ಹೊತ್ತಿ ಉರಿದ ಫೋರ್ಡ್ ಎಂಡೀವರ್- ಕಾರಿನಲ್ಲಿದ್ದ ಉದ್ಯಮಿ ಸಜೀವ ದಹನ..!

ವಾಹನ ಎಂಜಿನ್ ವಿಭಾಗದಲ್ಲಿ ಆಗುವ ಕೆಲವು ತಾಂತ್ರಿಕ ದೋಷಗಳ ಬಗ್ಗೆ ಆಗಾಗ ಗಮನಹರಿಸಿಬೇಕು. ಇಲ್ಲವಾದ್ರೆ ಅದು ಕೆಲವೊಮ್ಮೆ ದೊಡ್ಡ ಅನಾಹುತವನ್ನೇ ಸೃಷ್ಠಿಸುತ್ತವೆ. ಇಲ್ಲು ಕೂಡಾ ಆಗಿದ್ದು ಅದೇ. ಮೊದಮೊದಲು ಕಾರಿನಲ್ಲಿ ಕಂಡುಬಂದ ಸ್ಪೋಟದ ಶಬ್ದದ ಬಗ್ಗೆ ನಿರ್ಲಕ್ಷ್ಯಕ್ಕೆ ಮಾಡಿದ ತಪ್ಪಿಗೆ ಫೋರ್ಡ್ ಎಂಡೀವರ್ ಕಾರು ಸಮೇತ ಮಾಲೀಕ ಕೂಡಾ ಸುಟ್ಟುಹೋಗಿದ್ದಾನೆ.

ಹೊತ್ತಿ ಉರಿದ ಫೋರ್ಡ್ ಎಂಡೀವರ್- ಕಾರಿನಲ್ಲಿದ್ದ ಉದ್ಯಮಿ ಸಜೀವ ದಹನ..!

ಕಾರಿನ ಎಂಜಿನ್ ವಿಭಾಗದಲ್ಲಿ ಆದ ತಾಂತ್ರಿಕ ದೋಷದಿಂದಾಗಿ ದುಬಾರಿ ಬೆಲೆಯ ಫೋರ್ಡ್ ಎಂಡೀವರ್ ಕಾರೊಂದು ಹೊತ್ತಿ ಉರಿದ ಘಟನೆ ಗುಜರಾತಿನ ವಡೋದರಾ ಹೊರವಲಯದಲ್ಲಿ ನಡೆದಿದ್ದು, ಕಾರು ಚಾಲನೆ ಮಾಡುತ್ತಿದ್ದ ಮಿಹಿರ್ ಪಾಂಚಾಲ್(41) ಕೂಡಾ ಕಾರಿನ ಸಮೇತ ಜೀವಂತವಾಗಿ ಸುಟ್ಟಿರುವ ದುರಂತ ಘಟನೆ ನಡೆದಿದೆ.

ಹೊತ್ತಿ ಉರಿದ ಫೋರ್ಡ್ ಎಂಡೀವರ್- ಕಾರಿನಲ್ಲಿದ್ದ ಉದ್ಯಮಿ ಸಜೀವ ದಹನ..!

ಕಾರು ಚಾಲನೆಯಲ್ಲಿರುವಾಗಲೇ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಪರಿಣಾಮ ಕೆಲವೇ ನಿಮಿಷಗಳಲ್ಲಿ ಫೋರ್ಡ್ ಎಂಡೀವರ್ ಕಾರು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ ಎನ್ನಲಾಗಿದೆ.

ಹೊತ್ತಿ ಉರಿದ ಫೋರ್ಡ್ ಎಂಡೀವರ್- ಕಾರಿನಲ್ಲಿದ್ದ ಉದ್ಯಮಿ ಸಜೀವ ದಹನ..!

ಎಂಡೀವರ್ ಕಾರಿನ ಎಂಜಿನ್ ನಲ್ಲಿರುವ ತಾಂತ್ರಿಕ ದೋಷದಿಂದಾಗಿಯೇ ಬೆಂಕಿ ಹೊತ್ತಿಕೊಂಡಿದೆ ಎನ್ನುವ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ಮಾಹಿತಿ ಲಭ್ಯವಾಗಿದ್ದು, ಕಾರಿನ ಎಂಜಿನ್‌ನಲ್ಲಿ ಆದ ತಾಂತ್ರಿಕ ದೋಷಗಳು ಅರಿವಿಗೆ ಬರುವ ಮುನ್ನವೇ ಕಾರು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿಕೊಂಡಿತ್ತು.

ಹೊತ್ತಿ ಉರಿದ ಫೋರ್ಡ್ ಎಂಡೀವರ್- ಕಾರಿನಲ್ಲಿದ್ದ ಉದ್ಯಮಿ ಸಜೀವ ದಹನ..!

ಕಾರು ಚಾಲನೆ ಮಾಡುತ್ತಿದ್ದ ಮಿಹಿರ್ ಪಾಂಚಾಲ್ ಅವರಿಗೆ ಮೊದಮೊದಲ ಎಂಜಿನ್ ವಿಭಾಗದಲ್ಲಿ ಆದ ಸದ್ದಿನ ಬಗ್ಗೆ ಅರಿವಿಗೆ ಬಂದಿಲ್ಲಾ. ಆದಾದ ಬಳಿಕ ಕೆಲವೇ ನಿಮಿಷಗಳಲ್ಲಿ ಹೊಗೆ ಕಾರಿನ ಇಂಟಿರಿಯರ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ.

ಹೊತ್ತಿ ಉರಿದ ಫೋರ್ಡ್ ಎಂಡೀವರ್- ಕಾರಿನಲ್ಲಿದ್ದ ಉದ್ಯಮಿ ಸಜೀವ ದಹನ..!

ಆಗ ತಕ್ಷಣವೇ ಕಾರನ್ನು ರಸ್ತೆ ಬದಿಗೆ ಹಾಕಿರುವ ಮಿಹಿರ್ ಪಾಂಚಾಲ್ ಅವರು ಸೀಟ್ ಬೆಲ್ಟ್ ಕಳುಚಿ ಬಾಗಿಲು ತೆರೆಯಲು ಯತ್ನಸಿದ್ದಾರೆ. ಆದ್ರೆ ಬೆಂಕಿ ಕೆನ್ನಾಲಿಗೆ ಅದಾಗಲೇ ಸಂಪೂರ್ಣವಾಗಿ ಆವರಿಸಿಕೊಂಡಿದ್ದರಿಂದ ಡೋರ್ ಲಾಕ್ ಕೂಡಾ ಕಾರ್ಯನಿರ್ವಹಿಸಿಲ್ಲ.

ಹೊತ್ತಿ ಉರಿದ ಫೋರ್ಡ್ ಎಂಡೀವರ್- ಕಾರಿನಲ್ಲಿದ್ದ ಉದ್ಯಮಿ ಸಜೀವ ದಹನ..!

ಜೊತೆಗೆ ಸೀಟ್ ಬೆಲ್ಟ್ ಕೂಡಾ ಕಾರ್ಯನಿರ್ವಹಿಸದ ಹಿನ್ನಲೆಯಲ್ಲಿ ಅಲ್ಲಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಗೆ ಸಿಲುಕಿದ ಮಿಹಿರ್ ಪಾಂಚಾಲ್ ಬೆಂಕಿಯ ಕೆನ್ನಾಲಿಗೆ ಸಿಲುಕಿದ್ದಾರೆ. ಈ ವೇಳೆ ಕಾರಿನ ಹಿಂದೆಯೇ ಬರುತ್ತಿದ್ದ ವಾಹನ ಸವಾರರು ಕೂಡಾ ಬಾಗಿಲು ಒಡೆದು ಹೊರ ತರಲು ಯತ್ನಿಸಿದ್ದರೂ ಕೂಡಾ ಸಾಧ್ಯವಾಗಿಲ್ಲ.

ಹೊತ್ತಿ ಉರಿದ ಫೋರ್ಡ್ ಎಂಡೀವರ್- ಕಾರಿನಲ್ಲಿದ್ದ ಉದ್ಯಮಿ ಸಜೀವ ದಹನ..!

ಬೆಂಕಿ ಕೆನ್ನಾಲಿಗೆ ಹೆಚ್ಚಾಗುತ್ತಿದ್ದಂತೆ ಇತರೆ ವಾಹನ ಸವಾರರು ರಕ್ಷಣೆ ಕಾರ್ಯದಿಂದ ಹಿಂದೆ ಸರಿದಿದ್ದು, ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದಿಂದಲೂ ಮಿಹಿರ್ ಪಾಂಚಾಲ್ ಅವರನ್ನು ರಕ್ಷಣೆ ಮಾಡುವ ಪ್ರಯತ್ನ ಕೈ ಮೀರಿಹೊಗಿತ್ತು.

ಹೊತ್ತಿ ಉರಿದ ಫೋರ್ಡ್ ಎಂಡೀವರ್- ಕಾರಿನಲ್ಲಿದ್ದ ಉದ್ಯಮಿ ಸಜೀವ ದಹನ..!

ಘಟನೆ ನಡೆದ ಸ್ಥಳ ವಡೋದರಾ ಹೊರವಲಯವಾಗಿದ್ದರಿಂದ ಬೆಂಕಿ ಕೆನ್ನಾಲಿಗೆಯಿಂದ ಇತರೆ ಯಾವುದೇ ಹಾನಿಯಾಗಿಲ್ಲವಾದರೂ ಎಂಜಿನ್ ವಿಭಾಗದಲ್ಲಿ ಆಗುವ ಸಣ್ಣಪುಟ್ಟ ದೋಷಗಳು ಜೀವಹಾನಿಗೂ ಕಾರಣವಾಗುತ್ತವೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.

ಹೊತ್ತಿ ಉರಿದ ಫೋರ್ಡ್ ಎಂಡೀವರ್- ಕಾರಿನಲ್ಲಿದ್ದ ಉದ್ಯಮಿ ಸಜೀವ ದಹನ..!

ಇನ್ನು ಘಟನೆಯಲ್ಲಿ ಜೀವ ಕಳೆದಕೊಂಡ ಮಿಹಿರ್ ಪಾಂಚಾಲ್ ವಡೋದರಾ ನಗರದಲ್ಲಿರುವ ಪ್ರತಿಷ್ಠಿತ ರಿಯಲ್ ಎಸ್ಟೆಟ್ ಸಂಸ್ಥೆಯೊಂದರ ಮಾಲೀಕರಾಗಿದ್ದು, ನಿರ್ಮಾಣ ಹಂತದ ಕಟ್ಟಡವೊಂದರ ಕಾಮಗಾರಿ ಪರಿಶೀಲನೆಗಾಗಿ ತೆರಳುತ್ತಿದ್ದಾಗ ಈ ದುರಂತ ನಡೆದಿದೆ. ಇನ್ನು ಕೆಲವು ಮಾಹಿತಿ ಪ್ರಕಾರ, ಈ ಕಾರನ್ನು ಕಳೆದ ತಿಂಗಳ ಹಿಂದಷ್ಟೇ ಖರೀದಿ ಮಾಡಲಾಗಿತ್ತು ಎಂದು ಹೇಳಲಾಗಿದೆ.

ಹೊತ್ತಿ ಉರಿದ ಫೋರ್ಡ್ ಎಂಡೀವರ್- ಕಾರಿನಲ್ಲಿದ್ದ ಉದ್ಯಮಿ ಸಜೀವ ದಹನ..!

ಸದ್ಯ ಈ ಘಟನೆ ಬಗ್ಗೆ ದೂರು ದಾಖಲಿಸಿಕೊಂಡಿರುವ ವಡೋದರಾ ಪೊಲೀಸರು ಘಟನೆಗೆ ನಿಖರ ಕಾರಣ ಏನು ಎನ್ನುವ ಕುರಿತು ತನಿಖೆ ನಡೆಸುತ್ತಿದ್ದು, ಕಾರಿನಲ್ಲಿ ಎಂಜಿನ್ ವಿಭಾಗದಲ್ಲಿ ಕಂಡುಬರುವ ಸಣ್ಣಪುಟ್ಟ ತಾಂತ್ರಿಕ ದೋಷಗಳ ಬಗ್ಗೆ ಆಗಾಗ ತಂತ್ರಜ್ಞರ ಬಳಿ ಪರಿಶೀಲನೆ ಮಾಡಿಸುವುದು ತುಂಬಾ ಮುಖ್ಯ ವಿಚಾರ ಎನ್ನಬಹುದು.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಹೊತ್ತಿ ಉರಿದ ಫೋರ್ಡ್ ಎಂಡೀವರ್- ಕಾರಿನಲ್ಲಿದ್ದ ಉದ್ಯಮಿ ಸಜೀವ ದಹನ..!

ಇನ್ನೊಂದು ವಿಚಾರವನ್ನು ನಾವಿಲ್ಲಿ ಹೇಳುವುದಾದರೇ, ಫೋರ್ಡ್ ಎಂಡೀವರ್ ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವ ಘಟನೆ ಇದೇ ಮೊದಲೇನು ಅಲ್ಲಾ ಬಿಡಿ. ಈ ಹಿಂದೆ ಯಾದಗಿರಿ ಜಿಲ್ಲೆಯ ಶಹಾಪುರದಲ್ಲೂ ಇಂತದ್ದೆ ಅವಘಡ ಸಂಭವಿಸಿತ್ತು.

ಹೊತ್ತಿ ಉರಿದ ಫೋರ್ಡ್ ಎಂಡೀವರ್- ಕಾರಿನಲ್ಲಿದ್ದ ಉದ್ಯಮಿ ಸಜೀವ ದಹನ..!

ಆದ್ರೆ ಬಲಿಷ್ಠ ಎಂಜಿನ್ ಸೇರಿದಂತೆ ಹತ್ತು ಹಲವು ಸುಧಾರಿತ ತಂತ್ರಜ್ಞಾನಗಳನ್ನು ಹೊಂದಿರುವ ಫೋರ್ಡ್ ಎಂಡೀವರ್‌ನಲ್ಲಿ ಪದೇ ಪದೇ ತಾಂತ್ರಿಕ ದೋಷಗಳು ಕಂಡುಬರುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದ್ದು, ಪೂರ್ಣ ಪ್ರಮಾಣದ ತನಿಖೆ ನಂತರವಷ್ಟೇ ಇಂತಹ ಘಟನೆಗಳಿಗೆ ನಿಖರ ಕಾರಣ ತಿಳಿದು ಬರಲಿದೆ.

MOST READ: ಬೆಂಗಳೂರಿನಲ್ಲಿ 2 ವರ್ಷಗಳ ಕಾಲ ಹೊಸ ವಾಹನಗಳ ನೋಂದಣಿ ನಿಷೇಧಕ್ಕೆ ಸಿದ್ದತೆ?

ಹೊತ್ತಿ ಉರಿದ ಫೋರ್ಡ್ ಎಂಡೀವರ್- ಕಾರಿನಲ್ಲಿದ್ದ ಉದ್ಯಮಿ ಸಜೀವ ದಹನ..!

ಇನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ 32.81 ಲಕ್ಷ ಬೆಲೆ ಹೊಂದಿರುವ ಫೋರ್ಡ್ ಎಂಡೀವರ್ ಕಾರುಗಳು 2.2-ಲೀಟರ್ ಮತ್ತು 3.2-ಲೀಟರ್ ಎರಡು ಎಂಜಿನ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಏಳು ಏರ್‌ಬ್ಯಾಗ್, ಎಬಿಎಸ್ ಸೇರಿದಂತೆ ಹಲವು ಸುರಕ್ಷಾ ತಂತ್ರಜ್ಞಾನಗಳೊಂದಿಗೆ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯ ಹೊಂದಿದೆ.

ಬೆಂಕಿಗೆ ಆಹುತಿಯಾದ ಹೊಸ ಫೋರ್ಡ್ ಕಾರಿನ ವಿಡಿಯೋ ಇಲ್ಲಿದೆ ನೋಡಿ.

Article Published On: Friday, November 23, 2018, 14:21 [IST]
English summary
Ford Endeavour catches fire – Owner burnt to death.
Read more on off beat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+