ ಹೆಚ್ಚಿದ್ದು, ಎಸ್‌ಯುವಿ ಪ್ರಿಯರಿಗೆ ಉತ್ತಮ ಚಾಲನಾ ಅನುಭವ ನೀಡಲಿದೆ.

ಮಹೀಂದ್ರಾ ಬಿಡುಗಡೆ ಮಾಡಿರುವ ಟೀಸರ್ ಪ್ರಕಾರ ಎಕ್ಸ್‌ಯುವಿ700 ಕಾರು ಮಾದರಿಯು 7 ಸೀಟರ್ ಮಾದರಿಯಾಗಿದ್ದು, ಆಪ್ ರೋಡ್ ಕೌಶಲ್ಯದೊಂದಿಗೆ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, 8 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಪ್ರಿಮಿಯಂ ಲೆದರ್ ಸೀಟುಗಳು, 360 ಡಿಗ್ರಿ ಕ್ಯಾಮೆರಾ ವ್ಯವಸ್ಥೆ ಹೊಂದಿದೆ.

ಇದಷ್ಟೇ ಅಲ್ಲದೇ ಎಲೆಕ್ಟ್ರಿಕ್ ಸನ್ ರೂಫ್, ಪವರ್ಡ್ ಟೈಲ್‌ಗೆಟ್ ಸೇರಿದಂತೆ ಅತ್ಯಾಧುನಿಕ ಸುರಕ್ಷಾ ಸೌಲಭ್ಯಗಳನ್ನು ಹೊಂದಿರಲಿದ್ದು, ಎಸ್‌ಯುವಿ ಕಾರು ಮಾದರಿಗಳಲ್ಲಿ ಹೊಸ ಟ್ರೆಂಡ್ ಸೃಷ್ಟಿಸುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ ಎನ್ನಬಹುದು.

ಎಂಜಿನ್ ಸಾಮರ್ಥ್ಯ
ಆಫ್ ರೋಡಿಂಗ್ ಕೌಶಲ್ಯ ಹೊಂದಿರುವ ಎಕ್ಸ್‌ಯುವಿ700 ಕಾರುಗಳು 2.2-ಲೀಟರ್ ಯುರೊ 6 ಡೀಸೆಲ್ ಎಂಜಿನ್ ಹೊಂದಿರಲಿದ್ದು, 7-ಸ್ಪೀಡ್ ಮರ್ಸಿಡಿಸ್ ಬೆಂಝ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 178- ಬಿಎಚ್‌ಪಿ ಮತ್ತು 420-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು.

ಜೊತೆಗೆ ಪೆಟ್ರೋಲ್ ಆವೃತ್ತಿಗಳು ಸಹ ಲಭ್ಯವಿರಲಿದ್ದು, 2 ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್‌ನೊಂದಿಗೆ 222-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದಿಸಲಿವೆ ಎಂದು ಹೇಳಲಾಗಿದೆ.

ಬೆಲೆ (ಅಂದಾಜು)
ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಎಕ್ಸ್‌ಯುವಿ700 ಕಾರುಗಳು ಬೆಲೆಯು22 ಲಕ್ಷದಿಂದ 25 ಲಕ್ಷದ ತನಕ ಇರಬಹುದೆಂದು ಅಂದಾಜಿಸಲಾಗಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ ಸದ್ಯ ಮಹೀಂದ್ರಾ ನಿರ್ಮಾಣದ ಕಾರುಗಳಲ್ಲಿ ಎಕ್ಸ್‌ಯುವಿ 500 ಕಾರು ಮಾದರಿಗಳೇ ಹೈ ಎಂಡ್ ಕಾರು ಆವೃತ್ತಿಯಾಗಿದ್ದು, ಹೆಚ್ಚಿನ ಗುಣಮಟ್ಟ ಮತ್ತು ಆಪ್ ರೋಡ್ ಕೌಶಲ್ಯ ಭರಿತ ಕಾರು ಮಾದರಿ ಪರಿಚಯಿಸುವ ಉದ್ದೇಶದಿಂದ ಎಕ್ಸ್‌ಯುವಿ 700 ಆವೃತ್ತಿಯನ್ನು ಅಭಿವೃದ್ಧಿಗೊಳಿಸಲಾಗಿದೆ.

ಇನ್ನು ಮಾರುಕಟ್ಟೆಗೆ ಹೊಸದಾಗಿ ಬಿಡುಗಡೆಗೊಳ್ಳುವ ಐಷಾರಾಮಿ ಮಹಿಂದ್ರಾ ಎಕ್ಸ್‌ಯುವಿ700 ಕಾರುಗಳು ಟೊಯೊಟಾ ಫಾರ್ಚುನರ್ ಮತ್ತು ಫೋರ್ಡ್ ಎಂಡೀವರ್ ಎಸ್‍ಯುವಿ ಕಾರುಗಳಿಗೇ ಪೈಪೋಟಿಯನ್ನು ನೀಡಲಿದೆ.
ಕಪ್ಪು ಬಣ್ಣದಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಕಾರಿನ ವೀಡಿಯೊ ಇಲ್ಲಿದೆ ನೋಡಿ..


Click it and Unblock the Notifications








