ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಸಿಎಲ್ಎಸ್ ಐಷಾರಾಮಿ ಕಾರು ಬಿಡುಗಡೆ

ಜರ್ಮನ್ ಬ್ರಾಂಡ್ ಮರ್ಸಿಡಿಸ್ ಬೆಂಝ್ ಸಂಸ್ಥೆಯು ಭಾರತದಲ್ಲಿ ಮೊದಲ ಬಾರಿಗೆ ಫೋರ್ ಡೋರ್ ಕೂಪೆ ಕಾರು ಮಾದರಿಯಾದ ಸಿಎಲ್ಎಸ್ ಬಿಡುಗಡೆ ಮಾಡಿದ್ದು, ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 84.07 ಲಕ್ಷಕ್ಕೆ ನಿಗದಿಗೊಳಿಸಲಾಗಿದೆ.

ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಸಿಎಲ್ಎಸ್ ಐಷಾರಾಮಿ ಕಾರು ಬಿಡುಗಡೆ

ಬಿಡುಗಡೆಯಾಗಿರುವ ಸಿಎಲ್ಎಸ್ ಕಾರಿನಲ್ಲಿ 300ಡಿ ವೆರಿಯೆಂಟ್ ಅತಿಹೆಚ್ಚು ತಾಂತ್ರಿಕ ಅಂಶವನ್ನು ಹೊಂದಿರುವ ಮಾದರಿಯಾಗಿದ್ದು, ಕೂಪೆ ಮಾದರಿಯ ಫ್ರಂಟ್ ಫಾಸಿಯಾ ಈ ಕಾರಿನ ಪ್ರಮುಖ ಆಕರ್ಷಣೆಯಾಗಿದ್ದು, ಸಿಎಲ್ಎಸ್ ಕಾರು ಭಾರತದಲ್ಲಿ ಬಿಡುಗಡೆಯಾದ ಮೊದಲ ನಾಲ್ಕು ಬಾಗಿಲುವುಳ್ಳ ಕೂಪೆ ಕಾರು ಮಾದರಿ ಎಂದು ಕರೆಯಲಾಗಿದೆ.

ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಸಿಎಲ್ಎಸ್ ಐಷಾರಾಮಿ ಕಾರು ಬಿಡುಗಡೆ

ಸಾಮಾನ್ಯವಾಗಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಕೂಪೆ ಕಾರುಗಳು 2 ಬಾಗಿಲು ಸೌಲಭ್ಯವನ್ನು ಮಾತ್ರವೇ ಹೊಂದಿದ್ದು, ಸದ್ಯ ಮರ್ಸಿಡಿಸ್ ಬೆಂಝ್ ಸಂಸ್ಥೆಯು ಹೊಸದಾಗಿ ಬಿಡುಗಡೆ ಮಾಡಿರುವ ಸಿಎಲ್ಎಸ್ ಕಾರು ಮಾತ್ರ 4 ಬಾಗಿಲು ಸೌಲಭ್ಯ ಪಡೆದಿದೆ.

ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಸಿಎಲ್ಎಸ್ ಐಷಾರಾಮಿ ಕಾರು ಬಿಡುಗಡೆ

ಇನ್ನು ಕಾರಿನ ಹೊಸ ವಿನ್ಯಾಸದ ಬಗ್ಗೆ ಹೇಳುವುದಾದರೇ, ಮಲ್ಟಿ ಬೀಮ್ ಎಲ್ಇಡಿ ಹೆಡ್‌ಲ್ಯಾಂಪ್ ಜೊತೆಗೆ ಎಲ್ಇಡಿ ಡಿಆರ್‌ಎಲ್ಎಸ್, ಮರುವಿನ್ಯಾಸದ ಫ್ರಂಟ್ ಗ್ರೀಲ್, ಇಳಿಜಾರು ವಿನ್ಯಾಸದ ರೂಫ್‌ಲೈನ್, ಫ್ರೇಮ್ ಇಲ್ಲದ ಬಾಗಿಲು ವಿನ್ಯಾಸ ಹೊಂದಿದೆ.

ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಸಿಎಲ್ಎಸ್ ಐಷಾರಾಮಿ ಕಾರು ಬಿಡುಗಡೆ

ಹಾಗೆಯೇ ಕಾರಿನ ಹಿಂಭಾಗದ ವಿನ್ಯಾಸದಲ್ಲೂ ಗುರುತರ ಬದಲಾವಣೆಗಳಿದ್ದು, ಎಲ್ಇಡಿ ಟೈಲ್‌ಲ್ಯಾಂಪ್, ಚಿಕ್ಕದಾದ ಬೂಟ್ ಲಿಡ್ ಪಡೆದುಕೊಂಡಿದ್ದು, ಸಿಲ್ವರ್ ಸೆಡ್ ಹೊಂದಿರುವ 18-ಇಂಚಿನ ಫೈವ್-ಸ್ಪೋಕ್ ಅಲಾಯ್ ಚಕ್ರಗಳೊಂದಿಗೆ ಐಷಾರಾಮಿ ಸೈಡ್ ಪ್ರೋಫೈಲ್ ಪಡೆದುಕೊಂಡಿದೆ.

ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಸಿಎಲ್ಎಸ್ ಐಷಾರಾಮಿ ಕಾರು ಬಿಡುಗಡೆ

ಇನ್ನು ಕಾರಿನ ಒಳಭಾಗದ ವಿನ್ಯಾಸದಲ್ಲಿ ಹಲವು ಐಷಾರಾಮಿ ಸೌಲಭ್ಯಗಳನ್ನು ಜೋಡಣೆ ಮಾಡಲಾಗಿದ್ದು, ಗುಣಮಟ್ಟದ ವುಡನ್ ಡ್ಯಾಶ್‌ಬೋರ್ಡ್, ಜೆಟ್ ಟರ್‌ಬೈನ್ ವಿನ್ಯಾಸದ ಎಸಿ ವೆಂಟ್ಸ್, 64 ಬಣ್ಣಗಳ ಆಯ್ಕೆ ಹೊಂದಿರುವ ಆ್ಯಂಬಿಯೆಂಟ್ ಲೈಟಿಂಗ್ಸ್, ದೊಡ್ಡ ಸ್ಕೀನ್ ಪ್ರೇರಿತ ಇನ್ಪೋ‌ಟೈನ್‌ಮೆಂಟ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಆ್ಯಪಲ್ ಕಾರ್‌ಪ್ಲೇ ಇದೆ.

ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಸಿಎಲ್ಎಸ್ ಐಷಾರಾಮಿ ಕಾರು ಬಿಡುಗಡೆ

ಜೊತೆಗೆ ಗ್ರಾಹಕರು ತಮ್ಮ ಆದ್ಯತೆಗಳಿಗೆ ಅನುಗುಣವಾಗಿ ಡಿಜಿಟಲ್ ಕಾಕ್‌ಪಿಟ್ ಸೌಲಭ್ಯವನ್ನು ಕ್ಲಾಸಿಕ್, ಸ್ಪೋರ್ಟ್ ಮತ್ತು ಪ್ರೋಗ್ರೆಸಿವ್ ಮಾದರಿಯಲ್ಲಿ ಆಯ್ಕೆ ಮಾಡಬಹುದಾಗಿದ್ದು, ಮನರಂಜನೆಗಾಗಿ 13 ಹೈ-ಪರ್ಫಾಮೆನ್ಸ್ ಬರ್ಮಸ್ಟರ್ ಸರೌಂಡ್ ಸಿಸ್ಟಂ ಸ್ಪಿಕರ್ಸ್ ಜೋಡಿಸಲಾಗಿದೆ.

ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಸಿಎಲ್ಎಸ್ ಐಷಾರಾಮಿ ಕಾರು ಬಿಡುಗಡೆ

ಎಂಜಿನ್ ಸಾಮರ್ಥ್ಯ

ಮರ್ಸಿಡಿಸ್ ಬೆಂಝ್ ಸಿಎಲ್ಎಸ್ 300ಡಿ ಕಾರು ಬಿಎಸ್ 6 ಪ್ರೇರಣೆಯ 2.0-ಲೀಟರ್ ಇನ್-ಲೈನ್ ಫೋರ್ ಸಿಲಿಂಡರ್ ಎಂಜಿನ್ ಹೊಂದಿದ್ದು, 9-ಸ್ಪೀಡ್ ಆಟೋ ಮ್ಯಾಟಿಕ್ ಗೇರ್‌ಬಾಕ್ಸ್ ಮೂಲಕ 245-ಬಿಎಚ್‌ಪಿ ಮತ್ತು 500-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಸಿಎಲ್ಎಸ್ ಐಷಾರಾಮಿ ಕಾರು ಬಿಡುಗಡೆ

ಈ ಮೂಲಕ 6.2 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮಿ ವೇಗದ ಸಾಮರ್ಥ್ಯವನ್ನು ಹೊಂದಿರುವ ಸಿಎಲ್ಎಸ್ ಕಾರು ಗಂಟೆಗೆ 250 ಕಿ.ಮಿ ಗರಿಷ್ಠ ವೇಗ ಪಡೆದಿದ್ದು, ನಾಲ್ಕು ಜನ ಅರಾದಾಯಕವಾಗಿ ಪ್ರಯಾಣಿಸಬಹುದಾಗಿದೆ.

MOST READ: ಅಪಘಾತ ಮಾಡಿದ 17 ವರ್ಷ ಬಾಲಕನಿಗೆ ಕೋರ್ಟ್ ನೀಡಿದ ಶಿಕ್ಷೆ ಕೇಳಿದ್ರೆ ನಿಮಗೆ ಅಚ್ಚರಿಯಾಗುತ್ತೆ.!

ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಸಿಎಲ್ಎಸ್ ಐಷಾರಾಮಿ ಕಾರು ಬಿಡುಗಡೆ

ಹೀಗಾಗಿ ಹೊಸ ಮರ್ಸಿಡಿಸ್ ಬೆಂಝ್ ಕಾರು ಆಡಿ 7, ಬಿಎಂಡಬ್ಲ್ಯು 6-ಸೀರಿಸ್ ಗ್ರ್ಯಾನ್ ಕೂಪೆ ಕಾರುಗಳಿಗೆ ಭಾರೀ ಪೈಪೋಟಿ ನೀಡುವ ನೀರಿಕ್ಷೆಯಿದ್ದು, ಫೋರ್ ಡೋರ್ ಸೌಲಭ್ಯದಿಂದಾಗಿ ಐಷಾರಾಮಿ ಕೂಪೆ ಗ್ರಾಹಕರನ್ನು ತನ್ನತ್ತ ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles

Kannada
English summary
New Mercedes-Benz CLS Launched In India; Prices Start At Rs 84.7 Lakh.
Story first published: Friday, November 16, 2018, 20:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X