ಬಹುನೀರಿಕ್ಷಿತ ಫೋರ್ಡ್ ಫಿಗೊ ಮತ್ತು ಆಸ್ಪೈರ್ ಫೇಸ್‌ಲಿಫ್ಟ್ ಕಾರುಗಳ ಅನಾವರಣ
ಅಮೆರಿಕದ ಪ್ರಸಿದ್ದ ಕಾರು ಉತ್ಪಾದನಾ ಸಂಸ್ಥೆಯಾದ ಫೋರ್ಡ್ ಸದ್ಯದಲ್ಲೇ ಭಾರತೀಯ ಮಾರುಕಟ್ಟೆಗಾಗಿ ಫೇಸ್‌ಲಿಫ್ಟ್ ಮಾದರಿಗಳಾದ ಫಿಗೊ ಮತ್ತು ಆಸ್ಪೈರ್ ಕಾರುಗಳನ್ನು ಪರಿಚಯಿಸುವ ಇರಾದೆಯಲ್ಲಿದೆ.
ಅಮೆರಿಕದ ಪ್ರಸಿದ್ದ ಕಾರು ಉತ್ಪಾದನಾ ಸಂಸ್ಥೆಯಾದ ಫೋರ್ಡ್ ಸದ್ಯದಲ್ಲೇ ಭಾರತೀಯ ಮಾರುಕಟ್ಟೆಗಾಗಿ ಫೇಸ್‌ಲಿಫ್ಟ್ ಮಾದರಿಗಳಾದ ಫಿಗೊ ಮತ್ತು ಆಸ್ಪೈರ್ ಕಾರುಗಳನ್ನು ಪರಿಚಯಿಸುವ ಇರಾದೆಯಲ್ಲಿದ್ದು, ಇದೀಗ ಹೊಸ ಕಾರುಗಳನ್ನು ಅನಾವರಣ ಮಾಡುವ ಸೆಡಾನ್ ಮತ್ತು ಹ್ಯಾಚ್‌ಬ್ಯಾಕ್ ಕಾರು ಪ್ರಿಯರಲ್ಲಿ ಮತ್ತಷ್ಟು ಕುತೂಹಲವನ್ನು ಹುಟ್ಟುಹಾಕಿದೆ.

ಕೆಲ ದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪ್ರಸ್ತುತ ತಲೆಮಾರಿನ ಆಸ್ಫೈರ್ ಸೆಡಾನ್ ಮತ್ತು ಫಿಗೊ ಕಾರಿನ ಉತ್ಪಾದನೆಯನ್ನು ನಿಲ್ಲಿಸುತ್ತಿರುವುದಾಗಿ ಹೇಳಿಕೊಂಡಿದ್ದ ಫೋರ್ಡ್ ಸಂಸ್ಥೆಯು, ಅದರ ಬೆನ್ನೆಲ್ಲೇ ನ್ಯೂ ಜನರೇಷನ್ ಮಾದರಿಯ ಆಸ್ಪೈರ್ ಸೆಡಾನ್ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗಿಲ್ಲದೇ ಇದೀಗ ಹೊಸ ಕಾರುಗಳ ಕುರಿತಾದ ಮಹತ್ವದ ಮಾಹಿತಿಗಳನ್ನು ಬಿಟ್ಟುಕೊಟ್ಟಿದೆ.

ಮಾಹಿತಿಗಳ ಪ್ರಕಾರ ಫೋರ್ಡ್ ಸಂಸ್ಥೆಯು ನ್ಯೂ ಜನರೇಷನ್ ಮಾದರಿಯ ಆಸ್ಫೈರ್ ಮತ್ತು ಫಿಗೊ ಕಾರುಗಳ ಉತ್ಪಾದನೆಯನ್ನು ಶೀಘ್ರದಲ್ಲೇ ಶುರುಮಾಡಲಿದ್ದು, ಪ್ರಸ್ತುತ ಗ್ರಾಹಕರ ಬೇಡಿಕೆ ತಕ್ಕಂತೆ ಹೊಸ ಕಾರುಗಳ ಡಿಸೈನ್ ಮತ್ತು ಎಂಜಿನ್ ವಿಭಾಗದಲ್ಲಿ ಪ್ರಮುಖ ಬದಲಾವಣೆ ತರಲಾಗಿದೆ.

ಹೊಸ ಫೋರ್ಡ್ ಆಸ್ಫೈರ್ ಸೆಡಾನ್ ಮತ್ತು ಫಿಗೊ ಹ್ಯಾಚ್‌ಬ್ಯಾಕ್ ಕಾರುಗಳನ್ನು ಪ್ರಸ್ತುತ ತಲೆಮಾರಿನ ಕಾರುಗಳೊಂದಿಗೆ ಹೋಲಿಸಿದರೆ ಹಲವು ಬದಲಾವಣೆಗಳೊಂದಿಗೆ ನವೀಕರಣಗಳೊಂಡಿದ್ದು, ಕಾರಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಹೊಸ ಬಂಪರ್ ಮತ್ತು ಟ್ವೀಕ್ಡ್ ರಿಯರ್ ಪ್ರೊಫೈಲ್ ಹಾಗೆಯೇ ಅಲಾಯ್ ಚಕ್ರಗಳನ್ನೂ ಕೂಡಾ ಹೊಸತನ ಪಡೆದಿವೆ.

ಇನ್ನು ಕಾರಿನ ಒಳಭಾಗದಲ್ಲಿ ಫೋರ್ಡ್ ಇಕೋ ಸ್ಪೋರ್ಟ್ ಮಾದರಿಯಲ್ಲೇ ಮೊದಲ ಬಾರಿಗೆ ಎಸ್‍ವೈಎನ್‍ಸಿ3 ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಬಳಸಲಾಗಿದ್ದು, ಇದರಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಕನೆಕ್ಟಿವಿಟಿ ಅಂಶಗಳನ್ನು ಕೂಡಾ ಅಳವಡಿಸಲಾಗಿದೆ.

ಹೊಸದಾಗಿ ಬಿಡುಗಡೆಗೊಳ್ಳಲಿರುವ ಆಸ್ಫೈರ್ ಕಾರುಗಳಲ್ಲಿ ಎಕೋ ಸ್ಪೋರ್ಟ್ಸ್ ಫೇಸ್‍ಲಿಫ್ಟ್ ಕಾರಿನಲ್ಲಿ ಬಳಸಲಾದಂತೆ 1.5 ಲೀಟರ್ ಮೂರು ಸಿಲಿಂಡರ್ ಡ್ರಾಗನ್ ಸರಣಿಯ ಪೆಟ್ರೋಲ್ ಎಂಜಿನ್ ಅನ್ನು ಪಡೆದಿದ್ದು, 121 ಬಿಹೆಚ್‍ಪಿ ಮತ್ತು 150 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದೆ.

ಇದರಲ್ಲಿ ಡೀಸೆಲ್ ಆವೃತ್ತಿಯು 1.5 ಲೀಟರ್ ಡೀಸೆಲ್ ಎಂಜಿನ್ 98.9 ಬಿಹೆಚ್‍ಪಿ ಮತ್ತು 215ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿರಲಿದ್ದು, ಈ ಎರಡೂ ಎಂಜಿನ್‍ಗಳನ್ನು 5 ಸ್ಪೀಡ್ ಮ್ಯಾನುವಲ್ ಮತ್ತು 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಆಯ್ಕೆಗಳನ್ನು ಕೂಡ ಪಡೆದಿರಲಿದೆ.

ಹಾಗೆಯೇ ಫಿಗೋ ಫೇಸ್‌ಲಿಫ್ಟ್ ಕಾರುಗಳಲ್ಲಿ 1.5-ಲೀಟರ್ ಡಿಸೇಲ್ ಎಂಜಿನ್ ಹಾಗೂ 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಖರೀದಿ ಲಭ್ಯವಾಗಲಿರುವ ಫಿಗೊ ಫೇಸ್‌ಲಿಫ್ಟ್ ಆವೃತ್ತಿಯು ಇಕೋ ಸ್ಪೋರ್ಟ್ ಮಾದರಿಯಲ್ಲೇ ಶಕ್ತಿ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿವೆ.

ಹೊಸ ಅವತಾರದಲ್ಲಿ ಬಿಡಗಡೆಗೊಳ್ಳಲಿರುವ ಫೋರ್ಡ್ ಆಸ್ಪೈರ್ ಕಾರಿನ ಬಗ್ಗೆ ಸಂಸ್ಥೆಯು ಇನ್ನು ಹೆಚ್ಚು ಮಾಹಿತಿಯನ್ನು ಬಹಿರಂಗಗೊಳಿಸಲಿಲ್ಲವಾದರೂ, ಪವರ್‌ಫುಲ್ ಎಂಜಿನ್ ಬಳಕೆ ಹಿನ್ನೆಲೆ ಸೆಡಾನ್ ಪ್ರಿಯರನ್ನು ಸೆಳೆಯುವ ತವಕದಲ್ಲಿದೆ.

ಹೊಸ ಕಾರುಗಳ ಬಿಡುಗಡೆ ಅವಧಿ ಮತ್ತು ಬೆಲೆ(ಅಂದಾಜು)
ಫೇಸ್‌ಲಿಫ್ಟ್ ಫಿಗೊ ಮತ್ತು ಆಸ್ಪೈರ್ ಕಾರುಗಳನ್ನು ಅನಾವರಣ ಮಾಡಿರುವ ಫೋರ್ಡ್ ಸಂಸ್ಥೆಯು ಮುಂದಿನ ಆಗಸ್ಟ್ ಅಂತ್ಯಕ್ಕೆ ಇಲ್ಲವೇ ಸೆಪ್ಟೆಂಬರ್ ಮೊದಲ ವಾರದಲ್ಲಿ ಬಿಡುಗಡೆಯಾಗಲಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಲಭ್ಯವಿರುವ ಸಾಮಾನ್ಯ ಮಾದರಿಗಳಿಂತ ಹೆಚ್ಚುವರಿ 1 ಲಕ್ಷದಿಂದ 2.25 ಲಕ್ಷ ಬೆಲೆ ಹೆಚ್ಚಳವಾಗಬಹುದು.

ಒಟ್ಟಿನಲ್ಲಿ ಹೊಸದಾಗಿ ನವೀಕರಣಗೊಂಡ ಈ ಕಾರುಗಳು ಮಾರುಕಟ್ಟೆಗೆ ಲಭ್ಯವಿರುವ ಮಾರುತಿ ಸುಜುಕಿ ಸ್ಪಿಫ್ಟ್ ಹ್ಯಾಚ್‌ಬ್ಯಾಕ್, ಡಿಜೈರ್ ಸೆಡಾನ್, ಹ್ಯುಂಡೈ ಎಕ್ಸ್ ಸೆಂಟ್, ಫೋಕ್ಸ್‌ವ್ಯಾಗನ್ ಎಮಿಯೊ ಮತ್ತು ಹೊಸ ತಲೆಮಾರಿನ ಹೋಂಡಾ ಅಮೇಜ್ ಕಾರುಗಳಿಗೆ ಪೈಪೋಟಿಯನ್ನು ನೀಡಲಿವೆ.


Click it and Unblock the Notifications








