ಮಹೀಂದ್ರಾ ಹೈ ಎಂಡ್ ಕಾರು ಎಕ್ಸ್‌ಯುವಿ 700 ಕಾರು ಹೇಗಿರಲಿದೆ ಗೊತ್ತಾ?

ಟೊಯೊಟಾ ಫಾರ್ಚೂನರ್, ಫೋರ್ಡ್ ಎಂಡೀವರ್ ಹಿಂದಿಕ್ಕಲು ಸಜ್ಜುಗೊಳ್ಳುತ್ತಿರುವ ಮಹೀಂದ್ರಾ ಸಂಸ್ಥೆಯು ಸದ್ಯ ಎಕ್ಸ್‌ಯುವಿ 700 ಕಾರು ಮಾದರಿಯನ್ನು ಹೊರತರುತ್ತಿದೆ.

By Praveen

Recommended Video

Auto Rickshaw Explodes In Broad Daylight

ಟೊಯೊಟಾ ಫಾರ್ಚೂನರ್, ಫೋರ್ಡ್ ಎಂಡೀವರ್ ಹಿಂದಿಕ್ಕಲು ಸಜ್ಜುಗೊಳ್ಳುತ್ತಿರುವ ಮಹೀಂದ್ರಾ ಸಂಸ್ಥೆಯು ಸದ್ಯ ಎಕ್ಸ್‌ಯುವಿ 700 ಕಾರು ಮಾದರಿಯನ್ನು ಹೊರತರುತ್ತಿದ್ದು, ಫೆಬ್ರುವರಿಯಿಂದ ಆರಂಭವಾಗಲಿರುವ ಬಹುನೀರಿಕ್ಷಿತ 2018ರ ಆಟೋ ಎಕ್ಸ್ ಪೋದಲ್ಲಿ ಕಾರನ್ನು ಪ್ರದರ್ಶನ ಮಾಡಲಿದೆ.

ಮಹೀಂದ್ರಾ ಹೈ ಎಂಡ್ ಕಾರು ಎಕ್ಸ್‌ಯುವಿ 700 ಕಾರು ಹೇಗಿರಲಿದೆ ಗೊತ್ತಾ?

ಸದ್ಯ ಭಾರತೀಯ ಮಾರುಕಟ್ಟೆಗಳಲ್ಲಿ ಮಧ್ಯಮ ಗಾತ್ರದ ಎಸ್‌ಯುವಿ ಆವೃತ್ತಿಗಳಿಗೆ ವಿಶೇಷ ಬೇಡಿಕೆಯಿದ್ದು, ಇದೇ ಉದ್ದೇಶದಿಂದ ಬೃಹತ್ ಯೋಜನೆ ರೂಪಿಸಿರುವ ಮಹೀಂದ್ರಾ ಸಂಸ್ಥೆಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಎಕ್ಸ್‌ಯುವಿ 700 ಕಾರನ್ನು ಪರಿಚಯಿಸಲು ಮುಂದಾಗಿದೆ.

ಮಹೀಂದ್ರಾ ಹೈ ಎಂಡ್ ಕಾರು ಎಕ್ಸ್‌ಯುವಿ 700 ಕಾರು ಹೇಗಿರಲಿದೆ ಗೊತ್ತಾ?

ಇದಕ್ಕಾಗಿಯೇ ಹೊಸ ಕಾರಿನ ಕುರಿತಾದ ಟೀಸರ್ ಒಂದನ್ನು ಬಿಡುಗಡೆ ಮಾಡಿರುವ ಮಹೀಂದ್ರಾ ಸಂಸ್ಥೆಯು ತನ್ನ ಟಾಪ್ ಎಂಡ್ ಕಾರು ಆವೃತ್ತಿ ಬಗ್ಗೆ ಕುತೂಹಲ ಹುಟ್ಟುಹಾಕಿದ್ದು, ಜನಪ್ರಿಯ ಫಾರ್ಚೂನರ್, ಎಂಡೀವರ್‌ಗೆ ತೀವ್ರ ಸ್ಪರ್ಧಿ ಒಡ್ಡವುದರಲ್ಲಿ ಯಾವುದೇ ಸಂದೇಹವಿಲ್ಲ.

ಮಹೀಂದ್ರಾ ಹೈ ಎಂಡ್ ಕಾರು ಎಕ್ಸ್‌ಯುವಿ 700 ಕಾರು ಹೇಗಿರಲಿದೆ ಗೊತ್ತಾ?

ಮಹೀಂದ್ರಾ ಬಿಡುಗಡೆ ಮಾಡಿರುವ ಟೀಸರ್‌ ಪ್ರಕಾರ ಎಕ್ಸ್‌ಯುವಿ 700 ಕಾರು ಮಾದರಿಯು 7 ಸೀಟರ್ ಮಾದರಿಯಾಗಿದ್ದು, ಆಪ್ ರೋಡ್ ಕೌಶಲ್ಯದೊಂದಿಗೆ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಲೆಟೆಸ್ಟ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಪ್ರಿಮಿಯಂ ಲೆದರ್ ಸೀಟುಗಳು, 360 ಡಿಗ್ರಿ ಕ್ಯಾಮೆರಾ ವ್ಯವಸ್ಥೆ ಹೊಂದಿದೆ.

ಮಹೀಂದ್ರಾ ಹೈ ಎಂಡ್ ಕಾರು ಎಕ್ಸ್‌ಯುವಿ 700 ಕಾರು ಹೇಗಿರಲಿದೆ ಗೊತ್ತಾ?

ಇದಷ್ಟೇ ಅಲ್ಲದೇ ಸನ್ ರೂಫ್, ಪವರ್ಡ್ ಟೈಲ್‌ಗೆಟ್ ಸೇರಿದಂತೆ ಅತ್ಯಾಧುನಿಕ ಸುರಕ್ಷಾ ಸೌಲಭ್ಯಗಳನ್ನು ಹೊಂದಿರಲಿದ್ದು, ಎಸ್‌ಯುವಿ ಕಾರು ಮಾದರಿಗಳಲ್ಲಿ ಹೊಸ ಟ್ರೆಂಡ್ ಸೃಷ್ಟಿಸುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ ಎನ್ನಬಹುದು.

ಮಹೀಂದ್ರಾ ಹೈ ಎಂಡ್ ಕಾರು ಎಕ್ಸ್‌ಯುವಿ 700 ಕಾರು ಹೇಗಿರಲಿದೆ ಗೊತ್ತಾ?

ಎಂಜಿನ್ ಸಾಮರ್ಥ್ಯ

ಆಪ್ ರೋಡಿಂಗ್ ಕೌಶಲ್ಯ ಹೊಂದಿರುವ ಎಕ್ಸ್‌ಯುವಿ 700 ಕಾರು ಮಾದರಿಯು 2.2-ಲೀಟರ್ ಡೀಸೆಲ್ ಎಂಜಿನ್ ಹೊಂದಿರಲಿದ್ದು, 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 186- ಬಿಎಚ್‌ಪಿ ಮತ್ತು 420-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು.

ಮಹೀಂದ್ರಾ ಹೈ ಎಂಡ್ ಕಾರು ಎಕ್ಸ್‌ಯುವಿ 700 ಕಾರು ಹೇಗಿರಲಿದೆ ಗೊತ್ತಾ?

ಮೇಲೆ ಹೇಳಿದ ಹಾಗೆ ಆಪ್ ರೋಡ್ ವೈಶಿಷ್ಟ್ಯತೆ ಹೊಂದಿರುವ ಎಕ್ಸ್‌ಯುವಿ 700 ಕಾರುಗಳಲ್ಲಿ ಹಿಂಬದಿ ಚಕ್ರಗಳಿಗೂ ಗೇರ್‌ಬಾಕ್ಸ್ ಶಕ್ತಿ ಪೂರೈಕೆಯ ಸೌಲಭ್ಯವಿದ್ದು, ಇದು ಕಠಿಣ ಪರಿಸ್ಥಿತಿಗಳಲ್ಲೂ ಸರಾಗವಾಗಿ ನುಗ್ಗಬಲ್ಲ ಬಲಿಷ್ಠ ಕಾರು ಮಾದರಿಯಾಗಲಿದೆ.

ಮಹೀಂದ್ರಾ ಹೈ ಎಂಡ್ ಕಾರು ಎಕ್ಸ್‌ಯುವಿ 700 ಕಾರು ಹೇಗಿರಲಿದೆ ಗೊತ್ತಾ?

ಬೆಲೆ ಮತ್ತು ಬಿಡುಗಡೆಯ ದಿನಾಂಕ

ಫಾರ್ಚೂನರ್ ಕಾರುಗಳಿಂತ 3 ರಿಂದ 4 ಲಕ್ಷದಷ್ಟು ಕಡಿಮೆ ಬೆಲೆ ಹೊಂದಲಿರುವ ಎಕ್ಸ್‌ಯುವಿ 700 ಕಾರುಗಳು 2018ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಗೊಂಡ ನಂತರವಷ್ಟೇ ಬಿಡುಗಡೆಯ ದಿನಾಂಕವನ್ನು ನಿಗದಿ ಮಾಡಲಾಗುತ್ತದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸದ್ಯ ಮಹೀಂದ್ರಾ ನಿರ್ಮಾಣದ ಕಾರುಗಳಲ್ಲಿ ಎಕ್ಸ್‌ಯುವಿ 500 ಕಾರು ಮಾದರಿಗಳೇ ಹೈ ಎಂಡ್ ಕಾರು ಆವೃತ್ತಿಯಾಗಿದ್ದು, ಹೆಚ್ಚಿನ ಗುಣಮಟ್ಟ ಮತ್ತು ಆಪ್ ರೋಡ್ ಕೌಶಲ್ಯ ಭರಿತ ಕಾರು ಮಾದರಿ ಪರಿಚಯಿಸುವ ಉದ್ದೇಶದಿಂದ ಎಕ್ಸ್‌ಯುವಿ 700 ಆವೃತ್ತಿಯನ್ನು ಅಭಿವೃದ್ಧಿಗೊಳಿಸಲಾಗಿದೆ.

Article Published On: Sunday, February 4, 2018, 17:05 [IST]
English summary
Mahindra XUV700 'High-End' SUV Teased Ahead Of Debut At Auto Expo 2018.
Read more on mahindra suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+