ಭಾರತದಲ್ಲಿ ಎಂಜಿ ಮೋಟಾರ್ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದೆ ಬೃಹತ್ ಯೋಜನೆ..!

ದೇಶದ ಆಟೋಮೊಬೈಲ್ ಕ್ಷೇತ್ರದಲ್ಲಿ ಇತ್ತೀಚೆಗೆ ಭಾರೀ ಬದಲಾವಣೆ ಕಂಡುಬರುತ್ತಿದ್ದು, ಹೊಸ ಕಾರು ಉತ್ಪಾದನಾ ಸಂಸ್ಥೆಗಳು ಭಾರತದಲ್ಲಿ ತಮ್ಮ ಜನಪ್ರಿಯ ಕಾರು ಉತ್ಪನ್ನಗಳನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಬೃಹತ್ ಯೋಜನೆಗಳನ್ನು ರೂಪಿಸುತ್ತಿವೆ. ಇವುಗಳಲ್ಲಿ ಎಂಜಿ (ಮೊರಿಸ್ ಗ್ಯಾರೆಜ್) ಮೋಟಾರ್ ಕೂಡಾ ಒಂದು.

ಭಾರತದಲ್ಲಿ ಎಂಜಿ ಮೋಟಾರ್ಸ್ ಕಾರುಗಳ ಬಿಡುಗಡೆಗಾಗಿ ಸಿದ್ದವಾಗುತ್ತಿದೆ ಬೃಹತ್ ಯೋಜನೆ..!

ಬ್ರಿಟನ್ ಮೂಲದ ಎಂಜಿ ಮೋಟಾರ್ ಸಂಸ್ಥೆಯು ಮೊದಲ ಬಾರಿಗೆ ದೇಶಿಯ ಮಾರುಕಟ್ಟೆಯ ಪ್ರವೇಶ ಪಡೆಯುತ್ತಿದ್ದು, ಈ ನಿಟ್ಟಿನಲ್ಲಿ ಬೃಹತ್ ಬಂಡವಾಳದೊಂದಿಗೆ ಕಳೆದ ವರ್ಷವಷ್ಟೇ ತನ್ನ ಮೊದಲ ಉತ್ಪಾದನಾ ಘಟಕವನ್ನು ಆರಂಭಗೊಳಿಸಿದ್ದಲ್ಲೇ ಇದೀಗ ಮತ್ತಷ್ಟು ಬಂಡವಾಳ ಹೂಡಿಕೆಯೊಂದಿಗೆ ಹೊಸ ಯೋಜನೆಗಳ ಬಗ್ಗೆ ಮಾಹಿತಿ ಬಹಿರಂಗಗೊಳಿಸಿದೆ.

ಭಾರತದಲ್ಲಿ ಎಂಜಿ ಮೋಟಾರ್ಸ್ ಕಾರುಗಳ ಬಿಡುಗಡೆಗಾಗಿ ಸಿದ್ದವಾಗುತ್ತಿದೆ ಬೃಹತ್ ಯೋಜನೆ..!

1924ರಿಂದಲೇ ಎಂಜಿ ಮೋಟಾರ್ ಸಂಸ್ಥೆಯು ಆಟೋ ಉದ್ಯಮದಲ್ಲಿ ಕಾರ್ಯಚರಣೆ ನಡೆಸುತ್ತಿದ್ದು, ಇತ್ತೀಚೆಗೆ ಹಣಕಾಸು ಮುಗ್ಗಟ್ಟು ಎದುರಿಸಿತ್ತು. ಈ ಹಿನ್ನೆಲೆಯಲ್ಲಿ ನಷ್ಟದ ಸುಳಿಯಲ್ಲಿದ್ದ ಸಂಸ್ಥೆಯನ್ನು ಚೀನಾ ಮೂಲದ ಎಸ್‌ಎಐಸಿ( SAIC) ಸಂಸ್ಧೆಯು ಸ್ಪಾಧೀನಪಡಿಸಿಕೊಂಡು ಭಾರತದಲ್ಲಿ ಹೊಸ ಕಾರು ಉತ್ಪನ್ನಗಳನ್ನು ಪರಿಚಯಿಸಲು ಸಜ್ಜುಗೊಳ್ಳುತ್ತಿದೆ.

ಭಾರತದಲ್ಲಿ ಎಂಜಿ ಮೋಟಾರ್ಸ್ ಕಾರುಗಳ ಬಿಡುಗಡೆಗಾಗಿ ಸಿದ್ದವಾಗುತ್ತಿದೆ ಬೃಹತ್ ಯೋಜನೆ..!

ಈ ಸಂಬಂಧ ತನ್ನ ಭವಿಷ್ಯದ ಯೋಜನೆಗಳ ಕುರಿತು ಚರ್ಚಿಸಲು ಭಾರತದಿಂದ ಡ್ರೈವ್‌ಸ್ಪಾರ್ಕ್ ಸೇರಿದಂತೆ ಹಲವು ಮಾಧ್ಯಮ ಪ್ರತಿನಿಧಿಗಳಿಗೆ ಆಹ್ವಾನ ನೀಡಿದ್ದ ಎಸ್‌ಎಐಸಿ ಸಂಸ್ಥೆಯು, ಚೀನಾದಲ್ಲಿರುವ ತನ್ನ ಅತಿದೊಡ್ಡ ಕಾರು ಉತ್ಪಾದನಾ ಘಟಕದಲ್ಲಿ ವಿಶೇಷ ಕಾರ್ಯಗಾರ ಹಮ್ಮಿಕೊಂಡಿತ್ತು.

ಭಾರತದಲ್ಲಿ ಎಂಜಿ ಮೋಟಾರ್ಸ್ ಕಾರುಗಳ ಬಿಡುಗಡೆಗಾಗಿ ಸಿದ್ದವಾಗುತ್ತಿದೆ ಬೃಹತ್ ಯೋಜನೆ..!

ಈ ವೇಳೆ ಭಾರತದಲ್ಲಿ ತನ್ನ ಭವಿಷ್ಯ ಯೋಜನೆಗಳ ಬಗ್ಗೆ ಮಹತ್ವದ ಚರ್ಚೆ ನಡೆಸಿದ ಎಸ್‌ಎಐಸಿ ಸಂಸ್ಥೆಯು, ಸಿ ಸೆಗ್ಮೆಂಟ್ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಬಹುದೊಡ್ಡ ಬದಲಾವಣೆ ತರುವುದಲ್ಲದೇ ಎಲೆಕ್ಟ್ರಿಕ್ ಕಾರುಗಳನ್ನು ಸಹ ಬಿಡುಗಡೆ ಮಾಡುವುದಾಗಿ ಮಾಹಿತಿ ಹಂಚಿಕೊಂಡಿದೆ.

ಭಾರತದಲ್ಲಿ ಎಂಜಿ ಮೋಟಾರ್ಸ್ ಕಾರುಗಳ ಬಿಡುಗಡೆಗಾಗಿ ಸಿದ್ದವಾಗುತ್ತಿದೆ ಬೃಹತ್ ಯೋಜನೆ..!

ಹೀಗಾಗಿಯೇ ಎಲೆಕ್ಟ್ರಿಕ್ ಕಾರುಗಳು ಮತ್ತು ಕಾರುಗಳ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಹೆಚ್ಚುವರಿಯಾಗಿ 5 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡುತ್ತಿದ್ದು, 2019ರ ಎರಡನೇ ತ್ರೈಮಾಸಿಕ ಅವಧಿಗೆ ತನ್ನ ಹೊಸ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಸುಳಿವು ನೀಡಿದೆ.

ಭಾರತದಲ್ಲಿ ಎಂಜಿ ಮೋಟಾರ್ಸ್ ಕಾರುಗಳ ಬಿಡುಗಡೆಗಾಗಿ ಸಿದ್ದವಾಗುತ್ತಿದೆ ಬೃಹತ್ ಯೋಜನೆ..!

ಜೊತೆಗೆ ಎಂಜಿ ಮೋಟಾರ್ ಸಂಸ್ಥೆಯು 2017ರ ಸಪ್ಟೆಂಬರ್‌ನಲ್ಲಿಯೇ 2 ಸಾವಿರ ಕೋಟಿ ವೆಚ್ಚದಲ್ಲಿ ಗುಜರಾತಿನಲ್ಲಿ ಮೊದಲ ಕಾರು ಉತ್ಪಾದನಾ ಘಟಕವನ್ನು ಈಗಾಗಲೇ ಆರಂಭಗೊಳಿಸಿದ್ದು, ಮಧ್ಯಮ ಗಾತ್ರದ ಎಸ್‌ಯುವಿ, ಹ್ಯಾಚ್‌ಬ್ಯಾಕ್ ಮತ್ತು ಸೆಡಾನ್ ಕಾರುಗಳನ್ನು ಪರಿಚಯಿಸುವ ತವಕದಲ್ಲಿದೆ.

ಭಾರತದಲ್ಲಿ ಎಂಜಿ ಮೋಟಾರ್ಸ್ ಕಾರುಗಳ ಬಿಡುಗಡೆಗಾಗಿ ಸಿದ್ದವಾಗುತ್ತಿದೆ ಬೃಹತ್ ಯೋಜನೆ..!

ಇದಕ್ಕಾಗಿ 170 ಎಕರೆ ಭೂಮಿಯನ್ನು ಕೂಡಾ ಖರೀದಿಸಲಾಗಿದ್ದು, ಪ್ರತಿ ವರ್ಷ 80 ಸಾವಿರ ಕಾರುಗಳ ಉತ್ಪಾದನೆಯ ಗುರಿ ಹೊಂದಿರುವ ಎಂಜಿ ಮೋಟಾರ್ ಸಂಸ್ಥೆಯು 2019ರ ಮೊದಲ ತ್ರೈಮಾಸಿಕ ವೇಳೆಗೆ ತನ್ನ ಹೊಸ ಉತ್ಪನ್ನಗಳನ್ನು ಹೊರತರಲಿದೆ.

MOST READ: ವಾಹನ ಚಾಲನೆ ವೇಳೆ ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದಾಗುತ್ತೆ..!

ಭಾರತದಲ್ಲಿ ಎಂಜಿ ಮೋಟಾರ್ಸ್ ಕಾರುಗಳ ಬಿಡುಗಡೆಗಾಗಿ ಸಿದ್ದವಾಗುತ್ತಿದೆ ಬೃಹತ್ ಯೋಜನೆ..!

ಜೊತೆಗೆ ದೇಶಾದ್ಯಂತ ಈಗಾಗಲೇ 45ಕ್ಕೂ ಹೆಚ್ಚು ಅಧಿಕೃತ ಕಾರು ಮಾರಾಟ ಮಳಿಗೆಗಳನ್ನು ಹೊಂದಿರುವ ಎಂಜಿ ಮೋಟಾರ್ ಸಂಸ್ಥೆಯು, ಕಾರು ಮಾರಾಟಕ್ಕೆ ಚಾಲನೆ ನೀಡುವ ವೇಳೆಗೆ 100ಕ್ಕೂ ಹೆಚ್ಚು ಡೀಲರ್ಸ್ ಹೊಂದುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಭಾರತದಲ್ಲಿ ಎಂಜಿ ಮೋಟಾರ್ಸ್ ಕಾರುಗಳ ಬಿಡುಗಡೆಗಾಗಿ ಸಿದ್ದವಾಗುತ್ತಿದೆ ಬೃಹತ್ ಯೋಜನೆ..!

ಈ ಬಗ್ಗೆ ಮಾತನಾಡಿರುವ ಎಂಜಿ ಮೋಟಾರ್ಸ್ ಇಂಡಿಯಾ ಎಂಡಿ ರಾಜೀವ್ ಛಾಬ್, ಮಧ್ಯಮ ಗಾತ್ರ ಕಾರುಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದ್ದು, ಈ ಹಿನ್ನೆಲೆ ಬೃಹತ್ ಬಂಡವಾಳದೊಂದಿಗೆ ಸದ್ಯದಲ್ಲೇ ಹೊಸ ಉತ್ಪನ್ನಗಳನ್ನು ಹೊರತರುವುದಲ್ಲೇ ವಿಫುಲ ಉದ್ಯೋಗಾವಕಾಶಗಳನ್ನು ಸೃಷ್ಠಿಸಲಿದ್ದೇವೆ ಎಂದಿದ್ದಾರೆ.

ಭಾರತದಲ್ಲಿ ಎಂಜಿ ಮೋಟಾರ್ಸ್ ಕಾರುಗಳ ಬಿಡುಗಡೆಗಾಗಿ ಸಿದ್ದವಾಗುತ್ತಿದೆ ಬೃಹತ್ ಯೋಜನೆ..!

ಇದಲ್ಲದೇ ಚೀನಿ ಮಾರುಕಟ್ಟೆಯಲ್ಲಿ ಮಾರಾಟವಾಗುವ ಪ್ರತಿ ನಾಲ್ಕು ಕಾರುಗಳಲ್ಲಿ ಒಂದು ಕಾರು ಎಸ್‌ಎಐಸಿ ನಿರ್ಮಾಣದ ಕಾರು ಇರಲಿದ್ದು, ಇದೇ ಕಾರಣಕ್ಕೆ ಗ್ರಾಹಕರ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಎಸ್‌ಎಐಸಿ ಸಂಸ್ಥೆಯು ಭಾರತದಲ್ಲೂ ಜನಪ್ರಿಯತೆ ಸಾಧಿಸುವ ತವಕದಲ್ಲಿದೆ.

ಭಾರತದಲ್ಲಿ ಎಂಜಿ ಮೋಟಾರ್ಸ್ ಕಾರುಗಳ ಬಿಡುಗಡೆಗಾಗಿ ಸಿದ್ದವಾಗುತ್ತಿದೆ ಬೃಹತ್ ಯೋಜನೆ..!

ಒಟ್ಟಿನಲ್ಲಿ ಮಧ್ಯಮ ಗಾತ್ರದ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಯು ಭಾರತೀಯ ಮಾರುಕಟ್ಟೆಯನ್ನು ಪರಿಚಯಿಸುತ್ತಿರುವ ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಚೀನಾದಲ್ಲಿ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಎಸ್‌ಎಐಸಿ( SAIC) ಸಂಸ್ಧೆಯು ಎಂಜಿ ಮೋಟಾರ್ ಕಾರುಗಳ ಉತ್ಪಾದನೆಯ ಉಸ್ತುವಾರಿ ವಹಿಸಿರುವುದು ಮತ್ತೊಂದು ವಿಶೇಷ ಎನ್ನಬಹುದು.

MOST READ: ಕೆಟಿಎಂ 125 ಡ್ಯೂಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ- ಬೆಲೆ ಎಷ್ಟು ಗೊತ್ತಾ?

ಭಾರತದಲ್ಲಿ ಎಂಜಿ ಮೋಟಾರ್ಸ್ ಕಾರುಗಳ ಬಿಡುಗಡೆಗಾಗಿ ಸಿದ್ದವಾಗುತ್ತಿದೆ ಬೃಹತ್ ಯೋಜನೆ..!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಕಳೆದ 6 ದಶಕಗಳ ಅವಧಿಯಲ್ಲಿ ಹಲವು ಏರುಪೇರುಗಳು ಕಂಡಿರುವ ಎಂಜಿ ಮೋಟಾರ್ ಸಂಸ್ಥೆಯು ಸದ್ಯ ಭಾರತದಲ್ಲಿ ತನ್ನ ಹೊಸ ಅಧ್ಯಾಯವನ್ನು ತೆರೆಯುತ್ತಿದ್ದು, ಮೊದಲ ಹಂತದಲ್ಲೇ ಹ್ಯಾಚ್‌ಬ್ಯಾಕ್, ಸೆಡಾನ್, ಎಸ್‌ಯುವಿ ಮಾದರಿಗಳನ್ನು ಬಿಡುಗಡೆಗೊಳಿಸುವ ಮೂಲಕ ಕೈಗೆಟುಕುವ ಬೆಲೆಗಳಲ್ಲಿ ಪ್ರೀಮಿಯಂ ಕಾರುಗಳ ಮಾರಾಟ ಗುರಿಹೊಂದಿದೆ.

Most Read Articles

Kannada
English summary
MG Motors India Plans Revealed — Here Are All The Details Ahead Of Its Entry In 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X