ಮರ್ಸಿಡಿಸ್ ಸಂಸ್ಥೆಯು ಬಿಡುಗಡೆಗೊಳಿಸಲ್ಲಿರುವ ವಿ-ಕ್ಲಾಸ್ ಎಂಪಿವಿ ಕಾರಿನ ವಿಶೇಷತೆ ಏನು.?
ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಮರ್ಸಿಡೀಸ್-ಬೆಂಝ್ ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನ ಬಂಡವಾಳವನ್ನು ಹೆಚ್ಚಿಸುವುದರ ಬಗ್ಗೆ ಸುಳಿವು ನೀಡಿದೆ. ಈ ನಿಟ್ಟಿನಲ್ಲಿ ಸಂಸ್ಥೆಯು ವಿ-ಕ್ಲಾಸ್ ವ್ಯಾನ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ 2019ರ ಜನವರಿ 24ರಂದು ಬಿಡುಗಡೆಗೊಳಿಸಲಿದ್ದು, ಹೊಸ ವಾಹನ ಮಾಹಿತಿ ಇಲ್ಲಿದೆ ನೋಡಿ.

ಮರ್ಸಿಡೀಸ್ ಪರಿಚಯಿಸಲಿರುವ ಹೊಸ ವಿ-ಕ್ಲಾಸ್ ವ್ಯಾನ್‌ಗಳು ಸ್ವಂತ ಬಳಕೆಗೆ ಮತ್ತು ಲಾಂಗ್ ಡ್ರೈವ್ ಟ್ಯಾಕ್ಸಿ ರೈಡಿಂಗ್ ಉದ್ದೇಶಗಳಿಗಾಗಿ ಬಳಸಿಕೊಳ್ಳಬಹುದಾಗಿದೆ. ಈ ವ್ಯಾನ್‌ನಲ್ಲಿ ಆರು ಮಂದಿ ಕೂರಬಹುದಾಗಿದ್ದು, ಅಲ್ಲದೇ ಎರಡು ಬೆಂಚ್ ಸ್ಥಾನಗಳೊಂದಿಗೆ ಗರಿಷ್ಠ ಎಂಟು ಜನರು ಕೂರಬಹುದಾದ ಅವಕಾಶ ಕಲ್ಪಿಸಿಕೊಳ್ಳಬಹುದಾಗಿದೆ.

'ಭಾರತದಲ್ಲಿ ಹೊಸ ವಾಹನಗಳ ಅಮದು ಮಾಡಿಕೊಳ್ಳುವ ವ್ಯವಸ್ಥೆಯು ಸುಲಭವಾಗಿರುವ ಕಾರಣ ಸಂಸ್ಥೆಯು ವಿ-ಕ್ಲಾಸ್ ವ್ಯಾನ್ ಅನ್ನು ಶೀಘ್ರವೇ ಮಾರುಕಟ್ಟೆಯಲ್ಲಿ ಪರಿಚಯಿಸಲಿದ್ದೇವೆ' ಎಂದು ಮರ್ಸಿಡೀಸ್ ಬೆಂಝ್ ಇಂಡಿಯಾದ ಮಾರುಕಟ್ಟೆ ವಿಭಾಗದ ಅಧ್ಯಕ್ಷ ಮೈಕಲ್ ಜಾಪ್ ಅವರು ಹೇಳಿಕೊಂಡಿದ್ದಾರೆ.

ಮರ್ಸಿಡೀಸ್ ಬೆಂಝ್ ಸಂಸ್ಥೆಯು ವಿ-ಕ್ಲಾಸ್ ವ್ಯಾನ್ ಅನ್ನು ಟ್ಯಾಕ್ಸಿ ನಿರ್ವಾಹಕರು ತಮ್ಮ ಅತಿಥಿಗಳನ್ನು ಸಾಗಿಸಲು ಮತ್ತು ಐಷಾರಾಮಿ ಹೋಟೆಲ್ ಸೇವೆಗಳಿಗಾಗಿಯೇ ವಿಶೇಷವಾಗಿ ಈ ವಾಹನವನ್ನು ಸಿದ್ದಪಡಿಸಿದ್ದಾರೆ.

ಐಷರಾಮಿ ಸೌಲಭ್ಯವನ್ನು ಒದಗಿಸಲು ಮಾರುಕಟ್ಟೆಗೆ ಲಗ್ಗೆಯಿಡಲಿರುವ ಹೊಸ ಮರ್ಸಿಡೀಸ್ ಬೆಂಝ್ ವಿ-ಕ್ಲಾಸ್ ವ್ಯಾನ್‍ಗಳು, (4895ಎಂಎಂ) ಕಾಂಪ್ಯಾಕ್ಟ್, (5140ಎಂಎಂ) ಲಾಂಗ್ ಮತ್ತು (5370ಎಂಎಂ) ಎಕ್ಸ್ಟ್ರಾ ಲಾಂಗ್ ಎಂಬ ಮೂರು ಆಕಾರಗಳಲ್ಲಿ ದೊರೆಯಲಿದೆ.

ಹೊಸ ಮರ್ಸಿಡೀಸ್ ಬೆಂಝ್ ವಿ-ಕ್ಲಾಸ್ ವ್ಯಾನ್‌ಗಳಲ್ಲಿ ಎಲೆಕ್ಟ್ರಿಕ್ ಸ್ಲೈಡಿಂಗ್ ಡೋರ್ಸ್, ಪನೊರಮಿಕ್ ಸನ್‍ರೂಫ್, ಎಲೆಕ್ಟ್ರಾನಿಕ್ ಕ್ಲೈಮೇಟ್ ಕಂಟ್ರೋಲ್ ಸಿಸ್ಟಮ್, ಹೀಟೆಡ್ ಮತ್ತು ಅಪರ್ ಸಪೋರ್ಟ್‍ನೊಂದಿಗೆ ವೆಂಟಿಲೇಟೆಡ್ ಸೀಟ್‍ಗಳನ್ನು ನೀಡಲಾಗಿದೆ.

ಇದಲ್ಲದೆ ಮರ್ಸಿಡೀಸ್ ಬೆಂಝ್‍ನ ವಿ-ಕ್ಲಾಸ್ ಐಷಾರಾಮಿ ವ್ಯಾನ್‍ನಲ್ಲಿ 5 ಲೀಟರ್ ಕೂಲಿಂಗ್ ಕಂಪಾರ್ಟ್ಮೆಂಟ್ ಮತ್ತು ಥರ್ಮಲ್ ಕಪ್ ಹೋಲ್ಡರ್‍ಗಳನ್ನು ಒದಗಿಸಲಾಗಿದೆ. ವಿ-ಕ್ಲಾಸ್ ವ್ಯಾನ್‌ಗಳು 2 ಲೀಟರ್ ಡೀಸೆಲ್ ಮತ್ತು 2 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರಲಿದೆ.

ಡೀಸೆಲ್ ಆಧಾರಿತ ವಿ-ಕ್ಲಾಸ್ ವ್ಯಾನ್‍ಗಳು 3 ವಿವಿಧ ಪವರ್ ಆಪ್ಷನ್ ಅನ್ನು ನೀಡಲಾಗಿದ್ದು, ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಅಥವಾ 7 ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ವಿ-ಕ್ಲಾಸ್ ವ್ಯಾನ್‌ನಲ್ಲಿ ಫ್ರಂಟ್ ಆಲ್ ವ್ಹೀಲ್ ಡ್ರೈವಿಂಗ್ ಕಾನ್ಫಿಗರೇಷನ್ ಮತ್ತು ಆಲ್ ವ್ಹೀಲ್ ಡ್ರೈವ್ ಅನ್ನು 4ಮ್ಯಾಟಿಕ್ ಎಂಡಬ್ಲ್ಯೂಡಿ ಸಿಸ್ಟಮ್ ಅನ್ನು ಆಯ್ಕೆಯಾಗಿ ನೀಡಲಾಗಿದೆ. ಆದರೆ ಭಾರತದಕ್ಕೆ ಬರಲಿರುವ ಈ ವ್ಯಾನ್‍ಗಳು ಕೇವಲ ಫ್ರಂಟ್ ವ್ಹೀಲ್-ಡ್ರೈವಿಂಗ್ ಸಿಸ್ಟಂ ಅನ್ನು ಮಾತ್ರ ಪಡೆಯಲಿದೆ ಎನ್ನಲಾಗಿದೆ.

ಸಡಿಲವಾದ ಆಮದು ನಿಯಮಗಳೊಂದಿಗೆ ಮರ್ಸಿಡೀಸ್-ಬೆಂಝ್ ಭಾರತದಲ್ಲಿ ವಿ-ಕ್ಲಾಸ್ ವ್ಯಾನ್ ಅನ್ನು ಪರಿಚಯಿಸಲು ಯೋಜನೆಯಲ್ಲಿದ್ದು, ಸಮ್ಮತಿ ಇಲ್ಲದೆ 2,500 ಯುನಿಟ್ ಕಾರುಗಳು / ದ್ವಿಚಕ್ರ ವಾಹನಗಳನ್ನು ಆಮದು ಮಾಡಲು ತಯಾರಕರು ಅನುಮತಿಸಲಾಗಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಪರಿಷ್ಕೃತ ಆಮದು ನಿಯಮಗಳ ಕಾರಣದಿಂದಾಗಿ ಮರ್ಸಿಡಿಸ್-ಬೆಂಝ್ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ ಉತ್ಪನ್ನವನ್ನು ಪ್ರಯೋಗಿಸಲು ಸಿದ್ಧವಾಗಿದೆ. ಮರ್ಸಿಡಿಸ್-ಬೆಂಝ್ ವಿ-ಕ್ಲಾಸ್ ವ್ಯಾನ್ ಫ್ಲೀಟ್ ಆಪ್‌ರೇಟರ್‌ಗಳಿಗೆ ಮತ್ತು ಐಷಾರಾಮಿ ಹೊಟೇಲ್‌ಗಳ ಗ್ರಾಹಕ ಸೇವೆಗೆ ಹೆಚ್ಚು ಬಳಕೆಯಾಗುವ ವಾಹನವಾಗಿದ್ದು, ಮರ್ಸಿಡಿಸ್-ಬೆಂಝ್ ವಿ-ಕ್ಲಾಸ್ ರೂ. 40 ಲಕ್ಷದಿಂದ ರೂ.48.5 ಲಕ್ಷದ ಎಕ್ಸ್ ಶೋರಂ ಬೆಲೆಯನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.
Source: AUTOCARINDIA

Click it and Unblock the Notifications








