ಬಿಎಸ್ 6 ಸೌಲಭ್ಯವುಳ್ಳ ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ಫೇಸ್‌ಲಿಫ್ಟ್ ಬಿಡುಗಡೆ

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆ ಮರ್ಸಿಡಿಸ್ ಬೆಂಝ್ ನವೀಕೃತ ಎಸ್ ಕ್ಲಾಸ್ ಸೆಡಾನ್ ಕಾರು ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ವಿನೂತನ ಕಾರುಗಳು ರೂ.1.33 ಕೋಟಿ ಆರಂಭಿಕ ಬೆಲೆಗಳನ್ನು ಪಡೆದುಕೊಂಡಿವೆ.

By Praveen

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆ ಮರ್ಸಿಡಿಸ್ ಬೆಂಝ್ ನವೀಕೃತ ಎಸ್ ಕ್ಲಾಸ್ ಸೆಡಾನ್ ಕಾರು ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ವಿನೂತನ ಕಾರುಗಳು ರೂ.1.33 ಕೋಟಿ ಆರಂಭಿಕ ಬೆಲೆಗಳನ್ನು ಪಡೆದುಕೊಂಡಿವೆ.

Recommended Video

[Kannada] Maruti Swift 2018 - Full Specifications, Features, Price, Mileage, Colours - DriveSpark
ಬಿಎಸ್ 6 ಸೌಲಭ್ಯವುಳ್ಳ ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ಫೇಸ್‌ಲಿಫ್ಟ್ ಬಿಡುಗಡೆ

2020ರ ವೇಳೆಗೆ ಭಾರತದಲ್ಲಿ ಬಿಎಸ್ 6 ವೈಶಿಷ್ಟ್ಯತೆಗಳ ವಾಹನಗಳು ಕಡ್ಡಾಯವಾಗಲಿದ್ದು, ಇದಕ್ಕೆ ಪೂರಕವಾಗಿ ಮರ್ಸಿಡಿಸ್ ಬೆಂಝ್ ಸಂಸ್ಥೆಯು ಮೊದಲ ಬಾರಿಗೆ ಎಸ್ ಕ್ಲಾಸ್ ಫೇಸ್‌ಲಿಫ್ಟ್ ಮಾದರಿಯನ್ನು ಬಿಎಸ್ 6 ಸೌಲಭ್ಯಗಳೊಂದಿಗೆ ಬಿಡುಗಡೆ ಮಾಡುವ ಮೂಲಕ ಭಾರತೀಯ ವಾಹನ ಉದ್ಯಮದಲ್ಲಿ ಹೊಸ ಅಲೆ ಸೃಷ್ಠಿಸಿದೆ.

ಬಿಎಸ್ 6 ಸೌಲಭ್ಯವುಳ್ಳ ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ಫೇಸ್‌ಲಿಫ್ಟ್ ಬಿಡುಗಡೆ

ನ್ಯೂ ಟರ್ಬೋ ಚಾರ್ಜ್ಡ್ ಎಂಜಿನ್‌ನೊಂದಿಗೆ ಹೊಸ ಎಸ್ ಕ್ಲಾಸ್ ಕಾರುಗಳನ್ನು ಅಭಿವೃದ್ಧಿ ಮಾಡಲಾಗಿದ್ದು, ಐಷಾರಾಮಿ ಸೆಡಾನ್ ಮಾದರಿಗಳಾದ ಎಸ್ 350 ಡಿ ಮತ್ತು ಎಸ್ 450 ಕಾರುಗಳನ್ನು ಸದ್ಯದ ಮಾರುಕಟ್ಟೆಗೆ ಅನುಗುಣವಾಗಿ ಸಿದ್ದಪಡಿಸಲಾಗಿದೆ.

ಬಿಎಸ್ 6 ಸೌಲಭ್ಯವುಳ್ಳ ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ಫೇಸ್‌ಲಿಫ್ಟ್ ಬಿಡುಗಡೆ

ಹೀಗಾಗಿ ಹೊಸ ಕಾರುಗಳಲ್ಲಿ ಒದಗಿಸಲಾಗಿರುವ ಸೌಲಭ್ಯಗಳಿಗೆ ಅನುಗುಣವಾಗಿ ಎಸ್ 350 ಡಿ ಬೆಲೆಯನ್ನು ರೂ.1.33 ಕೋಟಿಗೆ ಹಾಗೂ ಎಸ್ 400 ಕಾರಿನ ಬೆಲೆಯನ್ನು ರೂ.1.37 ಕೋಟಿಗೆ ನಿಗದಿ ಮಾಡಿದೆ.

ಬಿಎಸ್ 6 ಸೌಲಭ್ಯವುಳ್ಳ ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ಫೇಸ್‌ಲಿಫ್ಟ್ ಬಿಡುಗಡೆ

ಹೊಸ ಕಾರುಗಳ ಎಂಜಿನ್ ವೈಶಿಷ್ಟ್ಯತೆ

ಎಸ್ ಕ್ಲಾಸ್ 350 ಡಿ ಕಾರುಗಳು ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲೂ ಖರೀದಿಸಬಹುದಾಗಿದ್ದು, 3-ಲೀಟರ್ ಇನ್ ಲೈನ್ ಸಿಕ್ಸ್ ಸಿಲಿಂಡರ್ ಹೊಂದಿದೆ. ಈ ಮೂಲಕ 282-ಬಿಎಚ್‌ಪಿ ಮತ್ತು 600-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಬಿಎಸ್ 6 ಸೌಲಭ್ಯವುಳ್ಳ ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ಫೇಸ್‌ಲಿಫ್ಟ್ ಬಿಡುಗಡೆ

ಜೊತೆಗೆ 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪಡೆದಿರುವ ಎಸ್ ಕ್ಲಾಸ್ ಆವೃತ್ತಿಗಳು ಕೇವಲ 6 ಸೇಕೆಂಡುಗಳಲ್ಲಿ 0 ಟು 100 ಕಿಮಿ ವೇಗ ಸಾಧಿಸುವುದರ ಮೂಲಕ ಗಂಟೆಗೆ 250ಕಿಮಿ ಟಾಪ್ ಸ್ಪೀಡ್ ತಲುಪಬಲ್ಲವು.

ಬಿಎಸ್ 6 ಸೌಲಭ್ಯವುಳ್ಳ ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ಫೇಸ್‌ಲಿಫ್ಟ್ ಬಿಡುಗಡೆ

ಹಾಗೆಯೇ ಎಸ್ 450 ಕಾರುಗಳು ಕೂಡಾ 3-ಲೀಟರ್ ಸಿಕ್ಸ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಟ್ವಿನ್-ಟರ್ಬೋ ಇನ್ ಲೈನ್ ಸಿಕ್ಸ್ ಎಂಜಿನ್ ಮೂಲಕ 362-ಬಿಎಚ್‌ಪಿ ಮತ್ತು 500-ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ.

ಬಿಎಸ್ 6 ಸೌಲಭ್ಯವುಳ್ಳ ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ಫೇಸ್‌ಲಿಫ್ಟ್ ಬಿಡುಗಡೆ

ಇವು ಕೂಡಾ ಕೇವಲ 5.1 ಸೇಕೆಂಡುಗಳಲ್ಲಿ 0 ಟು 100 ವೇಗ ಪಡೆದುಕೊಳ್ಳುವುದಲ್ಲದೇ ಗಂಟೆಗೆ 250 ಕಿಮಿ ಟಾಪ್ ಸ್ಪೀಡ್ ಹೊಂದಿಲ್ಲದೇ 9-ಸ್ಪೀಡ್ ಆಟೋ ಮ್ಯಾಟಿಕ್ ಗೇರ್‌ಬಾಕ್ಸ್ ಜೋಡಣೆಯಿದೆ.

ಬಿಎಸ್ 6 ಸೌಲಭ್ಯವುಳ್ಳ ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ಫೇಸ್‌ಲಿಫ್ಟ್ ಬಿಡುಗಡೆ

ಕಾರಿನ ವಿನ್ಯಾಸಗಳು

ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರಿನ 2018ರ ಆವೃತ್ತಿಯಲ್ಲಿನ ಹೊಸ ವಿನ್ಯಾಸ ಅಂಶಗಳು, ಆಂತರಿಕ ಮತ್ತು ಹಲವಾರು ಹೊಸ ಸುರಕ್ಷತಾ ವೈಶಿಷ್ಟ್ಯತೆಗಳನ್ನು ನವೀಕರಿಸಲಾಗಿದ್ದು, ನ್ಯೂ ಮಲ್ಟಿ ಬಿಮ್ ಎಲ್ಇಡಿ ಹೆಡ್‌ಲ್ಯಾಂಪ್, ಟ್ರಿಪ್ಲಲ್ ಡೇ ಟೈಮ್ ರನ್ನಿಂಗ್ ಲೈಟ್ ನೀಡಿರುವುದು ಕಾರುಗಳಿಗೆ ಸ್ಪೋರ್ಟಿ ಲುಕ್ ನೀಡಿದೆ.

ಬಿಎಸ್ 6 ಸೌಲಭ್ಯವುಳ್ಳ ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ಫೇಸ್‌ಲಿಫ್ಟ್ ಬಿಡುಗಡೆ

ಇನ್ನು ಕಾರಿನ ಒಳಭಾಗದಲ್ಲಿ ಹೊಸ ಸ್ಟೇರಿಂಗ್ ವೀಲ್, 12.3 ಇಂಚಿನ ಹೈ ರೆಸಲ್ಯೂಶನ್ ಪರದೆ, ಹೊಸ ಮರದ ಮತ್ತು ಚರ್ಮದ ಟ್ರಿಮ್ ಆಯ್ಕೆಗಳನ್ನು ಪಡೆದಿದ್ದು, ವೈರ್ ಲೆಸ್ ಚಾರ್ಜಿಂಗ್ ಪಾಡ್, ಕ್ಲೈಮೆಟ್ ಕಂಟ್ರೋಲರ್, ಹಿಂಬದಿಯ ಸವಾರರಿಗೂ ಆರ್ಮ್ ರೆಸ್ಟ್ ಸೌಲಭ್ಯ ಒದಗಿಸಲಾಗಿದೆ.

ಬಿಎಸ್ 6 ಸೌಲಭ್ಯವುಳ್ಳ ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ಫೇಸ್‌ಲಿಫ್ಟ್ ಬಿಡುಗಡೆ

ಕೊನೆಯದಾಗಿ ಎಸ್ ಕ್ಲಾಸ್ ಕಾರು ಸರಣಿಗಳು ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಹೊಸ ಕಾರುಗಳಲ್ಲಿ ಆಕ್ಟಿವ್ ಎಮರ್ಜೆನ್ಸಿ ಸ್ಟಾಪ್ ಆಯ್ಕೆ ಇದ್ದು, ಮಲ್ಟಿ ಏರ್‌ಬ್ಯಾಗ್, ಇಬಿಡಿ, ಟ್ರಾನ್‌ಕ್ಷನ್ ಕಂಟ್ರೋಲರ್ ಸೇರಿಸಲಾಗಿದೆ.

Article Published On: Monday, February 26, 2018, 15:36 [IST]
English summary
2018 Mercedes S-Class Facelift Launched In India; Prices Start At Rs 1.33 Crore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+