ಬಿಡುಗಡೆಗೆ ಸಜ್ಜಾದ ನ್ಯೂ ಹೋಂಡಾ ಅಮೇಜ್ ಉತ್ಪಾದನೆ ಇದೀಗ ಬಲು ಜೋರು

ಹೋಂಡಾ ವಿನೂತನ ಅಮೇಜ್ ಕಾರುಗಳ ಖರೀದಿಗಾಗಿ ಗ್ರಾಹಕರು ಎದುರು ನೋಡುತ್ತಿದ್ದು, ಇದೀಗ ಹೊಸ ಕಾರಿನ ಉತ್ಪಾದನಾ ಕಾರ್ಯ ಭರದಿಂದ ಸಾಗಿದೆ. ರಾಜಸ್ತಾನ ತಾರಕ್‌ಪುರ್ ಕಾರು ಉತ್ಪಾದನಾ ಘಟಕದಲ್ಲಿ ಅಮೇಜ್ ಕಾರುಗಳ ನಿರ್ಮಾಣದ ಕಾರ್ಯ ಜೋರಾಗಿದೆ.

By Praveen Sannamani

ಇದೇ ತಿಂಗಳು 16ರಂದು ಬಿಡುಗಡೆಯಾಗಲಿರುವ ಹೋಂಡಾ ವಿನೂತನ ಅಮೇಜ್ ಕಾರುಗಳ ಖರೀದಿಗಾಗಿ ಗ್ರಾಹಕರು ಎದುರು ನೋಡುತ್ತಿದ್ದು, ಇದೀಗ ಹೊಸ ಕಾರಿನ ಉತ್ಪಾದನಾ ಕಾರ್ಯ ಭರದಿಂದ ಸಾಗಿದೆ. ರಾಜಸ್ತಾನ ತಾರಕ್‌ಪುರ್ ಕಾರು ಉತ್ಪಾದನಾ ಘಟಕದಲ್ಲಿ ಅಮೇಜ್ ಕಾರುಗಳ ನಿರ್ಮಾಣದ ಕಾರ್ಯ ಜೋರಾಗಿದ್ದು, ಬಿಡುಗಡೆಗೆ ಮುನ್ನವೇ ಹೊಸ ಕಾರುಗಳು ಗ್ರಾಹಕರಲ್ಲಿ ಕುತೂಹಲ ಹುಟ್ಟುಹಾಕಿವೆ.

ಬಿಡುಗಡೆಗೆ ಸಜ್ಜಾದ ನ್ಯೂ ಹೋಂಡಾ ಅಮೇಜ್ ಉತ್ಪಾದನೆ ಇದೀಗ ಬಲು ಜೋರು

ಕಂಪ್ಯಾಕ್ಟ್ ಸೆಡಾನ್ ಆವೃತ್ತಿಗಳಲ್ಲಿ ಉತ್ತಮ ಬೇಡಿಕೆ ಗಳಿಸುವಲ್ಲಿ ಯಶಸ್ವಿಯಾಗಿರುವ ಹೋಂಡಾ ಅಮೇಜ್ ಹೊಸತನದೊಂದಿಗೆ ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಸದ್ದು ಮಾಡಲು ಸಜ್ಜಾಗುತ್ತಿದ್ದು, ಹೊಸ ಕಾರಿನಲ್ಲಿ ಒದಗಿಸಲಾಗಿರುವ ತಾಂತ್ರಿಕ ಸೌಲಭ್ಯಗಳು ಸೆಡಾನ್ ಪ್ರಿಯರ ಆಕರ್ಷಣೆಗೆ ಕಾರಣವಾಗಿವೆ.

ಬಿಡುಗಡೆಗೆ ಸಜ್ಜಾದ ನ್ಯೂ ಹೋಂಡಾ ಅಮೇಜ್ ಉತ್ಪಾದನೆ ಇದೀಗ ಬಲು ಜೋರು

ಇದರ ಜೊತೆಗೆ ಹೊಸ ಕಾರಿನ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿರುವುದಲ್ಲದೇ ಹೊಸ ಕಾರು ಖರೀದಿಸುವ ಮೊದಲ 20 ಸಾವಿರ ಗ್ರಾಹಕರಿಗೆ ಹೋಂಡಾ ಸಂಸ್ಥೆ ಭರ್ಜರಿ ಆಫರ್ ಘೋಷಣೆ ಮಾಡಿದೆ.

ಬಿಡುಗಡೆಗೆ ಸಜ್ಜಾದ ನ್ಯೂ ಹೋಂಡಾ ಅಮೇಜ್ ಉತ್ಪಾದನೆ ಇದೀಗ ಬಲು ಜೋರು

ಈ ಬಗ್ಗೆ ಸ್ವತಃ ಹೋಂಡಾ ಸಂಸ್ಥೆಯೇ ಮಾಹಿತಿ ನೀಡಿದ್ದು, ಕಾರು ಖರೀದಿಗಾಗಿ ಬುಕ್ ಮಾಡುವ ಮೊದಲ 20 ಸಾವಿರ ಗ್ರಾಹಕರಿಗೆ ಕಾರು ಖರೀದಿಯಲ್ಲಿ ಡಿಸ್ಕೌಂಟ್ ನೀಡುವುದಾಗಿ ಘೋಷಿಸಿದೆ. ಇದರಿಂದ ನಿಗದಿತ ಅವಧಿಯಲ್ಲಿ ಅಮೇಜ್ ಕಾರು ಖರೀದಿಸುವ ಗ್ರಾಹಕರಿಗೆ ಕಾರಿನ ಬೆಲೆಗಳಲ್ಲಿ ರಿಯಾಯ್ತಿ ಸಿಗಲಿದೆ.

ಬಿಡುಗಡೆಗೆ ಸಜ್ಜಾದ ನ್ಯೂ ಹೋಂಡಾ ಅಮೇಜ್ ಉತ್ಪಾದನೆ ಇದೀಗ ಬಲು ಜೋರು

ಇನ್ನು 2018ರ ಹೋಂಡಾ ಅಮೇಜ್ ಕಾರುಗಳು ಹೋಂಡಾ ಸಿಟಿ ಕಾರಿನ ವಿನ್ಯಾಸವನ್ನೇ ಹೋಲಲಿದ್ದು, ಎರಡನೇ ತಲೆಮಾರಿನ ಶಾರ್ಪರ್ ಆಂಗಲ್ಸ್, ಬೋಲ್ಡರ್ ಡಿಸೈನ್ ಹಾಗೂ ಆಂಗ್ಯೂಲರ್ ಹೆಡ್‍‍ಲ್ಯಾಂಪ್‍‍ಗಳನ್ನು ಪಡೆದುಕೊಂಡಿವೆ.

ಬಿಡುಗಡೆಗೆ ಸಜ್ಜಾದ ನ್ಯೂ ಹೋಂಡಾ ಅಮೇಜ್ ಉತ್ಪಾದನೆ ಇದೀಗ ಬಲು ಜೋರು

ಕಂಪ್ಯಾಕ್ಟ್ ಸೆಡಾನ್ ಆದ ಹೋಂಡಾ ಅಮೇಜ್ ಕಾರು 15 ಇಂಚಿನ ವೀಲ್‍‍ಗಳನ್ನು ಪಡೆದಿದೆ. ಕಾರಿನ ಹಿಂಭಾಗವು ದಪ್ಪದಾದ ಕ್ರೋಮ್ ಸ್ಟ್ರಿಪ್, ಸಿ ಟೈಪ್ ಟೈಲ್‍ ಲೈಟ್ಸ್ ಗಳನ್ನು ಪಡೆದಿದ್ದು, ಇನ್ನಷ್ಟು ಆಕರ್ಷಕವಾದ ವಿನ್ಯಾಸದಿಂದ ಸಜ್ಜುಗೊಂಡಿದೆ.

ಬಿಡುಗಡೆಗೆ ಸಜ್ಜಾದ ನ್ಯೂ ಹೋಂಡಾ ಅಮೇಜ್ ಉತ್ಪಾದನೆ ಇದೀಗ ಬಲು ಜೋರು

ಎಂಜಿನ್ ಸಾಮರ್ಥ್ಯ

ಬಿಡುಗಡೆಗೊಳ್ಳುತ್ತಿರುವ ಹೊಸ ಹೋಂಡಾ ಅಮೇಜ್ ಕಾರು ಪೆಟ್ರೋಲ್ ಹಾಗು ಡೀಸೆಲ್ ಆವೃತ್ತಿಗಳಲ್ಲಿ ಲಭ್ಯವಿರಲಿದ್ದು, ಇದರ 1.2 ಲೀಟರ್ ಪೆಟ್ರೋಲ್ ಎಂಜಿನ್ 88ಬಿಹೆಚ್‍ಪಿ ಹಾಗು 108ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ.

ಬಿಡುಗಡೆಗೆ ಸಜ್ಜಾದ ನ್ಯೂ ಹೋಂಡಾ ಅಮೇಜ್ ಉತ್ಪಾದನೆ ಇದೀಗ ಬಲು ಜೋರು

ಇದಲ್ಲದೇ 1.5 ಲೀಟರ್ ಡೀಸೆಲ್ ಎಂಜಿನ್‌ ಹೊಂದಿರುವ ಕಾರುಗಳು 100ಬಿಹೆಚ್‍ಪಿ ಹಾಗು 200ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‍‍ಗಳನ್ನು ಸಿವಿಟಿ ಟ್ರಾನ್ಸ್ ಮಿಷನ್ ಆಯ್ಕೆಯೊಂದಿಗೆ 5 ಸ್ಪೀಡ್ ಗೇರ್‍‍ಬಾಕ್ಸ್ ಗೆ ಜೋಡಿಸಲಾಗಿದೆ.

ಬಿಡುಗಡೆಗೆ ಸಜ್ಜಾದ ನ್ಯೂ ಹೋಂಡಾ ಅಮೇಜ್ ಉತ್ಪಾದನೆ ಇದೀಗ ಬಲು ಜೋರು

ಹೋಂಡಾ ಅಮೇಜ್ ಕಾರಿನ ವಿನ್ಯಾಸಗಳ ಬಗ್ಗೆ ಹೇಳುವುದಾದರೇ ಎಲ್ಇಡಿ ಡಿಎಲ್‍ಆರ್, ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್, ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಅನ್ನು ಒಳಗೊಂಡ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಕ್ಲೈಮೆಟ್ ಕಂಟ್ರೋಲರ್, ಸ್ಟೀರಿಂಗ್ ಮೌಟೆಂಡ್ ಕಂಟ್ರೋಲರ್ ಮತ್ತು ಪೆಡಲ್ ಶಿಫ್ಟರ್ಸ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಗೆ ಸಜ್ಜಾದ ನ್ಯೂ ಹೋಂಡಾ ಅಮೇಜ್ ಉತ್ಪಾದನೆ ಇದೀಗ ಬಲು ಜೋರು

ಜೊತೆಗೆ ಕೀ ಲೇಸ್ ಎಂಟ್ರಿ, ಕ್ರೂಸ್ ಕಂಟ್ರೋಲರ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಜೊತೆ ಸೆನ್ಸಾರ್ ಒದಗಿಸಲಾಗಿದ್ದು, ಮಾರುತಿ ಡಿಜೈರ್, ಹ್ಯುಂಡೈ ಎಕ್ಸ್ಸೆಂಟ್ ಮತ್ತು ಟಾಟಾ ಟಿಗೋರ್ ಕಾರುಗಳಿಗೆ ತ್ರೀವ ಪೈಪೋಟಿ ನೀಡಲಿದೆ.

ಬಿಡುಗಡೆಗೆ ಸಜ್ಜಾದ ನ್ಯೂ ಹೋಂಡಾ ಅಮೇಜ್ ಉತ್ಪಾದನೆ ಇದೀಗ ಬಲು ಜೋರು

ಒಟ್ಟಿನಲ್ಲಿ ಹೋಂಡಾ ಸಂಸ್ಥೆಯು ತಮ್ಮ ಸೆಡಾನ್ ಕಾರುಗಳ ಸಣಿಯಲ್ಲಿ ಮಾರಾಟಗಳನ್ನು ಇನ್ನಷ್ಟು ಹೆಚ್ಚಿಸಲು ಅಮೇಜ್ ಕಾರನ್ನು ಬಿಡುಗಡೆಗೊಳಿಸುತ್ತಿದ್ದು, ಹೊಸ ಕಾರಿನ ಬೆಲೆಗಳು ಎಕ್ಸ್‌ಶೋರಂ ಪ್ರಕಾರ 6.50 ಲಕ್ಷದಿಂದ ರೂ.9 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Article Published On: Thursday, May 3, 2018, 19:22 [IST]
English summary
New Honda Amaze 2018 Production Begins — Launch On May 16.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+