ಲಿಮಿಟೆಡ್ ಎಡಿಷನ್ ವ್ಯಾಗನ್ ಆರ್ ಕಾರನ್ನು ಬಿಡುಗಡೆಗೊಳಿಸಿದ ಮಾರುತಿ ಸುಜುಕಿ
ದೇಶದ ಅಗ್ರ ವಾಹನ ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ ಮಾರುತಿ ಸುಜುಕಿ ತಮ್ಮ ಜನಪ್ರಿಯ ವ್ಯಾಗನ್ ಆರ್ ಕಾರಿನ ಲಿಮಿಟೆಡ್ ಎಡಿಷನ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ವ್ಯಾಗನ್ ಆರ್ ಲಿಮಿಟೆಡ್ ಎಡಿಷನ್ ಕಾರು ಹೊಸ ವೈಶಿಷ್ಟ್ಯತೆ ಮತ್ತು ಬಾಡಿ ಗ್ರಾಫಿಕ್ಸ್ ಅನ್ನು ಪಡೆದುಕೊಂಡಿದೆ.

ಹೊಸದಾಗಿ ಬಿಡುಗಡೆಗೊಂಡ ಮಾರುತಿ ಸುಜುಕಿ ವ್ಯಾಗನ್ ಆರ್ ಲಿಮಿಟೆಡ್ ಎಡಿಷನ್ ಕಾರು ಹೊಸ ಫೀಚರ್ಸ್ ಮತ್ತು ಆಕರ್ಷಕ ಒಳಭಾಗದ ವಿನ್ಯಾಸವನ್ನು ಪಡೆದುಕೊಂಡಿದ್ದು, ಸ್ಪೀಕರ್‍ನೊಂದಿಗೆ ಡಬಲ್ ಡಿನ್ ಬ್ಲೂಟೂತ್ ಮ್ಯೂಸಿಕ್ ಸಿಸ್ಟಂ ಮತ್ತು ರಿವರ್ಸ್ ಪಾರ್ಕಿಂಗ್ ಸೆನ್ಸಾರ್‍ಗಳನ್ನು ನೀಡಲಾಗಿದೆ.

ಹೊಸ ವೈಶಿಷ್ಟ್ಯತೆಗಳನ್ನು ಹೊರತುಪಡಿಸಿ ಲಿಮಿಟೆಡ್ ಎಡಿಷನ್ ವ್ಯಾಗನ್ ಆರ್ ಕಾರು ಆರೆಂಜ್ ಬಣ್ಣದಲ್ಲಿ ಸಜ್ಜುಗೊಂಡ ಸೀಟ್ ಕವರ್ಸ್, ಸೆಂಟರ್ ಕಂಸೋಲ್ ಮತ್ತು ಡೋರ್ ಟ್ರಿಮ್‍ಗಳ ಮೇಲೆ ಫ್ಲಕ್ಸ್ ವುಡ್ ಪಿನಿಶ್, ಪ್ರೀಮಿಯಮ್ ಕ್ಯೂಷನ್ ಸೆಟ್, ಕಾರಿನ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಬಾಡಿ ಗ್ರಾಫಿಕ್ಸ್ ಅನ್ನು ನೀಡಲಾಗಿದೆ.

ಎಂಜಿನ್ ಸಾಮರ್ಥ್ಯ
ಮರುತಿ ವ್ಯಾಗನ್ ಆರ್ ಲಿಮಿಟೆಡ್ ಎಡಿಷನ್ ಕಾರು 998ಸಿಸಿ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 67-ಬಿಹೆಚ್‍ಪಿ ಮತ್ತು 90-ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 5-ಸ್ಪೀಡ್ ಎಎಂಟಿ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಬಿಡುಗಡೆಗೊಂಡಾಗಿನಿಂದಲೂ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡುದುಕೊಂಡಿದ್ದು, ಎಂಟ್ರಿ ಲೆವೆಲ್ ಹ್ಯಾಚ್‍ಬ್ಯಾಕ್ಸ್ ಕಾರುಗಳ ಮಾರಾಟದ ಟಾಪ್ 5 ಲಿಸ್ಟ್ ನಲ್ಲಿ ಸ್ಥಾನವನ್ನು ಪಡೆದುಕೊಂಡಿದೆ.

ಮಾರುತಿ ಸುಜುಕಿ ವ್ಯಾಗನ್ ಆರ್ ಲಿಮಿಟೆಡ್ ಎಡಿಷನ್ ಕಾರು ಎರಡು ವಿವಿಧ ಮಾದರಿಯ ಆಪ್ಷನಲ್ ಆಕ್ಸಿಸರಿ ಕಿಟ್‍ನೊಂದಿಗೆ ಖರೀದಿಗೆ ಲಭ್ಯವಿದ್ದು, ಬೆಲೆಯನ್ನು ರೂ.15,490 ಸಾವಿರ ಮತ್ತು ರೂ.25,490 ಸಾವಿರಕ್ಕೆ ನಿಗದಿಗೊಳಿಸಲಾಗಿದೆ.

ಮಾರುತಿ ಸುಜುಕಿ 2019ರಲ್ಲಿ ಹೊಸ ತಲೆಮಾರಿನ ವ್ಯಾಗನಾರ್ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಿದ್ದು, ಹೊಸ ವಿನ್ಯಾಸ ಮತ್ತು ಹೊಸ ಒಳಾಂಗಣವನ್ನು ಪಡೆಯಲಿದೆ. ಆದರೆ ತಾಂತ್ರಿಕವಾಗಿ ಯಾವುದೇ ಬದಲಾವಣೆಗಳನ್ನು ಪಡೆದುಕೊಂಡಿರುವುದಿಲ್ಲ ಎನ್ನಲಾಗಿದೆ. ಅದಲ್ಲದೇ ಸಂಸ್ಥೆಯು 2020ರ ವೇಳೆಗೆ ವ್ಯಾಗನಾರ್ ಕಾರಿನ ಎಲೆಕ್ಟ್ರಿಕ್ ಕಾರುಗಳನ್ನು ಕೂಡಾ ಮಾರುಕಟ್ಟೆಗೆ ಪರಿಚಯಿಸಲಿದೆ ಎನ್ನಲಾಗಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಮಾರುತಿ ಸುಜುಕಿ ಸಂಸ್ಥೆಯು ತಮ್ಮ ವ್ಯಾಗನಾರ್ ಕಾರಿನ ಲಿಮಿಟೆಡ್ ಎಡಿಷನ್ ಅನ್ನು ಬಿಡುಗಡೆಗೊಳಿಸಿದ್ದು, ಕೇವಲ ಸಂಸ್ಥೆಯ ಮಾಸಿಕ ಮಾರಾಟದ ಸಂಖ್ಯೆಯನ್ನು ಅಧಿಕಗೊಳಿಸಲು ಮಾತ್ರ ಪರಿಚಯಿಸಲಾಗಿದೆ. ಈ ಕಾರು ನವೀಕರಣದೊಂದಿಗೆ ಬಿಡುಗಡೆಗೊಂಡಿದ್ದರೂ ಸ್ಟ್ಯಾಂಡರ್ಡ್ ಮಾಡಲ್‍ಗೆ ಹೋಲಿಸಿದರೆ ಪ್ರೀಮಿಯಂ ಸೌಕರ್ಯವನ್ನು ಒದಗಿಸುತ್ತದೆ ಎನ್ನಬಹುದು.
More from DriveSpark
ಟಾಟಾ ಮೋಟಾರ್ಸ್ ಟಿಯಾಗೊ ಎನ್ಆರ್‌ಜಿ ಕಾರಿನ ಫೋಟೋ ಗ್ಯಾಲರಿ.!


Click it and Unblock the Notifications








