ಭಾರತದಲ್ಲಿ ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್‌ ನಡೆಸಿದ ಹೊಸ ಜೀಪ್ ರ‍್ಯಾಂಗ್ಲರ್

ಅಮೆರಿಕ ಮೂಲದ ಜನಪ್ರಿಯ ಕಾರು ಉತ್ಪಾದನಾ ಜೀಪ್ ಸಂಸ್ಥೆಯು ಮೊದಲ ಬಾರಿಗೆ ಭಾರತದಲ್ಲಿ 2018ರ ರ‍್ಯಾಂಗ್ಲರ್ ಎಸ್‌ಯುವಿ ಆವೃತ್ತಿಯನ್ನು ಸ್ಪಾಟ್ ಟೆಸ್ಟಿಂಗ್ ನಡೆಸಿದ್ದು, ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡುವ ಸುಳಿವು ನೀಡಿದೆ.

By Praveen Sannamani

2017ರ ಲಾಸ್ ಏಂಜಲೀಸ್ ಆಟೋ ಮೇಳದಲ್ಲಿ ಹೊಸ ಮಾದರಿಯ ರ‍್ಯಾಂಗ್ಲರ್ ಎಸ್‌ಯುವಿಗಳನ್ನು ಪ್ರದರ್ಶನಗೊಳಿಸಿದ್ದ ಜೀಪ್ ಸಂಸ್ಥೆಯು ಇದೀಗ ಬಿಡುಗಡೆಗೊಳಿಸಲು ಸಿದ್ದವಾಗುತ್ತಿದ್ದು, ಗೋವಾದ ಪ್ರಮುಖ ಕಡೆಗಳಲ್ಲಿ ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತಾಗಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.

ಭಾರತದಲ್ಲಿ ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್‌ ನಡೆಸಿದ ಹೊಸ ಜೀಪ್ ರ‍್ಯಾಂಗ್ಲರ್

ಸ್ಪಾಟ್ ಟೆಸ್ಟಿಂಗ್‌ನಲ್ಲಿ ಕಾಣಿಸಿಕೊಂಡಿರುವ ರ‍್ಯಾಂಗ್ಲರ್ ಎಸ್‌ಯುವಿ ಈ ಹಿಂದಿನ ಮಾದರಿಗಿಂತಲೂ ಭಾರೀ ಬದಲಾವಣೆ ಹೊಂದಿದ್ದು, ಮರುವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್, ದೊಡ್ಡದಾದ ಎಲ್ಇಡಿ ಹೆಡ್ ಲ್ಯಾಂಪ್ ಮತ್ತು ಎಲ್ಇಡಿ ಹಗಲಿನ ರನ್ನಿಂಗ್ ಲೈಟ್‌ಗಳನ್ನು ಫೆಂಡರ್‌ಗಳಲ್ಲಿ ಹೊಂದಿದೆ.

ಭಾರತದಲ್ಲಿ ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್‌ ನಡೆಸಿದ ಹೊಸ ಜೀಪ್ ರ‍್ಯಾಂಗ್ಲರ್

ಜೊತೆಗೆ ಕಾರಿನ ಕಿಟಕಿಗಳು ಈ ಹಿಂದಿನ ಮಾದರಿಗಳಿಂತ ಸ್ವಲ್ಪ ಮಟ್ಟಿಗೆ ದೊಡ್ಡದಾಗಿದ್ದು, ವಿಸ್ತರಿತ ವಿಂಡ್ ಸ್ಕ್ರೀನ್, ಸ್ಲಿಕ್ ಎಲ್ಇಡಿ ಟೈಲ್ ಲೈಟ್ ಕ್ಲಸ್ಟರ್. ವೀಲ್ ಮತ್ತು ಪರಿಷ್ಕರಿಸಿದ ಬಂಪರ್ ಕೂಡಾ ಹೊಸ ಕಾರಿನ ವಿನ್ಯಾಸಕ್ಕೆ ಮೆರಗು ತಂದಿವೆ.

ಭಾರತದಲ್ಲಿ ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್‌ ನಡೆಸಿದ ಹೊಸ ಜೀಪ್ ರ‍್ಯಾಂಗ್ಲರ್

ಇನ್ನು ಕಾರಿನ ಇಂಟಿರಿಯರ್ ವಿನ್ಯಾಸಗಳ ಬಗೆಗೆ ಹೇಳುವುದಾದರೇ, ಈ ಹಿಂದಿನ ಮಾದರಿಯಂತೆಯೇ ಬಹುತೇಕ ಫೀಚರ್ಸ್‌ಗಳು ಹೊಸ ಮಾದರಿಯಲ್ಲೂ ಮುಂದುವರಿಸಲಾಗಿದ್ದು, ಸುಧಾರಿತ ಡ್ಯಾಶ್‌ಬೋರ್ಡ್, ಚಾಲಕನ ಭಾಗದಲ್ಲಿ 7 ಇಂಚಿನ್ ಎಲ್‌ಸಿಡಿ ಮಾಹಿತಿ ಪರದೆ ಮತ್ತು 8.4 ಇಂಚಿನ್ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಪಡೆದಿದೆ.

ಭಾರತದಲ್ಲಿ ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್‌ ನಡೆಸಿದ ಹೊಸ ಜೀಪ್ ರ‍್ಯಾಂಗ್ಲರ್

ಇನ್ನು 4ನೇ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ನಿರ್ಮಾಣವಾಗುತ್ತಿರುವ 2018ರ ಜೀಪ್ ರ‍್ಯಾಂಗ್ಲರ್‌ ಮಾದರಿಗಳು ಈ ಬಾರಿ ವೀಲ್‌ಬೇಸ್‌ನಲ್ಲೂ ಬದಲಾವಣೆ ಹೊಂದಿದ್ದು, ಪರಿಣಾಮ ಲೆಗ್ ರೂಮಂ ವಿಸ್ತರಣೆ ಮಾಡುವ ಮೂಲಕ ಆಪ್ ರೋಡ್ ಪ್ರಿಯರಿಗೆ ಮತ್ತಷ್ಟು ಅನುಕೂಲ ಮಾಡಿಕೊಡಲಾಗಿದೆ.

ಭಾರತದಲ್ಲಿ ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್‌ ನಡೆಸಿದ ಹೊಸ ಜೀಪ್ ರ‍್ಯಾಂಗ್ಲರ್

ಎಂಜಿನ್ ಸಾಮರ್ಥ್ಯ

ಸದ್ಯ ವಿದೇಶಿ ಮಾರುಕಟ್ಟೆಯಲ್ಲಿರುವ ಹೊಸ ಜೀಪ್ ರ‍್ಯಾಂಗ್ಲರ್ ಆವೃತ್ತಿಗಳು 2 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮತ್ತು 2.2 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಪಡೆದುಕೊಂಡಿದ್ದು, ಇದೇ ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲೂ ಬಿಡುಗಡೆಯಾಗಬಹುದು ಎನ್ನಲಾಗಿದೆ.

ಭಾರತದಲ್ಲಿ ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್‌ ನಡೆಸಿದ ಹೊಸ ಜೀಪ್ ರ‍್ಯಾಂಗ್ಲರ್

ಹಾಗೆಯೇ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಲಿರುವ ಹೊಸ ಜೀಪ್ ರ‍್ಯಾಂಗ್ಲರ್‌ಗಳು, ಎಕ್ಸ್‌ಶೋರಂ ಪ್ರಕಾರ ಬರೋಬ್ಬರಿ 70 ಲಕ್ಷ ಬೆಲೆ ಹೊಂದಿರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
Read more on jeep ಜೀಪ್ suv
English summary
2018 Jeep Wrangler Spotted Testing In India.
Story first published: Wednesday, March 14, 2018, 11:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X