ಭಾರತಕ್ಕೆ ಹ್ಯುಂಡೈ ಸಂಸ್ಥೆಯ ಸ್ಮಾಲ್ ಎಸ್‍ಯುವಿ ಬರುವುದು ಕನ್ಫರ್ಮ್..
ಕ್ರೆಟಾ ಮತ್ತು ಕೋನಾ ಎಸ್‍ಯುವಿ ಕಾರುಗಳ ಭರ್ಜರಿ ಯಶಸ್ಸಿನ ನಂತರ ಉತ್ತರ ಕೊರಿಯ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ಇದೀಗ ಸಣ್ಣ ಗಾತ್ರದ ಎಸ್‍ಯುವಿ ಕಾರನ್ನು ಪರಿಚಯಿಸಲು ಮುಂದಾಗಿದೆ.
ಕ್ರೆಟಾ ಮತ್ತು ಕೋನಾ ಎಸ್‍ಯುವಿ ಕಾರುಗಳ ಭರ್ಜರಿ ಯಶಸ್ಸಿನ ನಂತರ ಉತ್ತರ ಕೊರಿಯ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ಇದೀಗ ಸಣ್ಣ ಗಾತ್ರದ ಎಸ್‍ಯುವಿ ಕಾರನ್ನು ಪರಿಚಯಿಸಲು ಮುಂದಾಗಿದ್ದು, ಈ ಕುರಿತಾಗಿ ಹ್ಯುಂಡೈ ಲ್ಯಾಟಿನ್ ತಂಡದ ಅರ್ಮಾಂಡೊ ಕಾರ್ಡೊಸೊ ಖಚಿತಪಡಿಸಿದ್ದಾರೆ.

ಸಜ್ಜುಗೊಳ್ಳುತ್ತಿರುವ ಹ್ಯುಂಡೈ ಸಂಸ್ಥೆಯ ಸಣ್ಣ ಗಾತ್ರದ ಎಸ್‍ಯುವಿ ಕಾರು ಕೇವಲ ನಗರ ಪ್ರದೇಶಗಳಲ್ಲಿ ಮಾತ್ರ ಚಲಿಸಲು ತಯಾರು ಮಾಡಲಾಗುತ್ತಿದ್ದು, ಕ್ರಾಸ್‍ಓವರ್ ವಿನ್ಯಾಸವನ್ನು ಆಧರಿಸಲಿದೆ. ಹ್ಯುಂಡೈ ಸಂಸ್ಥೆಯ ಎಸ್‍ಯುವಿ ಕ್ರೆಟಾ ಹಾಗು ಕೊನಾ ಕಾರುಗಳ ನಡುವೆ ಸ್ಥಾನವನ್ನು ಪಡೆದುಕೊಳ್ಳಲಿದೆ.

ಈ ಕಾರಿನ ಕುರಿತಾದ ಕಾರ್ಯಗಳು ಈಗಾಗಲೆ ನಡುಯುತ್ತಿದ್ದು, ಹ್ಯುಂಡೈ ಈ ಕಾರಿಗಾಗಿ ಪ್ರತ್ಯೇಕವಾದ ಪ್ಲಾಟ್‍ಫಾರ್ಮ್ ಅನ್ನು ಸೃಷ್ಠಿಸಲಿದ್ದು, ಮಾರುಕಟ್ಟೆಯಲ್ಲಿ ಒಮ್ಮೆ ಬಿಡುಗಡೆಗೊಂಡಲ್ಲಿ ಈ ಕಾರು ಮಾರುತಿ ಬ್ರೆಝಾ ಮತ್ತು ಟಾಟಾ ನೆಕ್ಸಾನ್ ಕಾರಿಗಳಿಗೆ ನೇರ ಪ್ರತಿಸ್ಪರ್ಧಿಸಲಿದೆ.

ಪ್ರಸ್ಥುತ ಮಾಹಿತಿಗಳ ಪ್ರಕಾರ ಈ ಕಾರು 2019ರಲ್ಲಿ ಅಥವಾ 2020ರಲ್ಲಿ ಮೊದಲಿಗೆ ಯುಎಸ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳಲಿದ್ದು, ನಂತರದ ದಿನಗಳಲ್ಲಿ ಇನ್ನಿತರೆ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳ್ಳಲಿದೆ ಎನ್ನಲಾಗಿದೆ.

ದೇಶಿಯ ಮಾರುಕಟ್ಟೆಗಾಗಿ ಹ್ಯುಂಡೈ ಸಂಸ್ಥೆಯು ಈಗಾಗಲೆ ಹೊಸ ಸಬ್-4 ಮೀಟರ್ ಎಸ್‍ಯುವಿ ಕಾರನ್ನು ತಯಾರಿಸುವ ಕಾರ್ಯದಲಿದ್ದು, ಈ ಕಾರು ವಿಟಾರ ಬ್ರೆಝಾ ಕಾರಿಗೆ ಪೈಪೋಟಿಯಾಗಿರಲಿದೆ. ಹೊಸ ಎಸ್‍ಯುವಿ ಅಧಾರಿತ ಕಾರ್ಲಿನೊ ಪರಿಕಲ್ಪನೆಯನ್ನು ಮೊದಲ ಬಾರಿ 2016ರಲ್ಲಿ ನಡೆದ ಆಟೋ ಎಕ್ಸ್ ಪೋ ಮೇಳದಲ್ಲಿ ಪ್ರದರ್ಶಿಸಲಾಗಿತ್ತು.

ಹ್ಯುಂಡೈ ಸಂಸ್ಥೆಯ ಕ್ಯೂಎಕ್ಸ್ಐ ಎಂದು ಕರೆಯಲ್ಪಡುತ್ತಿರುವ ಕಾರು 2019ರಲ್ಲಿ ಬಿಡುಗಡೆಗೊಳ್ಳಲಿದ್ದು, 1.0 ಲೀಟರ್ ಟಿ-ಜಿಡಿಐ ಪೆಟ್ರೋಲ್ ಎಂಜಿನ್ ಮತ್ತು 1.4 ಲೀಟರ್ ಡೀಸೆಲ್ ಎಂಜಿನ್ ಅನ್ನು ಪಡೆದುಕೊಳ್ಳಲಿದೆ ಎನ್ನಲಾಗಿದೆ.

ಇದಲ್ಲದೆ ಹ್ಯುಂಡೈ ಸಂಸ್ಥೆಯ ಜನಪ್ರಿಯ ಕಾರ್ ಆದ ಗ್ರ್ಯಾಂಡ್ ಐ10 ಕಾರಿನ ಬೆಲೆಯು 30 ರಿಂದ 35 ಸಾವಿರ ಹೆಚ್ಚುವರಿ ಬೆಲೆ ಮಾಡಿದೆ. ಆಗಸ್ಟ್ 1ರಿಂದಲೇ ಹೊಸ ದರ ಪಟ್ಟಿ ಅನ್ವಯವಾಗಲಿದ್ದು, ಹ್ಯುಂಡೈ ಸಂಸ್ಥೆಯ ಅಧಿಕೃತ ಮಾಹಿತಿ ಪ್ರಕಾರ ಗ್ರ್ಯಾಂಡ್ ಐ10 ಕಾರಿನ ಬೆಲೆಯನ್ನು ಶೇ. 3ರಷ್ಟು ಹೆಚ್ಚಿಸಲಾಗಿದೆ.

ಹ್ಯುಂಡೈ ಸಂಸ್ಥೆಯು ಸದ್ಯ ಗ್ರ್ಯಾಂಡ್ ಐ10 ಕಾರುಗಳ ಮಾರಾಟ ಮುನ್ನಡೆ ಸಾಧಿಸುತ್ತಿದ್ದು, ಟಾಪ್ 10 ಕಾರುಗಳ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಹೀಗಿರುವಾಗಲೇ ಹ್ಯುಂಡೈ ಸಂಸ್ಥೆಯು ತನ್ನ ನೆಚ್ಚಿನ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್ ನೀಡಿದೆ.

ಹೆಚ್ಚುತ್ತಿರುವ ಬೀಡಿಭಾಗಗಳ ಬೆಲೆಗಳು ಮತ್ತು ಉತ್ಪಾದನಾ ವೆಚ್ಚವನ್ನು ಸರಿದೂಗಿಸಲು ಬೆಲೆ ಏರಿಕೆ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದ್ದು, ಜುಲೈ ಅಂತ್ಯದ ತನಕ ಮಾತ್ರವೇ ಹಳೆಯ ದರಗಳಲ್ಲೇ ಗ್ರ್ಯಾಂಡ್ ಐ10 ಕಾರುಗಳನ್ನ ಖರೀದಿ ಮಾಡಬಹುದುದಾಗಿದೆ.


Click it and Unblock the Notifications