ಈ ವರ್ಷ ಬಿಡುಗಡೆಯಾಗಲಿರುವ ಮಹೀಂದ್ರಾ ಹೊಚ್ಚ ಹೊಸ ಕಾರುಗಳಿವು..!!

By Praveen Sannamani

ಮಹೀಂದ್ರಾ ಸಂಸ್ಥೆಯು ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಹೊಸ ನೀರಿಕ್ಷೆಗಳೊಂದಿಗೆ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದು, ಮಹೀಂದ್ರಾ ಬಿಡುಗಡೆ ಮಾಡುತ್ತಿರುವ ಬಹುತೇಕ ಕಾರು ಉತ್ಪನ್ನಗಳು ಗ್ರಾಹಕರನ್ನ ಸೆಳೆಯುತ್ತಿವೆ. ಈ ಹಿನ್ನೆಲೆ ಮಹೀಂದ್ರಾ ಸಂಸ್ಥೆಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಪರಿಚಯಿಸುತ್ತಿದ್ದು, ಹೊಸ ಕಾರಿನ ಮಾಹಿತಿಗಳನ್ನು ಇಲ್ಲಿ ಚರ್ಚಿಸಲಾಗುತ್ತಿದೆ.

ಈ ವರ್ಷ ಬಿಡುಗಡೆಯಾಗಲಿರುವ ಮಹೀಂದ್ರಾ ಹೊಚ್ಚ ಹೊಸ ಕಾರುಗಳಿವು..!!

ಪ್ರಯಾಣಿಕರ ವಾಹನ ವಿಭಾಗಕ್ಕೆ ಮತ್ತಷ್ಟು ಹೊಸ ಕಾರುಗಳನ್ನು ಪರಿಚಯಿಸಲು ಉದ್ದೇಶಿಸಿರುವ ಮಹೀಂದ್ರಾ ಸಂಸ್ಥೆಯು 2018-19ರ ಆರ್ಥಿಕ ವರ್ಷದಲ್ಲಿ ಮೂರು ಪ್ರಮುಖ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದು, ಕಾರಿನ ಎಂಜಿನ್ ವೈಶಿಷ್ಟ್ಯತೆ, ಕಾರುಗಳ ಬಿಡುಗಡೆಯ ಅವಧಿ ಮತ್ತು ಕಾರಿನ ಬೆಲೆಗಳು ಕುರಿತಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಈ ವರ್ಷ ಬಿಡುಗಡೆಯಾಗಲಿರುವ ಮಹೀಂದ್ರಾ ಹೊಚ್ಚ ಹೊಸ ಕಾರುಗಳಿವು..!!

ಯು321 ಎಂಪಿವಿ

ಮಹೀಂದ್ರಾ ನಿರ್ಮಾಣದ ಹೊಸ ಎಂಪಿವಿ ಕಾರನ್ನು ಯು321 ಕೋಡ್‌ನೊಂದಿಗೆ ಸ್ಪಾಟ್ ಟೆಸ್ಟಿಂಗ್ ನಡೆಸಲಾಗುತ್ತಿದ್ದು, ಇದೀಗ ಮತ್ತೆ ಬಿಳಿ ಬಣ್ಣದ ಆಯ್ಕೆಯನ್ನು ಹೊಂದಿರುವ ಮಾದರಿಯು ಸ್ಪಾಟ್ ಟೆಸ್ಟಿಂಗ್ ನಡೆಸುವಾಗ ಚೆನ್ನೈ ಬಳಿ ಕಾಣಿಸಿಕೊಂಡಿದೆ. ಇದರೊಂದಿಗೆ ಮೊದಲ ಬಾರಿಗೆ ಹೊಸ ಕಾರಿನ ಬಣ್ಣದ ಆಯ್ಕೆಗಳು ಬಹಿರಂಗವಾಗಿದ್ದು, ಇನೋವಾ ಕಾರುಗಳನ್ನು ಗುರಿಯಾಗಿಸಿ ಯು321 ಕಾರನ್ನು ಅಭಿವೃದ್ಧಿ ಮಾಡಲಾಗುತ್ತಿದೆ.

ಈ ವರ್ಷ ಬಿಡುಗಡೆಯಾಗಲಿರುವ ಮಹೀಂದ್ರಾ ಹೊಚ್ಚ ಹೊಸ ಕಾರುಗಳಿವು..!!

ಈ ಹಿಂದೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಕಾರುಗಳಲ್ಲೊಂದು ಯು 081 ಮತ್ತು ಇನ್ನೊಂದು ಕಾರು ಯು-079 ಬ್ಯಾಡ್ಜಿಂಗ್ ಅನ್ನು ಪಡೆದುಕೊಂಡಿದೆ. ಹೊಸ ಯು321 ಎಂಪಿವಿ ಕಾರು ಮಹಿಂದ್ರಾ ಸಂಸ್ಥೆಯ ಮೊದಲ ಮೊನೊಕ್ಯೂ ಬಾಡಿ ಕಿಟ್ ಹೊಂದಿರುವ ಕಾರಾಗಿದ್ದು, ಪ್ರಸ್ತುತ ಜೈಲೋ ಕಾರುಗಳಲ್ಲಿ ಬಳಸಲಾಗಿರುವ ಬಾಡಿ ಆನ್ ಫ್ರೇಮ್ ಶೈಲಿಗಿಂತ ವಿಭಿನ್ನವಾಗಿರಲಿದೆ.

ಈ ವರ್ಷ ಬಿಡುಗಡೆಯಾಗಲಿರುವ ಮಹೀಂದ್ರಾ ಹೊಚ್ಚ ಹೊಸ ಕಾರುಗಳಿವು..!!

ಎಂಜಿನ್ ಸಾಮರ್ಥ್ಯ ಮತ್ತು ಬೆಲೆಗಳು

ಮಹಿಂದ್ರಾ ಯು321 ಕಾರುಗಳು 2.0 ಲೀಟರ್ ಡೀಸೆಲ್ ಎಂಜಿನ್ ಹೊಂದಿರಲಿದ್ದು, ಮಾಹಿತಿಗಳ ಪ್ರಕಾರ ಹೊಸ ಕಾರಿನ ಬೆಲೆಯು ಎಕ್ಸ್‌ಶೋರಂ ಪ್ರಕಾರ ರೂ. 10 ಲಕ್ಷದಿಂದ ರೂ.14 ಲಕ್ಷ ಇರಬಹುದೆಂದು ನೀರಿಕ್ಷಿಸಲಾಗಿದೆ.

ಈ ವರ್ಷ ಬಿಡುಗಡೆಯಾಗಲಿರುವ ಮಹೀಂದ್ರಾ ಹೊಚ್ಚ ಹೊಸ ಕಾರುಗಳಿವು..!!

ಟಿವೊಲಿ ಎಸ್‌ಯುವಿ

ದಕ್ಷಿಣ ಕೊರಿಯಾದ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳಲ್ಲಿ ಒಂದಾಗಿರುವ ಸ್ಯಾಂಗ್‌ಯಾಂಗ್‌ ಸಂಸ್ಥೆಯು ಮಹೀಂದ್ರಾ ಜೊತೆಗೂಡಿ ದೇಶಿಯ ಮಾರುಕಟ್ಟೆಗಾಗಿ ವಿನೂತನ ಎಸ್‌ಯುವಿ ಮಾದರಿಯನ್ನು ಸಿದ್ಧಗೊಳಿಸಿದ್ದು, ಸದ್ಯದಲ್ಲೇ ಬಿಡುಗಡೆಗೊಳಿಸುವ ಉದ್ದೇಶದಿಂದ ಟಿವೊಲಿ ಸ್ಮಾಲ್ ಎಸ್‌ಯುವಿ ಕಾರುಗಳನ್ನು ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.

ಈ ವರ್ಷ ಬಿಡುಗಡೆಯಾಗಲಿರುವ ಮಹೀಂದ್ರಾ ಹೊಚ್ಚ ಹೊಸ ಕಾರುಗಳಿವು..!!

ಸುಧಾರಿತ ಕಾರು ಮಾದರಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಸ್ಯಾಂಗ್‌ಯಾಂಗ್‌ ಸಂಸ್ಥೆಯು ಟಿವೊಲಿ ಎಂಬ ವಿನೂತನ ಎಸ್‌ಯುವಿ ಕಾರನ್ನು ನಿರ್ಮಾಣ ಮಾಡಿದ್ದು, ತಮಿಳುನಾಡಿನ ಕೊಯಮತ್ತೂರು ಬಳಿ ಸ್ಟಾಟ್ ಟೆಸ್ಟಿಂಗ್ ನಡೆಸುತ್ತಿರುವ ವೇಳೆ ಹೊಸ ಕಾರಿನ ಚಿತ್ರಗಳು ಸೆರೆ ಸಿಕ್ಕಿವೆ.

ಈ ವರ್ಷ ಬಿಡುಗಡೆಯಾಗಲಿರುವ ಮಹೀಂದ್ರಾ ಹೊಚ್ಚ ಹೊಸ ಕಾರುಗಳಿವು..!!

ಎಂಜಿನ್ ಸಾಮರ್ಥ್ಯ

ವರದಿಗಳ ಪ್ರಕಾರ ಟಿವೊಲಿ ಕಾರು 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಕಾರು ಖರೀದಿಗೆ ಲಭ್ಯವಿರಲಿದ್ದು, ಸ್ಪೋರ್ಟ್ ಕಾರ್ ಮಾದರಿಯ ಡ್ಯುಯಲ್ ಟೊನ್ ಡ್ಯಾಶ್‌ಬೋರ್ಡ್, ಟಚ್ ಸ್ಕ್ರೀನ್ ಇನ್ಪೊಟೈನ್‌ಮೆಂಟ್ ಸಿಸ್ಟಂ, ಪೋಜೆಕ್ಟರ್ ಹೆಡ್‌ಲ್ಯಾಂಪ್ ಮತ್ತು ಡೇ ಟೈಮ್ ಎಲ್ಇಡಿ ರನ್ನಿಂಗ್ ಲೈಟ್ ಸೌಲಭ್ಯವನ್ನು ಪಡೆದುಕೊಂಡಿದೆ.

ಈ ವರ್ಷ ಬಿಡುಗಡೆಯಾಗಲಿರುವ ಮಹೀಂದ್ರಾ ಹೊಚ್ಚ ಹೊಸ ಕಾರುಗಳಿವು..!!

ಬಿಡುಗಡೆ ಮತ್ತು ಬೆಲೆಗಳು

2018ರ ಅಂತ್ಯದಲ್ಲಿ ಬಿಡುಗಡೆಯಾಗಲಿರುವ ಟಿವೊಲಿ ಕಾರುಗಳು ಹ್ಯಾಚ್‌ಬ್ಯಾಕ್ ಕಾರು ಪ್ರಿಮಿಯಂ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.11 ಲಕ್ಷದಿಂದ ರೂ.14 ಲಕ್ಷ ಇರಬಹುದೆಂದು ನೀರಿಕ್ಷೆ ಮಾಡಲಾಗಿದೆ.

ಈ ವರ್ಷ ಬಿಡುಗಡೆಯಾಗಲಿರುವ ಮಹೀಂದ್ರಾ ಹೊಚ್ಚ ಹೊಸ ಕಾರುಗಳಿವು..!!

ಮಹೀಂದ್ರಾ ಹೈ ಎಂಡ್ ಕಾರು ಎಕ್ಸ್‌ಯುವಿ700

ಟೊಯೊಟಾ ಫಾರ್ಚೂನರ್, ಫೋರ್ಡ್ ಎಂಡೀವರ್ ಹಿಂದಿಕ್ಕಲು ಸಜ್ಜುಗೊಳ್ಳುತ್ತಿರುವ ಮಹೀಂದ್ರಾ ಸಂಸ್ಥೆಯು ಸದ್ಯದಲ್ಲೇ ಎಕ್ಸ್‌ಯುವಿ700 ಕಾರು ಮಾದರಿಯನ್ನು ಬಿಡುಗಡೆಗಡೆ ಮಾಡಲಿದ್ದು, ಈ ಹಿನ್ನೆಲೆ ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತಾಗಿ ಇದೀಗ ಸ್ಪಾಟ್ ಟೆಸ್ಟಿಂಗ್ ಕೂಡಾ ನಡೆಸುತ್ತಿದೆ.

ಈ ವರ್ಷ ಬಿಡುಗಡೆಯಾಗಲಿರುವ ಮಹೀಂದ್ರಾ ಹೊಚ್ಚ ಹೊಸ ಕಾರುಗಳಿವು..!!

ಸ್ಯಾಂಗ್‌ಯಾಂಗ್‌ ಜೊತೆಗೂಡಿ ಅಭಿವೃದ್ಧಿ ಮಾಡಲಾಗಿರುವಎಕ್ಸ್‌ಯುವಿ700 ಕಾರು ಮಾದರಿಯು 7 ಸೀಟರ್ ಮಾದರಿಯಾಗಿದ್ದು, ಆಪ್ ರೋಡ್ ಕೌಶಲ್ಯದೊಂದಿಗೆ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, 8 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಪ್ರಿಮಿಯಂ ಲೆದರ್ ಸೀಟುಗಳು, 360 ಡಿಗ್ರಿ ಕ್ಯಾಮೆರಾ ವ್ಯವಸ್ಥೆ ಹೊಂದಿದೆ.

ಈ ವರ್ಷ ಬಿಡುಗಡೆಯಾಗಲಿರುವ ಮಹೀಂದ್ರಾ ಹೊಚ್ಚ ಹೊಸ ಕಾರುಗಳಿವು..!!

ಇದಷ್ಟೇ ಅಲ್ಲದೇ ಎಲೆಕ್ಟ್ರಿಕ್ ಸನ್ ರೂಫ್, ಪವರ್ಡ್ ಟೈಲ್‌ಗೆಟ್ ಸೇರಿದಂತೆ ಅತ್ಯಾಧುನಿಕ ಸುರಕ್ಷಾ ಸೌಲಭ್ಯಗಳನ್ನು ಹೊಂದಿರಲಿದ್ದು, ಎಸ್‌ಯುವಿ ಕಾರು ಮಾದರಿಗಳಲ್ಲಿ ಹೊಸ ಟ್ರೆಂಡ್ ಸೃಷ್ಟಿಸುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ ಎನ್ನಬಹುದು.

ಈ ವರ್ಷ ಬಿಡುಗಡೆಯಾಗಲಿರುವ ಮಹೀಂದ್ರಾ ಹೊಚ್ಚ ಹೊಸ ಕಾರುಗಳಿವು..!!

ಎಂಜಿನ್ ಸಾಮರ್ಥ್ಯ

ಆಪ್ ರೋಡಿಂಗ್ ಕೌಶಲ್ಯ ಹೊಂದಿರುವ ಎಕ್ಸ್‌ಯುವಿ700 ಕಾರುಗಳು 2.2-ಲೀಟರ್ ಯುರೊ 6 ಡೀಸೆಲ್ ಎಂಜಿನ್ ಹೊಂದಿರಲಿದ್ದು, 7-ಸ್ಪೀಡ್ ಮರ್ಸಿಡಿಸ್ ಬೆಂಝ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 178- ಬಿಎಚ್‌ಪಿ ಮತ್ತು 420-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು. ಜೊತೆಗೆ ಪೆಟ್ರೋಲ್ ಆವೃತ್ತಿಗಳು ಸಹ ಲಭ್ಯವಿರಲಿದ್ದು, 2 ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್‌ನೊಂದಿಗೆ 222-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದಿಸಲಿವೆ ಎಂದು ಹೇಳಲಾಗಿದೆ.

ಈ ವರ್ಷ ಬಿಡುಗಡೆಯಾಗಲಿರುವ ಮಹೀಂದ್ರಾ ಹೊಚ್ಚ ಹೊಸ ಕಾರುಗಳಿವು..!!

ಬೆಲೆ ಮತ್ತು ಬಿಡುಗಡೆಯ ದಿನಾಂಕ

ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಎಕ್ಸ್‌ಯುವಿ700 ಕಾರುಗಳು ಬೆಲೆಯು22 ಲಕ್ಷದಿಂದ 25 ಲಕ್ಷದ ತನಕ ಇರಬಹುದೆಂದು ಅಂದಾಜಿಸಲಾಗಿದ್ದು, ವರ್ಷಾಂತ್ಯಕ್ಕೆ ಮಾರುಕಟ್ಟೆಗೆ ಲಗ್ಗೆಯಿಡಲಿವೆ.

Article Published On: Friday, June 22, 2018, 20:25 [IST]
English summary
Mahindra new cars for Indian market- All launching this year.
Read more on mahindra suv mpv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+