2018ರ ಸ್ವಿಫ್ಟ್ ಕಾರಿಗೆ ಟಾಂಗ್ ನೀಡಲು ಬರಲಿದೆ ಫೋರ್ಡ್ ಫಿಗೊ ಫೇಸ್‌ಲಿಫ್ಟ್
ಅಮೆರಿಕದ ಪ್ರಸಿದ್ಧ ವಾಹನ ತಯಾರಕ ಸಂಸ್ಥೆಯಾದ ಫೋರ್ಡ್ ತನ್ನ ಫಿಗೊ ಫೇಸ್‌ಲಿಫ್ಟ್ ಹ್ಯಾಚ್‌ಬ್ಯಾಕ್ ಪರಿಚಯಿಸಲು ಮುಂದಾಗಿದೆ.
Recommended Video

ಅಮೆರಿಕದ ಪ್ರಸಿದ್ಧ ವಾಹನ ತಯಾರಕ ಸಂಸ್ಥೆಯಾದ ಫೋರ್ಡ್ ತನ್ನ ಫಿಗೊ ಫೇಸ್‌ಲಿಫ್ಟ್ ಹ್ಯಾಚ್‌ಬ್ಯಾಕ್ ಪರಿಚಯಿಸಲು ಮುಂದಾಗಿದ್ದು, ಬಿಡುಗಡೆಗಾಗಿ ಸಿದ್ದಗೊಂಡಿರುವ ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಹ್ಯುಂಡೈ ಗ್ರ್ಯಾಂಡ್ ಐ10 ಕಾರುಗಳಿಗೆ ಈ ಕಾರು ಪ್ರತಿಸ್ಪರ್ಧಿಯಾಗಲಿದೆ.

ಫೋರ್ಡ್ ಪರಿಚಯಿಸುತ್ತಿರುವ ಫಿಗೊ ಫೇಸ್‌ಲಿಫ್ಟ್ ಆವೃತ್ತಿಯು ಪ್ರಸ್ತುತ ಮಾದರಿಗಿಂತಲೂ ಹೆಚ್ಚಿನ ಬದಲಾವಣೆ ಹೊಂದಿದ್ದು, ಕಾರಿನ ಒಳಗೂ ಹಾಗು ಹೊರಗಿನ ವಿನ್ಯಾಸಗನ್ನು ಬದಲಾವಣೆ ಮಾಡಿ ಹೊಸ ಲುಕ್ ನೀಡಿರುವುದು ಗ್ರಾಹಕರನ್ನು ಸೆಳೆಯಲು ನೆರವಾಗಲಿದೆ.

ಇನ್ನು ಫೋರ್ಡ್ ಫಿಗೊ ಫೇಸ್ ಲಿಫ್ಟ್ ಬದಲಾವಣೆಗೆ ಸಂಬಂಧಿಸಿದಂತೆ ಫಿಗೊ ಮಾದರಿಯು ದೊಡ್ಡದಾದ ಹೆಡ್‌ಲ್ಯಾಂಪ್‌ಗಳು, ಹೊಸ ನಮೂನೆ ಗ್ರಿಲ್ ಅನ್ನು ಪಡೆದುಕೊಂಡಿದೆ.

ಕಾರಿನ ಒಳ ವಿನ್ಯಾಸ
ಫಿಗೊ ಫೇಸ್‌ಲಿಫ್ಟ್ ಮಾದರಿಯು 6.5 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಹೊಂದಿದ್ದು, ಇದು ಇತ್ತೀಚೆಗೆ ಅನಾವರಣಗೊಂಡ ಫ್ರೀ ಸ್ಟೈಲ್ ಕ್ರಾಸ್ ಓವರ್‌ನಲ್ಲೂ ಅವಳವಡಿಸಲಾಗಿದೆ. ಇದರ ಜೊತೆಗೆ ಫೋರ್ಡ್ ಸಿಂಕ್ 3 ತಂತ್ರಜ್ಞಾನ, ಆ್ಯಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಸಂಪರ್ಕದ ವೈಶಿಷ್ಟ್ಯತೆಯನ್ನು ಪಡೆದಿದೆ.

ಎಂಜಿನ್ ಸಾಮರ್ಥ್ಯ
ಭಾರತದಲ್ಲಿ ಬಿಡುಗಡೆಯಾಗಲಿರುವ ಫಿಗೊ ಫೇಸ್‌ಲಿಫ್ಟ್ ಆವೃತ್ತಿಯು 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, ಫ್ರೀ ಸ್ಪೈಲ್ ಮಾದರಿಯಲ್ಲಿ 95-ಬಿಹೆಚ್‌ಪಿ ಉತ್ಪಾದನಾ ಸಾಮರ್ಥ್ಯ ಹೊಂದಿರಲಿದೆ.

ಫೋರ್ಡ್ ಸಂಸ್ಥೆಯು ಫಿಗೊ ಫೇಸ್ ಲಿಫ್ಟ್ ಕಾರನ್ನು 2018ರ 2ನೇ ತ್ರೈಮಾಸಿಕ ಅವಧಿಗೆ ಬಿಡುಗಡೆಗೊಳಿಸುವ ಯೋಜನೆ ಹೊಂದಿದ್ದು, ಹೊಸ ಕಾರಿನ ಬೆಲೆಯು ಅಂದಾಜು 5 ರಿಂದ 7 ಲಕ್ಷ ದರದಲ್ಲಿ ಮಾರಾಟಕ್ಕೆ ಲಭ್ಯವಾಗುವ ಸಾಧ್ಯತೆಗಳಿವೆ.

ಫಿಗೂ ಫೇಸ್‌ಲಿಫ್ಟ್ ಅಷ್ಟೇ ಅಲ್ಲದೇ ಕೆಎ+ ಆಕ್ಟಿವ್, ಕೆಎ+ ಕ್ರಾಸ್ ಓವರ್ ಆವೃತ್ತಿಗಳನ್ನು ಭಾರತದಲ್ಲಿ ಪರಿಚಯಿಸಲು ಎದುರು ನೋಡುತ್ತಿರುವ ಫೋರ್ಡ್, ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಹ್ಯುಂಡೈ ಗ್ರಾಂಡ್ ಐ10 ಮಾರಾಟಕ್ಕೆ ತೀವ್ರ ಪೈಪೋಟಿ ನೀಡಲಿವೆ.


Click it and Unblock the Notifications