7 ಸೀಟರ್ ಸೌಲಭ್ಯದೊಂದಿಗೆ ರಸ್ತೆಗಿಳಿಯಲಿದೆ ಮಾರುತಿ ಸುಜುಕಿ ವಿಟಾರಾ ಎಸ್‌ಯುವಿ

ದೇಶದ ನಂ.1 ಕಾರು ಉತ್ಪಾದನಾ ಮತ್ತು ಮಾರಾಟ ಸಂಸ್ಥೆಯಾದ ಮಾರುತಿ ಸುಜುಕಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರು ಉತ್ಪನ್ನಗಳನ್ನು ಪರಿಚಯಿಸುವ ಇರಾದೆಯಲ್ಲಿದ್ದು, ಸದ್ಯ ಮಾರುಕಟ್ಟೆಲ್ಲಿರುವ ಮಧ್ಯಮ ಗಾತ್ರದ ಪ್ರಮುಖ ಎಸ್‌ಯುವಿಗಳಿಗೆ ಪೈಪೋಟಿ ನೀಡಬಲ್ಲ ವಿಟಾರಾ ಎಸ್‌ಯುವಿ ಕಾರನ್ನು ಬಿಡುಗಡೆಗಾಗಿ ಸಿದ್ದಗೊಳಿಸಲಾಗಿದೆ.

7 ಸೀಟರ್ ಸೌಲಭ್ಯದೊಂದಿಗೆ ರಸ್ತೆಗಿಳಿಯಲಿದೆ ಮಾರುತಿ ಸುಜುಕಿ ವಿಟಾರಾ ಎಸ್‌ಯುವಿ

ವಿಟಾರಾ ಬ್ರೆಝಾ ಕಾರುಗಳಿಂತಲೂ ವಿಭಿನ್ನವಾಗಿರುವ ವಿಟಾರಾ ಕಾರುಗಳು ಎಸ್ ಕ್ರಾಸ್‌ ಕಾರುಗಳಿಂತಲೂ ಹೆಚ್ಚಿನ ಮಟ್ಟದ ಐಷಾರಾಮಿ ಸೌಲಭ್ಯಗಳನ್ನು ಹೊಂದಿರಲಿದ್ದು, 2019ರ ಕೊನೆಯಲ್ಲಿ ಹೊಸ ಕಾರುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಕಾರಿನ ಉತ್ಪಾದನಾ ಕಾರ್ಯಯೋಜನೆ ಭರದಿಂದ ಸಾಗಿದ್ದು, ಹಂಗೇರಿಯಲ್ಲಿರುವ ಸುಜುಕಿ ಸಂಸ್ಥೆಯ ಉತ್ಪಾದನಾ ಘಟಕದಲ್ಲಿ ಹೊಸ ವಿಟಾರಾ ಕಾರುಗಳು ಫೈನಲ್ ಟಚ್ ಪಡೆದುಕೊಳ್ಳುತ್ತಿವೆ.

7 ಸೀಟರ್ ಸೌಲಭ್ಯದೊಂದಿಗೆ ರಸ್ತೆಗಿಳಿಯಲಿದೆ ಮಾರುತಿ ಸುಜುಕಿ ವಿಟಾರಾ ಎಸ್‌ಯುವಿ

ಮಾರುತಿ ಸುಜುಕಿ ಸಂಸ್ಥೆಯು ಈ ಹಿಂದಿನ ವಿಟಾರಾ ಗ್ರ್ಯಾಂಡ್ ಮಾರಾಟದಲ್ಲಿ ಆದ ಹಿನ್ನಡೆಯನ್ನು ಹೊಸ ಕಾರಿನ ಮೂಲಕ ಸುಧಾರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದು, ಹ್ಯುಂಡೈ ಫೇಸ್‌ಲಿಫ್ಟ್ ಕ್ರೇಟಾ ಮತ್ತು ಮಹೀಂದ್ರಾ ಎಕ್ಸ್‌ಯುವಿ 500 ಕಾರುಗಳಿಗೆ ಈ ಕಾರು ತೀವ್ರ ಪೈಪೋಟಿ ನೀಡಲಿದೆ.

7 ಸೀಟರ್ ಸೌಲಭ್ಯದೊಂದಿಗೆ ರಸ್ತೆಗಿಳಿಯಲಿದೆ ಮಾರುತಿ ಸುಜುಕಿ ವಿಟಾರಾ ಎಸ್‌ಯುವಿ

ಮಿಡ್ ರೇಂಜ್ ಎಸ್‍ಯುವಿ ಕಾರು ಮಾದರಿ ಇದಾಗಿದ್ದು, 2019ರ ವೇಳೆಗೆ ಬಿಡುಗಡೆಗೊಳಿಸಲು ನಿರ್ಧರಿಸುವ ಮಾರುತಿ ಸುಜುಕಿಯ ಹೊಸ ಎಸ್‍ಯುವಿ ಕಾರು ಅನ್ನು ಈಗಾಗಲೇ ದೇಶದ ವಿವಿಧ ಕಡೆಗಳಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕೂಡಾ ನಡೆಸಲಾಗಿದೆ.

7 ಸೀಟರ್ ಸೌಲಭ್ಯದೊಂದಿಗೆ ರಸ್ತೆಗಿಳಿಯಲಿದೆ ಮಾರುತಿ ಸುಜುಕಿ ವಿಟಾರಾ ಎಸ್‌ಯುವಿ

ಸುಜುಕಿ ವಿಟಾರಾ ಈಗಾಗಲೆೇ ಯೂರೋಪ್‍ನ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ ಮಾರಾಟಗೊಳ್ಳುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಲ್ಲಿ ದೊರೆಯುತ್ತಿದೆ. ಹೀಗಾಗಿ ಭಾರತದಲ್ಲಿ ಬಿಡುಗಡೆಯಾಗಲಿರುವ ಈ ಕಾರಿನ ಬೆಲೆಯನ್ನು ರೂ. 12 ಲಕ್ಷ ದಿಂದ ರೂ. 16 ಲಕ್ಷದೊಳಗೆ ನಿರ್ಧರಿಸಲಿದ್ದಾರೆ.

7 ಸೀಟರ್ ಸೌಲಭ್ಯದೊಂದಿಗೆ ರಸ್ತೆಗಿಳಿಯಲಿದೆ ಮಾರುತಿ ಸುಜುಕಿ ವಿಟಾರಾ ಎಸ್‌ಯುವಿ

ಸದ್ಯ ವಿದೇಶಿ ಮಾರುಕಟ್ಟೆಗಳಲ್ಲಿ ವಿಟಾರಾ ಕಾರಿನ ಪೆಟ್ರೋಲ್ ಆವೃತ್ತಿಯು 1.0-ಲೀಟರ್ ಮತ್ತು 1.4 ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಹೊಂದಿದ್ದು, 140-ಬಿಹೆಚ್‍ಪಿ ಮತ್ತು 230-ಎನ್ಎಂ ಟಾರ್ಕ್ಅನ್ನು ಉತ್ಪಾದಿಸುತ್ತೆ.

7 ಸೀಟರ್ ಸೌಲಭ್ಯದೊಂದಿಗೆ ರಸ್ತೆಗಿಳಿಯಲಿದೆ ಮಾರುತಿ ಸುಜುಕಿ ವಿಟಾರಾ ಎಸ್‌ಯುವಿ

ಆದ್ರೆ ಭಾರತದಲ್ಲಿ ಬಿಡುಗಡೆಯಾಗಲಿರುವ ಕಾರುಗಳು 1.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದುವ ಸಾಧ್ಯತೆಗಳಿದ್ದು, ಹೊಸ ಎಂಜಿನ್ 5 ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್‍‍‍ಬಾಕ್ಸ್ ಆಯ್ಕೆಯಲ್ಲಿ ಬರಲಿದೆ ಎನ್ನಲಾಗಿದೆ.

7 ಸೀಟರ್ ಸೌಲಭ್ಯದೊಂದಿಗೆ ರಸ್ತೆಗಿಳಿಯಲಿದೆ ಮಾರುತಿ ಸುಜುಕಿ ವಿಟಾರಾ ಎಸ್‌ಯುವಿ

ಹಾಗೆಯೇ ವಿಟಾರಾ ಕಾರಿನ ಡೀಸೆಲ್ ಆವೃತ್ತಿಯು ಎಸ್ ಕ್ರಾಸ್ ಕಾರಿನ ಮಾದರಿಯಲ್ಲಿ 1.6-ಲೀಟರ್ ಡೀಸೆಲ್ ಎಂಜಿನ್ ಹೊಂದಿರಲಿದ್ದು, 118-ಬಿಹೆಚ್‍ಪಿ ಮತ್ತು 320-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಗೆ ಜೋಡಣೆ ಇರಲಿದೆ.

MOST READ: ಬಿಡುಗಡೆಗೂ ಮುನ್ನವೇ ಹಾರುವ ಕಾರಿನ ಬೆಲೆ ಪಟ್ಟಿ ಬಿಡುಗಡೆ ಮಾಡಿದ ಪಿಎಲ್-ವಿ ಲಿಬರ್ಟಿ

7 ಸೀಟರ್ ಸೌಲಭ್ಯದೊಂದಿಗೆ ರಸ್ತೆಗಿಳಿಯಲಿದೆ ಮಾರುತಿ ಸುಜುಕಿ ವಿಟಾರಾ ಎಸ್‌ಯುವಿ

ಜೊತೆಗೆ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮಾರುತಿ ವಿಟಾರಾ ಕಾರುಗಳು ಫ್ರಂಟ್ ವೀಲ್ ಡ್ರೈವ್ ಎಸ್‍ಯುವಿ ರೂಪದಲ್ಲಿ ಬರಬಹುದು ಎಂದು ಅಂದಾಜಿಸಲಾಗಿದ್ದು, ಗ್ಲೋಬಲ್ ಮಾರುಕಟ್ಟೆಯಲ್ಲಿನ ವಿಟಾರಾಗಳು ಆಲ್ ವೀಲ್ ಡ್ರೈವ್ ರೂಪದಲ್ಲಿ ದೊರೆಯುತ್ತಿದೆ.

7 ಸೀಟರ್ ಸೌಲಭ್ಯದೊಂದಿಗೆ ರಸ್ತೆಗಿಳಿಯಲಿದೆ ಮಾರುತಿ ಸುಜುಕಿ ವಿಟಾರಾ ಎಸ್‌ಯುವಿ

ಇದಲ್ಲದೇ ಹೊಸ ರೂಪದ ವಿಟಾರಾ ಕಾರುಗಳು ಎಸ್‌ಯುವಿ ಕಾರುಗಳಲ್ಲೇ ವಿಶೇಷ ಗುಣಲಕ್ಷಣಗಳನ್ನು ಹೊಂದಿದ್ದು, 7ಸೀಟರ್ ವಿನ್ಯಾಸದೊಂದಿಗೆ ಪ್ರಯಾಣಿಕರ ಸುರಕ್ಷತೆಗಾಗಿ ಎಬಿಎಸ್ ಮತ್ತು 6 ಏರ್‍‍ಬ್ಯಾಗ್ ಗಳನ್ನು ಬಳಸಲಾಗಿದೆ.

MOST READ: ವಾಹನ ಸವಾರರೇ ಎಚ್ಚರ- ಪೆಟ್ರೋಲ್ ಬಂಕ್‌ಗಳಲ್ಲಿ ಹೇಗೆ ನಡೆಯುತ್ತೆ ನೋಡಿ ಹಗಲು ದರೋಡೆ..!

7 ಸೀಟರ್ ಸೌಲಭ್ಯದೊಂದಿಗೆ ರಸ್ತೆಗಿಳಿಯಲಿದೆ ಮಾರುತಿ ಸುಜುಕಿ ವಿಟಾರಾ ಎಸ್‌ಯುವಿ

ಇದರಿಂದಾಗಿ ಎಸ್‌ಯುವಿ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಬಹುದೆಂದು ನೀರಿಕ್ಷೆ ಮಾಡಿರುವ ಮಾರುತಿ ಸುಜುಕಿ ಸಂಸ್ಥೆಯು ಪ್ರಿಮಿಯಂ ಕಾರು ಮಾರಾಟ ವಿಭಾಗದಲ್ಲಿನ ಕೊರತೆಯನ್ನು ನಿಗಿಸಲು ಈ ಕಾರನ್ನು ನಿರ್ಮಾಣಗೊಳಿಸುತ್ತಿದ್ದು, ಕ್ರೇಟಾ ಫೇಸ್‌ಲಿಫ್ಟ್, ಎಕ್ಸ್‌ಯುವಿ 500 ಮತ್ತು ಮುಂಬರುವ ಟಾಟಾ ಹ್ಯಾರಿಯರ್, ನಿಸ್ಸಾನ್ ಕಿಕ್ಸ್ ಕಾರುಗಳಿಗೂ ಇದು ಪೈಪೋಟಿ ನೀಡಲಿದೆ.

Source:gaadiwaadi

Most Read Articles

Kannada
English summary
Maruti’s Next SUV Will Be A 7-Seater; To Rival Next-Gen Creta. Read in Kannada.
Story first published: Thursday, December 20, 2018, 19:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X