ಮರ್ಸಿಡಿಸ್ ಬೆಂಝ್ ಸಿಎಲ್ಎ 200 ಮತ್ತು 200 ಡಿ ಅರ್ಬನ್ ಸ್ಪೋರ್ಟ್ ಕಾರು ಬಿಡುಗಡೆ
ಮರ್ಸಿಡಿಸ್ ಬೆಂಝ್ ಸಂಸ್ಥೆಯು ಎಂಟ್ರಿ ಲೆವಲ್ ಸೆಡಾನ್ ಕಾರುಗಳಲ್ಲಿ ಹೊಸ ಬದಲಾವಣೆ ತರುತ್ತಿದ್ದು, ಗ್ರಾಹಕರ ಆಕರ್ಷಣೆಗಾಗಿ ಸಿಎಲ್ಎ 200 ಮತ್ತು 200 ಡಿ ಅರ್ಬನ್ ಸ್ಪೋರ್ಟ್ ಮಾದರಿಯನ್ನು ಬಿಡುಗಡೆಗೊಳಿಸುವ ಮೂಲಕ ಸೆಡಾನ್ ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ.

ಬಿಡುಗಡೆಗೊಂಡಿರುವ ಮರ್ಸಿಡಿಸ್ ಬೆಂಝ್ ಸಿಎಲ್ಎ 200 ಮತ್ತು 200 ಡಿ ಅರ್ಬನ್ ಸ್ಪೋರ್ಟ್ ಕಾರುಗಳು ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕವಾಗಿ ರೂ. 35.99 ಲಕ್ಷ ಬೆಲೆ ಪಡೆದಿದ್ದು, ಎಂಟ್ರಿ ಲೆವಲ್ ಸೆಡಾನ್ ಮಾದರಿಗಳಲ್ಲಿ ಈ ಹೊಸ ಕಾರು ಭಾರೀ ಜನಪ್ರಿಯತೆ ಪೆಡೆದುಕೊಳ್ಳುವ ತವಕದಲ್ಲಿದೆ.

ಈ ಹಿಂದಿನ ಸಿಎಲ್‌ಎ ಕ್ಲಾಸ್ ಸಿಎಲ್‌ಎ 200 ಸಿಡಿಐ ಸ್ಪೋರ್ಟ್ ಮಾದರಿಯಂತೆಯೇ ಹೊಸ ಸಿಎಲ್ಎ 200 ಮತ್ತು 200 ಡಿ ಅರ್ಬನ್ ಸ್ಪೋರ್ಟ್ ಕಾರುಗಳು ಸಹ ಒಂದೇ ರೀತಿಯಾದ ಎಂಜಿನ್ ಸೌಲಭ್ಯವನ್ನು ಪಡೆದಿದ್ದು, ಕಾರಿನಲ್ಲಿ ವಿನ್ಯಾಸಗಳಲ್ಲಿ ಮತ್ತು ಕೆಲವು ಹೊಸ ಸೌಲಭ್ಯಗಳು ಬದಲಾವಣೆಗೊಂಡಿವೆ.

ಹೊಸ ಸಿಎಲ್ಎ 200 ಡಿ ಅರ್ಬನ್ ಸ್ಪೋರ್ಟ್ ಕಾರುಗಳು ಕಾಸ್ಮೋಸ್ ಬ್ಲ್ಯಾಕ್ ಪೇಂಟ್‌ನೊಂದಿಗೆ ಮಿಂಚಲಿದ್ದು, ಲೈಟಿಂಗ್ ಸಿಸ್ಟಂ, ಕಾರಿನ ರಿಯಲ್ ಪ್ರೋಫೈಲ್, ಡಕ್‌ಟೈಲ್ ಸ್ಪಾಯ್ಲರ್, ಫೈವ್ ಸ್ಪೋಕ್ ಅಲಾಯ್ ವೀಲ್ಹ್‌ಗಳು ಮತ್ತು ಫ್ರೆಮ್ ಲೆಸ್ ಡೋರ್ ವಿನ್ಯಾಸ ಪಡೆದಿದೆ.

ಹಾಗೆಯೇ ಕಾರಿನ ಒಳಭಾಗದಲ್ಲಿ ವಿಶ್ವದರ್ಜೆ ಇಂಟಿರಿಯರ್ ಸೌಲಭ್ಯಗಳನ್ನು ನೀಡಲಾಗಿದ್ದು, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, ಬೆಂಝ್ ಸಂಸ್ಥೆಯ ಟೆರ್ಮೋಟೊನಿಕ್, ರಿಯರ್ ಸೆಂಟರ್ ವೆಂಟ್ಸ್‌ಗಳು ಕಾರಿನ ಆಕರ್ಷಣೆಗೆ ಕಾರಣವಾಗಿವೆ.
MOST READ: ಕೊನೆಗೂ ಮರ್ಸಿಡಿಸ್ ಬೆಂಝ್ ಕಾರನ್ನ ಖರೀದಿ ಮಾಡಿಯೇ ಬಿಟ್ಟ ರೈತ..!

ಎಂಜಿನ್ ಸೌಲಭ್ಯ
ಹೊಸ ಮರ್ಸಿಡಿಸ್ ಬೆಂಝ್ ಸಿಎಲ್ಎ 200 ಕಾರು 2.0-ಲೀಟರ್ ಫೌರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 184-ಬಿಎಚ್‌ಪಿ ಮತ್ತು 300-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಹಾಗೆಯೇ 200 ಡಿ ಅರ್ಬನ್ ಸ್ಪೋರ್ಟ್ ಕಾರುಗಳು 2.0-ಲೀಟರ್ ಫೌರ್ ಸಿಲಿಂಡರ್ ಡಿಸೇಲ್ ಎಂಜಿನ್ ಹೊಂದಿದ್ದು, 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 136-ಬಿಎಚ್‌ಪಿ ಮತ್ತು 300-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಸ್ಪೋರ್ಟ್ ಟ್ಯಾಗ್ ಪಡೆದುಕೊಂಡಿವೆ.

ಹೊಸ ಕಾರುಗಳ ಬಿಡುಗಡೆ ಕುರಿತಂತೆ ಮಾತನಾಡಿರುವ ಮರ್ಸಿಡಿಸ್ ಬೆಂಝ್ ಇಂಡಿಯಾ ಎಂಡಿ ರೋಲ್ಯಾಂಡ್ ಫೋಲ್ಗರ್ ಅವರು, ಎಂಟ್ರಿ ಲೆವಲ್‌ನಲ್ಲಿ ಸ್ಪೋರ್ಟಿ ಕಾರುಗಳಿಗೆ ಬೇಡಿಕೆ ಹಿನ್ನೆಲೆಯಲ್ಲಿ ಕೈಗೆಟುಕುವ ಬೆಲೆಗಳಲ್ಲಿ ಸಿಎಲ್ಎ 200 ಆವೃತ್ತಿಗಳನ್ನು ಹೊರತಂದಿದ್ದು, ಇದು ಐಷಾರಾಮಿ ಜೊತೆಗೆ ಪರ್ಫಾಮೆನ್ಸ್‌ಗೂ ಸಹಕಾರಿಯಾಗಲಿವೆ ಎಂದಿದ್ದಾರೆ.

ಮರ್ಸಿಡಿಸ್ ಸಂಸ್ಥೆಯು ಈ ಹಿಂದೆಯೇ ಸಿಎಲ್ಎ 200 ಆವೃತ್ತಿಗಳನ್ನು ಹೊರತಂದಿದ್ದಲ್ಲದೇ ಬೇಡಿಕೆ ಕುಸಿತಯಿಂದಾಗಿ ಉತ್ಪಾದನೆಯನ್ನು ತಾತ್ಕಾಲಿಕವಾಗಿ ತಡೆಹಿಡಿತ್ತು. ಆದ್ರೆ ಕಳೆದ ಕೆಲ ದಿನಗಳಿಂದ ಎಂಟ್ರಿ ಲೆವಲ್ ಸ್ಪೋರ್ಟಿ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಹೊಸ ಬದಲಾವಣೆಗಳೊಂದಿಗೆ ಸಿಎಲ್ಎ 200 ಮತ್ತು ಸಿಎಲ್ಎ 200 ಅರ್ಬನ್ ಸ್ಪೋಟ್ ಹೊರತರಲಾಗಿದೆ.


Click it and Unblock the Notifications








