ಭಾರತದಲ್ಲಿ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಬಿಡುಗಡೆಯಾಗುವುದು ಪಕ್ಕಾ ಅಂತೆ..!

ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿರುವ ಜಪಾನ್ ಬ್ರಾಂಡ್ ಮಿಟ್ಸುಬಿಸಿ ಸಂಸ್ಥೆಯು ತನ್ನ ಜನಪ್ರಿಯ ಎಕ್ಸ್‌ಪ್ಯಾಂಡರ್ ಬಿಡುಗಡೆಯ ಬಗ್ಗೆ ಸುಳಿವು ನೀಡಿದೆ.

By Praveen Sannamani

ದೇಶಿಯ ಮಾರುಕಟ್ಟೆಯಲ್ಲಿ ಎಸ್‌ಯುವಿ ಮತ್ತು ಎಂಪಿವಿ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿರುವ ಜಪಾನ್ ಬ್ರಾಂಡ್ ಮಿಟ್ಸುಬಿಸಿ ಸಂಸ್ಥೆಯು ತನ್ನ ಜನಪ್ರಿಯ ಎಕ್ಸ್‌ಪ್ಯಾಂಡರ್ ಬಿಡುಗಡೆಯ ಬಗ್ಗೆ ಸುಳಿವು ನೀಡಿದೆ.

ಭಾರತದಲ್ಲಿ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಬಿಡುಗಡೆಯಾಗುವುದು ಪಕ್ಕಾ ಅಂತೆ..!

ಮಿಟ್ಸುಬಿಸಿ ಸಂಸ್ಥೆಯು ಕಳೆದ ವಾರವಷ್ಟೇ ತನ್ನ ಐಷಾರಾಮಿ ಕಾರು ಮಾದರಿಯಾದ ಔಟ್‌ಲ್ಯಾಂಡರ್ ಬಿಡುಗಡೆಗೊಳಿಸಿದ್ದು, ಕಾರು ಬಿಡುಗಡೆಯ ವೇಳೆ ಭಾರತೀಯ ಮಾರುಕಟ್ಟೆಗಾಗಿ ಮತ್ತಷ್ಟು ಹೊಸ ಕಾರುಗಳನ್ನು ಅಭಿವೃದ್ಧಿ ಮಾಡುತ್ತಿರುವುದಾಗಿ ಹೇಳಿಕೊಂಡಿದೆ. ಜೊತೆಗೆ 2019ರ ಒಳಗಾಗಿ ಎಕ್ಸ್‌ಪ್ಯಾಂಡರ್ ಮತ್ತು ಎಕ್ಲಿಪ್ಸ್ ಕಾರುಗಳನ್ನ ಬಿಡುಗಡೆಗೊಳಿಸುವ ಕುರಿತಂತೆ ಅಂತಿಮ ಹಂತದ ಮಾತುಕತೆ ನಡೆದಿದ್ದು, ಸದ್ಯದಲ್ಲೇ ಅಧಿಕೃತ ಮಾಹಿತಿ ನೀಡುವುದಾಗಿ ಮಾಹಿತಿ ಬಿಟ್ಟುಕೊಟ್ಟಿದೆ.

ಭಾರತದಲ್ಲಿ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಬಿಡುಗಡೆಯಾಗುವುದು ಪಕ್ಕಾ ಅಂತೆ..!

ಕಳೆದ ವರ್ಷವೇ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡು ಭಾರೀ ಪ್ರಮಾಣದಲ್ಲಿ ಮಾರಾಟಗೊಳ್ಳುತ್ತಿರುವ ನ್ಯೂ ಜನರೇಷನ್ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಎಂಪಿವಿ ಕಾರುಗಳು ಸದ್ಯ ಫಿಲಿಫೈನ್ಸ್‌ನಲ್ಲೂ ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿದ್ದು, ಇದೇ ಕಾರನ್ನು ಭಾರತದಲ್ಲೂ ಬಿಡುಗಡೆ ಮಾಡಬಹುದಾದ ಸಾಧ್ಯತೆಗಳಿವೆ.

ಭಾರತದಲ್ಲಿ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಬಿಡುಗಡೆಯಾಗುವುದು ಪಕ್ಕಾ ಅಂತೆ..!

ಮಿಟ್ಸುಬಿಸಿ ನಿರ್ಮಾಣದ ಎಕ್ಸ್‌ಪ್ಯಾಂಡರ್ ಕಾರುಗಳು 7 ಸೀಟರ್ ಮಾದರಿಯಾಗಿದ್ದು, ಇದು ಟೊಯೊಟಾ ಇನೋವಾ ಮಾದರಿಯಲ್ಲೇ ನಿರ್ಮಾಣಗೊಂಡಿದೆ. ಹೀಗಾಗಿಯೇ ಈ ಹೊಸ ಕಾರು ಭಾರತದಲ್ಲಿ ಬಿಡುಗಡೆಗೊಂಡಿದ್ದೆ ಆದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದ್ದು, ಕಾರಿನ ಬೆಲೆಗಳು ಸಹ ಆಕರ್ಷಕವಾಗಿವೆ.

ಭಾರತದಲ್ಲಿ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಬಿಡುಗಡೆಯಾಗುವುದು ಪಕ್ಕಾ ಅಂತೆ..!

ವಿಶೇಷ ಹೊರವಿನ್ಯಾಸಗಳನ್ನು ಹೊಂದಿರುವ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಆವೃತ್ತಿಗಳು ಜಕಾರ್ತ್ ಆಟೋ ಶೋದಲ್ಲಿ ಭಾಗಿಯಾದ ನಂತರ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಬಿಡುಗಡೆಯಾಗುತ್ತಿದ್ದು, ಹೊರ ಮತ್ತು ಒಳ ವಿನ್ಯಾಸಗಳು ಅಂತಾರಾಷ್ಟ್ರೀಯ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿವೆ.

ಭಾರತದಲ್ಲಿ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಬಿಡುಗಡೆಯಾಗುವುದು ಪಕ್ಕಾ ಅಂತೆ..!

ಪೂರ್ಣಪ್ರಮಾಣದಲ್ಲಿ ಎಲ್‌ಇಡಿ ಲೈಟ್‌ಗಳ ವ್ಯವಸ್ಥೆಯನ್ನು ಇರಿಸಲಾಗಿದ್ದು, ಡೇ ರನ್ನಿಂಗ್ ಲೈಟ್, ಮಲ್ಟಿಪಲ್ ಸ್ಲಾಟ್ ಗ್ರೀಲ್ ಮತ್ತು ಹೊಚ್ಚ ಹೊಸ ವಿನ್ಯಾಸದ ಎಂಪಿವಿ ಚಿಹ್ನೆಯನ್ನು ಇರಿಸಲಾಗಿದೆ.

ಭಾರತದಲ್ಲಿ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಬಿಡುಗಡೆಯಾಗುವುದು ಪಕ್ಕಾ ಅಂತೆ..!

ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಎಂಪಿವಿ ಮಾದರಿಯೂ ಪೆಟ್ರೋಲ್ ಮತ್ತು ಡೀಸೆಲ್ ಎರಡು ಆವೃತ್ತಿಯಲ್ಲೂ ಲಭ್ಯವಿರಲಿದ್ದು, 1.5-ಲೀಟರ್ ಎಂಜಿನ್ ಸಾಮರ್ಥ್ಯದೊಂದಿದೆ ಅಭಿವೃದ್ಧಿ ಹೊಂದಿದೆ. ಇದು ಎಂಪಿವಿ ಕಾರುಗಳಲ್ಲೇ ಹೆಚ್ಚಿನ ಮಟ್ಟದ ಹಾರ್ಸ್ ಪವರ್ ಉತ್ಪಾದನಾ ಮಾದರಿ ಕೂಡಾ ಆಗಿರಲಿದೆ.

ಭಾರತದಲ್ಲಿ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಬಿಡುಗಡೆಯಾಗುವುದು ಪಕ್ಕಾ ಅಂತೆ..!

ಮಧ್ಯಮ ಗಾತ್ರದ ಎಂಪಿವಿ ಮಾದರಿಗಳಲ್ಲೇ ಅತಿ ಹೆಚ್ಚ ಒಳ ವಿನ್ಯಾಸವನ್ನು ಪಡೆದುಕೊಂಡಿರುವ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಎಂಪಿವಿ ಆವೃತ್ತಿಯು, 7 ರಿಂದ 8 ಜನ ಆರಾಮದಾಯಕವಾಗಿ ಪ್ರಯಾಣ ಮಾಡಬಹುದಾಗಿದೆ.

ಭಾರತದಲ್ಲಿ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಬಿಡುಗಡೆಯಾಗುವುದು ಪಕ್ಕಾ ಅಂತೆ..!

ಇನ್ನೊಂದು ವಿಶೇಷ ಅಂದ್ರೆ ಈ ಕಾರುಗಳು ಬೆಲೆಯಲ್ಲೂ ಗ್ರಾಹಕರನ್ನು ಆಕರ್ಷಣೆ ಮಾಡುವ ಸಾಧ್ಯತೆಗಳಿದ್ದು, ಭಾರತದಲ್ಲಿ ಈ ಕಾರಿನ ಬೆಲೆಯು ರೂ.11 ಲಕ್ಷದಿಂದ ರೂ.14 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಭಾರತದಲ್ಲಿ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಬಿಡುಗಡೆಯಾಗುವುದು ಪಕ್ಕಾ ಅಂತೆ..!

ಹೀಗಾಗಿ ಎಕ್ಸ್‌ಪ್ಯಾಂಡರ್ ಕಾರುಗಳು ಭಾರತದಲ್ಲಿ ಬಿಡುಗಡೆಗೊಂಡಿದ್ದೆ ಆದಲ್ಲಿ ಟೊಯೊಟಾ ಇನೋವಾ ಕ್ರಿಸ್ಟಾ ಮತ್ತು ರೆನಾಲ್ಟ್ ಲೊಡ್ಜಿ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದ್ದು, ವ್ಯಯಕ್ತಿಕ ಬಳಕೆಗೆ ಮತ್ತು ಟೂರಿಸ್ಟ್ ವಿಭಾಗದಲ್ಲೂ ಈ ಕಾರುಗಳಿಗೆ ಉತ್ತಮ ಬೇಡಿಕೆ ಉಂಟಾಗಬಹುದು.

ಭಾರತದಲ್ಲಿ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಬಿಡುಗಡೆಯಾಗುವುದು ಪಕ್ಕಾ ಅಂತೆ..!

ಅಂತೆಯೇ ಎಕ್ಲಿಪ್ಸ್ ಕಾರುಗಳು ಎಕ್ಸ್‌ಪ್ಯಾಂಡರ್ ಕಾರುಗಳಿಂತಲೂ ಐಷಾರಾಮಿ ಸೌಲಭ್ಯಗೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ಇದು ಪೂರ್ಣ ಪ್ರಮಾಣದ ಎಸ್‌ಯುವಿ ವೈಶಿಷ್ಟ್ಯತೆಗಳೊಂದಿಗೆ ಜೀಪ್ ಕಂಪಾಸ್ ಕಾರುಗಳೊಂದಿಗೆ ಪೈಪೋಟಿ ನಡೆಸಲಿದೆ ಎಂದು ಹೇಳಲಾಗುತ್ತಿದೆ.

More from DriveSpark

Article Published On: Wednesday, August 22, 2018, 10:48 [IST]
English summary
Mitsubishi Eclipse And Xpander Considered For India.
Read more on mitsubishi mpv suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+