ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ಫೇಸ್‌ಲಿಫ್ಟ್ ಕಾರಿನ ಬಿಡುಗಡೆ ಮಾಹಿತಿ ಇಲ್ಲಿದೆ..
ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆ ಮರ್ಸಿಡಿಸ್ ಬೆಂಝ್ ನವೀಕೃತ ಎಸ್ ಕ್ಲಾಸ್ ಸೆಡಾನ್ ಕಾರು ಆವೃತ್ತಿಯು ಭಾರತದಲ್ಲಿ ಭಾರೀ ನೀರಿಕ್ಷೆ ಹುಟ್ಟುಹಾಕಿದ್ದು, ಇದೇ ತಿಂಗಳು 26ರಂದು ಮಾರುಕಟ್ಟೆಗೆ ಲಗ್ಗೆಯಿಡುವುದು ಖಚಿತವಾಗಿದೆ.
ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆ ಮರ್ಸಿಡಿಸ್ ಬೆಂಝ್ ನವೀಕೃತ ಎಸ್ ಕ್ಲಾಸ್ ಸೆಡಾನ್ ಕಾರು ಆವೃತ್ತಿಯು ಭಾರತದಲ್ಲಿ ಭಾರೀ ನೀರಿಕ್ಷೆ ಹುಟ್ಟುಹಾಕಿದ್ದು, ಇದೇ ತಿಂಗಳು 26ರಂದು ಮಾರುಕಟ್ಟೆಗೆ ಲಗ್ಗೆಯಿಡುವುದು ಖಚಿತವಾಗಿದೆ.

ಈ ಹಿಂದೆ 2017ರ ಏಪ್ರಿಲ್ ತಿಂಗಳಿನಲ್ಲಿ ನೆಡೆದ ಶಾಂಘೈ ಮೋಟಾರ್ ಶೋನಲ್ಲಿ ಮರ್ಸಿಡಿಸ್ ಬೆಂಝ್ ಸಂಸ್ಥೆಯು ತನ್ನ ಪ್ರಮುಖ ಐಷಾರಾಮಿ ಸೆಡಾನ್ ಕಾರಿನ ಪುನರಾವರ್ತನಾ ಮಾಡೆಲ್ ಬಹಿರಂಗಪಡಿಸಿದ್ದಲ್ಲದೇ ಸದ್ಯದಲ್ಲೇ ಬಿಡುಗಡೆ ಮಾಡುವ ಬಗ್ಗೆ ಮಾಹಿತಿ ನೀಡಿತ್ತು.

ಹೊಸ ಎಸ್ ಕ್ಲಾಸ್ ಕಳೆದ ಜುಲೈನಲ್ಲೇ ಯುರೋಪಿಯನ್ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಿದ್ದು, ಇದೀಗ ಈ ಹೊಸ ಸೆಡಾನ್ ಫೇಸ್ ಲಿಫ್ಟ್ ಆವೃತಿಯನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಜ್ಜಾಗಿದೆ.

ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರಿನ 2018ರ ಆವೃತ್ತಿಯಲ್ಲಿ ಹೊಸ ವಿನ್ಯಾಸ ಅಂಶಗಳು, ಆಂತರಿಕ ಮತ್ತು ಹಲವಾರು ಹೊಸ ಸುರಕ್ಷತಾ ವೈಶಿಷ್ಟ್ಯಗಳನ್ನು ನವೀಕರಿಸಲಾಗಿದೆ. ಯಾಂತ್ರಿಕವಾಗಿ, 2018ರ ಎಸ್-ಕ್ಲಾಸ್ ಕಾರು ಜಾಗತಿಕ ಮಾರುಕಟ್ಟೆಯಲ್ಲಿನ ಹೊಸ ಎಂಜಿನ್ ಆಯ್ಕೆಗಳನ್ನು ಪಡೆದುಕೊಂಡಿದೆ.

ಕಾರಿನ ಮುಂಭಾಗದ ವಿನ್ಯಾಸವು ಸ್ವಲ್ಪಮಟ್ಟಿನ ಟ್ವೀಕ್ಡ್ ಫ್ರಂಟ್ ಗ್ರಿಲ್, ಹೊಸ ಹೆಡ್‌ಲ್ಯಾಂಪ್, ಮರುವಿನ್ಯಾಸಗೊಳಿಸಲಾದ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳನ್ನು ಹೊಂದಿದ್ದು, ಕೆಲವು ಸಣ್ಣ ಟ್ವೀಕ್‌ಗಳನ್ನು ಹೊರತುಪಡಿಸಿ 2017ರ ಮಾದರಿಗೆ ಹೋಲಿಕೆ ಇದೆ.

ಇನ್ನು 2018ರ ಎಸ್-ಕ್ಲಾಸ್ ಕಾರಿನ ಒಳಭಾಗದಲ್ಲಿ ಹೊಸ ಸ್ಟೇರಿಂಗ್ ವೀಲ್, 12.3 ಇಂಚಿನ ಹೈ ರೆಸಲ್ಯೂಶನ್ ಪರದೆ, ಹೊಸ ಮರದ ಮತ್ತು ಚರ್ಮದ ಟ್ರಿಮ್ ಆಯ್ಕೆಗಳನ್ನು ಪಡೆಯುತ್ತದೆ.

ಮರ್ಸಿಡಿಸ್ ಬೆಂಜ್ ಎಸ್ ಕ್ಲಾಸ್ ಕಾರು ಪ್ರಸ್ತುತ ಲಭ್ಯವಿರುವ 3 ಲೀಟರ್ ವಿ6 ಎಂಜಿನ್ ಬದಲಾಗಿ, ಹೊಸ 3-ಲೀಟರ್ ಇನ್ಲೈನ್ ಆರು-ಸಿಲಿಂಡರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆಯುವ ನಿರೀಕ್ಷೆಯಿದೆ.

ಹೊಸ ಎಸ್-ಕ್ಲಾಸ್ ಕಾರಿನ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಈ ಕಾರು ಆಕ್ಟಿವ್ ಎಮರ್ಜೆನ್ಸಿ ಸ್ಟಾಪ್ ಸಹಾಯ, ಆಕ್ಟಿವ್ ಸ್ಟಿಯರಿಂಗ್ ಮತ್ತು ಡಿಸ್ಟೆನ್ಸ್ ಸಹಾಯ ಮತ್ತು ಆಕ್ಟಿವ್ ಲೇನ್ ಚೇಂಜ್ ಸಹಾಯ ಪಡೆದುಕೊಂಡಿದೆ.

ಬಾಹ್ಯ, ಆಂತರಿಕ ಮತ್ತು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಮರ್ಸಿಡಿಸ್ ಬೆಂಜ್ ಎಸ್-ಕ್ಲಾಸ್ ಕಾರನ್ನು ಭಾರತದಲ್ಲಿ ಪರಿಚಯಿಸುತ್ತಿದ್ದು, ಐಷಾರಾಮಿ ಸೆಡಾನ್ ಪ್ರಿಯರಿಗೆ ಹೊಸ ಅನುಭವ ನೀಡಲಿದೆ.


Click it and Unblock the Notifications