ವಿಟಾರಾ ಬ್ರೆಝಾ ಮಾಡಿಫೈ ರೇಂಜ್ ರೋವರ್ ಇವೊಕ್ ಸ್ಪೆಷಲ್ ಏನು?
ಬಹುತೇಕ ಕಾರು ಪ್ರೇಮಿಗಳಿಗೆ ಮಾಡಿಫೈ ಕಾರಿನ ಬಗೆಗೆ ಎಲ್ಲಿದ ಕ್ರೇಜ್ ಇದ್ದೇ ಇರುತ್ತೆ. ಆದ್ರೆ ಮಾಡಿಫೈಗೆ ಬೇಕಾದ ಸೂಕ್ತ ಕಾರುಗಳು ಸಿಗುವುದೇ ಕಷ್ಟ. ಆದರೂ ಸಿದ್ದವಾಗುವ ಕೆಲವು ಮಾಡಿಫೈ ಕಾರುಗಳು ಮೂಲ ಕಾರಿಗೆ ಟಾಂಗ್ ನೀಡುವಷ್ಟು ತಾಂತ್ರಿಕವಾಗಿ ಬದಲಾವಣೆ ಮಾಡಲಾಗಿರುತ್ತದೆ. ಇಲ್ಲೊಂದು ಮಾಡಿಫೈ ಸಂಸ್ಥೆ ಕೂಡಾ ಜನಪ್ರಿಯ ವಿಟಾರಾ ಬ್ರೆಝಾ ಕಾರನ್ನ ಬಳಕೆ ಮಾಡಿಕೊಂಡು ದುಬಾರಿ ಮೌಲ್ಯದ ರೇಂಜ್ ರೋವರ್ ಇವೊಕ್ ಮಾಡಿಫೈ ಮಾಡಿರುವುದು ಎಸ್‌ಯುವಿ ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ.

ನಗರ ಪ್ರದೇಶಗಳಲ್ಲಿ ಕಾರು, ಬೈಕ್‌ಗಳನ್ನು ಮಾಡಿಫೈ ಮಾಡಿಸುವುದು ಹೊಸತೆನಲ್ಲ. ಆದರೂ ಕೆಲ ಬಾರಿ ಮಾಡಿಫೈ ವಾಹನ ತಯಾಕರು ಮೂಲ ವಾಹನಗಳಿಂತಲೂ ಅದ್ಭುತ ರೀತಿಯಲ್ಲಿ ಹೊಸ ಹೊಸ ನಮೂನೆಯ ವಾಹನಗಳ ನಿರ್ಮಾಣದಲ್ಲಿ ಮುಂಚೂಣಿಯಲ್ಲಿದ್ದು, ಮಲ್ಲಪುರಂ ಜಿಲ್ಲೆಯ ತಿರೂರಿನಲ್ಲಿರುವ ಮಾಡಿಫೈ ಕಾರು ಸಂಸ್ಥೆಯೊಂದು ಅಭಿವೃದ್ಧಿ ಮಾಡಿರುವ ವಿಟಾರಾ ಬ್ರೆಝಾ ಮಾಡಿಫೈ ರೇಂಜ್ ರೋವರ್ ಇವೊಕ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಯಾಗುತ್ತಿದೆ.

ನಿಮೆಗೆಲ್ಲಾ ತಿಳಿದಿರುವಂತೆ ಜನಪ್ರಿಯ ಐಷಾರಾಮಿ ಕಾರುಗಳಲ್ಲಿ ರೇಂಜ್ ರೋವರ್ ಸಾಕಷ್ಟು ಬೇಡಿಕೆ ಪಡೆದುಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಇವೊಕ್ ಕಾರುಗಳಿಗೆ ಹೊಲಿಕೆಯಾಗುವ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನೇ ಇಲ್ಲಿ ಮಾಡಿಫೈಗಾಗಿ ಬಳಕೆ ಮಾಡಲಾಗಿದೆ.

ರೇಂಜ್ ರೋವರ್ ಇವೊಕ್ ಮಾದರಿಯಲ್ಲಲೇ ಕಾರಿನ ಬ್ಯಾನೆಟ್, ಸ್ಪೋರ್ಟಿ ಗ್ರಿಲ್, ಹೆಡ್ ಲ್ಯಾಂಪ್, ಫಾಗ್ ಲ್ಯಾಂಪ್, ಸೈಡ್ ಪ್ರೊಫೈಲ್ ಡಿಸೈನ್, ರಿಯರ್ ವ್ಯೂ ಮಿರರ್, ಸನ್‌ರೂಫ್ ಮತ್ತು 19 ಇಂಚಿನ ಸ್ಪೋರ್ಟಿ ಟೈರ್‌ಗಳನ್ನ ಬಳಕೆ ಮಾಡಿರುವುದು ಕಾರಿನ ಪ್ರಮುಖ ಆಕರ್ಷಣೆಯಾಗಿದೆ.

ಇನ್ನು ಕಾರಿನ ಹಿಂಭಾಗದ ಡಿಸೈನ್ ಸಹ ಗಮನಸೆಳೆಯುವಂತಿದ್ದು, ವಿಂಡ್‌ಸ್ಕ್ರೀನ್, ಟೈಲ್ ಲ್ಯಾಂಪ್, ಸ್ಪಾಯ್ಲರ್, ಸ್ಪೋರ್ಟಿ ಎಕ್ಸಾಸ್ಟ್‌ನೊಂದಿಗೆ ಡೋರ್ ಹ್ಯಾಂಡಲ್ ಮತ್ತು ಶಾರ್ಪ್ ಎಡ್ಜ್‌ಗಳು ಕಾರಿಗೆ ಹೊಸ ಲುಕ್ ನೀಡಿವೆ ಎನ್ನಬಹುದು.

ಮಾಡಿಫೈ ರೇಂಜ್ ರೋವರ್ ಇವೊಕ್ ಕಾರಿನಲ್ಲಿ ಹೊರಭಾಗದ ಡಿಸೈನ್‌ಗಳಷ್ಟೇ ಅಲ್ಲದೇ ಇಂಟಿರಿಯರ್ ಡಿಸೈನ್‌ಗಳಲ್ಲೂ ಪ್ರಮುಖ ಬದಲಾವಣೆ ತರಲಾಗಿದ್ದು, ಐಷಾರಾಮಿ ಕಾರಿನ ಮಾದರಿಯಲ್ಲೇ ಲೆದರ್ ಮೌಟೆಂಡ್ ಸ್ಟೀರಿಂಗ್ ವೀಲ್ಹ್ ಮತ್ತು ಲೆದರ್ ಸೀಟ್‌ಗಳನ್ನು ಬಳಕೆ ಮಾಡಲಾಗಿದೆ.

ಎಂಜಿನ್ ವಿಚಾರಕ್ಕೆ ಬಂದಲ್ಲಿ ವಿಟಾರಾ ಬ್ರೇಝಾ ಕಾರಿನ ಮೂಲ ಎಂಜಿನ್ ಮಾದರಿಯನ್ನೇ ಇಲ್ಲೂ ಮುಂದುವರಿಸಲಾಗಿದ್ದು, ವಿಟಾರಾ ಬ್ರೇಝಾ ಕಾರುಗಳು 1.3-ಲೀಟರ್ ಫೌರ್ ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದ್ದು, 88-ಬಿಎಚ್‌ಪಿ ಮತ್ತು 200ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು.

ಈ ಮೂಲಕ ಮಾಡಿಫೈ ರೇಂಜ್ ರೋವರ್ ಇವೊಕ್ ಟಚ್ ನೀಡುವಲ್ಲಿ ಯಶಸ್ವಿಯಾಗಿರುವ ತಿರೂರು ಮಾಡಿಫೈ ಸಂಸ್ಥೆಯು, ಬರೋಬ್ಬರಿ 2.50 ಲಕ್ಷ ಮೌಲ್ಯದ ಮಾಡಿಫೈ ಬೀಡಿಭಾಗಗಳನ್ನು ಬಳಕೆ ಮಾಡಿರುವುದಲ್ಲದೇ ಈ ಕಾರನ್ನು ಸಿದ್ದಗೊಳಿಸಲು ಬರೋಬ್ಬರಿ 2 ತಿಂಗಳ ಕಾಲ ಸಮಯ ತಗೆದುಕೊಂಡಿದೆ.

ಸದ್ಯ ಮೊದಲ ರೇಂಜ್ ರೋವರ್ ಇವೊಕ್ ಮಾಡಿಫೈ ಕಾರಿನಿಂದ ಆಕರ್ಷಿತರಾಗಿರುವ ನೂರಾರು ಎಸ್‌ಯುವಿ ಕಾರು ಪ್ರಿಯರು ತಮ್ಮ ಬ್ರೆಝಾ ಕಾರನ್ನು ಮಾಡಿಫೈ ಮಾಡಿಸಲು ಮುಂದಾಗಿದ್ದು, ಸಾಮಾಜಿಕ ಜಾಲತಾಣದಲ್ಲೂ ಸಹ ಹೊಸ ಮಾಡಿಫೈ ಕಾರಿನ ಬಗೆಗೆ ಭಾರೀ ಚರ್ಚೆಗಳು ಸಹ ನಡೆಯುತ್ತಿವೆ.
ವಿಟಾರಾ ಬ್ರೆಝಾ ಕಾರಿನ ಎಂಜಿನ್‌ನೊಂದಿಗೆ ಮಾಡಿಫೈಗೊಂಡಿರುವ ರೇಂಜ್ ರೋವರ್ ಇವೊಕ್ ಕಾರಿನ ವಿಡಿಯೋ ಇಲ್ಲಿದೆ ನೋಡಿ.
Source: Modified Cars

ಇದಲ್ಲದೇ ಕೈಗೆಟುಕುವ ಬೆಲೆಗಳಲ್ಲಿ ಲಭ್ಯವಿರುವ ಜನಪ್ರಿಯ ಎಸ್‌ಯುವಿಗಳಲ್ಲಿ ವಿಟಾರಾ ಬ್ರೆಝಾ ಸಹ ಮುಂಚೂಣಿಯಲ್ಲಿದ್ದು, ಮಧ್ಯಮ ವರ್ಗದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣ ಮಾಡಲಾಗಿರುವ ಈ ಕಾರು ಮಾದರಿಯು ಇಂದು ಟಾಪ್ 10ರ ಕಾರು ಮಾರಾಟ ಪಟ್ಟಿಯಲ್ಲಿ ಸ್ಥಾನಪಡೆಯುವಲ್ಲಿ ಯಶಸ್ವಿಯಾಗಿದೆ.


Click it and Unblock the Notifications








