ಜೆನೆವಾ ಮೋಟರ್ ಶೋ: ಅನಾವರಾಣಗೊಂಡ ಆಡಿ ವಿನೂತನ ಎ6 ಕಾರು

ಜರ್ಮನ್ ಆಟೋ ತಯಾರಕ ಸಂಸ್ಥೆಯಾದ ಆಡಿ ತನ್ನ ಎಂಟನೇ ತಲೆಮಾರಿನ ಎ6 ಐಷಾರಾಮಿ ಸೆಡಾನ್ ಕಾರ್ ಅನ್ನು 2018ರ ಜೆನೆವಾ ಮೋಟಾರ್ ಶೋನಲ್ಲಿ ಅನಾವರಣಗೊಳಿಸಿದ್ದು, ಸ್ಪೋರ್ಟಿ ಲುಕ್ ನೀಡಲು ಕಾರಿನ ಒಳಗೆ ಮತ್ತು ಹೊರಗೆ ಮಾರ್ಪಾಡುಗಳನ್ನು ಮಾಡಲಾಗಿದೆ.

By Rahul Ts

ಕಾರಿನ ಮುಂಭಾಗದ ವಿನ್ಯಾಸವು ಹೊಸ ಎ8 ಮತ್ತು ಎ7 ಕಾರುಗಳಂತೆಯೇ ಶಾರ್ಪ್ ಸ್ಪೋರ್ಟ್ ಬ್ಯಾಕ್ ಅನ್ನು ಹೋಲಲಿದ್ದು, ಲಾರ್ಜ್ ಸಿಂಗಲ್ ಫ್ರೇಮ್ ಗ್ರಿಲ್, ಸ್ಲೀಕ್ ಮತ್ತು ಎಲ್ಇಡಿ ಲೈಟ್ ಹೊಂದಿರುವ ಹೆಡ್‍‍ಲ್ಯಾಂಪ್, ಡಿರ್‍‍ಎಲ್ ಮತ್ತು ಉದ್ದವಾದ ಏರ್ ಡ್ಯಾಮ್ ಅನ್ನು ಬಂಪರ್‍‍ನಲ್ಲಿ ಪಡೆದಿರುವುದು ಕಾರಿನ ಖದರ್ ಹೆಚ್ಚಿಸಿದೆ.

Recommended Video

[Kannada] Maruti Swift 2018 - Full Specifications, Features, Price, Mileage, Colours - DriveSpark
ಜೆನೆವಾ ಮೋಟರ್ ಶೋ: ಅನಾವರಾಣಗೊಂಡ ಆಡಿ ವಿನೂತನ ಎ6 ಕಾರು

ಕಾರಿನ ಸೈಡ್‍‍ ಪ್ರೋಫೈಲ್ ಅಚ್ಚುಕಟ್ಟಾಗಿ ಮತ್ತು ಫ್ಲೋವಿಂಗ್ ಲೈನ್ ನೊಂದಿಗೆ ರೂಫ್‍‍ಲೈನ್ ಸಿ-ಪಿಲ್ಲರ್ ಪಡೆದಿದ್ದು, ಹೊಸ A6 ನ ಹಿಂಭಾಗದ ಪ್ರೊಫೈಲ್ ಒಂದೇ ಹಾರಿಜಂಟಲ್ ಎಲಿಮೆಂಟ್ ಮತ್ತು ಒಂಬತ್ತು ಲಂಬ ಸಾಲುಗಳನ್ನು ಹೊಂದಿರುವ ನಯಗೊಳಿಸಿದ ಟೈಲ್ ಲೈಟ್ ಅನ್ನು ಪಡಿದಿದೆ. ಜೊತೆಗೆ ಸ್ಕ್ರೋಮ್ ಸ್ಟ್ರಿಪ್ ಟೈಲ್‍‍ಗೇಟ್ ಅನ್ನು ಆವರಿಸುವುದು ಸೆಡಾನ್ ಕಾರಿನ ರೂಪವನ್ನು ಚುರುಕುಗೊಳಿಸಿದೆ.

ಜೆನೆವಾ ಮೋಟರ್ ಶೋ: ಅನಾವರಾಣಗೊಂಡ ಆಡಿ ವಿನೂತನ ಎ6 ಕಾರು

ಎ6 ಕಾರಿನ ಒಳಭಾಗದಲ್ಲಿ ಬ್ಲಾಕ್ ಪ್ಯಾನೆಲ್ ಡಿಸೈನ್ ಥೀಮ್ ನೊಂದಿಗೆ ಸ್ಲೀಕ್ ಅನುಪಾತಗಳನ್ನು ಪಡೆದಿದ್ದು, ಕಾರಿನ ಕೇಂದ್ರ ಕಂಸೋಲ್ 8.6 ಇಂಚಿನ ಎಂಎಂಐ ಬಳಸಿರುವುದು ಪ್ರಮುಖವಾಗಿದೆ. ಹಿಂದಿನ ಮಾದರಿಗಿಂತ ಇದರಲ್ಲಿನ ಕ್ಯಾಬಿನ್ ವಿಶಾಲವಾದ ಲೆಗ್‍‍ರೂಂ ಅನ್ನು ಹೊಂದಿರಲಿದೆ.

ಜೆನೆವಾ ಮೋಟರ್ ಶೋ: ಅನಾವರಾಣಗೊಂಡ ಆಡಿ ವಿನೂತನ ಎ6 ಕಾರು

ಹೊಸ ಎ6 ಕಾರಿನಲ್ಲಿ ಬಳಸಲಾದ ಹೈಬ್ರಿಡ್ ತಂತ್ರಜ್ಞಾನ, ಬೆಲ್ಟ್ ಆಲ್ಟರ್ನೆಟರ್ ಸ್ಟಾರ್ಟರ್ (ಬಿಎಎಸ್) ಮತ್ತು ಲಿಥಿಯಂ ಐಯಾನ್ ಬ್ಯಾಟರಿ ಪಡೆದಿರುವುದು ಇಂಧನ ಕಾರ್ಯಕ್ಷಮತೆಯನ್ನು ಹೆಚ್ಚಿಸಲಿದೆ.

ಜೆನೆವಾ ಮೋಟರ್ ಶೋ: ಅನಾವರಾಣಗೊಂಡ ಆಡಿ ವಿನೂತನ ಎ6 ಕಾರು

ಎಂಜಿನ್ ಸಾಮರ್ಥ್ಯ

3 ಲೀಟರ್ ವಿ6 ಟರ್ಬೋಚಾರ್ಜ್ಡ್ ಎಂಜಿನ್ ಹೊಂದಿದ್ದು, 335 ಬಿಹೆಚ್‍‍ಪಿ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಮತ್ತೊಂದು ಮಾದರಿಯಲ್ಲಿ ಅಳವಡಿಸಲಾಗಿರುವ 3 ಲೀಟರ್ ಡೀಸೆಲ್ ಎಂಜಿನ್ 282ಬಿಹೆಚ್‌ಪಿ ಮತ್ತು 620 ಎನ್ಎಂ ಟಾರ್ಕನ್ನು ಉತ್ಪಾದಿಸುತ್ತವೆ.

ಜೆನೆವಾ ಮೋಟರ್ ಶೋ: ಅನಾವರಾಣಗೊಂಡ ಆಡಿ ವಿನೂತನ ಎ6 ಕಾರು

ಜೊತೆಗೆ ಸ್ಟ್ಯಾಂಡರ್ಡ್ 7 ಸ್ಪೀಡ್ ಆಟೋಮ್ಯಾಟಿಕ್ ಎಸ್ ಟ್ರಾನಿಕ್ ಗೇರ್‍‍ಬಾಕ್ಸ್ ಮತ್ತು ಆಪ್ಷನಲ್ 8 ಸ್ಪೀಡ್ ಆಟೋಮ್ಯಾಟಿಕ್ ಟಿಪ್ಟ್ರಾನಿಕ್ ಗೇರ್‍‍ಬಾಕ್ಸ್ ಆಯ್ಕೆಗಳನ್ನು ಪಡೆದಿವೆ.

ಜೆನೆವಾ ಮೋಟರ್ ಶೋ: ಅನಾವರಾಣಗೊಂಡ ಆಡಿ ವಿನೂತನ ಎ6 ಕಾರು

ಹೀಗಾಗಿ 5.1 ಸೆಕೆಂಡಿಗೆ 0-100km/h ಮತ್ತು ಪ್ರತಿಗಂಟೆಗೆ 250 ಕಿಲೋಮೀಟರ್ ಚಲಿಸಬಹುದಾದ ಟಾಪ್ ಸ್ಪೀಡ್ ಅನ್ನು ಪದೆದಿದ್ದು, ಸ್ಟ್ಯಾಂಡರ್ಡ್, ಸ್ಪೋರ್ಟ್, ಅಡಾಪ್ಟಿವ್ ಡಂಪರ್ ಕಂಟ್ರೋಲ್ ಮತ್ತು ಪೂರ್ಣ ಅಡಾಪ್ಟಿವ್ ಏರ್ ಸಸ್ಪೆಷನ್ ಎಂಬ ನಾಲ್ಕು ಸಸ್ಪೆಷನ್ ಆಯ್ಕೆಗಳಲ್ಲಿ ಬರಲಿದೆ.

ಜೆನೆವಾ ಮೋಟರ್ ಶೋ: ಅನಾವರಾಣಗೊಂಡ ಆಡಿ ವಿನೂತನ ಎ6 ಕಾರು

ಇದಲ್ಲದೆ 21 ಇಂಚಿನ ವೀಲ್ಸ್ ಮತ್ತು ಮುಂಭಾಗದಲ್ಲಿ ಹೊಸ ಅಲ್ಯುಮಿನಿಯಂ ಫಿಕ್ಸ್ಡ್ ಬ್ರೇಕ್ ಕ್ಯಾಲಿಪೆರ್ಸ್ ಅನ್ನು ಅಳವಡಿಸಲಾಗಿದೆ.

ಜೆನೆವಾ ಮೋಟರ್ ಶೋ: ಅನಾವರಾಣಗೊಂಡ ಆಡಿ ವಿನೂತನ ಎ6 ಕಾರು

ಒಟ್ಟಿನಲ್ಲಿ ಎಂಟನೆೇ ತಲೆಮಾರಿನ ಹೊಸ ಆಡಿ ಎ6 ಕಾರು, ಪುನರುತ್ತಾನಗೊಳಿಸಿದ ಹೊರಭಾಗದ ವಿನ್ಯಾಸ, ಒಳಭಾಗದಲ್ಲಿ ಹೊಸ ತಂತ್ರಜ್ಞಾನ ಮತ್ತು ಪರಿಷ್ಕರಿಸಿದ ವಿನ್ಯಾಸವನ್ನು ಪಡೆದಿದ್ದು, 2018ರ ಜೆನೆವಾ ಮೋಟರ್ ಶೋನಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದೆ.

ಜೆನೆವಾ ಮೋಟರ್ ಶೋ: ಅನಾವರಾಣಗೊಂಡ ಆಡಿ ವಿನೂತನ ಎ6 ಕಾರು

ಇನ್ನು ಈ ಕಾರನ್ನು 2019ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಗೊಳಿಸಲು ಆಡಿ ಸಂಸ್ಥೆಯು ನಿರೀಕ್ಷಿಸುತ್ತಿದ್ದು, ಮರ್ಸಿಡಿಸ್-ಬೆಂಜ್ ಎ-ಕ್ಲಾಸ್ ಮತ್ತು ಬಿಎಂಡಬ್ಲ್ಯು 5 ಸರಣಿಯ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ.

Most Read Articles

Kannada
Read more on audi ಆಡಿ
English summary
New Audi A6 Revealed Ahead Of Geneva Debut; Specifications, Features & Images.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X