ಮಾರುತಿ ಸುಜುಕಿ ಗ್ರಾಹಕರಿಗೆ ಬಿಗ್ ಶಾಕ್..!!
ಮಾರುತಿ ಸುಜುಕಿ ಸಂಸ್ಥೆಯ ಕಾರನ್ನು ಕೊಳ್ಳುವ ಯೋಜನಯಲ್ಲಿದ್ದೀರಾ.? ಹಾಗಾದರೆ ಈ ಕೂಡಲೆ ನಿಮ್ಮ ಹತ್ತಿರದ ಮಾರುತಿ ಸುಜುಕಿ ಶೋರಂಗೆ ಭೇಟಿ ನೀಡಿ. ಏಕೆಂದರೆ ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಕಾರುಗಳ ಮೇಲೆ ಬೆಲೆಗಳನ್ನು ಏರಿಸುವ ಯೋಜನೆಯಲ್ಲಿದೆ.
ಮಾರುತಿ ಸುಜುಕಿ ಸಂಸ್ಥೆಯ ಕಾರನ್ನು ಕೊಳ್ಳುವ ಯೋಜನಯಲ್ಲಿದ್ದೀರಾ.? ಹಾಗಾದರೆ ಈ ಕೂಡಲೆ ನಿಮ್ಮ ಹತ್ತಿರದ ಮಾರುತಿ ಸುಜುಕಿ ಶೋರಂಗೆ ಭೇಟಿ ನೀಡಿ. ಏಕೆಂದರೆ ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಕಾರುಗಳ ಮೇಲೆ ಬೆಲೆಗಳನ್ನು ಏರಿಸುವ ಯೋಜನೆಯಲ್ಲಿದೆ.

ಮಾಹಿತಿಗಳ ಪ್ರಕಾರ ಮಾರುತಿ ಸುಜುಕಿ ಸಂಸ್ಥೆಯ ರೆಗ್ಯೂಲರ್ ಶೋರಂ ಮತ್ತು ನೆಕ್ಸಾನ್ ಶೋರಂಗಳಲ್ಲಿ ಲಭ್ಯವಿರುವ ಎಲ್ಲಾ ಕಾರುಗಳ ಮೇಲೆಯು ಬೆಲೆ ಏರಿಸಲು ಸಂಸ್ಥೆಯು ತೀರ್ಮಾನಿಸಿದೆ. ಸಂಸ್ಥೆಯ ಪ್ರತಿ ಕಾರಿನ ಮೇಲೆಯು ಒಟ್ಟು ಶೇಕಡ 2 ರಷ್ಟು ಬೆಲೆ ಏರಿಸಲು ತೀರ್ಮಾನಿಸಿದ್ದು, ಇದೇ ಜೂನ್ 1 ರಿಂದ ಈ ಬೆಲೆ ಏರಿಕೆಯು ಜಾರಿಗೆ ಬರಲಿದೆ.

ಮಾರುತಿ ಸುಜುಕಿ ಕಾರುಗಳ ಮೇಲೆ ರೂ 5,000 ರಿಂದ ರೂ 25,000 ವರೆಗು ಕೊಳ್ಳುವ ವೇರಿಯಂಟ್‍ಗಳ ಮೇಲೆ ಬೆಲೆಯನ್ನು ಏರಿಕೆ ಮಾಡಲಿದ್ದು, ಈ ಬೆಲೆ ಹೆಚ್ಚಳದ ಬಗ್ಗೆ ಸಂಸ್ಥೆಯು ಅಧಿಕೃತವಾಗಿ ಯಾವುದೆ ಮಾಹಿತಿ ನೀಡಲಿಲ್ಲ.

ಬೆಲೆ ಏರಿಕೆಗಾಗಿ ಕಾರಣವು ಇನ್ನು ತಿಳಿದುಬಂದಿಲ್ಲವಾದರೂ, ಹೂಡಿಕೆಯ ಖರ್ಚುಗಳು ಮತ್ತು ಬೆಳೆಯುತ್ತಿರುವ ಇಂಧನ ಬೆಲೆ ಹಾಗು ಕಸ್ಟಂ ಡ್ಯೂಟಿಗಳ ಬೆಲೆಯೆ ಏರಿಕೆಯಾಗಿರುವುದರಿಂದ ಕಾರುಗಳ ಬೆಲೆ ಏರಿಕೆಯಾಗಲಿದೆ ಎನ್ನಲಾಗಿದೆ.

ಭಾರತ ದೇಶದ ಅತೀ ದೊಡ್ಡ ಪ್ಯಾಸ್ಸೆಂಜರ್ ಕಾರುಗಳ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ತಮ್ಮ ರೆಗ್ಯೂಲರ್ ಮತ್ತು ಪ್ರೀಮಿಯಮ್ ಶೋರಂಗಳಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟಮಾಡುತ್ತಿದೆ. ಆಲ್ಟೊ, ಸೆಲೆರಿಯೊ, ವ್ಯಾಗನ್‍ಆರ್, ಸ್ವಿಫ್ಟ್, ಡಿಜೈರ್ ಮತ್ತು ವಿಟಾರಾ ಬ್ರಿಜ್ಜಾ ಮಾಡಲ್‍ಗಳು ರೆಗ್ಯೂಲರ್ ಶೋರಂಗಳಲ್ಲಿ ಲಭ್ಯವಿರಲಿದೆ.

ಇದೇ ಮಾದರಿಯಲ್ಲಿ ಮಾರುತಿ ಸುಜುಕಿ ಪ್ರೀಮಿಯಮ್ ಶೋರಂಗಳಲ್ಲಿ ನೆಕ್ಸಾನ್ ಪ್ಲಾಟ್‍ಫಾರ್ಮ್‍ನಲ್ಲಿರುವ ಇಗ್ನಿಸ್, ಬಲೆನೊ, ಸಿಯಾಜ್ ಮತ್ತು ಎಸ್-ಕ್ರಾಸ್ ಎಂಬ ಕಾರುಗಳು ಲಭ್ಯವಿರಲಿದೆ. ಮಾರುತಿ ಸುಜುಕಿ ಸಂಸ್ಥೆಯು ಈ ವರ್ಷದ ಪ್ರಾರಂಭದಲ್ಲಿ ಮೂರನೆಯ ತಲೆಮಾರಿನ ಸ್ವಿಫ್ಟ್ ಕಾರನ್ನು ಬಿಡುಗಡೆಗೊಳಿಸಿತ್ತು.

ಅಲ್ಲದೆ ಈ ವರ್ಷದಲ್ಲಿ ಎರ್ಟಿಗಾ, ಸಿಯಾಜ್ ಫೆಸ್‍ಲಿಫ್ಟ್ ಮತ್ತು ಹೊಸ ತಲೆಮಾರಿನ ವ್ಯಾಗನ್‍ಆರ್ ಜೊತೆ ಸೇರಿ ವ್ಯಾಗನ್ಆರ್ 7 ಸೀಟರ್ ಸೋಲಿಯೊ ಮಾಡಲ್ ಕಾರುಗಳನ್ನು ಬಿಡುಗಡೆಗೊಳಿಸಲು ಸಿದ್ಧವಾಗಿದ್ದು, ಈಗಾಗಲೆ ಈ ಕಾರುಗಳು ರಸ್ತೆಯಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿವೆ.

ಮಾರುತಿ ಸುಜುಕಿ ಮಾತ್ರವಲ್ಲದೆ ಇನ್ನು ಹಲವಾರು ವಾಹನ ತಯಾರಕ ಸಂಸ್ಥೆಗಳು ತಮ್ಮ ಉತ್ಪನ್ನಗಳ ಮೇಳೆ ಇದೇ ಜೂನ್ 1ರಿಂದ ಬೆಲೆ ಏರಿಸಲು ತೀರ್ಮಾನಿಸಿದೆ. ಹ್ಯುಂಡೈ ಸಂಸ್ಥೆಯು ಈಗಾಗಲೆ ತಮ್ಮ ಕಾರುಗಳ ಮೇಲೆ ಜೂನ್ 1, 2018 ರಿಂದ ಶೇಕಡ 2 ಪಟ್ಟು ಬೆಲೆ ಏರಿಸಲಿದೆ ಎಂದು ಹೇಳಿಕೊಂಡಿದೆ.


Click it and Unblock the Notifications








