ಹೊಸ ಎರ್ಟಿಗಾ ಬಿಡುಗಡೆಗೆ ದಿನಗಣನೆ ಶುರು- ಕಾರು ಖರೀದಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

ದೇಶದ ಜನಪ್ರಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಸಂಸ್ಥೆಯು ಕಳೆದ ತಿಂಗಳ ಹಿಂದಷ್ಟೇ ಸಿಯಾಜ್ ಸೆಡಾನ್ ಫೇಸ್‍‍ಲಿಫ್ಟ್ ಬಿಡುಗಡೆಗೊಳಿಸಿದ್ದು, ಇದೀಗ ಎರ್ಟಿಗಾ ಫೇಸ್‍‍ಲಿಫ್ಟ್ ಕಾರನ್ನು ಬಿಡುಗಡೆಗೊಳಿಸಲು ಸಿದ್ದವಾಗಿದೆ. ಮಾಹಿತಿಗಳ ಪ್ರಕಾರ, ಎರ್ಟಿಗಾ ಹೊಸ ಕಾರು ನವೆಂಬರ್ 21ಕ್ಕೆ ಬಿಡುಗಡೆಯಾಗುವುದು ಖಚಿತವಾಗಿದ್ದು, ವಿನೂತನ ವಿನ್ಯಾಸಗಳನ್ನು ಹೊತ್ತು ಬರುತ್ತಿರುವ ಹೊಸ ಕಾರು ಭಾರೀ ನೀರಿಕ್ಷೆ ಹುಟ್ಟುಹಾಕಿದೆ.

ಹೊಸ ಎರ್ಟಿಗಾ ಬಿಡುಗಡೆಗೆ ದಿನಗಣನೆ ಶುರು- ಕಾರು ಖರೀದಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

ಸುಜಕಿ ಎರ್ಟಿಗಾ ಫೇಸ್‌ಲಿಫ್ಟ್ ಕಾರು ಈಗಾಗಲೇ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಂಡು ಭರ್ಜರಿಯಾಗಿ ಮಾರಾಟಗೊಳ್ಳುತ್ತಿದ್ದು, ಇದೀಗ ಭಾರತದಲ್ಲೂ ಬಿಡುಗಡೆಗೆ ಸಿದ್ದವಾಗಿದೆ. ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಹೊಸ ಕಾರು ಖರೀದಿಗೆ ಬುಕ್ಕಿಂಗ್ ಕೂಡಾ ಆರಂಭವಾಗಿದ್ದು, ರೂ.11 ಸಾವಿರ ಪಾವತಿ ಈಗಾಗಲೇ 5 ಸಾವಿರಕ್ಕೂ ಗ್ರಾಹಕರು ಕಾರು ಖರೀದಿಯ ತವಕದಲ್ಲಿದ್ದಾರೆ. ಹಾಗಾದ್ರೆ ಹಳೆಯ ಎರ್ಟಿಗಾಗಿಂತ ಹೊಸ ಎರ್ಟಿಗಾ ಹೇಗೆ ವಿಭಿನ್ನವಾಗಿದೆ ಎಂಬುವುದನ್ನು ಇಲ್ಲಿ ತಿಳಿಯಿರಿ.

ಹೊಸ ಎರ್ಟಿಗಾ ಬಿಡುಗಡೆಗೆ ದಿನಗಣನೆ ಶುರು- ಕಾರು ಖರೀದಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

ನೆಕ್ಸಾ ಶೋರಂ‍ನಲ್ಲಿ ಮಾತ್ರ ಲಭ್ಯ

ಬಿಡುಗಡೆಗೊಳ್ಳಲಿರುವ ಹೊಸ ಎರ್ಟಿಗಾ ಎಂಪಿವಿ ಕಾರು ನೆಕ್ಸಾ ಶೋರಂನಲ್ಲಿ ಮಾತ್ರ ಖರೀದಿಗೆ ಲಭ್ಯವಿರಲಿದ್ದು, ಇಗ್ನಿಸ್, ಬಲೆನೊ, ಬಲೆನೊ ಆರ್‍‍ಎಸ್, ಎಸ್ ಕ್ರಾಸ್ ಮತ್ತು ಸಿಯಾಜ್ ಕಾರುಗಳ ಜೊತೆಗೆ ಮಾರಾಟಗೊಳ್ಳಲಿದೆ. ಈ ಹಿಂದಿನ ತಲೆಮಾರಿನ ಎರ್ಟಿಗಾ ಕಾರುಗಳನ್ನು ಗ್ರಾಹಕರು ಸಂಸ್ಥೆಯ ಅಧಿಕೃತ ಡೀಲರ್‍‍ಗಳ ಬಳಿ ಖರೀದಿಸಬಹುದಾಗಿದೆ.

ಹೊಸ ಎರ್ಟಿಗಾ ಬಿಡುಗಡೆಗೆ ದಿನಗಣನೆ ಶುರು- ಕಾರು ಖರೀದಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

ಹೊಸ ವಿನ್ಯಾಸ

ಎರ್ಟಿಗಾ ಕಾರು ಈ ಬಾರಿ ಹಲವು ಹೊಸ ವಿನ್ಯಾಸವನ್ನು ಪಡೆದುಕೊಂಡಿದ್ದು, ಕಾರಿನ ಮುಂಭಾಗದಲ್ಲಿ ಕ್ರೋಮ್ ಸ್ಟ್ರಿಪ್‍‍ನೊಂದಿಗೆ ಜೋಡಿಸಲಾದ ಹೊಸ ಗ್ರಿಲ್ ಮತ್ತು ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್‍‍ಗಳನ್ನು ಪಡೆದುಕೊಂಡಿರಲಿದೆ.

ಹೊಸ ಎರ್ಟಿಗಾ ಬಿಡುಗಡೆಗೆ ದಿನಗಣನೆ ಶುರು- ಕಾರು ಖರೀದಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

ಕಾರಿನ ಸೈಡ್‍ ಪ್ರೋಫೈಲ್‌ನಲ್ಲಿ ಫ್ಲೋಟಿಂಗ್ ರೂಫ್ ವಿನ್ಯಾಸ ಮತ್ತು 15 ಇಂಚಿನ ಅಲಾಯ್ ಚಕ್ರಗಳನ್ನು ನೀಡಲಾಗಿದೆ. ಇನ್ನು ಕಾರಿನ ಹಿಂಭಾಗದಲ್ಲಿ 'ಎಲ್' ಆಕಾರದ ಟೈಲ್ ಲೈಟ್ ಅನ್ನು ಪಡೆದಿದ್ದು, ಒಟ್ಟಾರೆಯಾಗಿ ಈ ಕಾರು ಎಂಪಿವಿ ಕಾರಿಗಿಂತಲೂ ಇದು ಎಸ್‍‍ಯುವಿ ಮಾದರಿಯ ವಿನ್ಯಾಸವನ್ನು ಪಡೆದಿರಲಿದೆ.

ಹೊಸ ಎರ್ಟಿಗಾ ಬಿಡುಗಡೆಗೆ ದಿನಗಣನೆ ಶುರು- ಕಾರು ಖರೀದಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

ವಿಶಾಲವಾದ ಆಕಾರ

ಹಳೆಯ ಮಾದರಿಯ ಎರ್ಟಿಗಾ ಕಾರಿಗೆ ಹೋಲಿಕೆ ಮಾಡಿದ್ದಲ್ಲಿ ಬಿಡುಗಡೆಗೊಳ್ಳಲಿರುವ ಹೊಸ ಎರ್ಟಿಗಾ ಕಾರು 110-ಎಂಎಂ ಉದ್ದ, 50-ಎಂಎಂ ಅಗಲ ಮತ್ತು 5-ಎಂಎಂ ಎತ್ತರವನ್ನು ಅಧಿಕ ಸುತ್ತಳತೆಯನ್ನು ಪಡೆದುಕೊಂಡಿದ್ದು, ಈ ಬದಲಾವಣೆಯು ಮೂರನೆಯ ಸಾಲಿನಲ್ಲಿ ಕೂರುವ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲಕರವಾಗಲಿದೆ.

ಹೊಸ ಎರ್ಟಿಗಾ ಬಿಡುಗಡೆಗೆ ದಿನಗಣನೆ ಶುರು- ಕಾರು ಖರೀದಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

ಹೊಸ ಇಂಟೀರಿಯರ್

ಎರ್ಟಿಗಾ ಕಾರಿನಲ್ಲಿ ಈ ಬಾರಿ ಮರುವಿನ್ಯಾಸಗೊಳಿಸಲಾದ ಡ್ಯಾಶ್‍‍ಬೋರ್ಡ್ ಅನ್ನು ಅಳವಡಿಸಲಾಗಿದ್ದು, ಹೊಸ ಸಿಯಾಜ್ ಕಾರಿನಲ್ಲಿ ಒದಗಿಸಲಾಗಿರುವ ಡ್ಯುಯಲ್ ಟೋನ್ ಡ್ಯಾಶ್‍ಬೋರ್ಡ್ ಮತ್ತು ವುಡನ್ ಟ್ರಿಮ್ ಅನ್ನು ನೀಡಲಾಗಿದೆ. ಇನ್ನು ಕಾರಿನ ಟಾಪ್ ಎಂಡ್ ಟ್ರಿಮ್‍‍ನಲ್ಲಿ ಲೆದರ್ ಸೀಟ್‍‍ಗಳನ್ನು ನೀಡುವ ಭರವಸೆ ಇದೆ ಎನ್ನಲಾಗಿದೆ.

ಹೊಸ ಎರ್ಟಿಗಾ ಬಿಡುಗಡೆಗೆ ದಿನಗಣನೆ ಶುರು- ಕಾರು ಖರೀದಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

ಕಾರಿನ ಉಪಕರಣಗಳು

ಈ ಹಿಂದೆ ಬಿಡುಗಡೆಗೊಂಡಿದ್ದ ಡಿಜೈರ್ ಕಾರಿನಲ್ಲಿ ಬಳಸಲಾದ 6.8-ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಹೊಸ ಎರ್ಟಿಗಾ ಕೂಡಾ ಪಡೆದಿದ್ದು, ಅಂಡ್ರಾಯ್ಡ್ ಆಟೋ, ಆ್ಯಪಲ್ ಕಾರ್ ಪ್ಲೇ ಮತ್ತು ಬ್ಲೂಟೂಥ್ ಕನೆಕ್ಟಿವಿಟಿಯನ್ನು ಸಪೋರ್ಟ್ ಮಾಡುತ್ತದೆ.

ಹೊಸ ಎರ್ಟಿಗಾ ಬಿಡುಗಡೆಗೆ ದಿನಗಣನೆ ಶುರು- ಕಾರು ಖರೀದಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

ಇದಲ್ಲದೇ ಕಪ್ ಹೋಲ್ಡರ್ಸ್ ಅನ್ನೂ ಕೂಡಾ ನೀಡಲಾಗುತ್ತಿದ್ದು, ಇನ್ಫೋಟೈನ್ಮೆಂಟ್ ಸಿಸ್ಟಮ್‍‍‍ಗೆ ಸಹಾಯವಾಗುವ ಹಲವಾರು ಬಟನ್‍‍ಗಳುಳ್ಳ ಲೆದರ್‍‍ನಿಂದ ಸಜ್ಜುಗೊಂಡ ಸ್ಟೀರಿಂಗ್ ವ್ಹೀಲ್ ಅನ್ನು ಜೋಡಿಸಲಾಗಿದೆ.

MOST READ: ಭಾರತದಲ್ಲಿ ಓಮ್ನಿ ಮಾರಾಟಕ್ಕೆ ಬ್ರೇಕ್ ಹಾಕಲು ನಿರ್ಧರಿಸಿದ ಮಾರುತಿ..!

ಹೊಸ ಎರ್ಟಿಗಾ ಬಿಡುಗಡೆಗೆ ದಿನಗಣನೆ ಶುರು- ಕಾರು ಖರೀದಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

ಸುರಕ್ಷಾ ವೈಶಿಷ್ಟ್ಯತೆಗಳು

ಹೊಸ ಎರ್ಟಿಗಾ ಎಂಪಿವಿ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಈ ಬಾರಿ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್, ಇಬಿಡಿ, ಐಎಸ್‍ಓಫಿಕ್ಸ್ ಚೈಲ್ಡ್ ಸೀಟ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಸೇಫ್ಟಿ ಸೀಟ್ ಬೆಲ್ಟ್ ರಿಮೈಂಡರ್, ಸ್ಪೀಡ್ ವಾರ್ನಿಂಗ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ಸ್ ಅನ್ನು ಒದಗಿಸಲಾಗಿದೆ.

ಹೊಸ ಎರ್ಟಿಗಾ ಬಿಡುಗಡೆಗೆ ದಿನಗಣನೆ ಶುರು- ಕಾರು ಖರೀದಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

ಎಂಜಿನ್ ಸಾಮರ್ಥ್ಯ

ಮಾಹಿತಿಗಳ ಪ್ರಕಾರ ಹೊಸ ಎರ್ಟಿಗಾ ಕಾರುಗಳಲ್ಲಿ ಈ ಹಿಂದಿನ 1.3-ಲೀಟರ್ ಡೀಸೆಲ್ ಎಂಜಿನ್ ಬದಲಾಗಿ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ನೀಡಲಿದೆ ಎಂಬ ಸುದ್ದಿ ಕೇಳಿಬರುತ್ತಿದ್ದು, ಹಾಗೆಯೇ 1.5-ಲೀಟರ್ ಪೆಟ್ರೋಲ್ ಎಂಜಿನ್ ಕೂಡಾ ಖರೀದಿಗೆ ಲಭ್ಯವಿರಲಿದೆ. ವಿಶೇಷ ಅಂದ್ರೆ, ಎರಡು ಮಾದರಿಯ ಎಂಜಿನ್‍ಗಳನ್ನು ಸಹ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಎಸ್‍‍ಹೆಚ್‍‍ವಿಎಸ್ ಹೈಬ್ರಿಡ್ ಸಿಸ್ಟಮ್ ಅನ್ನು ಒದಗಿಸುವುದು ಖಚಿತವಾಗಿದೆ.

MOST READ: ದೀಪಾವಳಿ ಹಬ್ಬಕ್ಕಾಗಿ ಉದ್ಯೋಗಿಗಳಿಗೆ 1600 ಕಾರುಗಳನ್ನು ಗಿಫ್ಟ್ ನೀಡಿದ ಉದ್ಯಮಿ..!

ಹೊಸ ಎರ್ಟಿಗಾ ಬಿಡುಗಡೆಗೆ ದಿನಗಣನೆ ಶುರು- ಕಾರು ಖರೀದಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

ಗೇರ್ ಬಾಕ್ಸ್

ಸ್ಪೈ ಚಿತ್ರಗಳಲ್ಲಿ ಗಮಸಿದ್ದಲ್ಲಿ ಹೊಸ ಕಾರು 5-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದ್ದು, ಇದು ಕೇವಲ ಡಿಸೆಲ್ ಮಾದರಿಯ ಕಾರಿನಲ್ಲಿ ಮಾತ್ರ ಈ ಆಯ್ಕೆಯು ಲಭ್ಯವಿರಲಿದೆ ಎನ್ನಲಾಗಿದೆ. ಆದರೆ ಪೆಟ್ರೋಲ್ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಪಡೆದುಕೊಳ್ಳಲಿದೆ.

Most Read Articles

ಎರ್ಟಿಗಾ ಪ್ರತಿಸ್ಪರ್ಧಿ ಮಹೀಂದ್ರಾ ಮರಾಜೋ ಕಾರಿನ ಫೋಟೋ ಗ್ಯಾಲರಿ..!

Kannada
English summary
New Maruti Ertiga Unofficial Bookings Open Ahead Of Launch.
Story first published: Saturday, October 27, 2018, 16:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X