2018ರ ಅಮೇಜ್ ಕಾರುಗಳ ಮಾರಾಟದಲ್ಲಿ ದಾಖಲೆ ಮಾಡಿದ ಹೋಂಡಾ...
2018ರ ಅಮೇಜ್ ಕಾರು ಮಾರಾಟದಲ್ಲಿ ದಾಖಲೆ ಮಾಡಿದ ಹೋಂಡಾ...
ಕಳೆದ ತಿಂಗಳು 16ರಂದು ಭಾರತೀಯ ಮಾರುಕಟ್ಟೆಯಲ್ಲಿ 2018ರ ಅಮೇಜ್ ಕಂಪ್ಯಾಕ್ಟ್ ಸೆಡಾನ್ ಕಾರುಗಳು ಬಿಡುಗಡೆಯಾಗಿದ್ದು, ಬಿಡುಗಡೆಯಾದ ಕೇವಲ 15 ದಿನ ಅವಧಿಯಲ್ಲಿ ದಾಖಲೆ ಪ್ರಮಾಣದ ಹೊಸ ಕಾರುಗಳು ಮಾರಾಟಗೊಂಡಿರುವುದು ಆಟೋ ಉದ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಹೋಂಡಾ ಕಾರ್ಸ್ ಇಂಡಿಯಾ ಸಂಸ್ಥೆಯು ದೇಶಿಯ ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ನ್ಯೂ ಅಮೇಜ್ ಕಂಪ್ಯಾಕ್ಟ್ ಸೆಡಾನ್ ಕಾರುಗಳನ್ನು ಪರಿಚಯಿಸಿದ್ದು, ಗ್ರಾಹಕರ ಆಕರ್ಷಣೆಗೆ ಕಾರಣವಾಗಿರುವ ಹೊಸ ಕಾರುಗಳ ಮಾರಾಟ ಪ್ರಮಾಣದಲ್ಲೂ ಭಾರೀ ಏರಿಕೆ ಕಂಡಿರುವುದು ಹೋಂಡಾ ಸಂಸ್ಥೆಗೆ ಅಚ್ಚರಿ ತರಿಸಿದೆ.

ಮೇ ಅವಧಿಯಲ್ಲಿನ ಹೋಂಡಾ ಕಾರುಗಳ ಮಾರಾಟ ಪ್ರಮಾಣವು ಮಾರ್ಚ್‌ನಲ್ಲಿ ಮಾರಾಟವಾದ ಕಾರುಗಳ ಪ್ರಮಾಣಕ್ಕಿಂತ ಶೇ.41ರಷ್ಟು ಹೆಚ್ಚಾಗಿದ್ದು, ಅದರಲ್ಲಿ 9,789 ಅಮೇಜ್ ಕಂಪ್ಯಾಕ್ಟ್ ಸೆಡಾನ್ ಕಾರುಗಳು ಮಾರಾಟಗೊಂಡಿವೆ.

ಹೊಸ ಅಮೇಜ್ ಕಾರುಗಳಲ್ಲಿ ಒದಗಿಸಲಾಗಿರುವ ಆಕರ್ಷಕ ಡಿಸೈನ್‌ಗಳು, ಐಷಾರಾಮಿ ಇಂಟಿರಿಯರ್ ವಿನ್ಯಾಸಗಳು, ಸುಧಾರಿತ ಎಂಜಿನ್ ತಂತ್ರಜ್ಞಾನ ಸೌಲಭ್ಯಗಳೇ ಕಾರು ಖರೀದಿಗೆ ಹೆಚ್ಚಿನ ಗ್ರಾಹಕರು ಮುಗಿಬಿದ್ದಿದ್ದು, ಮುಂಬರುವ ದಿನಗಳಲ್ಲಿ ಇದು ಹೊಸ ದಾಖಲೆಗೆ ಕಾರಣವಾಗಲಿದೆ ಎಂಬ ಬಗ್ಗೆ ಹೋಂಡಾ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಹಿರಿಯ ಅಧಿಕಾರಿ ರಾಜೇಶ್ ಗೋಯಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು 2018ರ ದೆಹಲಿ ಆಟೋ ಎಕ್ಸ್‌ಪೋ ಪ್ರದರ್ಶನಗೊಳ್ಳುವ ಮೂಲಕ ಕಾರು ಉತ್ಪಾದಕರಲ್ಲಿ ಕುತೂಹಲ ಹುಟ್ಟುಹಾಕಿದ್ದ ನ್ಯೂ ಹೋಂಡಾ ಅಮೇಜ್ ಕಾರುಗಳು ಇದೀಗ ವಿನೂತನ ತಾಂತ್ರಿಕ ಅಂಶಗಳೊಂದಿಗೆ ಮರಳಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಹೊಸ ಕಾರುಗಳು ಸಿಟಿ ಸೆಡಾನ್ ಮಾದರಿಯಲ್ಲೇ ವಿನ್ಯಾಸಗಳನ್ನು ಪಡೆದುಕೊಂಡಿರುವುದು ಆಕರ್ಷಣೆಗೆ ಕಾರಣವಾಗಿದೆ.

ಅಮೇಜ್ ಕಾರುಗಳು ಒಟ್ಟು ನಾಲ್ಕು ಮಾದರಿಯಲ್ಲಿ ಖರೀದಿ ಲಭ್ಯವಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಇ, ಎಸ್, ವಿ ಮತ್ತು ವಿಎಕ್ಸ್ ವೆರಿಯೆಂಟ್‌ಗಳನ್ನು ಆಯ್ಕೆ ಮಾಡಬಹುದಾಗಿದೆ. ಹೀಗಾಗಿ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಕಾರಿನ ಬೆಲೆಗಳು ನಿಗದಿ ಮಾಡಲಾಗಿದೆ.

ಹೋಂಡಾ ಅಮೇಜ್ ಕಾರುಗಳ ಬೆಲೆ ಪಟ್ಟಿ (ಎಕ್ಸ್‌ಶೋರಂ ಪ್ರಕಾರ)
ಕಾರ್ ವೆರಿಯೆಂಟ್‌ಗಳು- (ಪೆಟ್ರೋಲ್ ಆವೃತ್ತಿ) (ಡೀಸೆಲ್ ಆವೃತ್ತಿ)
ಇ ಎಂಟಿ -ರೂ. 5,59,900 -ರೂ.6,69,900
ಎಸ್ ಎಂಟಿ -ರೂ. 6,49,900 -ರೂ. 7,59,900
ವಿ ಎಂಟಿ -ರೂ. 7,09,900 -ರೂ. 8,19,900
ವಿಎಕ್ಸ್ ಎಂಟಿ -ರೂ. 7,57,900 -ರೂ. 8,67,900
ಎಸ್ ಸಿವಿಟಿ -ರೂ. 7,39,900 -ರೂ. 8,39,900
ವಿ ಸಿವಿಟಿ -ರೂ. 7,99,900 -ರೂ. 8,99,900

ಕಾರಿನ ವಿನ್ಯಾಸಗಳು
ಸ್ಪೋರ್ಟಿ ಲುಕ್ ಹೊಂದಿರುವ ಅಮೇಜ್ ಕಾರುಗಳು ಎರಡನೇ ತಲೆಮಾರಿನ ಶಾರ್ಪರ್ ಆಂಗಲ್ಸ್, ಬೋಲ್ಡರ್ ಡಿಸೈನ್ ಹಾಗೂ ಆಂಗ್ಯೂಲರ್ ಹೆಡ್‍ಲ್ಯಾಂಪ್‍ಗಳನ್ನು ಪಡೆದುಕೊಂಡಿದ್ದು, 15 ಇಂಚಿನ ಅಲಾಯ್ ವೀಲ್‍ಗಳು, ಹಿಂಭಾಗದ ವಿನ್ಯಾಸದಲ್ಲಿ ಹೊಸ ಪ್ರೇರಣೆಯ ಕ್ರೋಮ್ ಸ್ಟ್ರಿಪ್, ಸಿ ಟೈಪ್ ಟೈಲ್ ಲೈಟ್ಸ್ ಗಳನ್ನು ಪಡೆದಿದಿರುವುದು ಆಕರ್ಷಕವಾಗಿದೆ.

ಎಂಜಿನ್ ವೈಶಿಷ್ಟ್ಯತೆಗಳು
ಹೊಸ ಅಮೇಜ್ ಕಾರುಗಳು 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನಲ್ಲಿ ಖರೀದಿಸಬಹುದಾಗಿದ್ದು, ಪೆಟ್ರೋಲ್ ಆವೃತ್ತಿಯು 89-ಬಿಎಚ್‌ಪಿ, 110-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದಲ್ಲಿ ಡಿಸೇಲ್ ಆವೃತ್ತಿಯು 99-ಬಿಎಚ್‌ಪಿ, 200-ಎನ್ಎಂ ಉತ್ಪಾದನೆ ಮಾಡಬಲ್ಲವು.

ಅಮೇಜ್ ಕಾರಿನ ಮೈಲೇಜ್
* ಮ್ಯಾನುವಲ್ ಗೇರ್‌ಬಾಕ್ಸ್ ಕಾರುಗಳು- ಪೆಟ್ರೋಲ್ ಆವೃತ್ತಿ- 19.5 ಕಿ.ಮೀ (ಪ್ರತಿ ಲೀಟರ್‌ಗೆ), ಡಿಸೇಲ್ ಆವೃತ್ತಿ- 27.8 ಕಿ.ಮಿ (ಪ್ರತಿ ಲೀಟರ್‌ಗೆ)
* ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಕಾರುಗಳು- ಪೆಟ್ರೋಲ್ ಆವೃತ್ತಿ- 19 ಕಿ.ಮೀ (ಪ್ರತಿ ಲೀಟರ್‌ಗೆ), ಡಿಸೇಲ್ ಆವೃತ್ತಿ- 23.8 ಕಿ.ಮಿ (ಪ್ರತಿ ಲೀಟರ್‌ಗೆ)

ಖರೀದಿಗೆ ಲಭ್ಯವಿರುವ ಬಣ್ಣಗಳು
ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಒಟ್ಟು 5 ಬಣ್ಣಗಳಲ್ಲಿ ಲಭ್ಯವಿರುವ ಹೊಸ ಅಮೇಜ್ ಕಾರುಗಳು ರೆಡಿಯೆಂಟ್ ರೆಡ್, ವೈಟ್ ಆರ್ಕಿಡ್ ಪರ್ಲ್, ಲೂನಾರ್ ಸಿಲ್ವರ್ ಮೆಟಾಲಿಕ್, ಗೊಲ್ಡನ್ ಬ್ರೌನ್ ಮೆಟಾಲಿಕ್ ಮತ್ತು ಮಾರ್ಡನ್ ಸ್ಟ್ರಿಲ್ ಮೆಟಾಲಿಕ್ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.


Click it and Unblock the Notifications








