ಮತ್ತಷ್ಟು ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ರೀ ಎಂಟ್ರಿ ನೀಡಲಿವೆ ಮಾರುತಿ ಸುಜುಕಿ ಕಾರುಗಳು...
ಮತ್ತಷ್ಟು ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ರೀ ಎಂಟ್ರಿ ನೀಡಲಿವೆ ಮಾರುತಿ ಸುಜುಕಿ ಕಾರುಗಳು...
ಪ್ಯಾಸೆಂಜರ್ ಕಾರುಗಳ ಮಾರಾಟ ವಿಭಾಗದಲ್ಲಿ ಈಗಾಗಲೇ ಜನಪ್ರಿಯತೆ ಸಾಧಿಸಿರುವ ಮಾರುತಿ ಸುಜುಕಿ ಸಂಸ್ಥೆಯು ತನ್ನೆಲ್ಲಾ ಕಾರು ಮಾದರಿಗಳಿಗೆ ಮತ್ತಷ್ಟು ಹೊಸತನ ನೀಡಲು ಮುಂದಾಗಿದ್ದು, ಆರಂಭಿಕ ಮಾದರಿ ಆಲ್ಟೋದಿಂದ ಟಾಪ್ ಎಂಡ್ ಮಾದರಿಯಾದ ಎಸ್ ಕ್ರಾಸ್ ಎಸ್‌ಯುವಿ ವರೆಗೂ ಮಹತ್ವದ ಬದಲಾವಣೆ ತರುವ ಸುಳಿವು ನೀಡಿದೆ.

ಸದ್ಯ ಮಾರುತಿ ಸುಜುಕಿ ಕಾರುಗಳಲ್ಲಿ ಸದ್ಯ ಲಭ್ಯವಿರುವ 5 ಸ್ಪೀಡ್ ಗೇರ್‍ಬಾಕ್ಸ್ ಆಯ್ಕೆಯನ್ನು ಹೆಚ್ಚಿಸಲು ಮುಂದಾಗಿದ್ದು, ಮುಂಬರುವ ಹೊಸ ಕಾರುಗಳಲ್ಲಿ 6 ಸ್ಪೀಡ್ ಗೇರ್‍ಬಾಕ್ಸ್ ಅಳವಡಿಸಲು ಯೋಜನೆ ರೂಪಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಜೊತೆಗೆ ಪ್ರತಿ ಕಾರು ಮಾದರಿಯಲ್ಲೂ ಕೆಲವು ಅಗತ್ಯ ಸುರಕ್ಷಾ ಕ್ರಮಗಳನ್ನು ಕಡ್ಡಾಯವಾಗಿ ಅಳವಡಿಸುವ ಸಂಬಂಧ ಮಾರುಕಟ್ಟೆ ಅಧ್ಯಯನ ನಡೆಸಿದ್ದು, ಗ್ರಾಹಕರ ಬೇಡಿಕೆ ಆಧಾರದ ಮೇಲೆ ಕಾರುಗಳ ವಿನ್ಯಾಸದಲ್ಲೂ ಬದಲಾವಣೆ ತರಲು ಮುಂದಾಗಿದೆ.

ಮಾರುತಿ ಸುಜುಕಿ ಸಂಸ್ಥೆಯು ಹೊಸದಾಗಿ 6 ಸ್ಪೀಡ್ ಗೇರ್‍ಬಾಕ್ಸ್ ಪರಿಚಯಿಸುತ್ತಿದ್ದು, ಎಮ್ಎಫ್30 ಅಳವಡಿಕೆ ಮೂಲಕ ಕಾರಿನ ಪರ್ಫಾರ್ಮೆನ್ಸ್ ಅನ್ನು ಹೆಚ್ಚಿಸಲಿದ್ದು, ಮೊದಲ ಹಂತವಾಗಿ ಸಿಫ್ಟ್ ಕಾರುಗಳಲ್ಲಿ ಈ ಯೋಜನೆಯನ್ನು ಜಾರಿಮಾಡಲಿದೆ. ಜೊತೆಗೆ ಟಾಪ್ ಎಂಡ್ ವೆರಿಯೆಂಟ್‌ಗಳಲ್ಲಿ ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಅಳವಡಿಸುವ ಗುರಿ ಹೊಂದಿರಲಿವೆ.

ಮಾಹಿತಿಗಳ ಪ್ರಕಾರ ಮಾರುತಿ ಸುಜುಕಿಯು ಬಲೆನೊ, ವಿಟಾರಾ ಬ್ರೆಝಾ, ಸಿಯಾಜ್, ಮತ್ತು ಎಸ್-ಕ್ರಾಸ್ ಕಾರುಗಳಲ್ಲಿಯೂ ಕೂಡ ಮುಂಬರುವ ದಿನಗಳಲ್ಲಿ 6 ಸ್ಪೀಡ್ ಗೇರ್‍ಬಾಕ್ಸ್ ಹಾಗೂ ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಅನ್ನು ಅಳವಡಿಸಲಿದೆ ಎನ್ನಲಾಗಿದೆ.

ಇನ್ನು ಹೊಸ 6-ಸ್ಪೀಡ್ ಗೇರ್‍ಬಾಕ್ಸ್ ಎಂಜಿನ್‍ಗೆ ಒತ್ತಡ ನೀಡದೇ ಇಂಧನ ದಕ್ಷತೆಯನ್ನು ಸುಧಾರಿಸಲು ನೇರವಾಗಲಿದ್ದು, ಆರಾಮದಾಯಕವಾದ ವೇಗವನ್ನು ನೀಡುವಲ್ಲಿ ಇವು ಸಹಕಾರಿಯಾಗುತ್ತವೆ. ಉದಾಹರಣೆಗೆ ಗಂಟೆಗೆ 80ರಿಂದ 100ಕಿಲೋಮೀಟರ್ ಸ್ಪೀಡ್ ಚಲಾಯಿಸಲು ಐದನೇ ಗೇರ್‍ನಲ್ಲಿಯೇ ಚಲಾಯಿಸಬಹುದು. ಈ ವೇಳೆ ಟ್ರೈರ್ ಪ್ರೆಷರ್ ಮಾನಿಟರ್ ಸಿಸ್ಟಂ ನಿಮ್ಮ ಸಹಾಯಕ್ಕೆ ಬರಲಿದೆ.

ಈ ಹಿಂದೆ ಮಾರುತಿ ಸುಜುಕಿಯು ಮೊದಲಿಗೆ 6-ಸ್ಪೀಡ್ ಗೇರ್‍ಬಾಕ್ಸ್ ಅನ್ನು ಮೊದಲನೆ ತಲೆಮಾರಿನ ಎಸ್-ಕ್ರಾಸ್ ಕಾರಿನಲ್ಲಿ ಅಳವಡಿಸಲಾಗಿತ್ತು, ಆದರೆ ಅದರ ಫೇಸ್‍ಲಿಫ್ಟ್ ಕಾರಿನ ಮುಖಾಂತರ 1.6 ಎಂಜಿನ್ ಮತ್ತು 6 ಸ್ಪೀಡ್ ಗೇರ್‍ಬಾಕ್ಸ್ ಅಳವಡಿಕೆಯನ್ನು ನಿಲ್ಲಿಸಲಾಗಿತ್ತು.

ಅದೇ ರೀತಿಯಾಗಿ ವಿಟಾರಾ ಬ್ರೇಝಾ ಸಹ ಹಳೆಯ ಆವೃತ್ತಿಗಿಂತ ಹೆಚ್ಚಿನ ಮಟ್ಟದ ಸುರಕ್ಷಾ ಸೌಲಭ್ಯವನ್ನು ಹೊಂದಿರುವ ಹೊಸ ಮಾದರಿಯು ಡ್ಯುಯಲ್ ಏರ್‌ಬ್ಯಾಗ್ ಸೇರಿದಂತೆ ಪ್ರಮುಖ ಬದಲಾವಣೆಗಳನ್ನು ಪಡೆದುಕೊಂಡಿದೆ.

ಇದರಲ್ಲದೇ ಮಾರುಕಟ್ಟೆಯಲ್ಲಿ ಹೊಸದಾಗಿ ಬಿಡುಗಡೆಗೊಂಡ ಎಲೈಟ್ ಐ20, ವೆರ್ನಾ, ಕ್ರೆಟಾ, ಮತ್ತು ಎಲಂತ್ರಾ ಕಾರುಗಳಲ್ಲಿ ಈಗಾಗಲೇ 6 ಸ್ಪೀಡ್ ಗೇರ್‍ಬಾಕ್ಸ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಅಳವಡಿಸಲಾಗುತ್ತಿದ್ದು, ಇದರಿಂದ ಮಾರುತಿ ಸುಜುಕಿ ಸಂಸ್ಥೆಯು ಕೂಡಾ ತನ್ನ ಕಾರುಗಳ ಮಾರಾಟವನ್ನು ಹೆಚ್ಚಿಸಲು ಈ ಕಾರ್ಯವನ್ನು ಕೈಗೊಳ್ಳುತ್ತಿದೆ ಎನ್ನಲಾಗಿದೆ.

ಹ್ಯುಂಡೈ, ಟಾಟಾ ಮೋಟಾರ್ಸ್, ರೆನಾಲ್ಟ್ ಸಂಸ್ಥೆಗಳೂ ಈಗಾಗಲೇ ತಮ್ಮ ಕಾರುಗಳಲ್ಲಿ 6 ಸ್ಪೀಡ್ ಗೇರ್‍ಬಾಕ್ಸ್ ಅಳವಡಿಕೆಯನ್ನು ಪ್ರಾಂಭಿಸಿದ್ದು, ಮಾರುತಿ ಸುಜುಕಿ ಸಂಸ್ಥೆಯು ಇದೀಗ 5 ಸ್ಪೀಡ್ ಗೇರ್‍ಬಾಕ್ಸ್ ಜೊತೆ ಜೊತೆಗೆ 6 ಸ್ಪೀಡ್ ಗೇರ್‍ಬಾಕ್ಸ್ ಅಳವಡಿಕೆಯನ್ನು ಸಹ ಪ್ರಾರಂಭಿಸಲಿದೆ.


Click it and Unblock the Notifications