ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಲಿರುವ ಮಾರುತಿ ಸುಜುಕಿ ಹೊಸ ಕಾರಿನ ಸ್ಪೆಷಲ್ ಏನು?

ಸದ್ಯ ದೇಶದ ನಂ.1 ಕಾರು ಉತ್ಪಾದನಾ ಮತ್ತು ಮಾರಾಟ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಮಾದರಿ ಕಾರುಗಳನ್ನು ಪರಿಚಯಿಸುವ ಯೋಜನೆಯಲ್ಲಿದ್ದು, ಕಳೆದ ಫೆಬ್ರುವರಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡಿದ್ದ ಫ್ಯೂಚರ್ ಎಸ್ ಕಾನ್ಸೆಪ್ಟ್ ಸ್ಮಾಲ್ ಎಸ್‌ಯುವಿ ಕಾರು ಮಾದರಿಯು ಇದೀಗ ಬಿಡುಗಡೆಯ ಹಾದಿಯಲ್ಲಿರುವುದು ಖಚಿತವಾಗಿದೆ.

ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಲಿರುವ ಮಾರುತಿ ಸುಜುಕಿ ಹೊಸ ಕಾರಿನ ಸ್ಪೆಷಲ್ ಏನು?

ಮಧ್ಯಮ ವರ್ಗದ ಗ್ರಾಹಕರನ್ನು ಗುರಿಯಾಗಿಸಿ ಕೈಗೆಟುಕುವ ಬೆಲೆಯ ಕಾರು ಮಾದರಿಗಳನ್ನು ಪರಿಚಯಿಸುವುದರಲ್ಲಿ ಜನಪ್ರಿಯವಾಗಿರುವ ಮಾರುತಿ ಸುಜುಕಿ ಸಂಸ್ಥೆಯು ದೇಶದಲ್ಲಿ ಮಾರಾಟವಾಗುತ್ತಿರುವ ಟಾಪ್ 10 ಕಾರುಗಳ ಪಟ್ಟಿಯಲ್ಲಿ ಮೊದಲ ಆರು ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಶೇ.40 ರಷ್ಟು ಕಾರು ಮಾರಾಟ ಪ್ರಮಾಣವನ್ನು ತನ್ನದಾಗಿಸಿಕೊಂಡಿದ್ದು, ಇದೀಗ ಮತ್ತೊಂದು ಗೇಮ್‌ಚೆಂಜರ್ ಕಾರು ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಲಿರುವ ಮಾರುತಿ ಸುಜುಕಿ ಹೊಸ ಕಾರಿನ ಸ್ಪೆಷಲ್ ಏನು?

ಫೆಬ್ರುವರಿಯಲ್ಲಿ ನಡೆದ 2018ರ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಳಿಸಲಾಗಿದ್ದ ಫ್ಯೂಚರ್ ಎಸ್ ಕಾನ್ಸೆಪ್ಟ್ ಸ್ಮಾಲ್ ಎಸ್‌ಯುವಿ ಕಾರಿನ ಉತ್ಪಾದನೆಗೆ ಇದೀಗ ಅಧಿಕೃತ ಚಾಲನೆ ಸಿಕ್ಕಿದ್ದು, ವಿನೂತನ ವಿನ್ಯಾಸಗಳೊಂದಿಗೆ ವಿಟಾರಾ ಬ್ರೆಝಾ ಕಾರು ಮಾದರಿಗಿಂತ ಕೆಳದರ್ಜೆಯ ಮಾದರಿಯಾಗಿ ರಸ್ತೆಗಿಳಿಯಲಿದೆ.

ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಲಿರುವ ಮಾರುತಿ ಸುಜುಕಿ ಹೊಸ ಕಾರಿನ ಸ್ಪೆಷಲ್ ಏನು?

ಕಾರಿನ ವಿನ್ಯಾಸಗಳನ್ನು ಗಮನಿಸಿದ್ದಲ್ಲಿ ಹ್ಯಾಚ್‌ಬ್ಯಾಕ್ ಕಾರುಗಳಿಂತಲೂ ವಿಭಿನ್ನ ಎನ್ನಿಸುವ ಫ್ಯೂಚರ್ ಎಸ್ ಕಾನ್ಸೆಪ್ಟ್ ಸ್ಮಾಲ್ ಎಸ್‌ಯುವಿ ಕಾರುಗಳು 4 ಮೀಟರ್‌ಗಿಂತಲೂ ಕಡಿಮೆ ಉದ್ದಳತೆ ಹೊಂದಿರಲಿದ್ದು, ಎ-ಪಿಲ್ಲರ್ ವಿಭಾಗದಲ್ಲಿನ ಹೊಸ ವಿನ್ಯಾಸದೊಂದಿಗೆ ಚಾಲಕನಿಗೆ ಅನುಕೂಲಕರ ಚಾಲನಾ ಸೌಲಭ್ಯಗಳನ್ನು ಒದಗಿಸಲಿದೆ.

ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಲಿರುವ ಮಾರುತಿ ಸುಜುಕಿ ಹೊಸ ಕಾರಿನ ಸ್ಪೆಷಲ್ ಏನು?

ಹೀಗಾಗಿ ವಿಟಾರಾ ಬ್ರೆಝಾ ಕಾರುಗಳಂತೆ ವಿಶೇಷ ಸೌಲಭ್ಯ ಹೊಂದಲಿರುವ ಫ್ಯೂಚರ್ ಎಸ್ ಕಾನ್ಸೆಪ್ಟ್ ಸ್ಮಾಲ್ ಎಸ್‌ಯುವಿ ಕಾರುಗಳು ಗಾತ್ರದಲ್ಲಿ ಚಿಕ್ಕದಾದರೂ ಅತ್ಯುತ್ತಮ ಸೌಲಭ್ಯಗಳೊಂದಿಗೆ ಅಭಿವೃದ್ಧಿ ಹೊಂದಿರಲಿದ್ದು, ವ್ಯಯಕ್ತಿಕ ಬಳಕೆಗಾಗಿ ಈ ಕಾರು ಅತಿಹೆಚ್ಚು ಸೃಷ್ಠಿಸುವ ನೀರಿಕ್ಷೆಯಿದೆ.

ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಲಿರುವ ಮಾರುತಿ ಸುಜುಕಿ ಹೊಸ ಕಾರಿನ ಸ್ಪೆಷಲ್ ಏನು?

ಎಂಜಿನ್ ವೈಶಿಷ್ಟ್ಯತೆ

ಮಾರುತಿ ಸುಜುಕಿ ಸಂಸ್ಥೆಯು ಹೊಸ ಫ್ಯೂಚರ್ ಎಸ್ ಕಾನ್ಸೆಪ್ಟ್ ಸ್ಮಾಲ್ ಎಸ್‌ಯುವಿ ಕಾರು 1.2-ಲೀಟರ್(1,200ಸಿಸಿ) ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, ಬಿಡುಗಡೆಯ ನಂತರ ಕಾರಿನ ಬೇಡಿಕೆಯ ಆಧಾರ ಮೇಲೆ ಎಲೆಕ್ಟ್ರಿಕ್ ವರ್ಷನ್‌ಗಳು ಕೂಡಾ ಖರೀದಿಗೆ ಲಭ್ಯವಾಗಲಿವೆ.

ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಲಿರುವ ಮಾರುತಿ ಸುಜುಕಿ ಹೊಸ ಕಾರಿನ ಸ್ಪೆಷಲ್ ಏನು?

ಈ ಮೂಲಕ ನಗರ ಪ್ರದೇಶಗಳಲ್ಲಿನ ಟ್ರಾಫಿಕ್ ದಟ್ಟಣೆಯಲ್ಲೂ ಸಲೀಸಾಗಿ ಸಾಗಬಲ್ಲ ಗುಣಹೊಂದಿರುವ ಫ್ಯೂಚರ್ ಎಸ್ ಕಾನ್ಸೆಪ್ಟ್ ಸ್ಮಾಲ್ ಎಸ್‌ಯುವಿ ಕಾರುಗಳು ಸ್ಪೋರ್ಟಿ ಕಾರು ಪ್ರಿಯರನ್ನು ಸೆಳೆಯಬಹುದಾದ ಅಲಾಯ್ ಚಕ್ರಗಳು, ಹೈ ಮೌಟೆಂಡ್ ಲೈಟ್ಸ್ ಒದಗಿಸಿರುವುದು ಕಾರಿನ ಅಂದವನ್ನು ಹೆಚ್ಚಿಸಿದೆ.

ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಲಿರುವ ಮಾರುತಿ ಸುಜುಕಿ ಹೊಸ ಕಾರಿನ ಸ್ಪೆಷಲ್ ಏನು?

ಬಿಡುಗಡೆ ಯಾವಾಗ?

ಎಕ್ಸ್‌ಶೋರಂದಲ್ಲಿ ಪ್ರದರ್ಶನ ಹೊರತು ಪಡಿಸಿ ಇದುವರೆಗೂ ಯಾವುದೇ ಮಾಹಿತಿ ಹೊರಹಾಕದ ಮಾರುತಿ ಸುಜುಕಿಯು ಇದೇ ಮೊದಲ ಬಾರಿಗೆ ಫ್ಯೂಚರ್ ಎಸ್ ಕಾನ್ಸೆಪ್ಟ್ ಸ್ಮಾಲ್ ಎಸ್‌ಯುವಿ ಕಾರನ್ನು ಉತ್ಪಾದನೆ ಮಾಡುತ್ತಿರುವ ಮಾಹಿತಿ ಬಹಿರಂಗ ಮಾಡಿದ್ದು, 2019ರ ಮಧ್ಯಂತರಕ್ಕೆ ಬಿಡುಗಡೆ ಮಾಡಬಹುದು ಎನ್ನಲಾಗಿದೆ.

ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಲಿರುವ ಮಾರುತಿ ಸುಜುಕಿ ಹೊಸ ಕಾರಿನ ಸ್ಪೆಷಲ್ ಏನು?

ಕಾರಿನ ಬೆಲೆಗಳು(ಅಂದಾಜು)

ಗಾತ್ರದಲ್ಲಿ 4 ಮೀಟರ್‌ಗಿಂತಲೂ ಚಿಕ್ಕದಿರುವ ಫ್ಯೂಚರ್ ಎಸ್ ಕಾನ್ಸೆಪ್ಟ್ ಸ್ಮಾಲ್ ಎಸ್‌ಯುವಿ ಕಾರುಗಳ ಮೇಲೆ ಕೆಲವು ತೆರಿಗೆ ವಿನಾಯ್ತಿಗಳನ್ನು ದೊರೆಯಬಹುದಾಗಿದ್ದು, ಹೊಸ ಕಾರಿನ ಬೆಲೆಯು ಎಕ್ಸ್‌ಶೋರಂ ಪ್ರಕಾರ ರೂ. 4.50 ಲಕ್ಷದಿಂದ ರೂ. 5 ಲಕ್ಷದ ತನಕ ಬೆಲೆ ಹೊಂದಬಹುದು ಎನ್ನಲಾಗಿದೆ.

ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಲಿರುವ ಮಾರುತಿ ಸುಜುಕಿ ಹೊಸ ಕಾರಿನ ಸ್ಪೆಷಲ್ ಏನು?

ಒಟ್ಟಿನಲ್ಲಿ ಸಣ್ಣ ಗಾತ್ರದ ಕಾರುಗಳಲ್ಲೇ ವಿಭಿನ್ನ ಎನ್ನಿಸಲಿರುವ ಮಾರುತಿ ಸುಜುಕಿ ಫ್ಯೂಚರ್ ಎಸ್ ಕಾನ್ಸೆಪ್ಟ್ ಸ್ಮಾಲ್ ಎಸ್‌ಯುವಿ ಕಾರುಗಳು ದೇಶದಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದ್ದು, ಎಂಟ್ರಿ ಲೆವಲ್ ಕಾರು ಮಾರಾಟದಲ್ಲಿ ಈ ಕಾರು ಬಹುದೊಡ್ಡ ಬದಲಾವಣೆಗೆ ಕಾರಣವಾಗಲಿದೆ ಎನ್ನಬಹುದು.

ಮಾರುತಿ ಸುಜುಕಿ ಫ್ಯೂಚರ್ ಎಸ್ ಕಾನ್ಸೆಪ್ಟ್ ಸ್ಮಾಲ್ ಎಸ್‌ಯುವಿ ಕಾರಿನ ಫೋಟೋ ಗ್ಯಾಲರಿ..!

Article Published On: Wednesday, October 3, 2018, 16:28 [IST]
English summary
Maruti To Launch All New Mini SUV In 2019.
Read more on maruti suzuki new car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+