ವಾಹನ ಚಾಲನೆ ವೇಳೆ ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದಾಗುತ್ತೆ..!

ದೇಶಾದ್ಯಂತ ಪ್ರತಿದಿನ ಸಾವಿರಾರು ಹೊಸ ವಾಹನಗಳು ರಸ್ತೆಗಿಳಿಯುತ್ತಿದ್ದು, ಅದೇ ರೀತಿಯಾಗಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ಸಂಖ್ಯೆಯು ಕೂಡಾ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ರಸ್ತೆ ನಿಯಮ ಉಲ್ಲಂಘಿಸುವವರ ವಿರುದ್ಧ ಈಗಾಗಲೇ ದಂಡವಿಧಿಸುತ್ತಿದ್ದರೂ, ಕೆಲವರು ಮಾತ್ರ ಇದ್ಯಾವುದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ಪದೇ ಪದೇ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದನ್ನೇ ಒಂದು ಕಾಯಕ ಮಾಡಿಕೊಂಡಿದ್ದಾರೆ.

ವಾಹನ ಚಾಲನೆ ವೇಳೆ ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದಾಗುತ್ತೆ..!

ದೇಶಾದ್ಯಂತ ಹೆಚ್ಚುತ್ತಿರುವ ಸಂಚಾರಿ ನಿಯಮಗಳ ಉಲ್ಲಂಘನೆಯಿಂದಾಗಿಯೇ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಳಕ್ಕೆ ಮೂಲ ಕಾರಣವಾಗುತ್ತಿದೆ. ಹೀಗಾಗಿ ಕೇಂದ್ರ ಸಾರಿಗೆ ಇಲಾಖೆಯು ವಾಹನ ಸವಾರರ ಇಂತಹ ಪ್ರವೃತ್ತಿಗೆ ಕಡಿವಾಣ ಹಾಕಲು ಮತ್ತಷ್ಟು ಕಠಿಣ ಕ್ರಮಗಳನ್ನು ಜಾರಿಗೆ ತರುತ್ತಿದ್ದು, ಕೆಲವು ಅಪಾಯಕಾರಿ ಸಂಚಾರಿ ಪ್ರವೃತ್ತಿಗಳನ್ನು ತಡೆಯಲು ಸದ್ಯದಲ್ಲೇ ವಾಹನ ಸವಾರರ ಡ್ರೈವಿಂಗ್ ಲೈಸೆನ್ಸ್‌ಗೆ ಕೊಕ್ಕೆ ಹಾಕಲು ಮುಂದಾಗಿದೆ. ಹಾಗಾದ್ರೆ ಯಾವೆಲ್ಲಾ ಸಂಚಾರಿ ಪ್ರವೃತ್ತಿಯಿಂದಾಗಿ ನಿಮ್ಮ ಡಿಎಲ್ ರದ್ದುಗೊಳ್ಳಲಿದೆ ಎಂಬುವುದನ್ನು ಇಲ್ಲಿ ನೋಡಿ.

ವಾಹನ ಚಾಲನೆ ವೇಳೆ ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದಾಗುತ್ತೆ..!

ಗೂಡ್ಸ್ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವಂತಿಲ್ಲ.!

ಸರಕು ಸಾಗಾಣಿಕೆಗಾಗಿ ಅನುಮತಿ ಪಡೆದಂತಹ ವಾಣಿಜ್ಯ ಬಳಕೆಯ ವಾಹನಗಳಲ್ಲಿ ಪ್ಯಾಸೆಂಜರ್ ತುಂಬುವಂತಿಲ್ಲ. ಒಂದು ವೇಳೆ ತುಂಬಿದ್ದೇ ಆದಲ್ಲಿ ಕೆಲವು ವರ್ಷಗಳ ತನಕ ನಿಮ್ಮ ಡಿಎಲ್ ರದ್ದುಗೊಳ್ಳುವುದು ಖಚಿತ.

ವಾಹನ ಚಾಲನೆ ವೇಳೆ ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದಾಗುತ್ತೆ..!

ರಾಂಗ್ ಸೈಡ್ ಡ್ರೈವಿಂಗ್.!

ಇದು ನಗರಪ್ರದೇಶಗಳಲ್ಲಿ ಇತ್ತೀಚೆಗೆ ಯುವಕರಲ್ಲಿ ಇಂತಹ ಸಂಚಾರಿ ಪ್ರವೃತ್ತಿ ಹೆಚ್ಚುತ್ತಿದ್ದು, ರಾಂಗ್ ಸೈಡ್ ಹೋಗುವ ವೇಳೆ ಅದೆಷ್ಟೋ ಅವಘಡಗಳನ್ನು ದಿನಂಪ್ರತಿ ಸಂಭವಿಸುತ್ತಿವೆ. ನೀವು ಕೂಡಾ ಇಂತಹ ಸಂಚಾರಿ ಪ್ರವೃತ್ತಿಯನ್ನು ಹೊಂದಿದ್ದರೆ ಇಂದೇ ಬಿಟ್ಟುಬಿಡಿ.

ವಾಹನ ಚಾಲನೆ ವೇಳೆ ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದಾಗುತ್ತೆ..!

ವೇಗದ ಮಿತಿ ಮೀರುವಂತಿಲ್ಲ.!

ಸಂಚಾರಿ ದಟ್ಟಣೆ ತಡೆಯಲು ಮತ್ತು ಅಪಘಾತ ವಲಯಗಳಲ್ಲಿ ನಿಗದಿ ಪಡಿಸಲಾಗುವ ವೇಗದ ಮಿತಿಯನ್ನು ಮೀರುವಂತಿಲ್ಲ. ಒಂದು ವೇಳೆ ನಿಗದಿತ ವೇಗದ ಮಿತಿ ಮೀರಿದಲ್ಲಿ ನಿಮ್ಮ ಮನೆಗೆ ಇ-ಚಲನ್ ಬರುವುದಲ್ಲದೆ ಡಿಎಲ್‌ಗೂ ಕುತ್ತು ಬರಲಿದೆ.

ವಾಹನ ಚಾಲನೆ ವೇಳೆ ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದಾಗುತ್ತೆ..!

ಮೊಬೈಲ್ ಬಳಕೆ ಬೇಡವೇ ಬೇಡ.!

ದೇಶದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ ಇದು ಕೂಡಾ ಗಂಭೀರ ಸಮಸ್ಯೆಯಾಗಿ ಕಾಡುತ್ತಿದ್ದು, ಚಾಲನೆ ಮಾಡುತ್ತಾ ಮೊಬೈಲ್‌ನಲ್ಲಿ ಮಾತನಾಡುವುದು ಕಂಡುಬಂದಲ್ಲಿ ನಿಮ್ಮ ಡಿಎಲ್‌ಗೆ ಕೂಡಾ ರದ್ದುಗೊಳ್ಳುವುದರಲ್ಲಿ ಯಾವುದೇ ಅನುಮಾನವೇ ಬೇಡ.

ವಾಹನ ಚಾಲನೆ ವೇಳೆ ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದಾಗುತ್ತೆ..!

ಡ್ರಂಕ್ ಅಂಡ್ ಡ್ರೈವ್

ವಿಕೇಂಡ್‌ಗಳಲ್ಲಿ ಕುಡಿದು ಮಜಾ ಮಾಡುವ ಯೋಜನೆ ಇದ್ದಲ್ಲಿ ಕ್ಯಾಬ್ ಸೇವೆಗಳನ್ನು ಬಳಕೆ ಮಾಡುವುದು ಒಳಿತು. ಅದನ್ನು ಬಿಟ್ಟು ಕಂಟ ಬರ್ತಿ ಕುಡಿತು ಅಡ್ಡಾದಿಟ್ಟಿ ಕಾರು, ಬೈಕ್ ಓಡಿಸುವ ಮಂದಿಗೆ ಇನ್ನು ಉಳಿಗಾಲವಿಲ್ಲ.

ವಾಹನ ಚಾಲನೆ ವೇಳೆ ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದಾಗುತ್ತೆ..!

ಒಂದು ವೇಳೆ ಡ್ರಂಕ್ ಅಂಡ್ ಡ್ರೈವ್ ಪ್ರಕರಣದಲ್ಲಿ ಸಿಕ್ಕಿಬಿದ್ರೆ ರೂ.10 ಸಾವಿರ ತನಕ ದಂಡದ ಜೊತೆಗೆ ಸೆರೆಮನೆ ವಾಸ ಗ್ಯಾರಂಟಿ. ಜೊತೆಗೆ ನಿಮ್ಮ ಡಿಎಲ್ ಕೂಡಾ ರದ್ದುಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

ವಾಹನ ಚಾಲನೆ ವೇಳೆ ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದಾಗುತ್ತೆ..!

ವೀಲ್ಹಿಂಗ್ ಬೇಡ ಗುರು..!

ಈಗಿನ ಯುವಕರಿಗೆ ವಾಹನ ಚಾಲನೆ ವೇಳೆ ಥ್ರೀಲ್ ಇರಲೇಬೇಕು. ಅದಕ್ಕಾಗಿಯೇ ಬೈಕ್ ಚಾಲನೆ ವೇಳೆ ವೀಲ್ಹಿಂಗ್, ಕಾರು ಚಾಲನೆ ವೇಳೆ ರೇಸಿಂಗ್ ಹುಚ್ಚಾಟದ ಪ್ರವೃತ್ತಿ ಹೆಚ್ಚುತ್ತಿದ್ದು, ಇನ್ಮುಂದೆ ಹೀಗೆಲ್ಲಾ ಮಾಡಿದ್ದು ಕಂಡುಬಂದಲ್ಲಿ ಭಾರೀ ಪ್ರಮಾಣದ ಶಿಕ್ಷೆ ಕಾದಿದೆ.

ವಾಹನ ಚಾಲನೆ ವೇಳೆ ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದಾಗುತ್ತೆ..!

ಹೈವೇ ನಲ್ಲಿ ಈ ತಪ್ಪು ಮಾಡಬೇಡಿ.!

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾಮಾನ್ಯವಾಗಿ ವಾಹನಗಳು ಪ್ರತಿ ಗಂಟೆಗೆ 80 ಕಿ.ಮಿ ವೇಗದಲ್ಲಿ ಚಲಿಸುತ್ತಿರುತ್ತವೆ. ಹೀಗಿರುವಾಗ ಯಾವುದೇ ಒಬ್ಬ ವಾಹನ ಚಾಲಕ ಮಾಡುವ ಒಂದು ಸಣ್ಣ ತಪ್ಪು ಕೂಡಾ ದೊಡ್ಡ ದುರಂತಗಳಿಗೆ ಕಾರಣವಾಗುತ್ತೆ.

ವಾಹನ ಚಾಲನೆ ವೇಳೆ ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದಾಗುತ್ತೆ..!

ಹೀಗಾಗಿ ಹೆದ್ದಾರಿಗಳಲ್ಲಿ ವಾಹನ ಚಾಲನೆ ವೇಳೆ ಎಲ್ಲೆಂದರಲ್ಲೇ ಕಾರ್ ಪಾರ್ಕ್ ಮಾಡುವುದು, ಅನಗತ್ಯವಾಗಿ ಹಾರ್ನ್ ಹಾಕುವುದು, ಲೈನ್ ತಪ್ಪಿಸಿ ಓವರ್‌ಟೆಕ್ ಮಾಡುವುದು ಕೂಡಾ ಡಿಎಲ್ ಮೇಲೆ ಪರಿಣಾಮ ಬೀರುತ್ತೆ.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ವಾಹನ ಚಾಲನೆ ವೇಳೆ ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದಾಗುತ್ತೆ..!

ವಿಮೆ ಇಲ್ಲದೇ ಚಾಲನೆ ಬೇಡ..!

ಯಾವುದೇ ವಾಹನವನ್ನಾಗಲಿ ವಿಮೆ ಇಲ್ಲದೇ ರಸ್ತೆಗಿಳಿಸುವುದು ಅಪರಾಧ. ಒಂದು ವೇಳೆ ವಾಹನದಿಂದಾಗುವ ನಷ್ಟಕ್ಕೆ ಥರ್ಡ್ ಪಾರ್ಟಿ ವಿಮೆ ಅಗತ್ಯವಾಗಿದ್ದು, ವಿಮೆ ಇಲ್ಲವಾದ್ರೆ ಮೊದಲ ವಿಮೆ ಕಂತು ಪಾವತಿಸಿ ಡಿಎಲ್ ಉಳಿಸಿಕೊಳ್ಳಿ.

ವಾಹನ ಚಾಲನೆ ವೇಳೆ ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದಾಗುತ್ತೆ..!

ಯದ್ವಾತದ್ವಾ ಡ್ರೈವಿಂಗ್ ಮಾಡಿದ್ರೆ ಅಷ್ಟೇ.!

ವಾಹನ ಚಾಲನೆ ವೇಳೆ ನಿರ್ಲಕ್ಷ್ಯದಿಂದ ಆಗುವ ಅನಾಹುತಗಳಲ್ಲಿ ಪಾದಾಚಾರಿಗಳ ಜೀವಕ್ಕೆ ಹಾನಿ ಮಾಡಿದ್ದಲ್ಲಿ ಐಪಿಸಿ ಸೆಕ್ಷನ್ 279/ 336/ 338 ಅಡಿ ಪ್ರಕರಣ ದಾಖಲಿಸುವ ಮೂಲಕ ಕಠಿಣ ಶಿಕ್ಷೆ ವಿಧಿಸಬಹುದಾಗಿದೆ. ಜೊತೆಗೆ ನಿಮ್ಮ ಡಿಎಲ್ ಕೂಡಾ ರದ್ದುಗೊಳ್ಳಲಿದೆ.

ವಾಹನ ಚಾಲನೆ ವೇಳೆ ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದಾಗುತ್ತೆ..!

ಇದಲ್ಲದೇ ಸಂಚಾರಿ ನಿಯಮ ಉಲ್ಲಂಘನೆಯಿಂದಾಗುವ ಜೀವಹಾನಿಗೆ ಐಪಿಸಿ ಸೆಕ್ಷನ್ 304(ಎ) ಮತ್ತು 304(III)ಅಡಿಯಲ್ಲೂ ಕಠಿಣ ಕ್ರಮ ಜರಗಿಸುವ ಸಾಧ್ಯತೆಗಳಿದ್ದು, ಎರಡು ವರ್ಷ ಜೈಲು ಮತ್ತು ನಿಗದಿತ ಮಟ್ಟದ ದಂಡವನ್ನು ಕೂಡಾ ಪಾವತಿಸಬೇಕಾಗುತ್ತೆ.

MOST READ: ದೇಶಾದ್ಯಂತ ಏಕರೂಪದಲ್ಲಿ ಜಾರಿಗೆ ಬರುತ್ತಿರುವ ಡಿಎಲ್ ಮತ್ತು ಆರ್‌ಸಿಯಿಂದ ಏನು ಲಾಭ ಗೊತ್ತಾ?

ವಾಹನ ಚಾಲನೆ ವೇಳೆ ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದಾಗುತ್ತೆ..!

ಅಪರಾಧ ಕೃತ್ಯಗಳಲ್ಲಿ ಭಾಗಿಯಾದ್ರೆ..!

ಸಾಮಾನ್ಯವಾಗಿ ದಾಖಲಾಗುವ ಅಪರಾಧ ಕೃತ್ಯಗಳಲ್ಲಿ ವಾಹನಗಳ ಬಳಕೆ ಇದ್ದೆ ಇರುತ್ತೆ. ಈ ವೇಳೆ ಅಪರಾಧ ಕೃತ್ಯದಲ್ಲಿ ಭಾಗಿಯಾದ ವಾಹನಗಳನ್ನು ಜಪ್ತಿ ಮಾಡುವ ಪೊಲೀಸರು ಅಗತ್ಯ ದಾಖಲೆಗಳನ್ನು ಮುಟ್ಟುಗೊಲು ಹಾಕಿಕೊಳ್ಳುವ ಮೂಲಕ ಅಂತಹ ವಾಹನಗಳನ್ನು ಹರಾಜು ಹಾಕಬಹುದು.

ವಾಹನ ಚಾಲನೆ ವೇಳೆ ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದಾಗುತ್ತೆ..!

ಈ ಎಲ್ಲಾ ಕಾರಣಗಳಿಂದಾಗಿ ವಾಹನ ಸವಾರರು ಚಾಲನೆ ವೇಳೆ ಅಗತ್ಯವಾಗಿ ಎಚ್ಚರಿಕೆ ವಹಿಸುವ ಮೂಲಕ ಸಂಚಾರಿ ನಿಯಮಗಳನ್ನು ಪಾಲನೆ ಮಾಡುವ ಅವಶ್ಯಕತೆಯಿದ್ದು, ಜೊತೆಗೆ ನಿಮ್ಮ ನಿರ್ಲಕ್ಷ್ಯದ ಚಾಲನೆಯಿಂದ ಇತರರ ಜೀವಕ್ಕೆ ಹಾನಿಯಾಗದಿರಲಿ ಎನ್ನುವುದೇ ನಮ್ಮ ಕಳಕಳಿ. ಹ್ಯಾಪಿ ಜರ್ನಿ..

Most Read Articles

Kannada
English summary
Your driving licence will be cancelled: A new trend?

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more